ನೀವು ನಿಮ್ಮ ಕೆಲಸದಲ್ಲಿ ಉನ್ನತ ಮಟ್ಟಕ್ಕೇರಲು ಸರ್ ಎಂ ವಿ ಅವರ ಸಲಹೆಗಳು ತುಂಬಾ ಉಪಯೋಗ ಆಗುತ್ತದೆ ಯಾವಾಗ್ಲೂ ನೆನಪಲ್ಲಿ ಇಟ್ಕೊಳಿ …!!!!

89

ಕೆಲಸ ಮಾಡುವಂತಹ ಮನಸ್ಸು ನಿಮಗೆ ಇಲ್ಲವಾ ಅಥವಾ ನೀವು ಮಾಡುತ್ತಿರುವಂತಹ ಕೆಲಸದ ಮೇಲೆ ನಿಮಗೆ ಬೇಸರ ಬಂದಿದೆಯ ಹಾಗಾದರೆ ಸರ್ ಎಂ ವಿಶ್ವೇಶ್ವರಯ್ಯ ಅವರು ಕೆಲಸದ ಬಗ್ಗೆ ಆಡಿರುವಂತಹ ಕೆಲವೊಂದು ಮಾತುಗಳನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ .ಹೌದು ಸ್ನೇಹಿತರೇ ನಾವು ಮಾಡುವಂತಹ ಕೆಲಸ ಕೆಲವೊಂದು ಬಾರಿ ಯಾರಿಗಾದರೂ ಬೇಸರ ವಾಗಿಯೇ ಇರುತ್ತದೆ ಯಾಕೆ ಎಂದರೆ ಮಾಡಿದ್ದೇ ಕೆಲಸ ಮಾಡೋದಕ್ಕೆ ಯಾರಿಗಾದರೂ ಬೇಸರವಾಗುತ್ತದೆ ಅದೇ ಅಲ್ವಾ ನಮ್ಮ ಮನುಷ್ಯ ಜಾತಿಯ ಒಂದು ಗುಣ.ಆದರೆ ನಾವು ಮಾಡುತ್ತಿರುವಂತಹ ಕೆಲಸ ನಾವು ಎರಡು ಹೊತ್ತು ಊಟ ಮಾಡುವುದಕ್ಕೆ ಕಾರಣವಾಗಿರುತ್ತದೆ.

ಜೊತೆಗೆ ನಾವು ಮಾಡುತ್ತಿರುವಂತಹ ಕೆಲಸ ನಮಗೆ ಈ ಸಮಾಜದಲ್ಲಿ ಒಂದು ಬೆಳೆಯನ್ನು ಗೌರವವನ್ನು ತಂದು ಕೊಟ್ಟಿರುತ್ತದೆ .ಆದರೆ ನಾವು ಮಾತ್ರ ಕೆಲಸ ಬೇಸರವಾಯಿತು ಎಂದು ಕೆಲಸವನ್ನೇ ಬೈದುಕೊಂಡು ಇರುತ್ತೇವೆ ಆದರೆ ಆ ಕೆಲಸ ಇಲ್ಲವಾದರೆ ಏನು ಮಾಡೋದು ಹೇಳಿ ಅಲ್ವಾ ಆದ್ದರಿಂದ ನಮಗೆ ಸಿಕ್ಕಿರುವಂತಹ ಕೆಲಸದಲ್ಲಿಯೇ ನಾವು ತೃಪ್ತಿ ಬಿಡುತ್ತಾ ಆ ಕೆಲಸದಲ್ಲಿ ಉನ್ನತ ಮಟ್ಟಕ್ಕೆ ಹೋಗೋದನ್ನು ಯೋಚಿಸಬೇಕು ಹಾಗೆ ಆ ಕೆಲಸದಲ್ಲಿಯೇ ಆ ಕ್ಷೇತ್ರದಲ್ಲಿ ಮುನ್ನುಗ್ಗಬೇಕು .

ಈ ರೀತಿ ಆಕೆಯ ಸರ್ ಎಂ ವಿಶ್ವೇಶ್ವರಯ್ಯ ಅವರು ಹೇಳುತ್ತಾರೆ ನಮ್ಮ ಭಾರತೀಯರಲ್ಲಿ ಸೋಂಬೇರಿತನ ಎಂಬುದು ಹೆಚ್ಚಾಗಿದೆ ಹಾಗೆಯೇ ಆ ಕೆಲಸವನ್ನು ನಾಳೆ ಮಾಡಿದರಾಯಿತು ಎಂಬುವ ಆಲೋಚನೆ ಕೂಡ ಹೆಚ್ಚಾಗಿಯೇ ಇದೆ . ಆದರೆ ಪಾಶ್ಚಾತ್ಯರನ್ನು ನೋಡಿದರೆ ತಿಳಿಯುತ್ತದೆ ಅವರು ತಾವು ಮಾಡುವಂತಹ ಕೆಲಸವನ್ನು ಅತ್ಯಂತ ನಿಷ್ಠೆ ಇಟ್ಟು ಪರಿಶ್ರಮ ಕೊಟ್ಟು ತಮ್ಮ ಭಾಗಿಗಳೆಂದೂ ಸೇರಿ ತಮ್ಮ ಕೆಲಸವನ್ನು ಮುಗಿಸುತ್ತಾರೆ .

