ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಔಷದಿಯನ್ನ ಮನೆಯಲ್ಲೇ ಮಾಡೋದು ಹೇಗೆ ಗೊತ್ತ .. ಅದಕ್ಕೆ ಏನೇನು ಬೇಕು ನೋಡಿ …

151

ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಅವಶ್ಯಕವಾಗಿರುತ್ತದೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭದ ವಿಷಯವಲ್ಲ.ಏಕೆಂದರೆ ನಮ್ಮ ದೇಶದಲ್ಲಿ ಮೊದಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ರೋಗನಿರೋಧಕ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಹೆಚ್ಚಿಸಿಕೊಳ್ಳದೆ ಇದ್ದರೆ ನೀವು ಖಂಡಿತವಾಗಿಯೂ ಅನಾರೋಗ್ಯಕ್ಕೆ ತುತ್ತಾಗುತೀರಾ ಆರೋಗ್ಯವಾಗಿ ಇರಬೇಕು ಎಂದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಚೆನ್ನಾಗಿರಬೇಕು.

ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಾವು ಅನೇಕ ಬಾರಿ ತುಂಬಾ ಪ್ರಯತ್ನಗಳನ್ನು ಮಾಡುತ್ತೇವೆ ಆದರೆ ಈ ಪ್ರಯತ್ನಗಳು ಸಫಲವಾಗುವುದಿಲ್ಲ ಆದ್ದರಿಂದ ಈ ದಿನ ನಾವು ನಿಮಗೊಂದು ಸುಲಭವಾದದ್ದು ಮನೆಮದ್ದನ್ನು ಹೇಳಿಕೊಡುತ್ತೇವೆ ಈ ಮನೆಮದ್ದನ್ನು ನೀವು ತಯಾರಿಸುವುದರಿಂದ ಖಂಡಿತವಾಗಿಯೂ ನೀವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಯಾವುದೇ ವೈರಸ್ ಕಾಟದಿಂದ ತಪ್ಪಿಸಿಕೊಳ್ಳಲು ಈ ಲೇಹ ನಿಮಗೆ ಸಹಾಯವಾಗುತ್ತದೆ ಮನೆಮದ್ದನ್ನು ಇಲ್ಲಿ ಲೇಹ ಎಂದಿರುವುದನ್ನು ನಾವು ಗಮನಿಸಬಹುದಾಗಿದೆ ಇದನ್ನು ಮಾಡಲು ಬೇಕಾಗಿರುವ ಸಾಮಗ್ರಿಗಳನ್ನು ಮೊದಲು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಎಕ್ಕದ ಹೂವು ಅದರ ಜೊತೆಯಲ್ಲಿ 7 ಪಾರಿಜಾತದ ಹೂವನ್ನು ತೆಗೆದುಕೊಳ್ಳಬೇಕು ಅದಾದ ನಂತರ 7 ವಿಳ್ಳೆದೆಲೆಯನ್ನು ತೆಗೆದುಕೊಳ್ಳಬೇಕು ಇದರ ಜೊತೆಯಲ್ಲಿ ಸ್ವಲ್ಪ ಪಚ್ಚ ಕರ್ಪೂರವನ್ನು ತೆಗೆದುಕೊಳ್ಳಿ ಜೊತೆಗೆ ಹಸಿ ಶುಂಠಿಯನ್ನು ಕೂಡಾ ತೆಗೆದುಕೊಳ್ಳಿ ಜೊತೆಯಲ್ಲಿ ಅರಿಶಿನ ಕೊಂಬನ್ನು ತೆಗೆದುಕೊಳ್ಳಿ ಮತ್ತು ತುಳಸೀದಳ ಚಕ್ಕೆ ಜಾಯಿಕಾಯಿ ಜೋನಿಬೆಲ್ಲ ಅಶ್ವಗಂಧದ ಬೇರು ಮತ್ತು ಅಮೃತ ಬಳ್ಳಿ ಎಲೆ ಮತ್ತು ಬೇವಿನ,

