ನಿಮ್ಮ ಕೂದಲು ಸಿಕ್ಕಾಪಟ್ಟೆ ಉದುರುತ್ತಾ ಇದೆಯಾ ಹಾಗಾದರೆ ಈ ಒಂದು ಮನೆಮದ್ದು ಮಾಡಿ ನೋಡಿ ಸಾಕು .. ದಟ್ಟವಾಗಿ ಬೆಳೆಯಲು ಶುರು ಆಗುತ್ತವೆ…

221

ನಮಸ್ಕಾರಗಳು ಕೂದಲುದುರುವ ಸಮಸ್ಯೆಗೆ ಒಂದೊಳ್ಳೆ ಮನೆಮದ್ದು ಇದನ್ನು ಬಳಸುವುದರಿಂದ ಕೂದಲು ಉದುರುವ ಸಮಸ್ಯೆ ಮಾತ್ರವಲ್ಲ ಡ್ಯಾಂಡ್ರಫ್ ಸಮಸ್ಯೆಗೆ ಕೂಡ ಪರಿಹಾರ ದೊರೆಯುತ್ತದೆ. ಹಾಗಾದರೆ ಬನ್ನಿ ತಿಳಿಯೋಣ ಕೂದಲುದುರುವ ಸಮಸ್ಯೆ ನಿವಾರಣೆಗೆ ಮಾಡಬಹುದಾದ ಸುಲಭ ಮನೆಮದ್ದಿನ ಕುರಿತು.ಹೌದು ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ತುಂಬಾನೇ ಹೆಚ್ಚಾಗಿದೆ ಯಾಕೆಂದರೆ ಧೂಳು ಪ್ರದೂಷಿತ ವಾತಾವರಣ ದಲ್ಲಿ ಇರುವ ಕಾರಣದಿಂದ

ಈ ಕೂದಲು ಉದುರುವಂತಹ ಸಮಸ್ಯೆ ಹೆಚ್ಚಾಗಿದೆ ಆದರೆ ಈ ಸಮಸ್ಯೆ ನಿವಾರಣೆಗೆ ಸಾಕಷ್ಟು ಮನೆಮದ್ದುಗಳಿವೆ ಇದನ್ನು ಪಾಲಿಸಿದರೆ ಸಾಕು ಕೂದಲು ಉದುರುವ ಸಮಸ್ಯೆಯಿಂದ ತಕ್ಷಣಕ್ಕೆ ಪರಿಹಾರ ಪಡೆಯಬಹುದು ಈ ಮನೆಮದ್ದುಗಳು ಯಾವುವು ಎಂದು ತಿಳಿಯುವುದಕ್ಕೆ ಇಂದಿನ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.ಹೌದು ಕೂದಲುದುರುವುದು ಸಾಮಾನ್ಯವಾಗಿ ಯಾವೆಲ್ಲಾ ಕಾರಣಕ್ಕೆ ಅಂದರೆ ಅದು ಕೂದಲಿನ ಬುಡ ವೀಕ್ ಆದಾಗ, ಇನ್ನೂ ಕೂದಲು ದುರ್ಬಲವಾಗುವುದಕ್ಕೆ ಮತ್ತೊಂದು ಕಾರಣ ಅಂದರೆ ನಾವು ಬಳಸುವ ಹೇರ್ ಪ್ರಾಡಕ್ಟ್ ಗಳು.

ಈ ಪ್ರಾಡಕ್ಟ್ಗಳಲ್ಲಿ ಕೆಮಿಕಲ್ಸ್ ಹೆಚ್ಚಾಗಿ ಇರುವುದರಿಂದ ಈ ಕೆಮಿಕಲ್ಸ್ ಕೂದಲಿನ ಬುಡವನ್ನು ದುರ್ಬಲ ಮಾಡಿ ಕೂದಲು ಉದುರುವ ಸಮಸ್ಯೆ ಇನ್ನಷ್ಟು ಹೆಚ್ಚು ಮಾಡುತ್ತದೆ ಹಾಗಾಗಿ ಕೂದಲಿನ ಬುಡ ಸದೃಢವಾಗುವುದಕ್ಕೆ ಜೊತೆಗೆ ಕೂದಲುದುರುವ ಸಮಸ್ಯೆ ಸಹ ನಿವಾರಣೆ ಆಗೋದಕ್ಕೆ ಒಂದೊಳ್ಳೆ ಮನೆಮದ್ದು ಅಂದರೆ ಅದು ಲೋಳೆರಸ ಈ ಲೋಳೆರಸ ಗಿಡವನ್ನು ನೀವು ಮನೆಯ ಸುತ್ತಮುತ್ತಲೂ ಬೆಳೆಸಬಹುದು.

