ನಿಮ್ಮ ಎದೆಯಲ್ಲಿ ಕಫ ಏನಾದರು ಜಾಸ್ತಿ ಆದ್ರೆ ಈ ಒಂದು ಮನೆಮದ್ದು ಬಳಸಿ ಸಾಕು , ಎಲ್ಲಾ ಕರಗಿ ನೀರಾಗುತ್ತದೆ…

516

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಇದು ನನಗೂ ಮಾತನಾಡಲು ಹೊರಟಿರುವುದು ಕೆಮ್ಮು ಕಫ ಮತ್ತು ಶೀತ ನಿವಾರಣೆಗೆ ಮಾಡಿಕೊಳ್ಳಬಹುದಾದಂತಹ ಎಫೆಕ್ಟಿವ್ ಮನೆಮದ್ದಿನ ಕುರಿತು.ಹೌದು ಇತ್ತೀಚಿನ ದಿನಗಳಲ್ಲಿ ಕೆಮ್ಮು ಕಫ ಶೀತ ಇವೆಲ್ಲವೂ ಸಾಮಾನ್ಯವಾಗಿದೆ ಹಾಗಾಗಿ ಪದೇ ಪದೇ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆ ಗಳನ್ನು ತಂದು ನುಂಗುವುದರ ಬದಲು ಅಥವಾ ಪದೇಪದೆ ದವಾಖಾನೆ ಅತ್ತ ಧಾವಿಸುವುದರ ಬದಲು ಮಾಡಿ ಸರಳ ಪರಿಹಾರ ಅದು ಮನೆಯಲ್ಲಿಯೇ

ಅಷ್ಟೇ ಅಲ್ಲ ಈ ಮನೆಮದ್ದನ್ನು ಪಾಲಿಸುವುದರಿಂದ ಬಹಳ ಬೇಗ ಶೀತ ಕೆಮ್ಮು ಕಫದಂತಹ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಜೊತೆಗೆ ಮನೆಯಲ್ಲೇ ದೊರೆಯುವ ಪದಾರ್ಥಗಳನ್ನು ಬಳಸಿ ಮಾಡಬಹುದಾದ ಮನೆಮದ್ದು ಇದಾಗಿರುವುದರಿಂದ ಎಲ್ಲರೂ ಕೂಡ ತಕ್ಷಣವೇ ಕಫ ಹೆಚ್ಚಾದಾಗ ತಕ್ಷಣವೇ ಈ ಪರಿಹಾರಗಳನ್ನೂ ಪಾಲಿಸ ಬಹುದು.ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಯಾವುದು ಹಾಗೂ ಎಷ್ಟು ವಯಸ್ಸಿನವರು ಈ ಪರಿಹಾರವನ್ನು ಪಾಲಿಸಬೇಕಾಗಿರುತ್ತದೆ ಇದೆಲ್ಲ ಮಾಹಿತಿಯನ್ನು ನಾವಿಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ

ಮನೆಮದ್ದುಗಳನ್ನು ಮಾಡಬೇಕು ಯಾಕೆ ಅಂದರೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಸೈಡ್ ಎಫೆಕ್ಟ್ ಗಳು ಹೆಚ್ಚು ಅಷ್ಟೇ ಅಲ್ಲ ಮಾತ್ರೆಗಳನ್ನೇ ಹೆಚ್ಚಾಗಿ ತಿನ್ನೋದ್ರಿಂದ ದೇಹ ಏನಾಗಬೇಡ ಒಮ್ಮೆ ಯೋಚಿಸಿ ಹಾಗಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದು ಕಡಿಮೆ ಮಾಡಿ ಮತ್ತು ಮನೆಮದ್ದುಗಳನ್ನೂ ಪಾಲಿಸುತ್ತ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.ಮನೆ ಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಎಂದರೆ ಮೆಣಸು ಶುಂಠಿ ವೀಳೆದೆಲೆ ಮತ್ತು ಕಪ್ಪು ಬೆಲ್ಲ

ಮೊದಲಿಗೆ ವಿಳ್ಳೇದೆಲೆ ಅನ್ನು ತೆಗೆದುಕೊಂಡು ಅದನ್ನು ಜಜ್ಜಿ ಅದರಿಂದ ರಸವನ್ನು ಬೇರ್ಪಡಿಸಿಕೊಳ್ಳಬೇಕು ಇದಕ್ಕೆ ಕೇವಲ ಎರಡೇ ಮೆಣಸನ್ನು ಕುಟ್ಟಿ ಪುಡಿಮಾಡಿ ವಿಳ್ಳೆದೆಲೆ ರಸದೊಂದಿಗೆ ಮಿಶ್ರ ಮಾಡಿ ಶುಂಠಿಯನ್ನು ಜಜ್ಜಿ ಶುಂಠಿಯ ರಸವನ್ನು ಈ ವಿಳ್ಳೆದೆಲೆ ರಸಕ್ಕೆ ಮಿಶ್ರ ಮಾಡಿ ಕೊನೆಯಲ್ಲಿ ಇದಕ್ಕೆ ಬೇಕಾಗುವಷ್ಟು ಬೆಲ್ಲದ ಪುಡಿಯನ್ನು ಮಿಶ್ರಣ ಮಾಡಿ ಇದನ್ನು ಸೇವನೆ ಮಾಡುತ್ತ ಬನ್ನಿ