ಎಲೆಗಳು ಇಷ್ಟು ಸಾಮಗ್ರಿಗಳನ್ನು ಮೊದಲು ತೆಗೆದುಕೊಳ್ಳಬೇಕು ಈ ಎಲ್ಲಾ ಸಾಮಗ್ರಿಗಳನ್ನು 1 ಕಡೆ ತಯಾರಾಗಿಟ್ಟುಕೊಳ್ಳಿ ಮೊದಲಿಗೆ ಎಕ್ಕದ ಹೂವು ಅಮೃತ ಬಳ್ಳಿಯ ಎಲೆಗಳು ತುಳಸಿ ದಳಗಳು ಬೇವಿನ ಎಲೆ ಪಾರಿಜಾತದ ಹೂವು ವೀಳೆಯದೆಲೆ ಈ ಸಾಮಗ್ರಿಗಳನ್ನ ಅಂದರೆ ಈ ಎಲ್ಲಾ ಎಲೆಗಳನ್ನ ಮೊದಲು ಮಿಕ್ಸಿ ಜಾರ್ ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ ಅದಾದ ನಂತರ ಉಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಅರಿಶಿನವನ್ನು ಸೇರಿಸಿ ಈ ರೀತಿ ಲೇಹವನ್ನು ತಯಾರಿಸಿಟ್ಟುಕೊಳ್ಳಿ.

ಇದು ಆರೋಗ್ಯಕ್ಕೆ ತುಂಬ ಒಳ್ಳೆಯದಾಗಿರುತ್ತದೆ ಮತ್ತು ಈ ಎಲ್ಲ ಗಿಡ ಮೂಲಿಕೆಗಳನ್ನು ತೆಗೆದುಕೊಂಡು ನಾವು ನಮ್ಮ ಆರೋಗ್ಯಕ್ಕೆ ಸೇವಿಸುವುದರಿಂದ ನಾವು ಖಂಡಿತವಾಗಿಯೂ ಕೂಡ ಆರೋಗ್ಯವಂತರಾಗಿರುತ್ತೇವೆ ಎಂಬುದರಲ್ಲಿ ಎರಡು ಮಾತಿಲ್ಲ ಏಕೆಂದರೆ ಇತ್ತೀಚಿನ ದಿನಗಳಲ್ಲಿ ವೈರಸ್ ಎಂಬುದು ಸರ್ವೇಸಾಮಾನ್ಯವಾಗಿದೆ ಕೆಮ್ಮು ಬಂದರೂ ಕೂಡ ಅದು ವೈರಸ್ ಆಗಿರುತ್ತದೆ ಜ್ವರ ಬಂದರೂ ಕೂಡ ಅದು ವೈರಸ್ ಆಗಿರುತ್ತದೆ.

ಶೀತವಾದರೂ ಕೂಡ ಅದು ವೈರಸ್ಸೇ ಕಾರಣವಾಗಿರುತ್ತದೆ ಈ ಎಲ್ಲದರಿಂದ ನೀವು ಮುಕ್ತಿಯನ್ನು ಪಡೆಯಲು ಮೊದಲು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಕ್ಕದ ಹೂವು ಪಾರಿಜಾತದ ಹೂವು ಜೊತೆಗೆ ಬೇವಿನಸೊಪ್ಪು ಅಮೃತ ಬಳ್ಳಿಯ ಎಲೆಗಳು ಇವೆಲ್ಲವೂ ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವಂತಹ ವಿಷಯ.

ಈ ವಿಷಯವನ್ನು ನೀವು ತಿಳಿದ ಬಳಿಕ ಒಮ್ಮೆ ಸೇವಿಸುವಯದರಲ್ಲಿ ತಪ್ಪಿಲ್ಲ ಅಲ್ಲವೇ ಆದ್ದರಿಂದ ಒಮ್ಮೆ ಸೇವಿಸಿ ಅದಾದ ನಂತರ ಇದರ ಪರಿಣಾಮವನ್ನು ನೀವೇ ತಿಳಿಯಬಹುದು ನೀವು ಪ್ರತಿನಿತ್ಯ ಇದನ್ನು ಸೇವಿಸಿದ ಬಳಿಕ ನಿಮಗಾದ ಅನುಭವವನ್ನೇ ನೀವು ಕಂಡುಕೊಳ್ಳಿ ಅದಾದ ನಂತರ ನೀವು ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ನೀಡಿ ನಿಮಗೆ ಉಪಯೋಗವಾದಂತೆ ಇದರ ಉಪಯೋಗವನ್ನು ಬೇರೆಯವರು ಪಡೆಯಲಿ ಎಂಬುದಷ್ಟೇ ನಮ್ಮ ಆಶಯ ಧನ್ಯವಾದಗಳು.