ತಲೆ ನೋವು ಸಮಸ್ಸೆ , ಜೀರ್ಣಕ್ರಿಯೆ ಸಮಸ್ಸೆಯಿಂದ ಹೊರಗೆ ಬರಲು ಈ ಕಾಯಿಯ ಪುಡಿ ರಾಮ ಬಾಣ .. ಅಷ್ಟಕ್ಕೂ ಯಾವುದು ಈ ಕಾಯಿ

286

ಈ ಮೂರೂ ಕಾಯಿಯ ಮಿಶ್ರಣವನ್ನು ತ್ರಿಫಲಚೂರ್ಣ ಅಂತ ಕರೀತಾರೆ ಇದರ ಪ್ರಯೋಜನಗಳು ಎಂತಹ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡಿದೆ ನೋಡಿ…ನಮಸ್ಕಾರಗಳು ಓದುಗರೆ, ನಮ್ಮ ಆರೋಗ್ಯ ವೃದ್ಧಿಗಾಗಿ ಏನು ಬೇಕಾದರೂ ನಾವು ಮಾಡುತ್ತೇವೆ ಆದರೆ ಯಾವುದೇ ವಿಚಾರದ ಬಗ್ಗೆ ಯಾವುದೇ ಮಾಹಿತಿ ಬಗ್ಗೆ ಸಂಕ್ಷಿಪ್ತವಾಗಿ ವಿವರ ತಿಳಿಯದೆ ನಾವು ಮುಂದುವರೆಯಬಾರದು ಹಾಗೆ ನಾವು ನಮ್ಮ ಆರೋಗ್ಯ ಕಾಳಜಿ ಮಾಡುವಲ್ಲಿಯೂ ಕೂಡ. ನಮ್ಮ ಆರೋಗ್ಯ ಕಾಳಜಿ ಮಾಡುವಾಗ ನಾವು ನಮ್ಮ ಆರೋಗ್ಯ ಕಾಳಜಿಗೆ ಬಳಸುವಂತಹ ಪದಾರ್ಥ ಗಳು ಆಗಿರಲಿ ಮಾತ್ರೆ ಚೂರ್ಣ ಯಾವುದೇ ಇರಲಿ ಅದರ ಬಗ್ಗೆ ಸರಿಯಾಗಿ ಮಾಹಿತಿ ತಿಳಿದು ಅದರ ಪ್ರಭಾವ ನಮ್ಮ ಶರೀರದ ಮೇಲೆ ಹೇಗಿರುತ್ತದೆ ಎಂಬುದನ್ನು ತಿಳಿದು ಬಳಿಕ ಅದರ ಉಪಯೋಗ ಪಡೆದುಕೊಳ್ಳಬೇಕು.

ನೀವೇನಾದರೂ ಸಾಮಾನ್ಯವಾಗಿ ಆಯುರ್ವೇದಿಕ್ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ ತ್ರಿಫಲಚೂರ್ಣ ದ ಹೆಸರನ್ನು ಕೇಳಿದ್ದರೋ ಇದರ ಪರಿಚಯ ನಿಮಗೆ ಇರುತ್ತದೆ. ಹೌದು ತ್ರಿಫಲಚೂರ್ಣ ಸಾಮಾನ್ಯವಾಗಿ ಆಯುರ್ವೇದದಲ್ಲಿ ಹೆಚ್ಚಾಗಿ ಬಳಕೆ ಮಾಡ್ತಾರೆ ಆಯುರ್ವೇದಿಕ್ ಚಿಕಿತ್ಸೆ ಪಡೆದುಕೊಳ್ಳುವ ಮಂದಿ ಈ ತ್ರಿಫಲಚೂರ್ಣ ದ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ.

ತ್ರಿಫಲ ಚೂರ್ಣ ದ ಉಪಯೋಗಗಳು :ತ್ರಿಫಲ ಚೂರ್ಣ ದ ಪ್ರಯೋಜನವನ್ನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಇರುವವರ ತೆಗೆದುಕೊಳ್ಳಬೇಕು ಅಂತ ಏನು ಇಲ್ಲ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ತ್ರಿಫಲ ಚೂರ್ಣವನ್ನು ತೆಗೆದುಕೊಳ್ಳಬಹುದು ಇದರಿಂದ ಆಗುವ ಲಾಭ ಏನು ಅಂತ ಹೇಳುವುದಾದರೆ ಜೀರ್ಣಕ್ರಿಯೆಯಿಂದ ಹಿಡಿದು ಕರುಳಿನ ಆರೋಗ್ಯದಿಂದ ಹಿಡಿದು ನಮ್ಮ ತೂಕ ಇಳಿಕೆಗೂ ಕಾರಣ ಆಗುತ್ತದೆ ತ್ರಿಫಲ ಚೂರ್ಣ.ತ್ರಿಫಲ ಚೂರ್ಣ ಅಂದರೆ 3 ಪದಾರ್ಥಗಳ ಮಿಶ್ರಣ ಅಂದರೆ ನೆಲ್ಲಿಕಾಯಿ ತಾರೆಕಾಯಿ ಮತ್ತು ಅರಳೇಕಾಯಿ, ಪಿ ತ್ರಿಫಲಾ ಅಂದರೆ tri ಅಂದರೆ 3 ಅಂತ ಅರ್ಥ phala ಅಂದರೆ ಕಣ್ಣು ಎಂದು ಅರ್ಥ.