ಅಥವಾ ವಿಳ್ಯದೆಲೆಗೆ ಒಂದೇ ಮೆಣಸಿನಕಾಳು ಮತ್ತು ಸ್ವಲ್ಪ ಶುಂಠಿಯನ್ನು ಜಜ್ಜಿ ವೀಳ್ಯದೆಲೆಯೊಂದಿಗೆ ಮಿಶ್ರ ಮಾಡಿ ಅದನ್ನು ಸುಟ್ಟು ಅದರಿಂದ ರಸವನ್ನು ಬೇರ್ಪಡಿಸಿ, ನಂತರ ಈ ರಸಕ್ಕೆ ಬೆಲ್ಲವನ್ನು ಮಿಶ್ರ ಮಾಡಿ ಜೇನು ತುಪ್ಪ ವನ್ನು ಕೂಡ ಇಲ್ಲಿ ನೀವು ಈ ಮನೆಮದ್ದಿಗೆ ಬಳಸಬಹುದು.ಈ ರೀತಿಯಾಗಿ ನೀವು ಕೆಮ್ಮು ಕಫ ದಂತಹ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು ಮತ್ತೊಂದು ಪ್ರಭಾವಶಾಲಿಯಾದ ಮನೆಮದ್ದು ಯಾವುದು ಎಂದರೆ ಕೆಮ್ಮು ವಿಪರೀತ ಕಾಡುತ್ತಿದೆ ಅದು ಒಣ ಕೆಮ್ಮು ಅಥವಾ ಕಫ ಇರುವ ಕೆಮ್ಮು ಆಗಿದ್ದಲ್ಲಿ ರಾತ್ರಿ ಮಲಗುವ ಮುನ್ನ ಈರುಳ್ಳಿ ಬೆಲ್ಲವನ್ನು ತಿಂದು ಮಲಗಬೇಕು ಈರುಳ್ಳಿ ಬೆಲ್ಲ ತಿಂದ ಮೇಲೆ ಯಾವುದೇ ಕಾರಣಕ್ಕೂ ನೀರು ಕುಡಿಯಬಾರದು

ಈ ಪರಿಹಾರವನ್ನು ಮಾಡುವುದರಿಂದ ಕೂಡ ಎದೆಯಲ್ಲಿ ಕಟ್ಟಿರುವಂತಹ ಕಫ ಕರಗುತ್ತದೆ ಬೆಳಿಗ್ಗೆ ಅಷ್ಟರಲ್ಲಿ ಕೆಮ್ಮು ಕಡಿಮೆಯಾಗಿರುವುದನ್ನು ನೀವು ಗಮನಿಸಬಹುದು ಮತ್ತು ಪ್ರತಿ ರಾತ್ರಿ ಈ ಪರಿಹಾರವನ್ನು ಮಾಡುವುದರಿಂದ ಯಾರಿಗೆ ಕಸದ ಸಮಸ್ಯೆ ಇರುತ್ತದೆಅಂಥವರು ತುಂಬ ಸುಲಭವಾಗಿ ಈ ಪರಿಹಾರದಿಂದ ಎದೆಯಲ್ಲಿ ಕಟ್ಟಿರುವಂಥ ಗಂಟಲಿನಲ್ಲಿ ಕಟ್ಟಿರುವಂತಹ ಕಫವನ್ನ ಕರಗಿಸಿಕೊಳ್ಳಬಹುದು

ಕಫ ಇದ್ದಾಗ ಅದು ಗಂಟಲಲ್ಲಿ ತುಂಬ ಭಾದೆ ನೀಡುತ್ತಿದೆ ಎಂದರೆ ಪ್ರತಿದಿನ ಖಾಲಿಹೊಟ್ಟೆಯಲ್ಲಿ ಉಪ್ಪುನೀರನ್ನು ಅಂದರೆ ಬೆಚ್ಚಗಿನ ನೀರಿಗೆ ಉಪ್ಪು ಮಿಶ್ರಣ ಮಾಡಿ ಅದನ್ನು ಗಂಟಲಿಗೆ ಹಾಕಿ ಗಾರ್ಗಲ್ ಮಾಡಿ ಕಫವನ್ನು ತೆಗೆಯಬೇಕು, ಈ ರೀತಿ ಮಾಡುವುದರಿಂದ ಕಫದ ಸಮಸ್ಯೆಯನ್ನು ಬಹಳ ಬೇಗ ನಿವಾರಣೆ ಮಾಡಿಕೊಳ್ಳಬಹುದು.