ನಿಮ್ಮ ಕೂದಲು ಬಾಚಿದಾಗ ಪತ ಪತ ಅಂತಾ ಉದುರುತ್ತಾ ಇದ್ರೆ ಒಂದು ಮುಷ್ಟಿ ಕೊಬ್ಬರಿ ಎಣ್ಣೆಗೆ ಇದನ್ನ ಬೆರೆಸಿ ಹಚ್ಚಿ ಸಾಕು …. ದಟ್ಟ ಪುಷ್ಟವಾಗಿ ಬೇಡ ಅಂದ್ರು ಬೆಳೆಯಲು ಶುರುವಾಗುತ್ತದೆ..

305

ಕೂದಲಿಗೆ ಸಂಬಂಧಪಟ್ಟ ತೊಂದರೆಗಳು ಯಾವುದೇ ಇದ್ದರೂ ಅದು ತಲೆ ಬುಡ ತುರಿಕೆ ಬರುವುದಾಗಲೀ ಕೂದಲು ಉದುರುವ ಸಮಸ್ಯೆ ಇರಲಿ ಅಥವಾ ಡ್ಯಾಂಡ್ರಫ್ ನಂತಹ ತೊಂದರೆಯಾಗದಿರಲಿ ಇಂತಹ ತೊಂದರೆಗಳು ಕಾಡುತ್ತಿರುವಾಗ ಈ ಮನೆಮದ್ದನ್ನು ಮಾಡಿನೋಡಿ ಖಂಡಿತವಾಗಿಯೂ ನಿಮಗೆ ಕೂದಲು ಉದುರುವಂತಹ ಸಮಸ್ಯೆಯಿಂದ ಶಮನ ದೊರೆಯುತ್ತದೆ ಇದನ್ನು ಮಾಡುವುದಕ್ಕೆ ನಿಮಗೆ ಹೆಚ್ಚು ಖರ್ಚು ಇಲ್ಲ ಆದರೆ ಕೆಲವೊಂದಿಷ್ಟು ಪದಾರ್ಥಗಳನ್ನು ಬಳಸಿ ಮಾಡುವಂತಹ ಈ ಮನೆಮದ್ದು ಖಂಡಿತವಾಗಿಯೂ ಮಾರುಕಟ್ಟೆಯಿಂದ ತಂದು ನೀವು ಕೂದಲಿಗೆ ಪ್ರಯೋಗ ಮಾಡುವ ಪ್ರಾಡಕ್ಟ್ ಗಳಿಗಿಂತ ಅಧಿಕವಾದ ಪ್ರಭಾವವಾದ ಫಲಿತಾಂಶವನ್ನ ಕೊಡುತ್ತದೆ.

ಹೌದು ಕೂದಲು ಎಂಬುದು ಎಲ್ಲರಿಗೂ ಕೂಡ ಇಷ್ಟ ಕೆಲವರಿಗೆ ಶಾರ್ಟ್ ಹೇರ್ ಇಷ್ಟ ಆದರೆ ಕೆಲವರಿಗೆ ಲಾಂಗ್ ಹೇರ್ ಇಷ್ಟ ಅದರಲ್ಲಿಯೂ ಪುರುಷರಿಗೆ ಕೂದಲು ಸೊಂಪಾಗಿ ಇರಬೇಕು ಅದೇ ಇಷ್ಟ ಅದರಲ್ಲಿ ಅವರು ವಿಭಿನ್ನ ಹೇರ್ ಸ್ಟೈಲ್ ಗಳನ್ನು ಮಾಡಲು ಇಷ್ಟಪಡುತ್ತಾರೆ.ಬಾಲ್ಡಿ ತಲೆ ಯನ್ನು ಯಾರು ತಾನೆ ಇಷ್ಟಪಡುತ್ತಾರೆ ಹೇಳಿ ಹಾಗಾಗಿ ಕೂದಲು ಉದುರುವಂತಹ ಸಮಸ್ಯೆಯನ್ನ ತಡೆಗಟ್ಟುವುದಕ್ಕೆ ಮಾಡಿ ಈ ಸುಲಭ ಪರಿಹಾರ ಕೂದಲುದುರುವ ಸಮಸ್ಯೆ ನಿರ್ಲಕ್ಷ್ಯ ಮಾಡದೆ.

ಹೌದು ಕೂದುಲು ಅಂದರೆ ಅದೊಂದು ಎಮೋಷನ್ ಕೂದಲು ಉದುರುತ್ತಿದ್ದರೆ ಎಷ್ಟು ಬೇಸರವಾಗುತ್ತೆ ಇಷ್ಟು ಕೂದಲು ಉದುರುತ್ತಿದೆ ಎಂದು ಸಾಕಷ್ಟು ಪರಿಹಾರಗಳನ್ನು ಮಾಡಲು ನಾವು ಮುಂದಾಗುತ್ತೇವೆ. ಹಾಗಾಗಿ ಇವತ್ತಿನ ಲೇಖನಿಯಲ್ಲಿ ಕೂದಲು ಉದುರುವಂತಹ ಸಮಸ್ಯೆಗೆ ಮಾಡಬಹುದಾದ ಸರಳ ಪರಿಹಾರದ ಬಗ್ಗೆ ಮಾತನಾಡುತ್ತಿದ್ದುಈ ಪರಿಹಾರ ಮಾಡಲು ಬೇಕಾಗಿರುವ ಪದಾರ್ಥಗಳು ಕೊಬ್ಬರಿ ಎಣ್ಣೆ ಕಲೋಂಜಿ ಬೀಜಗಳು ಮೆಹಂದಿ ಸೊಪ್ಪು ದಾಸವಾಳದ ಎಲೆಗಳು ದಾಸವಾಳದ ಹೂ ಆಮ್ಲಾ ಭೃಂಗರಾಜ ಪುಡಿ ಮೆಂತ್ಯೆ ಕಾಳುಗಳು ಕರಿಬೇವಿನ ಎಲೆಗಳು

