ತನ್ನದೇ ಆದಂತಹ ಒಂದು ಆಲೋಚನೆಯನ್ನ ಇಟ್ಟುಕೊಂಡು ತನ್ನ ಚಿಕ್ಕ ಜಮೀನಿನಲ್ಲಿ ತಾಳೆ ಮರದಿಂದ ಬೆಳೆ ತೆಗೆದು ನೋಡಿ ಇವತ್ತು ವರ್ಷಕ್ಕೆ ಬರೋಬ್ಬರಿ 20 ಲಕ್ಷ ಹಣ ಗಳಿಸುತ್ತಾ ಇದ್ದಾರೆ… ನೀವು ಇದರ ಬಗ್ಗೆ ತಿಳಿದುಕೊಳ್ಳಬೇಕಾ…

61

ಅಂದಿನ ಕಾಲದಲ್ಲಿ ಬಹುತೇಕ ಮಂದಿ ರೈತಾಪಿ ಕೆಲಸವನ್ನು ಮಾಡುತ್ತಾ ಜೀವನ ಸಾಗಿಸುತ್ತಾ ಇದ್ದಾರೆ ಆದರೆ ಇವತ್ತಿನ ದಿವಸಗಳಲ್ಲಿ ಈ ರೈತಾಪಿ ಜೀವನ ಬೇಡ ಎಂದು ಹಳ್ಳಿ ಬಿಟ್ಟು ಪಟ್ಟಣ ಸೇರುವ ಮಂದಿ ಹಲವರಿದ್ದಾರೆ ಹೌದು ಯಾಕೆ ಅಂದರೆ ದಿನವೆಲ್ಲಾ ಕಷ್ಟಪಟ್ಟು ದುಡಿದರೂ ನಾವು ಪಟ್ಟ ಶ್ರಮಕ್ಕೆ ಸರಿಯಾಗಿ ಫಲ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ರೈತಾಪಿ ಜೀವನ ಬೇಡ ಎಂದು ಇದರಿಂದ ದೂರ ಉಳಿಯುತ್ತಿರುವ ವರು ಬಹಳಷ್ಟು ಜನರಿದ್ದಾರೆ. ಆದರೆ ಇಲ್ಲೊಬ್ಬ ರೈತ ನೋಡಿ ಇವರು ಮೈಸೂರು ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಮುಕುಂದ ಎಂಬ ರೈತ ತಾನು ಬೆಳೆದ ಬೆಳೆಯಿಂದ ಲಕ್ಷ ಲಕ್ಷ₹ಆದಾಯವನ್ನು ಗಳಿಸುತ್ತಿದ್ದಾರೆ. ಮುಕುಂದ ಎಂಬ ರೈತ ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ಭೂಮಿ ಹೊಂದಿದ್ದು ಇವರು ತಮ್ಮ ಭೂಮಿಯಲ್ಲಿ ತಾಳೆ ಬೆಳೆಯನ್ನು ಬೆಳೆಯುವ ಮೂಲಕ ಇದೀಗ ಹೆಚ್ಚು ಆದಾಯವನ್ನು ಗಳಿಸುತ್ತಿದೆ ಹೌದು 18ವರ್ಷದಿಂದ ತಮ್ಮ ಐದೂವರೆ ಎಕರೆ ಜಮೀನಿನಲ್ಲಿ ತಾಳೆ ಬೆಳೆಯನ್ನು ಇವರು ಉಳಿದ ಬೆಳೆಗಳಿಗೆ ಹೋಲಿಸಿದರೆ ತಾಳೆ ಬೆಳೆಯನ್ನು ಬೆಳೆಯುವುದರಿಂದ ಹೆಚ್ಚು ಆದಾಯವನ್ನು ಗಳಿಸಬಹುದು ಎಂದು ಹೇಳ್ತಾರೆ ಮುಕುಂದ ಅವರು.