ಈ ಕಾರಣದಿಂದಾಗಿಯೇ ಪಾಶ್ಚಾತ್ಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಮುಂದೆ ಇರುವುದು , ಹಾಗೆಯೇ ಸ್ನೇಹಿತರೇ ಪಾಶ್ಚಾತ್ಯರಂತೆ ನಾವು ಕೂಡ ನಮ್ಮಲ್ಲಿ ಕೆಲವೊಂದು ಬದಲಾವಣೆಯನ್ನು ತಂದುಕೊಂಡರೆ ನಮ್ಮ ದೇಶವನ್ನು ನಾವು ವಿಶ್ವ ಮಟ್ಟದಲ್ಲಿ ಅತ್ಯಂತ ಉನ್ನತ ರಾಷ್ಟ್ರವೆಂದು ಎನಿಸಿಕೊಳ್ಳಬಹುದು .
ಆದ್ದರಿಂದ ನಾವು ಮೊದಲಿಗೆ ನಾವು ಮಾಡುತ್ತಿರುವಂತಹ ಕೆಲಸದಲ್ಲಿ ನಿಷ್ಠೆ ಇಟ್ಟುಕೊಳ್ಳಬೇಕು ಹಾಗೂ ನಾವು ಮಾಡುವಂತಹ ಕೆಲಸವನ್ನು ಶ್ರಮವಿಟ್ಟು ಕೆಲಸ ಮಾಡಿದರೆ ಆಶ್ರಮ ನಮ್ಮನ್ನು ಮತ್ತೊಂದು ಮೇಲ್ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ .

ಇನ್ನು ಕೆಲಸ ಮಾಡುತ್ತಿರುವಂತಹ ಸಂದರ್ಭದಲ್ಲಿ ನಾವು ನಿಷ್ಠೆ ಇಟ್ಟುಕೊಳ್ಳಬೇಕು ಮತ್ತು ಪರಿಶ್ರಮವನ್ನು ಹಾಕಬೇಕು ಎಂದು ಹೇಳಿದೆವು ಇದರ ಜೊತೆಗೆ ನಾವು ಕೆಲಸ ಮಾಡುತ್ತಿರುವಂತಹ ಸ್ಥಳದಲ್ಲಿ ನಮ್ಮ ಸಹಪಾಠಿಗಳೊಂದಿಗೆ ಕೂಡ ನಾವು ಸೇರಿ ಇನ್ನೂ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು ಆಗ ನಾವು ಮಾಡುವಂತಹ ಕೆಲಸ ನಮಗೆ ಎಂದಿಗೂ ಕೂಡಾ ಬೇಸರ ಅಂತ ಅನ್ನಿಸೋದಿಲ್ಲ .

ಆದ್ದರಿಂದ ಸ್ನೇಹಿತರೇ ನಾವು ಕೆಲಸ ಮಾಡುವಾಗ ಪರಿಶ್ರಮದ ಜೊತೆ ಸಮಯಕ್ಕೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ ನಾವು ಮಾಡುವಂತಹ ಕೆಲಸವನ್ನು ಇಷ್ಟೇ ಸಮಯದಲ್ಲಿ ಮಾಡಿ ಮುಗಿಸಬೇಕು ಅಂತ ಅಂದುಕೊಂಡ ಮೇಲೆ ಅದನ್ನು ಮಾಡಿಯೇ ತೀರಬೇಕು ನಂತರವೇ ಬೇರೆ ಕೆಲಸ ಮಾಡಲು ಮುಂದಾಗಬೇಕು ಆಗಲೇ ನಾವು ಮಾಡುವಂತಹ ಕೆಲಸ ಬೇಗನೇ ಮುಗಿಯುತ್ತದೆ ಜೊತೆಗೆ ಅಂದುಕೊಂಡದ್ದು ಕೂಡಾ ಆಗುತ್ತದೆ .

ಸರ್ ಎಂ ವಿಶ್ವೇಶ್ವರಯ್ಯ ಅವರು ಮತ್ತೊಂದು ಮಾತನ್ನು ಹೇಳುತ್ತಾರೆ ಅದೇನೆಂದರೆ ನಾವು ಕೆಲಸ ಮಾಡಿ ಸುಸ್ತಾಗಿದ್ದೇವೆ ಅಂದುಕೊಂಡರೆ ನಮ್ಮ ಮನಸ್ಸಿಗೆ ವಿಶ್ರಾಂತಿ ಬೇಕು ಅಂದರೆ ಅದು ತಪ್ಪಾಗುತ್ತದೆ , ನಮ್ಮ ಮನಸ್ಸಿಗೆ ವಿಶ್ರಾಂತಿ ಎಂಬುದು ಯಾವಾಗ ಸಿಗುತ್ತದೆ ಎಂದರೆ ನಾವು ಅಂದುಕೊಂಡಂತಹ ಗೋಲನ್ನು ರೀಚ್ ಅದಾಗ ಅದೆ ಮನಸ್ಸಿಗೆ ಕೊಡುವಂತಹ ವಿಶ್ರಾಂತಿಯಾಗಿರಬೇಕು .

WhatsApp Channel Join Now
Telegram Channel Join Now