ನಿಮ್ಮ ಊರಿನಲ್ಲಿರೋ ಗ್ರಾಮ ಪಂಚಾಯತಿ ಸದಸ್ಯರ ಕರ್ತ್ಯವ್ಯಗಳು ಏನಿಲ್ಲ ಇರುತ್ತವೆ ಅನ್ನೋದು ನಿಮಗೆ ಗೊತ್ತ …

435

ನಮಸ್ಕಾರ ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ಹಳ್ಳಿಗಳಲ್ಲಿ ವಾಸ ಮಾಡುವ ಮಂದಿಗೆ ಉಪಯೋಗವಾಗುವಂತಹ ವಿಚಾರಗಳ ಬಗ್ಗೆ ತಿಳಿಸಲಿದ್ದೇವೆ ಹೌದು ಈ ಮಾಹಿತಿ ನಿಮಗೆ ಉಪಯುಕ್ತವಾಗುತ್ತದೆ ಎಂದು ನಾವು ಭಾವಿಸಿದ್ದೇವೆ ಮಾಹಿತಿ ಸಂಪೂರ್ಣವಾಗಿ ತಿಳಿದ ಬಳಿಕ ನಿಮಗೂ ಸಹ ಮಾಹಿತಿ ಉಪಯುಕ್ತವಾಗಿದೆ ಅನಿಸಿದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮೂಲಕ ತಿಳಿಸಿ ಕೊಡಿ. ಹೌದು ನಾವು ಈ ದಿನ ನಿಮಗೆ ಹೇಳಲು ಹೊರಟಿರುವ ಈ ಮಾಹಿತಿ ಏನಪ್ಪಾ ಅಂದರೆ ಗ್ರಾಮ ಪಂಚಾಯಿತಿ ಅಲ್ಲಿ ಸದಸ್ಯರಾಗಿರುವ ಹೌದು ನೀವೆಲ್ಲರೂ ವೋಟ್ ಮಾಡಿ ಗೆಲ್ಲಿಸಿ ಇರುವಂತಹ ಈ ಗ್ರಾಮ ಪಂಚಾಯ್ತಿ ಮೆಂಬರ್ ಗಳ ಜವಾಬ್ದಾರಿ ಏನಿರುತ್ತದೆ ಮತ್ತು ಅವರು ಮಾಡಬೇಕಾಗಿರುವ ಕೆಲ ಕರ್ತವ್ಯಗಳು ಇವೆಲ್ಲ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಹೌದು ಇದು ಸಾಮಾನ್ಯವಾಗಿ ಪ್ರತಿಯೊಬ್ಬ ಪ್ರಜೆಯೂ ಹೆದರಬೇಕಾಗಿರುವಂತಹ ಮಾಹಿತಿ ಆಗಿರುವುದರಿಂದ, ಈ ಮಾಹಿತಿ ನೀವು ಸಹ ತಿಳಿಯುವುದು ಅತ್ಯವಶ್ಯಕವಾಗಿರುತ್ತದೆ.

ಹೌದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇದ್ದರೆ ನಿಮಗೆ ಗ್ರಾಮ ಪಂಚಾಯಿತಿಯಲ್ಲಿ ಯಾವುದಾದರೂ ಕೆಲಸ ಮಾಡಿಸಿಕೊಳ್ಳುವುದು ಇದ್ದೇ ಇರುತ್ತದೆ ಇನ್ನು 5ವರ್ಷಗಳಿಗೊಮ್ಮೆ ಬರುವ ಎಲೆಕ್ಷನ್ ನಲ್ಲಿ ಅರ್ಹ ಅಭ್ಯರ್ಥಿಗಳಿಗೆ ವೋಟ್ ಮಾಡಿ ಗೆಲ್ಲಿಸುವುದು ಹೇಗೆ ಪ್ರಜೆಗಳ ಹಕ್ಕು ಆಗಿರುತ್ತದೆ ಅದೇ ರೀತಿ ಅಂತಹ ಪ್ರಜೆಗಳಿಂದ ಸರ್ಕಾರದಿಂದ ಹಳ್ಳಿಗಳಿಗೆ ನೀಡುವ ಕೆಲ ಸವಲತ್ತುಗಳನ್ನು ಪಡೆದುಕೊಳ್ಳುವುದು ಸಹ ಪ್ರಜೆಗಳ ಹಕ್ಕು ಆಗಿರುತ್ತದೆ ಆದ್ದರಿಂದ ನೀವು ಈ ಮೆಂಬರ್ ಗಳಿಂದ ಪಡೆದುಕೊಳ್ಳಬಹುದಾದ ಸೌಕರ್ಯಗಳ ಬಗ್ಗೆ ಮತ್ತು ಮೆಂಬರ್ ಗಳು ಕರ್ತವ್ಯಗಳೇನು ಇವೆಲ್ಲವನ್ನ ತಿಳಿದಿರುವುದು ಉತ್ತಮ.