ಮುಕುಂದ 60 ಟನ್ ತಾಳೆ ಹಣ್ಣು ಬೆಳೆಯುತ್ತಾರೆ, ಒಂದು ಟನ್ ಗೆ 16,000 ರೂಪಾಯಿ ಕಂಪನಿ ನೀಡುತ್ತದೆ ಹಾಗೂ 2ಸಾವಿರ ಬೋನಸ್ ನೀಡುತ್ತಾರೆ ಹಾಗೆ ವರುಷಕ್ಕೆ 12ಲಕ್ಷ₹ಇವರಿಗೆ ಆದಾಯ ಬರುತ್ತಾ ಇದೆ ಇನ್ನೂ ಮರ ಎತ್ತರ ಹೋದಂತೆ ಗೊಂಚಲು ದೊಡ್ಡದಾಗಿ ಹೆಚ್ಚು ಫಸಲು ಸಹ ದೊರೆಯುತ್ತದೆ. ಒಂದು ಗೊಂಚಲು 25 ಕೆಜಿ ತೂಕ ಇರುತ್ತದೆ. ಮುಕುಂದ ಅವರು ತಮ್ಮ ಭೂಮಿಯಲ್ಲಿ ತಾಳೆ ಬೆಳೆ ಬೆಳೆಯುವ ಕಾರಣದಿಂದಾಗಿ ಇದರ ಜತೆಗೆ ಕಾಳು ಮೆಣಸು ಬೀನ್ಸ್ ಸಹ ಬೆಳೆಯುತ್ತಾರೆ ಅಷ್ಟೇ ಅಲ್ಲದೆ ಭತ್ತವನ್ನು ಬೆಳೆಯುತ್ತಾರೆ ಇನ್ನೂ ನೂರಾರು ಮೇಕೆಗಳನ್ನ ಸಾಕಿರುವ ಇವರು ತಾಳೆ ಬೆಳೆಗೆ ಕಂಪೆನಿ ಅವರೇ ಗೊಬ್ಬರ ನೀಡುತ್ತಾರೆ.

ತಾಳೆ ಹಣ್ಣು ನೋಡಲು ಕಿತ್ತಳೆಹಣ್ಣಿನ ಬಣ್ಣದಲ್ಲಿ ಇರುತ್ತದೆ ಹಾಗೆ ಎಷ್ಟೋ ಮಂದಿ ಈ ಬೆಳೆಯ ಬಗ್ಗೆ ಕೆಲವು ಮೂಢ ನಂಬಿಕೆಗಳನ್ನು ಹೊಂದಿದ್ದು ಇದನ್ನು ಬೆಳೆಯಲು ಮೂಗು ಮುರಿಯುತ್ತಾರೆ ಆದರೆ ಮುಕುಂದ ಅವರು ಮಾತ್ರ ಸುಮಾರು 18 ವರ್ಷದಿಂದ ಈ ಬೆಳೆ ಬೆಳೆಯುತ್ತಾ ಬಂದಿತು ಅವರಿಗೆ ಯಾವುದೇ ರೀತಿಯ ನಷ್ಟ ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ. ತಾಳೆ ಬೆಳೆಯನ್ನು 15 ದಿನಗಳಿಗೊಮ್ಮೆ ಕಟಾವು ಮಾಡಬೇಕಾಗುತ್ತದೆ, ಒಮ್ಮೆ ಕಟಾವು ಮಾಡಿದರೆ ಎರಡರಿಂದ 3ಟನ್ ತಾಳೆ ಬೆಳೆ ದೊರೆಯುತ್ತದೆ ಹಾಗೂ ಎರಡರಿಂದ 3ವರ್ಷದಲ್ಲಿ ಫಲ ಬರುತ್ತದೆ ಇನ್ನೂ ತಾಳೆ ಬೆಳೆ ಬೆಳೆಯಲು ಕಾರ್ಮಿಕರ ಅವಶ್ಯಕತೆ ಇರುವುದಿಲ್ಲ ಹೌದು ಕೆಲಸಗಾರರು ಇದಕ್ಕೆ ಅವಶ್ಯಕತೆ ಇರುವುದಿಲ್ಲಾ. ಈ ತಾಳೆ ಬೆಳೆ ಬೆಳೆಯಲು ಡ್ರಿಪ್ ಮೂಲಕ ನೀರು ಒದಗಿಸಲಾಗುತ್ತದೆ ಹಗೆ ತಾಳೆ ಬೆಳೆ ಬೆಳೆಯಲು ಹೆದರುವ ಅವಶ್ಯಕತೆಯಿಲ್ಲ ಎಣ್ಣೆಯ ಬೆಲೆ ಹೆಚ್ಚಾದಂತೆ ತಾಳೆ ಬೆಳೆಯ ಬೆಲೆಯೂ ಕೂಡ ಏರಿಕೆಯಾಗುತ್ತದೆ. ಒಂದು ಎಕರೆಗೆ 57 ತಾಳೆಮರಗಳನ್ನು ಬೆಳೆಸಬಹುದಾಗಿದ್ದು, ಯಾರಾದರೂ ತಾಳೆ ಬೆಳೆಯಲು ಪ್ರಯತ್ನಿಸುತ್ತಿದ್ದರೆ ಅವರನ್ನು ಹೆದರಿಸುವುದನ್ನು ಬಿಟ್ಟು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.

