ತಲೆಗೆ ಹಚ್ಚುವ ಕೊಬ್ಬರಿ ಎಣ್ಣೆಗೆ ಇದನ್ನ ಸ್ವಲ್ಪ ಮಿಕ್ಸ್ ಮಾಡಿ ಹಚ್ಚಿ ಸಾಕು ಒಂದೇ ವಾರದಲ್ಲಿ ನಿಮ್ಮ ತಲೆ ಮೇಲೆ ಬೇಕಾಬಿಟ್ಟಿ ಕೂದಲು ಹುಟ್ಟೋದಕ್ಕೆ ಶುರು ಆಗುತ್ತವೆ.. ಕೂದಲು ಉದುರೋ ಸಮಸ್ಸೆ ಉಂಟಾಗೋದೇ ಇಲ್ಲ..

156

ಕೂದಲಿನ ಆರೋಗ್ಯ ವೃದ್ಧಿಗೆ ನೀವು ಹೀಗೆ ಯಾಕೆ ಮಾಡಬಾರದು ಯಾವುದೊ ಜಾಹೀರಾತುಗಳನ್ನು ನೋಡಿ ಅದನ್ನು ಟ್ರೈ ಮಾಡುವುದರ ಬದಲು ಹೀಗೆ ಮಾಡಿದ್ದೇ ಆದಲ್ಲಿ ನಿಮ್ಮ ಕೂದಲು ದಟ್ಟವಾಗಿ ಕಪ್ಪಾಗಿ ಸೊಂಪಾಗಿ ಬೆಳೆಯುತ್ತದೆ.

ನಮಸ್ಕಾರ ಪ್ರಿಯ ಓದುಗರೆ, ನಮ್ಮ ಕೂದಲು ಉದ್ದವಾಗಿರಬೇಕು ನಮ್ಮ ಕೂದಲು ಚಂದವಾಗಿರಬೇಕು ಕಪ್ಪಾಗಿ ಇರಬೇಕು ಅಂತ ಆಸೆಪಡುವವರು ನಮ್ಮ ಹೆಣ್ಣುಮಕ್ಕಳು ಅದಕ್ಕಾಗಿ ಹೆಣ್ಣುಮಕ್ಕಳು ಏನೆಲ್ಲ ಮಾಡ್ತಾರೆ ಅಲ್ವ ಇನ್ನೂ ಕೆಲವರಿಗೆ ಕೂದಲು ಶಾರ್ಟ್ ಇರಬೇಕು ಮತ್ತು ನಾವು ಸ್ಟೈಲ್ ಮಾಡಿದ ಹಾಗೆ ಕೂದಲು ಕೂರಬೇಕು ಅಂತ ಇನ್ನೂ ಕೆಲವರು ಆಸೆಪಡುತ್ತಾರೆ.

ಇತ್ತೀಚೆಗೆ ಗಂಡುಮಕ್ಕಳು ನಾವು ಸಹ ಕೂದಲು ಕಾಳಜಿ ಮಾಡಬೇಕು ಕೂದಲು ಉದುರಿ ತಲೆ ಬಾಣಲಿ ಹಾಗೆ ಕಾಣುತ್ತೆ ಹಾಗೆ ಆಗಬಾರದು ಅಂತ ಹುಡುಗರು ಸಹ ಉತ್ತಮ ಕೂದಲಿನ ಕಾಳಜಿ ಮಾಡಲು ಮುಂದಾಗುತ್ತಾರೆ ಹೀಗೆಲ್ಲಾ ಇರುವಾಗ ಕೂದಲಿನ ಕಳಚಿ ಮಾಡುವುದಕ್ಕೆ ಮಾರುಕಟ್ಟೆಯಲ್ಲಿ ದೊರೆಯುವ ಎಣ್ಣೆ ಅಷ್ಟೂ ಪ್ರಯೋಜನಕಾರಿಯಾಗಿ ಕೂದಲಿನ ಕಾಳಜಿ ಮಾಡುವುದಿಲ್ಲ.