ಈ ಲೋಳೆರಸದ ಜೊತೆ ಮೆಂತ್ಯೆ ಕಾಳುಗಳನ್ನು ಮಿಶ್ರಮಾಡಿ ಇದರ ಪೇಸ್ಟನ್ನು ಕೂದಲಿಗೆ ಲೇಪ ಮಾಡುತ್ತಾ ಬರುವುದರಿಂದ ಕೂದಲಿನ ಬುಡ ದೃಢವಾಗುತ್ತದೆ ಜೊತೆಗೆ ಕೂದಲುದುರುವ ಸಮಸ್ಯೆ ನಿವಾರಣೆಯಾಗಿ ಈ ಮೆಂತ್ಯೆ ಕಾಳು ಮತ್ತು ಅಲೋವೆರಾ ಜೆಲ್ ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸಲು ಕೂಡ ಸಹಕಾರಿಯಾಗಿರುತ್ತದೆ ಆದರೆ ಈ ಪದಾರ್ಥಗಳನ್ನು ಯಾವ ವಿಧಾನದಲ್ಲಿ ಬಳಸಿಕೊಳ್ಳಬೇಕು ಎಂಬುದನ್ನು ಮೊದಲು ತಿಳಿದಿರಬೇಕು.

ಮೊದಲಿಗೆ ಲೋಳೆ ರಸವನ್ನು ತೆಗೆದುಕೊಂಡು ಬಂದು ಅದರಿಂದ ಆ ಹಳದಿ ಲೋಳೆ ತೆಗೆದುಹಾಕಬೇಕು ಏಕೆಂದರೆ ಇದರಲ್ಲಿ ಕಹಿ ಅಂಶ ಹೆಚ್ಚಾಗಿರುತ್ತದೆ. ನಂತರ ಈ ಲೋಳೆಸರದ ಲೋಳೆಯನ್ನು ತೆಗೆದುಕೊಂಡು ಅದರೊಳಗೆ ಮೆಂತ್ಯೆ ಕಾಳುಗಳನ್ನು ಒಂದು ರಾತ್ರಿ ನೆನೆಸಿಡಬೇಕು ಆ ಬಳಿಕ ಮಾರನೇ ದಿನ ಬೆಳಿಗ್ಗೆ ಈ ಎರಡೂ ಮಿಶ್ರಣವನ್ನು ಪೇಸ್ಟ್ ಮಾಡಿ ಕೂದಲಿಗೆ ಲೇಪನ ಮಾಡಬೇಕು.

ಈಗ ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಲೇಪಿಸಿ ಮಾಡಬೇಕು ಕೂದಲಿಗೆ ಲೇಪ ಮಾಡುವುದಕ್ಕಿಂತ ಕೂದಲಿನ ಬುಡಕ್ಕೆ ಹೆಚ್ಚು ಲೇಪನ ಮಾಡುವುದರಿಂದ, ಕೂದಲಿನ ಬುಡ ಸದೃಡವಾಗುತ್ತದೆ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತದೆ ಜೊತೆಗೆ ಕೂದಲು ಉದುರುವ ಸಮಸ್ಯೆ ಸಹ ಬಹುಬೇಗ ಕಡಿಮೆಯಾಗುವುದನ್ನು ಗಮನಿಸಬಹುದು.

2 ದಿನಗಳಿಗೊಮ್ಮೆ ಈ ಪರಿಹಾರವನ್ನು ಮಾಡುತ್ತಾ ಬರುವುದರಿಂದ ಡ್ಯಾಂಡ್ರಫ್ ಸಮಸ್ಯೆ ಬಹಳ ಬೇಗ ನಿವಾರಣೆ ಆಗುತ್ತದೆ ಜೊತೆಗೆ ಈ ಮನೆ ಮತ್ತು ಯಾವುದೇ ಅಡ್ಡಪರಿಣಾಮಗಳನ್ನು ಕೂದಲಿಗೆ ಉಂಟುಮಾಡುವುದಿಲ್ಲ ಅದರ ಬದಲಾಗಿ ಮೆಂತ್ಯಕಾಳು ಕೂದಲು ಬೆಳೆಯುವಂತೆ ಸಹಕಾರಿ ಜೊತೆಗೆ ಲೋಳೆರಸ ಕೂದಲು ಉದುರುವ ಸಮಸ್ಯೆ ನಿವಾರಿಸಿ ಕೂದಲಿನ ಸಿಲ್ಕಿ ಸ್ಮೂತ್ ಮಾಡುತ್ತದೆ.

ಈ ಸರಳ ವಿಧಾನವನ್ನು ಪಾಲಿಸಿ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಮತ್ತು ಕೂದಲು ಉದುರುವ ಸಮಸ್ಯೆಗೆ ಬೇರೆ ಪರಿಹಾರಗಳನ್ನು ಮಾಡುವುದಕ್ಕಿಂತ ಈ ಮನೆ ಮದ್ದು ಬಹಳ ಸುಲಭವಾಗಿದೆ ಅತಿ ಕಡಿಮೆ ಖರ್ಚಿನಲ್ಲಿ ಕೂದಲು ಉದುರುವ ಸಮಸ್ಯೆಗೆ ಡ್ಯಾಂಡ್ರಫ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

WhatsApp Channel Join Now
Telegram Channel Join Now