ಥೈರಾಯ್ಡ್ ಸಮಸ್ಯೆ ಜನಮದಲ್ಲಿ ಎದುರಾಗಬಾರದು ಅಂದ್ರೆ ಈ ಒಂದು ಮನೆಮದ್ದು ಮಾಡಿ ಬಳಸಿ ಸಾಕು ..

323

ಹಾರ್ಮೋನ್ ಇಂಬ್ಯಾಲೆನ್ಸ್ ಆದಾಗ ಥೈರಾಯ್ಡ್ ಸಮಸ್ಯೆ ಬಂದೇ ಬರುತ್ತೆ ಆದರೆ ಚಿಂತಿಸಬೇಡಿ ಥೈರಾಯ್ಡ್ ಸಮಸ್ಯೆಗೆ ಮಾತ್ರೆ ತೆಗೆದುಕೊಳ್ಳುವುದೊಂದೇ ಚಿಕಿತ್ಸೆಯಲ್ಲಾ.ಇದಕ್ಕೆ ಮನೆಮದ್ದಿನ ಮೂಲಕವೂ ಕೂಡ ಪರಿಹಾರ ಮಾಡಬಹುದು ಅದಕ್ಕಾಗಿ ನೀವು ಊಟದ ನಂತರ ಇದೊಂದು ಚಿಕ್ಕ ಪರಿಹಾರವನ್ನ ಪಾಲಿಸಬೇಕಿರುತ್ತದೆ ಅಷ್ಟೆ. ಹಾಗಾದರೆ ಈ ಥೈರಾಯ್ಡ್ ಸಮಸ್ಯೆಗೆ ಮಾಡಬಹುದಾದ ಸರಳ ಪರಿಹಾರದ ಕುರಿತು ತಿಳಿಯೋಣ ಬನ್ನಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಮೊದಲಿಗೆ ಹಾರ್ಮೋನ್ ಇಂಬ್ಯಾಲೆನ್ಸ್ ಹಾಗೂ ಉದರ ಕಾರಣ ಹೇಳುತ್ತಾ ಹೋದರೆ ನಮ್ಮ ಬದಲಾಗುತ್ತಿರುವ ಜೀವನಶೈಲಿ ಹೌದು ನಾವು ಬಳಕೆ ಸರಿಯಾಗಿ ಎದ್ದೇಳುವುದಿಲ್ಲ ಸರಿಯಾದ ಸಮಯಕ್ಕೆ ತಿಂಡಿ ತಿನ್ನುವುದಿಲ್ಲ ಹಾಗೂ ಮಧ್ಯಾಹ್ನ ಕೂಡ ಸರಿಯಾದ ಸಮಯದಲ್ಲಿ ಊಟ ಮಾಡುವುದಿಲ್ಲ. ಇನ್ನು ರಾತ್ರಿ ಕೇಳ್ಬೇಕಾ ಸರಿಯಾದ ಸಮಯಕ್ಕೆ ರಾತ್ರಿ ಕೂಡ ಊಟ ಮಾಡುವುದಿಲ್ಲ ಜೊತೆಗೆ ಸರಿಯಾದ ಸಮಯಕ್ಕೆ ನಿದ್ರೆ ಕೂಡ ಮಾಡುವುದಿಲ್ಲ.

ಅಂದೆಲ್ಲ ಊಟವನ್ನ ನಮ್ಮ ಹಿರಿಯರು ಹೇಗೆ ಮಾಡುತ್ತಿದ್ದರು ಅಂದರೆ ಬೆಳಗ್ಗಿನ ಸಮಯ ರಾಜನ ಹಾಗೆ ಮಧ್ಯಾಹ್ನದ ಸಮಯ ಮಂತ್ರಿಯಾ ಹಾಗೆ, ರಾತ್ರಿಯ ಸಮಯ ಬಡವನ ಹಾಗೆ ಊಟವನ್ನ ಮಾಡ್ತಾ ಇದ್ರಂತೆ, ಅಂದರೆ ಬೆಳಿಗ್ಗೆ ಹೊಟ್ಟೆ ತುಂಬ ಊಟ ಮಧ್ಯಾಹ್ನ ಮುಕ್ಕಾಲು ಹೊಟ್ಟೆ ಊಟ ರಾತ್ರಿ ಅರ್ಧಹೊಟ್ಟೆ ಅಷ್ಟು ಊಟ ಈ ರೀತಿ ಊಟ ಮಾಡುವುದರಿಂದ ಆರೋಗ್ಯವು ಉತ್ತಮವಾಗಿಯು ಇರುತ್ತಿತ್ತು ಹಾಗೂ ಯಾವುದೇ ತರಹದ ಕಾಯಿಲೆ ಕಸಾಲೆಗಳು ಬರುತ್ತಾ ಇರಲಿಲ್ಲ.

ಆದರೆ ಇವತ್ತಿನ ದಿನಗಳಲ್ಲಿ ಜನರು ತಮ್ಮ ಇಷ್ಟಬಂದಂತೆ ಊಟ ಮಾಡ್ತಾರೆ, ಮಧ್ಯಾಹ್ನ ಅನ್ನೋದಲ್ಲ ರಾತ್ರೆ ಅನ್ನೋದಲ್ಲ ಬೆಳಿಗ್ಗೆ ಅನ್ನೋದಲ್ಲಾ, ಯಾವಾಗ ಬೇಕೋ ಅಷ್ಟು ಊಟ ಮಾಡಿಕೊಂಡು ಸುಮ್ಮನೆ ಆಗ್ತಾರೆ. ಹಸಿದಾಗ ಒಂದಿಷ್ಟು ತಿಂದು ಮತ್ತೆ ಯಾವಾಗಾದರು ತಿಂದರೆ ಆಯ್ತು ಅಂತ ಸುಮ್ಮನೆ ಬಿಡೋದು ಇಂತಹ ನಿರ್ಲಕ್ಷ್ಯತನದಿಂದಲೆ ಮತ್ತು ಆರೋಗ್ಯ ಕೆಡುತ್ತಾ ಇರೋದು.