ಮೊದಲಿಗೆ ಕಬ್ಬಿಣದ ಬಾಣಲೆ ಬಿಸಿ ಆಗಲು ಬಿಡಿ ಇದಕ್ಕೆ ದಾಸವಾಳದ ಎಲೆಗಳು ಮೆಹಂದಿ ಸೊಪ್ಪಿನ ಎಲೆಗಳು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಸ್ವಲ್ಪ ಸಮಯ ಬಾಡಿಸಿ ಕೈಬಿಡದೆ ಭರಿಸಬೇಕು ನಂತರ ಈ ಪದಾರ್ಥಗಳು ಬಿಸಿಯಾದ ಮೇಲೆ ಇದಕ್ಕೆ ಬೇಕಾದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿ ಈ ಕೊಬ್ಬರಿ ಎಣ್ಣೆ ಬಿಸಿ ಆಗುತ್ತಿರುವಾಗ ಇದಕ್ಕೆ ಬೃಂಗರಾಜ ಪುಡಿ ಮೆಂತ್ಯೆ ಕಾಳುಗಳು ಹಾಕಿ ಮತ್ತೊಮ್ಮೆ ಎಣ್ಣೆಯನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಬೇಕು ಇದೇ ವೇಳೆ ಆಮ್ಲವನ್ನು ಹೌದು ಕಾಡು ನೆಲ್ಲಿ ಕಾಯಿಯನ್ನು ತುರಿದು ಈ ಎಣ್ಣೆಗೆ ಹಾಕಿ ನಂತರ ಕಲೋಜಿ ಬೀಜವನ್ನು ಹಾಕಿ ಇದೆಲ್ಲದರ ಹಸಿವಾಸನೆ ಹೋಗಬೇಕು ಅಲ್ಲಿಯವರೆಗೂ ಎಣ್ಣೆಯನ್ನ ಬಿಸಿ ಮಾಡಿಕೊಳ್ಳಬೇಕಾಗಿರುತ್ತದೆ

ಈ ಮಿಶ್ರಣವನ್ನು ಕೊಬ್ಬರಿ ಎಣ್ಣೆಯೊಂದಿಗೆ ಚೆನ್ನಾಗಿ ಬಿಸಿ ಮಾಡಬೇಕು ಈಗ ಈ ಎಣ್ಣೆಯ ಬಣ್ಣ ಬದಲಾಗುತ್ತೆ, ಹೌದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆಗ ಈ ಎಣ್ಣೆಯನ್ನೂ ತಣಿಯಲು ಬಿಟ್ಟು ಬಳಿಕ ಇದನ್ನು ಶೋಧಿಸಿಕೊಂಡು ಗ್ಲಾಸ್ ಜಾರ್ ನಲ್ಲಿ ಶೇಖರಣೆ ಮಾಡಿ ಇಟ್ಟುಕೊಳ್ಳಿ

ಇದನ್ನು ವಾರಕ್ಕೆ 2 ಬಾರಿ ಆದರೆ ಕೂದಲಿಗೆ ನೆಪಮಾಡಿ ಮೊದಲು ಕೂದಲಿನ ಬುಡಕ್ಕೆ ಚೆನ್ನಾಗಿ ಲೇಪ ಮಾಡಿ ಸ್ವಲ್ಪ ಸಮಯ ಮಸಾಜ್ ಮಾಡಿ, ನಂತರ ಕೂದಲಿಗೆ ಹಚ್ಚಿ 2 ಗಂಟೆಗಳಾದರೂ ಈ ಎಣ್ಣೆ ನಿಮ್ಮ ಕೂದಲಿನ ಬುಡದಲ್ಲಿ ಇರಬೇಕು ಆ ಬಳಿಕ ನೀವು ತಲೆ ಸ್ನಾನ ಮಾಡಬಹುದು ಅಥವಾ ರಾತ್ರಿ ಹಚ್ಚಿ ಬೆಳಿಗ್ಗೆ ಕೂಡ ಮಾಡಿಕೊಳ್ಳಬಹುದು ಇದರಿಂದ ಡ್ಯಾಂಡ್ರಫ್ ತೊಂದರೆಯಾಗಲಿ ಕೂದಲಿನ ಬುಡ ಬುಡ ವಿಲ್ಲದಿದ್ದರೆ ಕೂದಲಿನ ಬುಡ ಸ್ಟ್ರಾಂಗ್ ಮಾಡಲು ಸಹಕಾರಿ ಆಗಿರುತ್ತದೆ ಈ ಮನೆಮದ್ದು.

WhatsApp Channel Join Now
Telegram Channel Join Now