ರೈತರು ಈ ಮಾಹಿತಿಯನ್ನು ತೆರಲೇಬೇಕಾಗುತ್ತದೆ ಅದೇನೆಂದರೆ ಮಿಶ್ರ ಬೆಳೆ ಬೆಳೆಯುವುದರಿಂದ ಲಾಭ ಖಂಡಿತವಾಗಿಯೂ ಮಾಡಬಹುದಾಗಿದ್ದು ಅದೇ ರೀತಿ ಮುಕುಂದ ಅವರು ಸಹ ಮಿಶ್ರ ಬೆಳೆಯನ್ನು ಬೆಳೆಯುತ್ತಾ ಆದಾಯ ಪಡೆದುಕೊಳ್ಳುತ್ತಿದ್ದಾರೆ ಎಂದು ಮುಕುಂದ್ ಅವರಿಗೆ ಬರುವ ಆದಾಯದಲ್ಲಿ 3ಜನ ಮಕ್ಕಳು ಓದುತ್ತಾ ಇದ್ದು ಅಲ್ಲದೆ ಅವರು ಸೈಟ್ ಕೂಡ ಖರೀದಿಸಿದ್ದಾರೆ ಇನ್ನು ರೈತರು ಹೆದರದೆ ಜಮೀನಿನಲ್ಲಿ ಕಷ್ಟಪಟ್ಟು ದುಡಿದರೆ ಆದಾಯವನ್ನು ಖಂಡಿತವಾಗಿಯೂ ಗಳಿಸಬಹುದು. ಮುಕುಂದ ಅವರು ಸುಮಾರು 18ವರ್ಷದಿಂದ ಈ ಬೆಳೆಯನ್ನು ನಂಬಿಕೊಂಡೇ ಜೀವನ ನಡೆಸುತ್ತಿದ್ದು ಇದೀಗ ಅವರು ಕಷ್ಟಪಟ್ಟು ದುಡಿದು ಬದುಕು ಸಾರ್ಥಕವಾಗಿದೆ ಹಾಗದರೆ ನೀವು ಸಹ ರೈತರಾಗಿದ್ದರೆ ನಿಮ್ಮ ಆದಾಯ ಹೆಚ್ಚಿಸಿಕೊಳ್ಳಲು ಈ ಬೆಳೆಯನ್ನು ಬೆಳೆಯಬಹುದು. ಇನ್ನೂ ಮಿಶ್ರ ಬೆಳೆ ಬೆಳೆಯುವುದರಿಂದ ಖಂಡಿತ ರೈತರು ಬೆಳೆ ಹಾನಿಯಾದರೂ ಸ್ವಲ್ಪವಾದರೂ ಆದಾಯ ಗಳಿಸಬಹುದು.

WhatsApp Channel Join Now
Telegram Channel Join Now