ಈ ತ್ರಿಫಲಚೂರ್ಣ ಪ್ರಯೋಜನಗಳ ಕುರಿತು ಹೇಳುವುದಾದರೆ ಇದು ನಮ್ಮ ಕಣ್ಣಿನ ಆರೋಗ್ಯದಿಂದ ಹಿಡಿದು ನಮ್ಮ ಜೀರ್ಣಶಕ್ತಿಯ ಆರೋಗ್ಯವನ್ನು ಸಹ ಇದು ವೃದ್ಧಿ ಮಾಡುತ್ತದೆ ಹಾಗಾಗಿ ತ್ರಿಫಲಚೂರ್ಣ ದ ಪ್ರಯೋಜನವನ್ನು ನಾವು ನಿಯಮಿತವಾಗಿ ಪಡೆದುಕೊಳ್ಳುತ್ತ ಬಂದರೆ ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತದೆ ಹಾಗೂ ಸರಿಯಾದ ಸಮಯಕ್ಕೆ ಹಸಿವಾಗುವುದು ಅಥವಾ ಜೀರ್ಣಶಕ್ತಿ ಉತ್ತಮವಾಗಿಲ್ಲ ಅಂದರೆ ಜೀರ್ಣ ಶಕ್ತಿಯನ್ನು ವೃದ್ಧಿಸುವುದು ಮಾಡುವಲ್ಲಿ ಸಹಕಾರಿಯಾಗಿದೆ ಈ ತ್ರಿಫಲ ಚೂರ್ಣ.

ಅದ್ಭುತ ಪ್ರಯೋಜನಗಳನ್ನು ಹೊಂದಿರತಕ್ಕಂತಹ ತ್ರಿಫಲ ಚೂರ್ಣ ಎಮಿನಿಟಿ ಪವರನ್ನು ಹೆಚ್ಚಿಸುತ್ತದೆ ಹೌದು ರೋಗನಿರೋಧಕ ಶಕ್ತಿ ಇಲ್ಲವಾದರೆ ನಾವು ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಹಾಸಿಗೆ ಹಿಡಿಯಬೇಕಾಗುತ್ತದೆ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ ಆದರೆ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ, ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಹಾಗೂ ನಮ್ಮ ದೇಹ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿರುತ್ತದೆ.

ಚರ್ಮದ ಕಾಂತಿ ಅಥವಾ ಚರ್ಮಸಂಬಂಧಿ ಸಮಸ್ಯೆಗಳು ಇರುವವರು ತ್ರಿಫಲಚೂರ್ಣ ದ ಪ್ರಯೋಜನ ಪಡೆದುಕೊಳ್ಳಬಹುದು, ಇದರಿಂದ ಮೊಡವೆ ಅಂಥ ಸಮಸ್ಯೆ ಪರಿಹಾರವಾಗುತ್ತದೆ ಹಾಗೂ ತ್ವಚೆ ನೈಸರ್ಗಿಕವಾಗಿ ಕಾಂತಿ ಪಡೆದುಕೊಳ್ಳುತ್ತದೆ.ತ್ರಿಫಲ ಚೂರ್ಣ ವನ್ನೂ ಚೂರ್ಣದ ರೂಪದಲ್ಲಿ ಅಥವಾ ಮಾತ್ರೆ ರೂಪದಲ್ಲಿ ತೆಗೆದುಕೊಳ್ಳಬಹುದು, ಇದರಿಂದ ಸ್ಟ್ರೆಸ್ ಮತ್ತು ಆಂಕ್ಸೈಟಿ ಅಂತಹ ಸಮಸ್ಯೆ ಕೂಡ ಪರಿಹಾರ ಆಗುತ್ತದೆ.

ಹಾಗಾಗಿ ತ್ರಿಫಲಚೂರ್ಣ ಆಯುರ್ವೇದದ ಉತ್ತಮ ಔಷಧಿ ಆಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವುದರಿಂದ ನಮ್ಮ ಆರೋಗ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಹಾಗೂ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಚಿಕ್ಕಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ಯಾವುದೇ ಚಿಕಿತ್ಸೆ ಪಡೆದುಕೊಳ್ಳದೆ ತ್ರಿಫಲಚೂರ್ಣ ದ ಪ್ರಯೋಜನ ಪಡೆದುಕೊಂಡರೆ ಸಾಕು ಆರೋಗ್ಯಕರ ಜೀವನ ನಡೆಸಬಹುದು.

WhatsApp Channel Join Now
Telegram Channel Join Now