ನಮ್ಮ ಹೆಮ್ಮೆಯ ಕ್ರಿಕೆಟಿಗ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಹೆಂಡತಿ ಯಾರು ಗೊತ್ತಾ… ಮೊದಲ ಬಾರಿ ನೋಡಿ

133

ಭಾರತ ಕ್ರಿಕೆಟ್ ತಂಡದ ಎಲ್ಲಾ ಆಟಗಾರರು ಸಹ ತಮ್ಮದೇ ಆದ ವಿಧಾನದಲ್ಲಿ ಆಟವನ್ನು ಆಡಿ ಭಾರತದ ಜನತೆಯ ಮನ ಗೆದ್ದಿದ್ದಾರೆ ಅದರಲ್ಲಿಯೂ ಭಾರತ ಕ್ರಿಕೆಟ್ ತಂಡದ ದಿ ವಾಲ್ ಎಂದೇ ಪ್ರಸಿದ್ಧಗೊಂಡಿರುವ ಕರೆಸಿಕೊಳ್ಳುತ್ತಿದ್ದ ಕರ್ನಾಟಕದ ನಮ್ಮೆಲ್ಲರ ನೆಚ್ಚಿನ ಜನ ನಾಯಕ ಹೆಮ್ಮೆಯ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಭಾರತ ಕ್ರಿಕೆಟ್ ತಂಡವನ್ನು ನಾಯಕರಾಗಿ ಮುನ್ನೆಡೆಸಿದ ಮಹಾನ್ ಆಟಗಾರ. ಕ್ರಿಕೆಟ್ ಜಗತ್ತಿನಲ್ಲಿ ದ್ರಾವಿಡ್ ಅವರ ಸಾಧನೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಅವರ ವೈಯಕ್ತಿಕ ಕುಟುಂಬದ ಬಗ್ಗೆ ಹೆಚ್ಚಿನದಾಗಿ ತಿಳಿದಿರುವುದಿಲ್ಲಾ. ದ್ರಾವಿಡ್ ಅವರ ಪೂರ್ಣ ಹೆಸರು ರಾಹುಲ್ ಶರದ್ ದ್ರಾವಿಡ್ ಎಂದು. ಇವರು 1973 ಜನವರಿ 11 ರಂದು ಮಧ್ಯ ಪ್ರದೇಶದ ಇಂದೋರ್ ನಲ್ಲಿ ಜನಿಸಿದರು. ದ್ರಾವಿಡ್ ತಮ್ಮ ಬ್ಯಾಟಿಂಗ್ ಟೆಕ್ನಿಕ್ ಮೂಲಕ ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೆ ಆದಂತಹ ವಿಶಿಷ್ಟ ಛಾಯೆ ಅನ್ನು ಹೊಂದಿದ್ದಾರೆ ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 24,177 ರನ್ ಗಳಿಸಿರುವ ರಾಹುಲ್ ಅವರು 2005 ರಿಂದ 2007 ರವರೆಗೆ ಭಾರತ ತಂಡದ ಕ್ಯಾಪ್ಟನ್ ಆಗಿದ್ದರು.

ಪ್ರಸ್ತುತ ದ್ರಾವಿಡ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತ ಇದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ನಮ್ಮ ಭಾರತ ತಂಡದ ಕೋಚ್ ಆಗಿಯೂ ಸಹ ಆಯ್ಕೆಯಾಗಿರುವ ರಾಹುಲ್ ಅವರು ಕೋಚ್ ಹುದ್ದೆಗೆ ಬಿಸಿಸಿಐ ದ್ರಾವಿಡ್ ಅವರಿಗೆ ಬರೋಬ್ಬರಿ 10ಕೋಟಿ ಸಂಭಾವನೆ ನೀಡುತ್ತಾರೆ. ಇದಿಷ್ಟು ರಾಹುಲ್ ದ್ರಾವಿಡ್ ಅವರ ವೃತ್ತಿ ಜೀವನ ಕುರಿತು ಮಾಹಿತಿ ಆದರೆ ರಾಹುಲ್ ಅವರ ಕುಟುಂಬದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ ನಮ್ಮ ಹೆಮ್ಮೆಯ ಕ್ರಿಕೆಟಿಗರಾಗಿರುವ ರಾಹುಲ್ ದ್ರಾವಿಡ್ ಅವರು 2003ರಲ್ಲಿ ವೈದ್ಯರಾದ ವಿಜೇತಾ ಪೆಂಡಾರ್ಕರ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರದ್ದು ಲವ್ ಕಮ್ ಅರೆಂಜ್ ಮ್ಯಾರೆಂಜ್ ಎಂದು ಹೇಳಬಹುದು.

