ಪಾಪ ಈ ಮುದುಕ ದೊಡ್ಡ ಹೋಟೆಲ್ಗೆ ಹೋಗಿ ತಿಂತಾನೆ ಆದ್ರೆ ಅವನ ಹತ್ರ ಹಣ ಇರೋದೇ ಇಲ್ಲ…ನಂತರ ಆಗಿದ್ದೇನು…

131

ಸ್ನೇಹಿತರೆ ಒಬ್ಬ ವೃದ್ಧ ಹೋಟೆಲ್ ಗೆ ಬರುತ್ತಾರೆ ಹೌದೋ ತುಂಬಾ ಹಸಿವಿನಿಂದ ಹೊಟೇಲ್ ಗೆ ಬಂದ ಆ ವಯಸ್ಸಾದ ವೃದ್ಧರು ಊಟಕ್ಕೆ ಎಷ್ಟು ಎಂದು ಹೇಳಿ ಊಟ ತರಲು ಹೇಳುತ್ತಾರೆ. ಇನ್ನೂ ವೃದ್ಧರ ಬಳಿ ಏನು ಬೇಕೆಂದು ಕೇಳಲು ಬಂದ ಹೋಟೆಲ್ ಮಾಲೀಕರ ವಿರುದ್ಧ ಕೇಳಿದ ಮಾತಿಗೆ ಮೀನು ಬೇಕು ಅಂದರೆ ಊಟಕ್ಕೆ 50ರೂ ಗಳು ಆಗುತ್ತದೆ ನೀನು ಬೇಡ ಅಂದರೆ 20ರೂ ಗಳು ಆಗುತ್ತದೆ ಎಂದು ಹೇಳುತ್ತಾನೆ ನೀನು ತುಂಬಾ ಹಸಿವಿನಿಂದ ಹೋಟೆಲ್ ಗೆ ಬಂದಿದ್ದ ವೃದ್ಧ ತನ್ನ ಬಳಿ ಇರುವುದು 10ರೂ ಗಳು ಮಾತ್ರ ಇಷ್ಟಕ್ಕೆ ಎಷ್ಟು ಊಟ ಬರುತ್ತದೆ ಅಷ್ಟು ಮಾತ್ರ ನನಗೆ ಊಟ ನೀಡಿ ನನಗೆ ಬಹಳ ಹಸಿವಾಗ್ತಾ ಇದೆ ನಿನ್ನೆಯಿಂದ ಊಟ ಮಾಡಿಲ್ಲ ಎಂದು ಹೋಟೆಲ್ ಮಾಲೀಕನ ಬಳಿ ಹೇಳುತ್ತಾ ತಲೆತಗ್ಗಿಸಿ ಕುಳಿತುಕೊಳ್ಳುತ್ತಾರೆ ವೃದ್ಧರು.

ಆಗ ಆ ಹೋಟೆಲ್ ಮಾಲೀಕ ಊಟವನ್ನು ತಂದು ವೃದ್ಧರಿಗೆ ನೀಡುತ್ತಾರೆ ಇನ್ನು ಆ ತಾತ ಊಟಮಾಡುತ್ತಾ ಇರುವುದನ್ನ ಹೋಟೆಲ್ ಮಾಲೀಕ ನೋಡುತ್ತಾ ಅಲ್ಲಿಯೇ ನಿಂತುಕೊಂಡಿರುತ್ತಾರೆ ಮತ್ತು ವೃದ್ಧ ಕಣ್ಣೀರು ಹಾಕುತ್ತಾ ಮಗುವಿನ ಹಾಗೆ ಊಟ ಮಾಡುತ್ತಾ ಇರುತ್ತಾರೋ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಏಕೆ ಅಳುತ್ತಿದ್ದೀಯ ತಾತ ನಿಮಗೆ ಏನಾಯಿತೋ ಎಂದು ಕೇಳುತ್ತಾರೆ. ವ್ಯಕ್ತಿ ಕೇಳಿದ ಮಾತಿಗೆ ಆ ವೃದ್ಧ ಕಣ್ಣೀರನ್ನು ಹಾಕುತ್ತಾ ನನಗೆ 3 ಜನ ಮಕ್ಕಳು ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳು. ಎಲ್ಲರಿಗೂ ಮದುವೆಯಾಗಿದೆ 3 ಜನರು ಕೂಡ ಒಳ್ಳೆಯ ಕೆಲಸದಲ್ಲಿ ಇದ್ದಾರೆ. ನನಗೆ ಸಿಕ್ಕ ಸೌಭಾಗ್ಯ ಎಲ್ಲವನ್ನೂ ನಾನು ನೀಡಿದ್ದೇನೆ. ಆದರೆ ನಾನು ನನ್ನ ಯೌವ್ವನವನ್ನು ಕಳೆದುಕೊಂಡು ಅಳುತ್ತಿದ್ದಾನೆ ಎಂದು ಹೇಳಿದರು.

