ಚರ್ಮದ ಮೇಲೆ ಕಿರಿ ಕಿರಿ ಉಂಟುಮಾಡುವ ಕಜ್ಜಿ ತುರಿಕೆ ಏನೇ ಇದ್ರೂ ಮನೆಯಲ್ಲೇ ಸಿಗೋ ಈ ವಸ್ತುಗಳಿಂದ ಹೀಗೆ ಮನೆ ಮದ್ದು ಮಾಡಿ ಬಳಸಿ ಸಾಕು .. ಎಲ್ಲ ಸರಿ ಹೋಗುತ್ತೆ..

336

ಕಜ್ಜಿ ತುರಿಕೆ ಗಾಯ ಕುರ ಹೀಗೆ ಚರ್ಮ ಸಂಬಂಧಿ ಸಮಸ್ಯೆಗಳು ಏನೇ ಇರಲಿ ಈ ಎರಡೂ ಪದಾರ್ಥಗಳ ಮಿಶ್ರಣವನ್ನು ಮಿಕ್ಸ್ ಮಾಡಿ ಹಚ್ಚುತ್ತ ಬನ್ನಿ ಸಾಕು, ಕೆಲವೇ ದಿನಗಳಲ್ಲಿ ಕಜ್ಜಿ ತುರಿಕೆ ಎಂತಹ ಭಯಂಕರ ಸಮಸ್ಯೆಗಳನ್ನು ಕೂಡ ದೂರ ಮಾಡಬಹುದು…

ಸಂಸ್ಕಾರಗಳು ಓದುಗರೆ, ಈ ಮನೆಮದ್ದುಗಳನ್ನು ನಾವು ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಆಗಲೀ ನಮ್ಮ ಚರ್ಮದ ಮೇಲಾಗಲಿ ಯಾವುದೇ ತರಹದ ಅಡ್ಡಪರಿಣಾಮಗಳು ಆಗೋದಿಲ್ಲ ಅಲ್ವಾ ಆದರೆ ಕೆಲವೊಂದು ಬಾರಿ ಅಡ್ಡ ಪರಿಣಾಮಗಳುಂಟಾದರೆ ಆ ಅಡ್ಡಪರಿಣಾಮಗಳಿಗೂ ಕೂಡ ಕೆಲವೇ ಕ್ಷಣ ದಲ್ಲಿ ಪರಿಹಾರ ಕಂಡುಕೊಂಡು ಬಿಡಬಹುದು ಅಷ್ಟೆ.ಹಾಗಾಗಿ ಮನೆ ಮದ್ದುಗಳ ಮೇಲೆ ನಿರ್ಲಕ್ಷ್ಯ ಬೇಡ, ಸಮಸ್ಯೆಗಳು ಏನೇ ಇರಲಿ ಅದು ಚಿಕ್ಕಪುಟ್ಟ ಇರುವಾಗಲೇ ಅದಕ್ಕೆ ತಕ್ಕ ಮನೆಮದ್ದುಗಳನ್ನು ಮಾಡಿಬಿಡಿ, ಆಗ ಸಮಸ್ಯೆಗಳು ಬಹುಬೇಗ ನಿವಾರಣೆ ಆಗುತ್ತದೆ. ಇನ್ನು ಅಂತಹ ಸಮಸ್ಯೆಗಳಲ್ಲಿ ಈ ಕಚ್ಚಿ ತುರಿಕೆಯಂತಹ ಸಮಸ್ಯೆ ಕೂಡ ಒಂದಾಗಿದೆ.

ಹೌದು ತುರಿಕೆಯ ಬಾಧೆ ತಡೆಯಲು ಸಾಧ್ಯವಿಲ್ಲ ಇದು ನಮ್ಮ ಶರೀರದ ಗೌಪ್ಯ ಅಂಗಳಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ ಅಂತಹ ಸಮಯದಲ್ಲಿ ಹೀಗಾಗುತ್ತದೆ ಅಂದರೆ ನಾವು ಸಮಾಜದ ನಡುವೆ ಇದ್ದಾಗ ಇಂತಹ ತುರಿಕೆ ಕಜ್ಜಿ ಅಂತಹ ಬಾಧೆ ಎಂತಹ ಮುಜುಗರವನ್ನು ಉಂಟು ಮಾಡುತ್ತದೆ, ಅಂದರೆ ಹೇಳಿಕೊಳ್ಳಲು ಆಗುವುದಿಲ್ಲ ಬಿಡುವುದಕ್ಕೆ ಆಗುವುದಿಲ್ಲ ಅಂತಹ ಪರಿಸ್ಥಿತಿಯನ್ನು ತಂದಿಡುತ್ತದೆ.

ಚರ್ಮ ಸಂಬಂಧಿ ಸಮಸ್ಯೆಗಳು ಯಾಕೆ ಉಂಟಾಗುತ್ತದೆ ಅಂತ ಗೊತ್ತೇ ಇದೆ ಅಲ್ವಾ, ಹೌದು ನಾವು ನಮ್ಮ ಶರೀರವನ್ನು ಶುಭ್ರವಾಗಿಟ್ಟುಕೊಳ್ಳಬೇಕು, ಇಲ್ಲವಾದರೆ ಇಂತಹುದ್ದೆ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ ಅಥವಾ ನಾವು ಸೇವಿಸುವ ಆಹಾರ ನಮ್ಮ ಶರೀರದಲ್ಲಿ ಅಲರ್ಜಿಯನ್ನು ಉಂಟು ಮಾಡಿದರೆ ಆ ಅಲರ್ಜಿಯ ಮುನ್ಸೂಚನೆ ಅನ್ನೂ ದೇಹ ನೀಡಬೇಕಾಗಿರುತ್ತದೆ, ಅದಕ್ಕಾಗಿ ನಮ್ಮ ಶರೀರ ಚರ್ಮದ ಮೇಲೆ ಗಂಧೆ ಅನ್ನು ಉಂಟುಮಾಡುವ ಹಾಗೆ ಮಾಡಿ ನಮಗೆ ಆಗಿರುವ ಅಲರ್ಜಿ ಸಮಸ್ಯೆಯನ್ನ ಕುರಿತು ತಿಳಿಸುತ್ತದೆ.