ಇವರಿಬ್ಬರ ಪ್ರೇಮ್ ಕಹಾನಿ ಕೇಳಿದರೆ ಯಾವ ಸಿನೆಮಾ ಸ್ಟೋರಿಗೂ ಸಹ ಕಡಿಮೆಯಿಲ್ಲ ಹೌದೋ ರಾಹುಲ್ ದ್ರಾವಿಡ್ ಅವರ ಪತ್ನಿ ವಿಜೇತಾ ಪೆಂಡಾರ್ಕರ್ ಅವರ ತಂದೆ ಭಾರತೀಯ ವಾಯುಸೇನೆ ಅಲ್ಲಿ ವಿಂಗ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತ ಇದ್ದರು. ದ್ರಾವಿಡ್ ಅವರ ಪತ್ನಿ ವಿಜೇತ ಪಂಧರ್ಕರ್ ಅವರ ತಂದೆ ಭಾರತೀಯ ವಾಯು ಸೇನೆಯಲ್ಲಿ ವಿಂಗ್ಕ ಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತ ಇದ್ದರು. ಹೀಗಾಗಿ ಅವರ ತಂದೆ ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡಬೇಕಾಗಿರುತ್ತದೆ. 1968 ರಿಂದ 1971 ರವರೆಗೆ ವಿಜೇತ ಅವರ ತಂದೆಗೆ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುವ ಸಮಯದಲ್ಲಿ ವಿಜೇತ ಕುಟುಂಬ ಮತ್ತು ರಾಹುಲ್ ದ್ರಾವಿಡ್ ಅವರ ಕುಟುಂಬಕ್ಕೆ ಪರಿಚವಾಗಿರುತ್ತದೆ. ಇದದ ನಡುವೆಯೇ ವಿಜೇತ ಮತ್ತು ದ್ರಾವಿಡ್ ಅವರಿಗೆ ಉತ್ತಮ ಬಾಂಧವ್ಯ ಏರ್ಪಟ್ಟಿರುತ್ತದೆ. ಇದರ ಪರಿಣಾಮ ವಿಜೇತ ಅವರ ವಿಧ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಸಾಗುತ್ತದೆ.

ವಿಜೇತ ಅವರ ತಂದೆ ತಮ್ಮ ಸೇವೆಯಿಂದ ನಿವೃತ್ತಿಗೊಂಡ ನಂತರ ನಾಗಪುರದಲ್ಲಿ ಈ ಕುಟುಂಬ ಸೆಟಲ್ ಆಗುತ್ತಾರೆ. 2002 ರಲ್ಲಿ ವಿಜೇತ ಅವರು ಶಸ್ತ್ರ ಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ.ಇವರಿಬ್ಬರ ಪೋಷಕರು ಕೂಡ ಪರಸ್ಪರ ಆತ್ಮೀಯರಾಗಿದ್ದ ಕಾರಣ ಎರಡೂ ಮನೆಯವರು ಒಪ್ಪಿ ವಿಜೇತ ಮತ್ತು ದ್ರಾವಿಡ್ ಅವರಿಗೆ ವಿವಾಹ ನಿಶ್ಚಯ ಮಾಡುತ್ತಾರೆ‌. ಅದರಂತೆ ದ್ರಾವಿಡ್ ಅವರು ವಿಶ್ವಕಪ್ ಮುಗಿಸಿ ಬಂದ ಬಳಿಕ 2003 ಮೇ 4 ರಂದು ರಾಹುಲ್ ದ್ರಾವಿಡ್ ಮತ್ತು ವಿಜೇತ ಪಂಧಾರ್ಕರ್ ಅವರು ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುತ್ತಾರೆ.

ಈ ದಂಪತಿಗಳಿಗೆ 2005ರಲ್ಲಿ ಒಬ್ಬ ಗಂಡು ಮಗು ಜನಿಸುತ್ತದೆ. ಈ ಮಗುವಿಗೆ ಸಮೀತ್ ಎಂದು ಹೆಸರಿಡುತ್ತಾರೆ. ನಂತರ 2009 ರಲ್ಲಿ ಮತ್ತೊಂದು ಗಂಡು ಮಗುವಿಗೆ ಪೋಷಕರಾದ ಈ ದಂಪತಿಗಳು ತಮ್ಮ ಎರಡನೇ ಮಗುವಿಗೆ ಅನ್ವೇ ಎಂದು ನಾಮಕರಣ ಮಾಡುತ್ತಾರೆ. ರಾಹುಲ್ ದ್ರಾವಿಡ್ ಅವರು ಯಾವತ್ತಿಗೂ ನಮ್ಮ ಕ್ರಿಕೆಟ್ ಇತಿಹಾಸದಲ್ಲಿ ದಂತಕತೆಯ ಅಂತ ಹೇಳಿದರೆ ತಪ್ಪಾಗುವುದಿಲ್ಲ ರಾಹುಲ್ ಅವರ ಕುರಿತು ಕಮೆಂಟ್ ಮಾಡಿ ಧನ್ಯವಾದ .

WhatsApp Channel Join Now
Telegram Channel Join Now