ಯಾಕೆ ಅಂತೀರಾ ಹೌದು ಕೂದಲಿನ ಕಾಳಜಿ ಮಾಡಬೇಕು ಅಂದರೆ ಕೂದಲಿನ ಬುಡಕ್ಕೆ ಪುಷ್ಟಿ ನೀಡಬೇಕೋ ಹೇಗೆ ನಮ್ಮ ಆರೋಗ್ಯಕ್ಕೆ ನಾವು ಒಳ್ಳೆಯ ಆಹಾರ ಪದಾರ್ಥಗಳನ್ನು ತಿನ್ನುವ ಮೂಲಕ ಪುಷ್ಟಿ ನೀಡುತ್ತೇವೋ ಹಾಗೆ ಕೂದಲಿನ ಬುಡಗಳು ಕೂಡ.

ನೀವು ಕೆಮಿಕಲ್ಸ್ ನಿಂದ ಮಾಡಿದಂತಹ ಎಣ್ಣೆಗಳನ್ನು ಶಾಂಪೂಗಳನ್ನು ಮತ್ತು ಇನ್ನೂ ಕೆಲವೊಂದು ಕೂದಲಿಗೆ ಬಳಸುವಂಥ ಪ್ರಾಡಕ್ಟ್ ಗಳನ್ನು ಬಳಸುವುದರಿಂದ ಕೂದಲಿನ ಬುಡ ಇನ್ನಷ್ಟು ತನ್ನ ಶಕ್ತಿಯನ್ನು ಕಳೆದುಕೊಂಡು ಕೂದಲು ಉದುರುವುದನ್ನೂ ಇನ್ನೂ ಹೆಚ್ಚು ಮಾಡುತ್ತದೆ ಹೊರತು ಯಾವುದೇ ಕಾರಣಕ್ಕೂ ಕೂದಲಿನ ಬುಡ ಮಾತ್ರ ಗಟ್ಟಿಯಾಗುವುದಿಲ್ಲ ಕೂದಲು ಉದುರುವುದು ಕಡಿಮೆ ಕೂಡ ಆಗುವುದಿಲ್ಲ.

ಹಾಗಾಗಿ ಈ ಕೂದಲುದುರುವ ಸಮಸ್ಯೆಯಿಂದ ಪಾರಾಗೋದಕ್ಕೆ ನಾವು ಇಂದು ಅಜ್ಜಿ ಮಾಡುವ ಸೂಪರ್ ಮನೆಮದ್ದನ್ನು ತಿಳಿಸಿಕೊಡುತ್ತೇವೆ ಇದನ್ನು ಹಳ್ಳಿ ಕಡೆ ಮಾಡಿ ಬಳಸುತ್ತಾರೆ ಮತ್ತು ಹಳ್ಳಿಗಳ ಕಡೆ ಹೆಣ್ಣು ಮಕ್ಕಳ ಕೂದಲನ್ನು ನೋಡಿದ್ದೀರಾ ಅಲ್ವಾ ಎಷ್ಟು ದಟ್ಟದಾಗಿ ಸೊಂಪಾಗಿ ಕಪ್ಪಾಗಿ ಬೆಳೆದಿರುತ್ತೆ ಅಂತ ಇದಕ್ಕೆ ಕಾರಣ ಅಜ್ಜಿ ಮಾಡುವ ಕೂದಲಿನ ಆರೈಕೆ ಮತ್ತು ಮನೆಮದ್ದುಗಳು.

ಇನ್ನೂ ಕೂಡ ನಾವು ಮಾಡುವ ಮನೆ ಮದ್ದು ಬಹಳ ಉತ್ತಮವಾಗಿದೆ ಕೊಬ್ಬರಿ ಎಣ್ಣೆಯ ಜೊತೆ ಈ ಕೆಲವೊಂದು ಪದಾರ್ಥಗಳನ್ನು ಮಿಶ್ರಣ ಮಾಡಿ ಚೆನ್ನಾಗಿ ಬಿಸಿ ಮಾಡಿ ನಂತರ ತಣಿದ ಮೇಲೆ ವಾರಕ್ಕೆ ಈ ಎಣ್ಣೆಯನ್ನು ನೀವು 2 ಭಾರಿ ಹಚ್ಚುತ್ತ ಬನ್ನಿ ಸಾಕು, ನಿಮ್ಮ ಕೂದಲಿನ ಬುಡ ಹೇಗೆ ಸ್ಟ್ರಾಂಗ್ ಆಗತ್ತೆ ನೋಡಿ ಇದರಿಂದ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ ಕಣ್ರಿ ಕೇವಲ ವಾರದಲ್ಲಿಯೇ ನೀವು ರಿಸಲ್ಟ್ ಕಾಣಬಹುದು.

