ನಿಮ್ಮ ದೇಹಕ್ಕೆ ಆಯಾಸ ಆಗಬಾರದು , ಬಲ ಬರಬೇಕು , ರೋಗನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ ಈ ಒಂದು ಪಾನೀಯವನ್ನ ಮಾಡಿ ಸೇವಿಸಿ…

141

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪ್ರಯತ್ನ ಈ ಪರಿಹಾರ ನಿಮಗೆ ನೂರು ಪ್ರತಿಶತದಷ್ಟು ಪರಿಹಾರ ಕೊಡುತ್ತದೆ ಹೌದು ಈ ಪರಿಹಾರ ಮಾಡುವುದರಿಂದ ನಿಮ್ಮ ಆರೋಗ್ಯ ವೃದ್ಧಿಸುತ್ತೆ.ಇಂದು ಮಂದಿಗೆ ಆರೋಗ್ಯದ ಮಹತ್ವ ತಿಳಿದಿದೆ ಹಾಗಾಗಿಯೇ ಇವತ್ತಿಗೂ ಬಹಳಷ್ಟು ಮಂದಿ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ ಹಾಗೂ ಪ್ರತಿದಿನ ತಮ್ಮ ಆರೋಗ್ಯಕ್ಕೆ ಮಾಡಬೇಕಾಗಿರುವ ಹಲವು ಪ್ರಯತ್ನಗಳನ್ನು ಮಾಡುತ್ತಾ ಇದ್ದಾರೆ ಇದನ್ನು ನಾವು ನೀವೆಲ್ಲರೂ ಗಮನಿಸುತ್ತಿದ್ದೇವೆ.

ಹಾಗೆ ನಾವು ಕೂಡ ಬಹಳಷ್ಟು ಉತ್ತಮ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ, ಇದೆಲ್ಲದಕ್ಕೂ ಕಾರಣ ಏನೆಂಬುದು ನಿಮಗೆ ಗೊತ್ತೇ ಇದೆ ಅದನ್ನ ಮತ್ತೆ ಹೇಳೋದೆ ಬೇಡ ಅಂಥದೊಂದು ಪರಿಸ್ಥಿತಿ ಮತ್ತೆ ಬರುವುದು ಬೇಡ ಸಹ.ಈಗ ನಾವು ಮಾಹಿತಿಗೆ ಬಂದು ನಿಮ್ಮ ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಸಿ ಮನೆಮದ್ದನ್ನು ಬಳಸುವ ಮೂಲಕ ಹೇಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಎಂಬುದನ್ನ ಮಾತನಾಡುತ್ತಿದ್ದೇವೆ, ಹೌದು ನಿಜವಾಗಿಯೂ ಮನೆಯಲ್ಲಿಯೇ ದೊರೆಯುವ ಪದಾರ್ಥಗಳನ್ನು ಬಳಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಅಂತ ಯೋಚಿಸುತ್ತಿದ್ದೀರಾ ಅದು ಖಂಡಿತ.

ಹೌದು ಫ್ರೆಂಡ್ಸ್ ರೋಗ ನಿರೋಧಕ ಶಕ್ತಿ ಹೆಚ್ಚಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಚಿಕ್ಕಪುಟ್ಟ ಅನಾರೋಗ್ಯ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ.ಹಾಗಾಗಿ ನಾವು ಮೊದಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದಲ್ಲಿ ಹಾಗೆ ಚಿಕ್ಕಪುಟ್ಟ ಸಮಸ್ಯೆಗಳು ಪದೇ ಪದೆ ಕಾಡುತ್ತಾ ಇದ್ದರೆ ನಾವು ತಾನೆ ನಮ್ಮ ಜೀವನದಲ್ಲಿ ಹೇಗೆ ನೆಮ್ಮದಿಯಾಗಿರಲು ಸಾಧ್ಯ ಹೇಳಿ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಪದೇ ಪದೇ ಬಾಧಿಸಿದಾಗ.

ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳ ಕುರಿತು ಮೊದಲು ಹೇಳುವುದಾದರೆ ಅರಿಶಿಣ ಪುಡಿ ಜೀರಿಗೆ ಸೋಂಪು ಏಲಕ್ಕಿ ಮೆಣಸು ಲವಾಂಗ ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸ.ಈಗ ಮನೆಮದ್ದು ಮಾಡುವ ವಿಧಾನ ಕುರಿತು ಹೇಳುವುದಾದರೆ, ಚಿಕ್ಕ ಅರಿಶಿಣದ ತುಂಡು ಜೀರಿಗೆ ದಾಲ್ಚಿನ್ನಿ ಸೋಂಪು ಏಲಕ್ಕಿ ಮೆಣಸು ಲವಂಗ ಇವುಗಳನ್ನ ತೆಗೆದುಕೊಂಡು ಬಾಣಲೆಯಲ್ಲಿ ಹುರಿದು ಕೊಡಬೇಕು ಈ ಪ್ರಮಾಣವನ್ನು ಎಷ್ಟು ತೆಗೆದುಕೊಳ್ಳಬೇಕೆಂದರೆ

ದಾಲ್ಚಿನ್ನಿ ಸೋಂಪು ಏಲಕ್ಕಿ ಇವೆಲ್ಲವೂ ಕಡಿಮೆ ಪ್ರಮಾಣದಲ್ಲಿರಲಿ ಜೀರಿಗೆ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿರಲಿ ಮತ್ತು ಮೆಣಸು ಲವಂಗ ಸಹ ಸ್ವಲ್ಪ ಪ್ರಮಾಣದಲ್ಲಿ ಇರಲಿ ಈ ಪದಾರ್ಥಗಳನ್ನು ಹುರಿದುಕೊಂಡ ಬಳಿಕ ಇದನ್ನ ಕುಟ್ಟಿ ಪುಡಿ ಮಾಡಿಕೊಳ್ಳಿ, ನಂತರ ಪ್ರತಿದಿನ ಬಿಸಿ ನೀರಿಗೆ ಈ ಮಿಶ್ರಣವನ್ನು ಹಾಕಿ ನಿಂಬೆ ರಸ ಅರ್ಧ ಚಮಚ ರುಚಿಗೆ ಬೇಕಾದಷ್ಟು ಜೇನು ತುಪ್ಪವನ್ನು ಇದಕ್ಕೆ ಮಿಶ್ರ ಮಾಡಿಕೊಳ್ಳಿ.

ಈಗ ಈ ಡ್ರಿಂಕ್ ತಯಾರಾಗಿದೆ ಇದನ್ನ ಕುಡಿಯುತ್ತ ಬನ್ನಿ ಇದರಲ್ಲಿ ವಿಟಮಿನ್ ಸಿ ಜೀವಸತ್ವ ಇರುತ್ತದೆ ಮತ್ತು ನಾವು ಬಳಸಿರುವ ಈ ಕೆಲವೊಂದು ಮಸಾಲೆ ಪದಾರ್ಥಗಳಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗುವಂತಹ ಸತ್ವಗಳು ಅಡಗಿರುತ್ತದೆ ಮತ್ತು ಇದರಿಂದ ಅಜೀರ್ಣತೆ ಉಂಟಾಗುವುದಿಲ್ಲ ಕರುಳು ಸಂಬಂಧಿ ತೊಂದರೆಗಳು ಪರಿಹಾರವಾಗುತ್ತದೆ ಮಲಬದ್ಧತೆ ಬರುವುದಿಲ್ಲ ಹಾಗೂ ಹೊಟ್ಟೆನೋವು ಇಂತಹ ಸಮಸ್ಯೆಗಳೆಲ್ಲ ಬರುವುದಿಲ್ಲ.

ಹಾಗಾಗಿ ಈ ಡ್ರಿಂಕ್ ಅನ್ನ ಹತ್ತು ವರ್ಷ ಮೇಲ್ಪಟ್ಟ ಎಲ್ಲರೂ ಸಹ ಸೇವಿಸಬಹುದು ವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಕೆಲವೊಂದು ಆಗಾಗ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು, ಈ ಸರಳ ಮನೆಮದ್ದು ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ನೆಮ್ಮದಿಯಾಗಿರಿ ‘ಆರೋಗ್ಯವೇ ಭಾಗ್ಯ’ ಧನ್ಯವಾದ.