ಇಷ್ಟೆ ಅಲ್ಲಾ ಆಹಾರ ಪದ್ಧತಿಯ ವಿಚಾರಕ್ಕೆ ಬಂದರೆ, ಬ್ರೆಡ್ಡು ಬನ್ನು ಪಿಜ್ಜಾ ಬರ್ಗರ್ ಫಿಂಗರ್ ಚಿಪ್ಸ್ ಹೀಗೆ ನಾಲಿಗೆ ಗೆ ರುಚಿ ನೀಡುವ ಆಹಾರ ಪದಾರ್ಥಗಳನ್ನು ಮಾತ್ರ ತಿನ್ನಲು ಇಷ್ಟಪಡುತ್ತಾರೆ ಹೊರೆತು, ನಮ್ಮ ಆರೋಗ್ಯಕ್ಕೆ ಪೋಷಕಾಂಶ ನೀಡುವಂತಹ ಯಾವ ಆಹಾರಗಳನ್ನು ಇಂದಿನ ದಿನಗಳಲ್ಲಿ ಜನರು ತಿನ್ನುತ್ತಿಲ್ಲ.ಹೀಗೆ ಮಾಡುವುದರಿಂದ ದೇಹ ತಾನೆ ಹೇಗೆ ತಡೆಯುತ್ತಾ ಎಲ್ಲಾ ತರಹದ ಸ್ಟ್ರೆಸ್ ಅನ್ನು ಆಗ ಉಂಟಾಗುತ್ತದೆ ಈ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ.

ಈಗ ಥೈರಾಯ್ಡ್ ಸಮಸ್ಯೆ ಬಂದವರು ಮಾಡಬೇಕಿರುವ ಪರಿಹಾರ ಏನು ಅಂದರೆ ಈ ಮೇಲೆ ತಿಳಿಸಿದಂತೆ ಮೊದಲು ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಸರಿಪಡಿಸಿಕೊಳ್ಳಿ ಮತ್ತು ರಾತ್ರಿ ಪ್ರತಿದಿನ ಊಟದ ಬಳಿಕ ಅರ್ಧ ಗಂಟೆಯ ನಂತರ ಹಾಲು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಜತೆಗೆ ಹಾಲು ಕುಡಿಯುವಾಗ ನೆನೆಸಿಟ್ಟ ವಾಲ್ನಟ್ ಕೂಡ ತಿನ್ನುತ್ತ ಬನ್ನಿ. ಇದರಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ಪರಿಹಾರವಾಗಿ ಥೈರಾಯ್ಡ್ ಸಮಸ್ಯೆ ಕೂಡ ನಿಯಂತ್ರಣಕ್ಕೆ ಬರುತ್ತದೆ.

ಹೆದರಬೇಡಿ ಥೈರಾಯ್ಡ್ ಸಮಸ್ಯೆ ಏನು ಬಗೆಹರಿಸಲಾಗದಂತಹ ತೊಂದರೆ ಅಲ್ಲ ನಿಮ್ಮ ಆಹಾರ ಪದ್ಧತಿಯನ್ನು ನಿಯಂತ್ರಣದಲ್ಲಿ ಇಟ್ಟರೆ, ತಾನಾಗಿಯೇ ಥೈರಾಯ್ಡ್ ಸಮಸ್ಯೆ ಕೂಡ ನಿಯಂತ್ರಣಕ್ಕೆ ಬರುತ್ತೆ.ಇದರ ಜತೆಗೆ ನಿಮ್ಮ ಆಹಾರ ಪದ್ಧತಿಯಲ್ಲಿ ಪ್ರತಿದಿನ ಬಾಳೆಹಣ್ಣು ಮತ್ತು ಒಂದು ಸೀಬೆ ಹಣ್ಣನ್ನು ತಿನ್ನುವ ರೂಢಿ ಮಾಡಿಕೊಳ್ಳಿ. ಸೀಬೆಹಣ್ಣು ಮಾತ್ರ ಬಹಳ ಅದ್ಭುತ ಪ್ರಯೋಜನಗಳನ್ನು ಹೊಂದಿರುವ ಹಣ್ಣು. ಈ ಹಣ್ಣಿನ ಸೀಸನ್ ನಲ್ಲಿ ಸೀಬೆ ಹಣ್ಣನ್ನು ಚೆನ್ನಾಗಿ ತಿನ್ನಿ ಇದು ಆರೋಗ್ಯಕ್ಕೆ ತುಂಬ ಒಳ್ಳೆಯದು ಹಾಗೂ ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಈ ಅದ್ಭುತ ಹಣ್ಣು ನಿಮ್ಮ ಥೈರಾಯ್ಡ್ ಸಮಸ್ಯೆ ಗೆ ಬಹಳ ಬೇಗ ನಿವಾರಣೆ ಕೊಡುತ್ತೆ.

WhatsApp Channel Join Now
Telegram Channel Join Now