ನಿಮ್ಮ ಮನೆಯಲ್ಲಿ ತಡೆದುಕೊಳ್ಳಲಾಗದಷ್ಟು ಸೊಳ್ಳೆಗಳ ಕಾಟ ಇದ್ರೆ ಈ ಒಂದು ಮನೆಯಲ್ಲೇ ಮಾಡಬಹುದಾದ ಪರಿಹಾರ ಮಾಡಿಕೊಳ್ಳಿ ಸಾಕು… ನಿಮ್ಮ ಮನೆಯಲ್ಲಿ ಸೊಳ್ಳೆಗಳು ಬರೋದೇ ಇಲ್ಲ..

178

ನಮಸ್ಕಾರಗಳು ಮನೆಯಲ್ಲಿ ಸೊಳ್ಳೆ ಕಾಟ ಇದ್ದರೆ ಈ ಮನೆಮದ್ದು ಮಾಡಿ ಹೌದು ನಿವೇನಾದರೂ ಮಸ್ಕಿಟೋ ಕಾಯಿಲ್ ಗಳು ರಿಫಿಲ್ ಗಳನ್ನು ಬಳಸಿ ಸೊಳ್ಳೆ ಕಾಟಕ್ಕೆ ಶಮನ ಪಡೆದುಕೊಳ್ಳುತ್ತಿದ್ದರೆ ಅಥವಾ ಸೊಳ್ಳೆ ಕಾಟಕ್ಕೆ ಈ ವಿಧಾನದಲ್ಲಿ ಪರಿಹಾರ ಕಂಡುಕೊಳ್ಳುತ್ತ ಇದ್ದರೆ ಅದನ್ನು ಈಗಲೇ ಬಿಡಿ. ಅದರಿಂದ ಏನೆಲ್ಲ ಸಮಸ್ಯೆಗಳು ಉಂಟಾಗಬಹುದು ಎಂಬುದು ನಿಮಗೆ ನಿಜಕ್ಕೂ ಊಹೆ ಇರುವುದಿಲ್ಲ.

ಆದರೆ ನಾವು ತಿಳಿಸುವಂತಹ ಈ ಮನೆಮದ್ದನ್ನು ಮಾಡಿದರೆ ಖಂಡಿತ ಸೊಳ್ಳೆ ಕಾಟದಿಂದ ಶಮನ ಪಡೆದುಕೊಳ್ಳುತ್ತೀರಾ ಜೊತೆಗೆ ನಿಮ್ಮ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಎರಡೆರಡು ಫಲಿತಾಂಶಗಳನ್ನ ಪಡೆದುಕೊಳ್ಳಬಹುದು ಈ ವಿಧಾನ ಪಾಲಿಸಿದಾಗ.

ಹೌದು ಈ ಮನೆಮದ್ದನ್ನು ಕಲಿಸುವುದರಿಂದ ಎರಡೆರಡು ಫಲಿತಾಂಶ ನಿಮಗೆ ಯಾವುದು ದೊರೆಯುತ್ತೆ ಗೊತ್ತಾ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದಾಗ ನಿಮಗೆ ಗೊತ್ತಾಗುತ್ತೆ ಮೊದಲು ಮಾಹಿತಿ ಕುರಿತು ತಿಳಿಯೋಣ ಜೊತೆಗೆ ಇದರ ಅನುಕೂಲತೆಗಳ ಬಗ್ಗೆಯೂ ಕೂಡ ಕುರಿತು ತಿಳಿಯೋಣ ಬನ್ನಿ.ಸೊಳ್ಳೆ ಕಾಟ ಸಂಜೆ ಆಗುತ್ತಿದ್ದ ಹಾಗೆ ಶುರು ಆಗಿ ಬಿಡುತ್ತದೆ ಇನ್ನು ಕೆಲವರ ಮನೆಯಲ್ಲಿ ಬೆಳಿಗ್ಗೆ ಸಮಯದಲ್ಲಿಯೇ ಸೊಳ್ಳೆಕಾಟ ಇರುತ್ತದೆ ಆಗ ಏನು ಮಾಡಬೇಕೆಂದರೆ ತಪ್ಪದೆ ಮನೆಯಲ್ಲಿ ಧೂಪ ಹಾಕುವ ರೂಢಿ ಮಾಡಿಕೊಳ್ಳಿ.

ಹೌದು ಧೂಪ ಹಾಕುವುದರಿಂದ ಮನೆಯಲ್ಲಿ ಯಾವುದೇ ಕಾರಣಕ್ಕೂ ಯಾವುದೇ ಕೀಟಗಳಾಗಲಿ ಸೊಳ್ಳೆ ಕಾಟ ಆಗಲೇ ನೊಣಗಳ ಆಗಲಿ ಇಂತಹ ಸಮಸ್ಯೆಗಳು ಉಂಟಾಗುವುದಿಲ್ಲ ಅದರ ಬದಲಾಗಿ ಧೂಪ ಹಾಕುವುದರಿಂದ ಮನೆಯಲ್ಲಿ ಸಕಾರಾತ್ಮಕ ಭಾವನೆ ಹೆಚ್ಚುತ್ತದೆ ಮತ್ತು ಧೂಪ ಹಾಕುವುದರಿಂದ ಮನೆಯ ವಾತಾವರಣವೂ ಕೂಡ ಅಷ್ಟೇ ಉತ್ತಮವಾಗಿರುತ್ತದೆ.

