ನಿಮ್ಮ ಮನೆಯಲ್ಲಿ ಇಲಿಗಳು ಸಿಕ್ಕಾಪಟ್ಟೆ ಆಗಿದ್ದರೆ ಈ ಒಂದು ಮನೆಮದ್ದು ಮನೆಯಲ್ಲಿ ಇಡಿ ಸಾಕು … ನಿಮ್ಮ ಹತ್ತಿರ ಇಲಿಗಳು ಕಣ್ಣುಕೂಡ ಹಾಹಿಸೋದಿಲ್ಲ…

253

ಇಲಿಗಳ ಸಮಸ್ಯೆಗೆ ಉಪ್ಪು ಮತ್ತು ಸೋಡದಿಂದ ಈ ಪರಿಹಾರ ಮಾಡಿ ಖಂಡಿತ ಇಲಿಗಳ ಕಾಟದಿಂದ ಪರಿಹಾರ ಪಡೆದುಕೊಳ್ಳಬಹುದು ಬನ್ನಿ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ. ನಮಸ್ಕಾರಗಳು ಇಲಿಗಳ ಕಾಟ ಅಂದರೆ ಸಾಮಾನ್ಯವಾಗಿ ಮನೆಯಲ್ಲಿ ತೊಂದರೆಯೇ ಕಿರಿಕಿರಿಯೆ, ಯಾಕೆ ಅಂದರೆ ಈ ಇಲಿಗಳು ಮನೆಯಲ್ಲಿ ಇದ್ದರೆ ಯಾವ ವಸ್ತುಗಳನ್ನು ಸಹ ಸುವ್ಯವಸ್ಥೆಯಾಗಿ ಇರಲು ಬಿಡುವುದಿಲ್ಲ. ಹಾಗಾಗಿ ಇವತ್ತಿನ ಲೇಖನಿಯಲ್ಲಿ ಇಲಿಗಳ ಕಾಟದಿಂದ ಪರಿಹಾರ ಹೇಗೆ ಪಡೆದುಕೊಳ್ಳುವುದು ಎಂಬುದನ್ನ ತಿಳಿಸುತ್ತಿದ್ದೇವೆ ಈ ಮನೆಮದ್ದನ್ನು ನೀವು ಕೂಡ ಪಾಲಿಸಿ ಮತ್ತು ಇರುವ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಿ ಬನ್ನಿ ಈ ಇಲಿಗಳ ಕಾಟದಿಂದ

ಹೇಗೆ ಪರಿಹಾರ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಮತ್ತು ಈ ಸಮಸ್ಯೆ ನಿವಾರಣೆ ಮಾಡಬೇಕು ಮೊದಲಿಗೆ ನಾವು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹೌದು ಯಾರ ಮನೆ ಸ್ವಚ್ಚವಾಗಿ ಇಡುವುದಿಲ್ಲ ಅವರ ಮನೆಯಲ್ಲಿ ಸಾಮಾನ್ಯವಾಗಿ ಇಲಿ ಕಾಟ ಜಿರಲೆ ಕಾಟ ಇವುಗಳೆಲ್ಲ ಸಾಮಾನ್ಯ.

ಹಾಗಾಗಿ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳೋದಕ್ಕೆ ಮೊದಲು ಮಾಡಬೇಕಾಗಿರುವುದೇನೆಂದರೆ ಮನೆಯನ್ನ ಆಗಾಗ ಸ್ವಚ್ಛ ಮಾಡುತ್ತ ಇರುವುದು ಮತ್ತು ಆ ವಸ್ತುಗಳನ್ನು ಎಲ್ಲಿ ಆ ವಸ್ತುಗಳನ್ನು ತೆಗೆದು ಆಗಾಗ ಸ್ವಚ್ಛ ಮಾಡುತ್ತಾರೆ.ಈಗ ಇಲಿಗಳ ಕಾಟದಿಂದ ಪರಿಸರ ಪಡೆದುಕೊಳ್ಳುವುದಕ್ಕೆ ಮಾಡಬಹುದಾದ ಮನೆಮದ್ದು ತಿಳಿಯುವುದರ ಜತೆಗೆ ಇದನ್ನು ಮಾಡುವ ವಿಧಾನ ಹಾಗೂ ಇದಕ್ಕೆ ಬೇಕಾಗಿರುವ ಪದಾರ್ಥ ಯಾವುದು ಎಂಬುದನ್ನು ಸಹ ತಿಳಿಯೋಣ ಬನ್ನಿ.