ಮೊದಲನೆಯದಾಗಿ ಆ ವಾರ್ಡ್ ನ ಸದಸ್ಯರು ತಮ್ಮ ವಾರ್ಡ್ ನಲ್ಲಿ ಚರಂಡಿ ವ್ಯವಸ್ಥೆ ಮಾಡಿಸುವುದು ಇವರ ಕರ್ತವ್ಯವಾಗಿರುತ್ತದೆ ಹಾಗೂ ತಮ್ಮ ವಾರ್ಡ್ ಅನ್ನೋ ಸುವ್ಯವಸ್ಥಿತವಾಗಿ ನೋಡಿಕೊಳ್ಳುವುದು ಸಹ ಗ್ರಾಮ ಪಂಚಾಯಿತಿ ಸದಸ್ಯರ ಕರ್ತವ್ಯವಾಗಿರುತ್ತದೆ ಎನೂ ಸಾರ್ವಜನಿಕ ಆಸ್ತಿ ವಿಚಾರವಾಗಿ ಪ್ರಜೆಗಳಿಗೆ ಅಥವಾ ತಮ್ಮ ವಾರ್ಡ್ ನ ಜನಗಳಿಗೆ ವಿಚಾರ ತಿಳಿಸಿ ಕೊಡುವುದು ಸದಸ್ಯರ ಕರ್ತವ್ಯವಾಗಿರುತ್ತದೆ.

ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ವಾರ್ಡ್ ಗೆ ಸೇರಿರುವ ಜನರ ಜನನ ಮರಣ ನೋಂದಣಿ ವರದಿ ಅನ್ನೂ ಸಲ್ಲಿಸುವುದು ಸದಸ್ಯರ ಕರ್ತವ್ಯವಾಗಿರುತ್ತದೆ. ಇನ್ನೂ ಯಾವೆಲ್ಲ ಕರ್ತವ್ಯವನ್ನು ಸದಸ್ಯರು ನಿರ್ವಹಿಸಬೇಕಾಗಿರುತ್ತದೆ ಅಂದರೆ ತಮ್ಮ ವಾರ್ಡ್ ನ ವಿದ್ಯುತ್ ದೀಪ ಸರಿಪಡಿಸುವುದು ಅಥವಾ ವಿದ್ಯುದ್ದೀಪ ವ್ಯವಸ್ಥಿತ ವಾಗಿ ಕಾಪಾಡುವುದು ತಮ್ಮ ವಾರ್ಡ್ ನ ಸ್ವಚ್ಛತೆ ಕಾಪಾಡುವುದು ಇನ್ನೂ ತಿಪ್ಪೆ ಗುಂಡಿ ಅನ್ನೋ ಅಂದರೆ ಕಸವನ್ನು ಹಾಕುವುದಕ್ಕೆ ಪ್ರತ್ಯೇಕ ಸ್ಥಳವನ್ನು ನಿರ್ಮಾಣ ಮಾಡಿಸುವುದು.