ಈ ರೀತಿ ಚರ್ಮಸಂಬಂಧಿ ಸಮಸ್ಯೆಗಳು ಯಾವುದೇ ಇರಲಿ ಅದಕ್ಕೆ ತಕ್ಕ ಪರಿಹಾರ ಮಾಡಿಕೊಳ್ಳಿ ಅದನ್ನು ಮಾಡಿಕೊಳ್ಳುವ ವಿಧಾನ ಹೇಗೆಂದರೆ ಈ ಮನೆ ಮದ್ದಿಗಾಗಿ ಬೇಕಾಗಿರುವುದು ಬೆಲ್ಲದಪುಡಿ ಹೌದು ಬೆಲ್ಲವನ್ನ ತುರಿದುಕೊಂಡು ಅದನ್ನು ಪುಡಿ ಮಾಡಿ, ಬಳಿಕ ಈ ಆಯುರ್ವೇದಿಕ್ ಅಂಗಡಿಗಳಲ್ಲಿ ತ್ರಿಫಲಚೂರ್ಣ ಎಂಬ ಪದಾರ್ಥ ಸಿಗುತ್ತದೆ ಅದನ್ನು ತಂದು ಆ ಪುಡಿಯನ್ನು ಬೆಲ್ಲದ ಪುಡಿಯೊಂದಿಗೆ ಮಿಶ್ರಮಾಡಿ.

2 ಚಮಚ ಬೆಲ್ಲದ ಪುಡಿ ಗೆ ಅದೇ ಸಮಪ್ರಮಾಣದ ತ್ರಿಫಲ ಚೂರ್ಣವನ್ನು ಮಿಶ್ರ ಮಾಡಿ ಇದಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಿ ಪೇಸ್ಟ್ ಮಾಡಿಕೊಂಡು, ಇದನ್ನು ಕಜ್ಜಿ ಅಥವಾ ತುರಿಕೆ ಆಗಿರುವಂತಹ ಭಾಗಕ್ಕೆ ಲೇಪ ಮಾಡಬೇಕು, ಇದನ್ನು ಹೇಗೆ ಪಾಲಿಸಬೇಕು ಎಂದರೆ, ಪ್ರತಿದಿನ ಪಾಲಿಸಬೇಕಾ ಸ್ನಾನ ಮಾಡುವ 1 ಗಂಟೆಯ ಮುನ್ನ ಅಥವಾ ಅರ್ಧ ಗಂಟೆಯ ಮುನ್ನ ಈ ಪರಿಹಾರವನ್ನು ಮಾಡಿ ಬಳಿಕ ಬಿಸಿ ನೀರಿನಿಂದ, ಆ ಚರ್ಮದ ಭಾಗವನ್ನು ಸ್ವಚ್ಛ ಮಾಡಬೇಕು.

ಅಥವಾ ನಿಮಗೆ ತ್ರಿಫಲಚೂರ್ಣ ಸಿಗದೆ ಹೋದಾಗ ಒಣಶುಂಠಿ ಪುಡಿ ಎಲ್ಲರಿಗೂ ಸಿಗುತ್ತದೆ ಹಾಗೆ ಈ ಒಣ ಶುಂಠಿಯ ಪುಡಿಯನ್ನು ಬೆಳೆದ ಪುಡಿಯೊಂದಿಗೆ ಮಿಶ್ರಮಾಡಿ ಹಸುವಿನ ಹಾಲನ್ನು ಅದಕ್ಕೆ ಹಾಕಿ ಪೇಸ್ಟ್ ಮಾಡಿಕೊಂಡು ಮೊಡವೆ ಸಮಸ್ಯೆ ಇದ್ದರೆ ಅಥವಾ ಗಾಯದ ಕಲೆ ಉಳಿದಿದೆ ಅಂದರೆ ಅಥವಾ ಸುಟ್ಟ ಗಾಯದ ಕಲೆ ಉಳಿದಿದೆ ಅಥವಾ ಕಜ್ಜಿಯಾಗಿದೆ ತುರುಕೆ ಆಗಿದೆ ಅಂದರೆ ಅಂತ ಭಾಗಕ್ಕೆ ಈ ಮಾಡಿಟ್ಟುಕೊಂಡ ಮಿಶ್ರಣವನ್ನು ಲೇಪ ಮಾಡಿ, ಸ್ವಲ್ಪ ಸಮಯದ ಬಳಿಕ ಬಿಸಿನೀರಿನಿಂದ ಸ್ವಚ್ಛ ಮಾಡಿಕೊಳ್ಳಿ. ಆಗ ಆ ಸಮಯದಲ್ಲಿ ಕೈಗಳನ್ನು ಕೂಡ ಸರಿಯಾಗಿ ಸ್ವಚ್ಛ ಮಾಡಿಕೊಳ್ಳಬೇಕು.