ಕೇವಲ ಎರಡೇ ಪದಾರ್ಥದಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಹಲವರು ಹಲವಾರು ರೀತಿಯ ವಿಧಾನಗಳನ್ನು ಪಾಲಿಸುತ್ತಾರೆ ಇಲಿಗಳ ಕಾಟದಿಂದ ಪರಿಹಾರ ಪಡೆಯಲು ಆದರೆ ಅದ್ಯಾವುದೂ ಫಲ ಕೊಡದೆ ಸಾಕಾಗಿ ಹೋಗಿರುತ್ತಾರೆ, ಸುಮ್ಮನೆ ಸಮಯ ವ್ಯರ್ಥ ಆಗಿರುತ್ತದೆ ಮನೆಯಲ್ಲಿರುವ ವಸ್ತುಗಳು ಹಾಳಾಗುತ್ತಾ ಇರುತ್ತದೆ.

ಈ ಪರಿಹಾರ ಮಾಡೋದಕ್ಕೆ ಬೇಕಾಗಿರುವುದು ಉಪ್ಪು ಮತ್ತು ಸೋಡಾ ಪುಡಿ.ಮೊದಲಿಗೆ ಉಪ್ಪು ಜೊತೆಗೆ ಸೋಡಾಪುಡಿಯನ್ನು ಹಾಕಿ ನೀರು ಹಾಕಿ ಮಿಶ್ರ ಮಾಡಬೇಕು ಈಗ ಈ ಮಿಶ್ರಣದಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಬಳಿಕ ಇಲಿಗಳು ಓಡಾಡುವ ಸ್ಥಳದಲ್ಲಿ ಈ ಹತ್ತಿಯ ಉಂಡೆಯನ್ನು ಇರಿಸುತ್ತ ಬರಬೇಕು, ದಿನ ಬಿಟ್ಟು ದಿನ ಈ ಕಾಟನ್ ಬಾಲ್ ಗಳನ್ನು ಬದಲಾಯಿಸುತ್ತಾ ಇರಿ ಹೀಗೆ ಮಾಡುವುದರಿಂದ ಇಲಿಗಳ ಕಾಟದಿಂದ ಬಹಳ ಬೇಗ ಪರಿಹಾರ ಪಡೆದುಕೊಳ್ಳಬಹುದು.

ಹೌದು ಈ ಸುಲಭ ವಿಧಾನವನ್ನು ಪಾಲಿಸುವ ಮೂಲಕ ಇರುವ ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಹಾಗೂ ಈ ಕಾಟನ್ ಬಾಲ್ ಗಳನ್ನು ತಪ್ಪಾದೆ ದಿನ ಬಿಟ್ಟು ದಿನ ಬದಲಾಯಿಸುತ್ತಾ ಇರಿ ಮತ್ತು ವಾರಕ್ಕೆ ಒಮ್ಮೆಯಾದರೂ ಮನೆಯನ್ನ ಎಲ್ಲಾ ಭಾಗದಲ್ಲಿಯೂ ಸ್ವಚ್ಛ ಮಾಡಿ. ಮನೆಯ ಮೇಲ್ಭಾಗದಲ್ಲಿ ಈ ರಂಧ್ರಗಳು ಇದ್ದರೆ ಅದನ್ನು ಮುಚ್ಚುವ ಪರಿಹಾರ ಮಾಡಿ ಆಗ ಮನೆಯೊಳಕ್ಕೆ ಇಲಿಗಳು ಬರಲು ಸಾಧ್ಯವಾಗುವುದಿಲ್ಲ ಮತ್ತು ಮನೆಯಲ್ಲಿ ಅಟ್ಟ ಇದ್ದರೆ ಆ ಅರ್ಥವನ್ನು ಸಹ ತಿಂಗಳಿಗೊಮ್ಮೆಯಾದರೂ ಅಥವಾ ಹದಿನೈದು ದಿನಗಳಿಗೊಮ್ಮೆಯಾದರೂ ಕ್ಲೀನ್ ಮಾಡಬೇಕು ಇಲ್ಲವಾದರೆ ಇಲಿಗಳ ಸಂಖ್ಯೆ ಹೆಚ್ಚುತ್ತದೆ.

ಸಾಧ್ಯವಾದರೆ ಮನೆಯಲ್ಲಿ ಬೆಕ್ಕು ಸಾಕುವುದು ಇನ್ನೂ ಉತ್ತಮ ಅಥವಾ ಆಗಾಗ ಬೆಕ್ಕುಗಳನ್ನು ತಂದು ಅಟ್ಟಕ್ಕೆ ಅಥವಾ ಮನೆಯಲ್ಲಿ ಇರಿಸಿಕೊಂಡರೆ ಮನೆಯಲ್ಲಿ ಕಟ್ಟಿ ಹಾಕಿಕೊಂಡರೆ ಇನ್ನೂ ಒಳ್ಳೆಯದು ಇಲಿಗಳ ಕಾಟದಿಂದ ಬಹಳ ಬೇಗ ಪರಿಹಾರ ಪಡೆಯಬಹುದು. ಈ ಕೆಲವೊಂದು ಪರಿಹಾರಗಳು ಇಲಿಗಳ ಕಾಟದಿಂದ ಶಮನಗೊಳ್ಳುತ್ತವೆ.