ಈಗ ಮಾಡುವ ವಿಧಾನವನ್ನು ನೋಡೋಣ ಮೊದಲಿಗೆ ಮೆಹಂದಿ ಸೊಪ್ಪು ಕರಿಬೇವಿನ ಸೊಪ್ಪನ್ನು ಹಿಡಿಯಷ್ಟು ತೆಗೆದುಕೊಳ್ಳಿ ಇದಕ್ಕೆ ಚಮಚದಷ್ಟು ಮೆಂತೆಕಾಳುಗಳನ್ನು ಸೇರಿಸಿ ಇದೆಲ್ಲ ತನ್ನ ಕಬ್ಬಿಣದ ಬಾಣಲೆಗೆ ಹಾಕಿ ಇದರ ಜೊತೆಗೆ ಕಲೋಂಜಿ ಬೀಜಗಳನ್ನು ಹಾಕಿ ನಂತರ ಇದಕ್ಕೆ ಆಮ್ಲವನ್ನು ತುರಿದು ಇದರೊಟ್ಟಿಗೆ ಮಿಶ್ರಮಾಡಿ.

ಅಂಗಡಿಗಳಲ್ಲಿ ಭೃಂಗರಾಜ ಪುಡಿ ಸಿಗುತ್ತೆ ಅಥವಾ ಎಲೆಗಳು ಕೂಡ ಸಿಗುತ್ತೆ ಅದನ್ನು ತಂದು ಈ ಮಿಶ್ರಣಕ್ಕೆ ಹಾಕಿ. ಭೃಂಗರಾಜ ಕೂದಲಿಗೆ ಒಳ್ಳೆಯ ಪೋಷಣೆ ಕೊಡುತ್ತ ಮತ್ತು ಒಳ್ಳೆಯ ಘಮ ಸಹ ಇರುತ್ತದೆ.ಇದಕ್ಕೇನೆ ದಾಸವಾಳದ ಎಲೆಗಳನ್ನು ಮತ್ತು ಹೂಗಳನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಹಾಕಿ ಇದೆಲ್ಲ ತನ್ನ ಬಿಸಿಮಾಡುವಾಗ ಇದಕ್ಕೆ ಶುದ್ಧವಾದ ಮನೆಯಲ್ಲಿಯೇ ಮಾಡಿಸಿದ ಕೊಬ್ಬರಿ ಎಣ್ಣೆಯನ್ನು ಹಾಕಿ ಈಗ ಎಣ್ಣೆಯನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡುತ್ತಾ ಬರಬೇಕು ಎಣ್ಣೆಯ ಬಣ್ಣ ಬದಲಾಗುತ್ತೆ ಹೆದರಬೇಡಿ. ಈ ಎಣ್ಣೆಯಿಂದ ಬರುತ್ತಿರುವ ಹಸಿವಾಸನೆ ಸಂಪೂರ್ಣವಾಗಿ ಹೋಗುವವರೆಗೂ ಬಿಸಿ ಮಾಡಿಕೊಳ್ಳಿ.

ಈ ಬಿಸಿಯಾದ ಎಣ್ಣೆ ತಣಿಯಲು ಬಿಟ್ಟು ನಂತರ ಶೋಧಿಸಿಕೊಂಡು ಇದನ್ನು ಏರ್ ಟೈಟ್ ಕಂಟೈನರ್ ನಲ್ಲಿ ಶೇಖರಣೆ ಮಾಡಿ ಇಡಿ.ಆಗಾಗ ಬಿಸಿಲು ಬಂದಾಗ ಈ ಎಣ್ಣೆಯನ್ನು ಬಿಸಿಲಿನಲ್ಲಿ ಇಡಿ ಇದರಿಂದ ಎಣ್ಣೆ ಬೇಗ ಹಾಳಾಗುವುದಿಲ್ಲ ಮತ್ತು ಕೂದಲಿಗೆ ಹಚ್ಚಿ ಮಸಾಜ್ ಮಾಡಿ ಬೆಚ್ಚಗಿನ ನೀರಿನಿಂದ ತಲೆಯನ್ನು ತೊಳೆದುಕೊಂಡರೆ ಸಾಕು ಕೂದಲು ಸೊಂಪಾಗಿ ಬೆಳೆಯುತ್ತದೆ.