ನಿಮಗೆ ಗೊತ್ತ ಯಾವುದೇ ವ್ಯಕ್ತಿ ದೇವರ ಪಾದ ಸೇರಿಕೊಂಡ ನಂತರ ಎಷ್ಟು ದಿನ ಭೂಮಿ ಮೇಲೆ ಅಲೆದಾಡುತ್ತಾ ಇರುತ್ತಾರೆ ಅಂತಾ…

313

ನಮಸ್ಕಾರಗಳು ಪ್ರಿಯ ಓದುಗರೆ ಮನುಷ್ಯನ ಜೀವನವು ಕನ್ನಡಿ ಇದ್ದಂತೆ ಆ ಕನ್ನಡಿ ಒಮ್ಮೆ ಹೊಡೆದರೆ ದೇಹದೊಳಗಿರುವ ಆತ್ಮವು ಹೊರಹೋದಂತೆ, ಹೇಗೆ ಕನ್ನಡಿಯನ್ನು ಸರಿ ಮಾಡಲು ಸಾಧ್ಯವಿಲ್ಲಹಾಗೆ ಮನುಷ್ಯನ ಜೀವವನ್ನು ಸರಿ ಮಾಡಲು ಸಾಧ್ಯವಿಲ್ಲ. ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ಅದರ ಹುಟ್ಟು ಅನಿಶ್ಚಿತ, ಆದರೆ ಸಾವು ಮಾತ್ರ ನಿಶ್ಚಿತವಾಗಿರುತ್ತದೆ ಯಾವಾಗ ಹೋಗಬೇಕು ಅಂತ ಹಣೆ ಬರಹದಲ್ಲಿರುತ್ತದೆ ಮನುಷ್ಯನ ಆ ಆಯಸ್ಸು ಕೂಡ ಅಷ್ಟೇ ಆಗಿರುತ್ತದೆ. ಆದ್ದರಿಂದ ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಗೂ ಒಂದಲ್ಲ ಒಂದು ದಿನ ಈ ಜೀವನವನ್ನು ಜೀವವನ್ನು ಆ ದೇಹವನ್ನು ಬಿಟ್ಟು ಹೋಗಲೇಬೇಕು. ಶಾಸ್ತ್ರಗಳಲ್ಲಿ ಉಲ್ಲೇಖ ಪಡೆದುಕೊಂಡಿರುವ ಹಾಗೆ ಮನುಷ್ಯನ ಸಾವು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ ಕೆಲವರಿಗೆ ಕೊನೆಯ ದಿನಗಳು ಬಹಳ ಕಷ್ಟಕರವಾಗಿದ್ದರೆ ಕೊನೆಯ ದಿನವೂ ಇನ್ನೂ ಕೆಲವರಿಗೆ ದೇವರು ಕೊಟ್ಟ ವರವಾಗಿರುತ್ತದೆ ಅವರ ಜೀವನದಲ್ಲಿ ಸಜ್ಜನರಾಗಿದ್ದರೆ ಆ ದೇವರು ಅವರನ್ನು ರಾಜನಂತೆ ಕರೆಸಿಕೊಳ್ಳುತ್ತಾನೆ ಇಲ್ಲವಾದರೆ ಅವರ ಕೊನೆ ದಿನಗಳನ್ನು ನೆನಪಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ ಅಂತಹ ಪರಿಸ್ಥಿತಿಯಲ್ಲಿ ದೈವ ಅವರನ್ನ ನರಕದ ಕೂಪಕ್ಕೆ ಕಳುಹಿಸುತ್ತಾನೆ.