ಧೂಪವನ್ನು ಹಲವು ಸಾಮಗ್ರಿಗಳನ್ನು ಬಳಸಿ ಹಾಕುತ್ತಾರೆ ಒಬ್ಬೊಬ್ಬರು ಒಂದೊಂದು ವಿಧಾನದಲ್ಲಿ ಧೂಪ ಹಾಕುತ್ತಾರೆ ಆದರೆ ಇವತ್ತಿನ ಲೇಖನಿಯಲ್ಲಿ ನಾವು ಧೂಪ ಹಾಕುವುದರ ಬೇರೆ ತರಹದ ವಿಧಾನವನ್ನೇ ತಿಳಿಸಿಕೊಡುತ್ತೇವೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಕರ್ಪೂರ ಬೆಳ್ಳುಳ್ಳಿ ತುಪ್ಪ ಮತ್ತು ಕೊಬ್ಬರಿ ಎಣ್ಣೆ.ಹೌದು ಮಣ್ಣಿನಿಂದ ಮಾಡಿದ ತಟ್ಟೆಯೊಂದನ್ನು ತೆಗೆದುಕೊಳ್ಳಿ ಅಥವಾ ಕೆಲವರ ಮನೆಯಲ್ಲಿ ಧೂಪ ಹಾಕುವುದಕ್ಕಾಗಿಯೇ ಪ್ಲೇಟ್ ಇರುತ್ತದೆ ಅದನ್ನ ಬಳಸಿ ಅದರಲ್ಲಿ ಬೆಳ್ಳುಳ್ಳಿಯನ್ನು ಕರ್ಪೂರದೊಂದಿಗೆ ಇಟ್ಟು ಆ ಬೆಳ್ಳುಳ್ಳಿಯನ್ನು ಉರಿಸಬೇಕು.

ಈ ರೀತಿ ಬೆಳ್ಳುಳ್ಳಿ ಕರ್ಪೂರದೊಂದಿಗೆ ಉರಿಯುವಾಗ ಅದರ ಹೊಗೆಯನ್ನು ಪೂರ್ಣ ಮನೆಗೆ ಹೋಗುವಂತೆ ಮಾಡಬೇಕು ಈ ಸಮಯದಲ್ಲಿ ಈ ಬೆಳ್ಳುಳ್ಳಿಗೆ ಕೊಬ್ಬರಿ ಎಣ್ಣೆ ಮತ್ತು ತುಪ್ಪವನ್ನು ಹಾಕುತ್ತಾ ಸ್ವಲ್ಪಸ್ವಲ್ಪವೇ ಈ ಮಿಶ್ರಣವನ್ನು ಹಾಕುತ್ತಾ ಇದರಿಂದ ಬರುವ ಹೊಗೆಯನ್ನು ಪೂರ್ಣ ಮನೆಗೆ ಹೋಗುವ ಹಾಗೆ ಮಾಡಿ ಅಂದರೆ ಪೂರ್ಣ ಮನೆಗೆ ಧೂಪವನ್ನು ಹಾಕಿ.

ಈ ರೀತಿ ಸಂಜೆ ಸಮಯದಲ್ಲಿ ಪ್ರತಿದಿನ ಮಾಡುತ್ತ ಬಂದರೆ ಅಥವಾ ಸೊಳ್ಳೆ ನೊಣ ಹೆಚ್ಚಿದೆ ಬೆಳಗಿನ ಸಮಯದಲ್ಲಿ ಸಹ ಇರುತ್ತದೆ ಅಂದರೆ ಈ ರೀತಿ ಸೊಳ್ಳೆ ನೊಣಗಳು ಮನೆಯಲ್ಲಿ ಹೆಚ್ಚು ಇರುತ್ತದೆ ಅಂದರೆ ಬೆಳಗಿನ ಸಮಯದಲ್ಲಿಯೇ ಈ ಧೂಪವನ್ನು ಹಾಕಬಹುದು, ಇನ್ನು ಕೆಲವರು ಧೂಪ ಹಾಕುವ ಬಜೆಯ ಬೇರನ್ನು ಸಹ ಹಾಕಿ ಧೂಪ ಹಾಕುತ್ತಾರೆ, ಇದರಿಂದ ಕೂಡ ಮನೆಯಲ್ಲಿರುವ ಸೊಳ್ಳೆಗಳು ನೊಣಗಳು ಸ..ತ್ತು ಹೋಗುತ್ತದೆ.ಗ್ರಂಥಿಗೆ ಅಂಗಡಿಯಲ್ಲಿ ಗಿಡಮೂಲಿಕೆಗಳು ದೊರೆಯುತ್ತದೆ ಅದನ್ನು ಧೂಪ ಹಾಕಿ ಉರಿಸುತ್ತಾರೆ ಅಂತಹ ಗಿಡಮೂಲಿಕೆಗಳನ್ನ ಕೂಡ ಬಳಸಿ ಮನೆಯಲ್ಲಿ ಒಮ್ಮೊಮ್ಮೆ ಧೂಪವನ್ನು ಹಾಕಬಹುದು ಇದರಿಂದ ಕೂಡ ಮನೆಯ ವಾತಾವರಣ ಬಹಳ ಚೆನ್ನಾಗಿರುತ್ತದೆ.

WhatsApp Channel Join Now
Telegram Channel Join Now