ಅಷ್ಟೇ ಅಲ್ಲ ತಮ್ಮ ಹಳ್ಳಿಯ ಶಾಲೆಯ ಅಭಿವೃದ್ಧಿಗೊಳಿಸುವಲ್ಲಿ ಸಹಕಾರಿಯಾಗಿರುವುದು ಇನ್ನೂ ತಮ್ಮ ಹಳ್ಳಿಗೆ ಸೇರಿರುವ ಮಕ್ಕಳ ಆರೋಗ್ಯ ಕಾಪಾಡುವಿಕೆ ಸಹ ಇವರ ಕರ್ತವ್ಯವಾಗಿರುತ್ತದೆ ಹೌದು ಮಕ್ಕಳಿಗೆ ರೋಗ ನಿರೋಧಕ ಚುಚ್ಚು ಮದ್ದುಗಳನ್ನು ಹಾಕಿಸುವ ವ್ಯವಸ್ಥೆ ಮಾಡಿಕೊಡುವುದು. ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ಅನ್ನ ಮಾಡಿಸಿ ಕೊಡುವ ಹೊಣೆಯನ್ನು ಗ್ರಾಮ ಪಂಚಾಯಿತಿ ಸದಸ್ಯರು ಮಾಡಿಕೊಡಬೇಕು. ಹೌದು ಬಡವರ ಆರ್ಥಿಕ ಸದೃಢತೆಯಲ್ಲಿ ಸದಸ್ಯರು ಸಹಕಾರಿಯಾಗಬೇಕು.

ಸರ್ಕಾರದಿಂದ ನೀಡುವ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುವುದು ಸಹ ಗ್ರಾಮ ಪಂಚಾಯಿತಿ ಸದಸ್ಯರ ಕರ್ತವ್ಯವಾಗಿರುತ್ತದೆ. ತಮ್ಮ ವಾರ್ಡ್ ನಲ್ಲಿ ನೀರಿನ ವ್ಯವಸ್ಥೆ ಸರಿ ಇಲ್ಲವಾದಲ್ಲಿ ಮೇಲಧಿಕಾರಿಗಳ ಬಳಿ ಚರ್ಚಿಸಿ ನೀರಿನ ವ್ಯವಸ್ಥೆ ಒದಗಿಸಿ ಕೊಡುವುದು. ಇನ್ನೂ ತಮ್ಮ ವಾರ್ಡ್ ನಲ್ಲಿ ಕಷ್ಟಸುಖಗಳಿಗೆ ಜನರಿಗೆ ಸ್ಪಂದಿಸುವುದು ಹೌದು ಅಂತ್ಯಕ್ರಿಯೆಯಲ್ಲಿ ಸಹಾಯ ಮಾಡುವುದು ಇನ್ನೂ ನಳಗಳ ಕನೆಕ್ಷನ್ ಕೊಡಿಸುವಲ್ಲಿ ಸರ್ಕಾರ ಒದಗಿಸುವುದು, ತಮ್ಮ ವಾರ್ಡ್ ನಲ್ಲಿ ಯಾರಾದರೂ ಅಂಗವಿಕಲರಿದ್ದಾರೆ ಅವರಿಗೆ ಗ್ರಾಮ ಪಂಚಾಯಿತಿಯಿಂದ ಅಥವಾ ಸರ್ಕಾರದಿಂದ ಕೊಡಬಹುದಾದ ಸಹಾಯಧನವನ್ನು ಒದಗಿಸಿಕೊಡುವುದು ಇಂತಹ ಕೆಲವೊಂದು ಸಹಕಾರಿಯಾಗುವಂತಹ ಕೆಲಸಗಳನ್ನು ಸಹ ಗ್ರಾಮ ಪಂಚಾಯಿತಿ ಸದಸ್ಯರು ಮಾಡಬೇಕಾಗಿರುತ್ತದೆ ಏನೋ ಗ್ರಾಮ ಪಂಚಾಯಿತಿ ಸದಸ್ಯರಿಗೆ ಎಂದು ಯಾವ ಸಂಬಳ ನೀಡುವುದಿಲ್ಲ ಆದರೆ ಸಹಾಯಧನವೆಂದು ಸರ್ಕಾರದಿಂದ ಗ್ರಾಮ ಪಂಚಾಯತಿ ಸದಸ್ಯರಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಸಂಬಳವನ್ನು ನೀಡಲಾಗುತ್ತದೆ.