ಹೀಗಿರುವಾಗ ಶಾಸ್ತ್ರಗಳಲ್ಲಿ ಉಲ್ಲೇಖಗೊಂಡಿರುವ ಕೆಲವೊಂದು ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲು ಹೊರಟಿದ್ದೇವೆ ಹೌದು ಎಲ್ಲರಿಗೂ ಸಹ ಅವರದ್ದೇ ಆದ ಜೀವನವಿರುತ್ತದೆ ಅವರು ಅವರ ಜೀವನವನ್ನು ಹೇಗೆ ಸ್ಪಂದಿಸುತ್ತಾರೆ ಎಂಬುದರ ಮೇಲೆ ಅದರ ಕೊನೆ ದಿನಗಳು ಇರುತ್ತವೆ ಜೀವನಪರ್ಯಂತ ಯಾರೋ ಹಿರಿಯರಿಗೆ ಗೌರವ ಕೊಡುತ್ತಾ ಕಿರಿಯರಿಗೆ ಪ್ರೀತಿ ಕೊಡುತ್ತಾ ಜೀವನ ನಡೆಸುತ್ತಾರೆ ಅಂಥವರ ಬಾಳು ಕೊನೆ ದಿನಗಳಲ್ಲಿ ತಾವು ಅಂದುಕೊಂಡಂತೆ ಇರುತ್ತದೆ ತನ್ನ ಕುಟುಂಬಸ್ಥರೊಂದಿಗೆ ಆತ ತನ್ನ ಕೊನೆ ದಿನವನ್ನು ಕಳೆಯುತ್ತಾನೆ ಇಲ್ಲವಾದಲ್ಲಿ ಆತ ಅಂದುಕೊಂಡೆ ಇರುವುದಿಲ್ಲ ಅಂತಹ ಪರಿಸ್ಥಿತಿ ಅವನಿಗೆ ಅವನ ಕೊನೆ ದಿನಗಳಲ್ಲಿ ಎದುರಾಗುತ್ತದೆ ರೋಗರುಜಿನಗಳಿಂದ ಅವನ ಕೊನೆ ದಿನಗಳನ್ನ ಅವನು ಕಲಿಯಬೇಕಿರುತ್ತದೆ.

ಹೌದು ಮನುಷ್ಯನ ಆತ್ಮ ದೇಹ ಬಿಟ್ಟ ಮೇಲೆ ಅದು ಭೂಮಿ ಮೇಲೆ 14 ರಿಂದ 15 ದಿನಗಳವರೆಗೂ ಇರುತ್ತದೆ ಇದು ಶಾಸನದಲ್ಲಿ ಉಲ್ಲೇಖಗೊಂಡಿದ್ದು ಯಾವ ಆತ್ಮಕ್ಕೆ ಸರಿಯಾಗಿ ಕೊನೆಯ ಶಾಸ್ತ್ರ ಸಂಪ್ರದಾಯ ಅಂತ್ಯಸಂಸ್ಕಾರವನ್ನು ಮಾಡುವುದಿಲ್ಲ ಅಂತಹ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಅಂತಹ ಆತ್ಮ ಮುಂದಿನ ಜನುಮದಲ್ಲಿ ಸುಖವಾಗಿರುವುದಿಲ್ಲ ಸುಖವನ್ನ ಪಡೆದುಕೊಳ್ಳುವುದಿಲ್ಲ ಆದ್ದರಿಂದ ಆತ್ಮಕ್ಕೆ ಸರಿಯಾದ ಸಂಸ್ಕಾರ ನಡೆಯದೇ ಇದ್ದಾಗ ಆ ಆತ್ಮವು ಪುನರ್ ಜನ್ಮ ಪಡೆದಾಗ ಬಹಳಷ್ಟು ನೋವನ್ನು ಕಷ್ಟವನ್ನ ಪಡಬೇಕಾಗುತ್ತದೆ.

ಹೀಗೆ ಮನುಷ್ಯನ ಆತ್ಮ ದೇಹ ಬಿಟ್ಟ ಮೇಲೆ ಅದು ಅವನು ವಾಸಿಸುತ್ತಿದ್ದ ಸೂರ್ಯನಲ್ಲಿಯೇ ಇರುತ್ತದೆ ಅಂತ ಹೇಳುತ್ತದೆ ಯಾರು ಆ ಆತ್ಮದ ಕುಟುಂಬಸ್ಥರು ಅವರ ಹೆಸರು ಹೇಳಿ ಅಳುತ್ತಾ ಇರುತ್ತಾರೆ ಅಂತಹವರ ಆತ್ಮ ಕ್ಕೆ ಶಾಂತಿ ಸಿಗುವುದಿಲ್ಲ ಅಂತ ಕೂಡ ಹೇಳಲಾಗಿದೆ. ಶಾಸ್ತ್ರಗಳಲ್ಲಿ ಉಲ್ಲೇಖಗೊಂಡಿರುವುದು ಯಾವುದೂ ಕೂಡ ಸುಳ್ಳಾಗಿರುವುದಿಲ್ಲ ಆ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ಆತ್ಮಕ್ಕೆ ಸರಿಯಾಗಿ ಸಂಸ್ಕಾರ ನಡೆಸಬೇಕು ಇಲ್ಲವಾದಲ್ಲಿ ಆತ್ಮ ಪ್ರೇತಾತ್ಮ ವಾಗಿ ಭೂಮೀನೂ ಸುತ್ತುತ್ತಾ ಇರುತ್ತದೆ ಇಲ್ಲವಾದಲ್ಲಿ ಆ ಆತ್ಮಕ್ಕೆ ಪುನರ್ಜನ್ಮ ಸಿಕ್ಕರೂ ಅದು ಹಲವು ಸಮಸ್ಯೆಗಳಿಂದ ಆ ಜೀವನವಲ್ಲ ಕಳೆಯಬೇಕಿರುತ್ತದೆ.

ಮನುಷ್ಯನಿಗೆ ಅಂತ್ಯಸಂಸ್ಕಾರ ಮಾಡಿದ ಮೇಲೆ ಆ ಜಾಗವನ್ನು ಮತ್ತೆ ಹಿಂದಿರುಗಿ ನೋಡಬಾರದು ಯಾಕೆ ಅಂದರೆ ಆ ಆತ್ಮ ಅವನ ದೇಹ ಎಲ್ಲಿ ಇರುತ್ತದೋ ಅಲ್ಲಿ ಇರುತ್ತದೆ ಅವನ ಕುಟುಂಬಸ್ಥರು ಮತ್ತೆ ಹಿಂದಿರುಗಿ ನೋಡಿದಾಗ ಆ ಆತ್ಮವು ನನ್ನನ್ನು ಮತ್ತೆ ಅವರು ಕರೆಯುತ್ತಿದ್ದಾರೆ ಎಂದು ತಿಳಿದು ಅವರ ಹಿಂದೆಯೇ ಹೋಗುತ್ತದೆ ಅದಕ್ಕೆ ಭೂಮಿ ಮೇಲೆ ಶಾಂತಿಯೆಂಬುದೇ ಸಿಗುವುದಿಲ್ಲ ಆದ್ದರಿಂದ ಅಂತ್ಯಸಂಸ್ಕಾರವಾದ ಬಳಿಕ ಆ ಜಾಗವನ್ನು ಮತ್ತೆ ಹಿಂತಿರುಗಿ ನೋಡದೆ ಕುಟುಂಬಸ್ಥರು ಹೋಗಬೇಕು ತನ್ನ ಕೊನೆಯ ಸಮಯದಲ್ಲಿ ಯಾರು ದೇವರ ಸ್ಮರಣೆ ಮಾಡುತ್ತಾ ತನ್ನ ಪ್ರಾಣ ಬಿಡುತ್ತಾರೆ ಅಂಥವರಿಗೆ ಪುಣ್ಯ ಲಭಿಸುತ್ತದೆ ಅಂತ ಹೇಳಲಾಗಿದೆ ಹೀಗಿರುವಾಗ ಮನುಷ್ಯ ತನ್ನ ಜೀವನವನ್ನು ಆ ದೇವರು ಕೊಟ್ಟ ವರ ವಂತೆ ನಡೆಸಿಕೊಂಡು ಹೋದರೆ ಅವನ ಜೀವನ ಬಹಳ ಸುಖಮಯವಾಗಿರುತ್ತದೆ ಇಲ್ಲವಾದಲ್ಲಿ ಅವನ ಕೊನೆ ದಿನಗಳು ಅಂದುಕೊಳ್ಳಲು ಸಾಧ್ಯವಾಗದಿರುವಷ್ಟು ಕಷ್ಟಕರವಾಗಿರುತ್ತದೆ.