ನನ್ನ ಪತ್ನಿ ನನಗೆ ಯಾವಾಗಲೂ ಬೆನ್ನೆಲುಬಾಗಿ ನಿಂತಿದ್ದಳು. ಆದರೆ ಆಕೆ ಕೂಡ ನನ್ನನ್ನು ಒಂಟಿ ಮಾಡಿ ಇಹಲೋಕ ತ್ಯಜಿಸಿದಳು, ಇನ್ನೂ ಮಕ್ಕಳು ಮತ್ತು ಸೊಸೆಯಂದಿರು ನನ್ನ ಆಸ್ತಿ ಬರೆಸಿಕೊಂಡು ನನ್ನನ್ನು ದೂರ ಇಡಲು ಪ್ರಯತ್ನ ಮಾಡುತ್ತ ಇದ್ದರು. ನನ್ನ ವಯಸ್ಸನ್ನು ನೋಡಿ ಕೂಡ ಅವರು ನನಗೆ ಗೌರವ ಕೊಡುತ್ತ ಇರಲಿಲ್ಲಾ. ಅವರು ತಿಂದ ಮೇಲೆ ನಾನು ಮಿಕ್ಕಿದ್ದನ್ನು ಎನ್ನುತ್ತಾ ಇದ್ದ ಆದರೂ ಸಹ ನನಗೆ ಬೈಯುತ್ತಾ ಇದ್ದರು ಅವರ ಮಕ್ಕಳು ನಿನ್ನ ಬಳಿ ಬರಲು ಸಹ ಬಿಡುತ್ತಾ ಇರಲಿಲ್ಲ ನನ್ನ ಬಳಿ ಬಂದರೆ ಮಕ್ಕಳನ್ನ ಹೊಡೆಯುತ್ತಾ ಇದ್ದರು.

ಮಕ್ಕಳು ಮತ್ತು ಸೊಸೆಯಂದಿರು ಯಾವಾಗಲೂ ಮನೆ ಯಿಂದ ಹೊರಗೆ ಹಾಕಲು ನೋಡುತ್ತಾ ಇದ್ದರು ಕಾರಣ ಹುಡುಕುತ್ತಾ ಇದ್ದರು. ಆದರೆ ನಾನು ಕಟ್ಟಿಸಿದ ಮನೆಯನ್ನು ಬಿಟ್ಟು ಹೋಗುವುದಕ್ಕೆ ನನಗೆ ಮನಸ್ಸಾಗಲಿಲ್ಲ. ಆದರೆ ಒಂದು ದಿನ ನಾನು ಮನೆ ಬಿಟ್ಟು ಹೋಗುವ ಪರಿಸ್ಥಿತಿ ಬಂದಿತ್ತು. ಒಂದು ದಿನ ನನ್ನ ಮಕ್ಕಳು ಅವರ ಪತ್ನಿಯ ಒಡವೆಗಳನ್ನು ಕದ್ದಿರುವ ಪಟ್ಟವನ್ನು ನನ್ನ ಮೇಲೆ ಹಾಕಿದರು.

ಇದರಿಂದ ನಾನು ಮನೆಯ ಹೊರಗೆ ಬಂದು ಬಿಟ್ಟೆ. ಇದನ್ನು ಕೇಳಿದ ಹೋಟೆಲ್ ಮಾಲೀಕ ಸಹ ಭಾವುಕರಾದರು, ವೃದ್ಧರು ಹೇಳುತ್ತಿದ್ದ ಮಾತುಗಳನ್ನ ಕೇಳಿ ಹೋಟೆಲ್ ಮಾಲೀಕರ ಕಣ್ಣಿನಲ್ಲಿ ನೀರು ಸುರಿಯುತ್ತಿತ್ತು. ಇದನ್ನು ನೋಡಿ ಹೋಟೆಲ್ ಮಾಲೀಕ ವೃದ್ಧನಿಗೆ ನೀವು ಪ್ರತಿದಿನ ನಮ್ಮ ಹೋಟೆಲ್ ಗೆ ಬಂದು ಉಚಿತವಾಗಿ ಊಟ ಮಾಡಿ ಎಂದು ಹೇಳಿದಾಗ ಆ ಅಜ್ಜ ಕಣ್ಣೀರನ್ನು ಹಾಕುತ್ತಾ ಧನ್ಯವಾದಗಳು ಎಂದು ಹೇಳುತ್ತಾ ಸ್ವಲ್ಪ ಸಮಯವೂ ಅಲ್ಲೇ ಇರದೆ ಎದ್ದು ಹೋದರು.

ಸ್ನೇಹಿತರೆ ಇಂತಹ ಘಟನೆ ಒಂದಲ್ಲ ಎರಡಲ್ಲ ಪ್ರತಿದಿನ ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ ಪ್ರತಿ ದಿವಸಕ್ಕೆ ಮಕ್ಕಳು ತಮ್ಮ ತಂದೆ ತಾಯಿಯನ್ನು ಹೊರ ಹಾಕುವ ಘಟನೆಗಳು ಸಾಕಷ್ಟು ನಡೆಯುತ್ತಾ ಇದೆ. ಆದರೆ ನೀವು ಜನಿಸಿದಾಗಲೇ ಅಪ್ಪ ಅಮ್ಮ ನಿಮ್ಮನ್ನು ಹೊರಹಾಕಿದರೆ ನಿಮ್ಮ ಕಥೆ ಏನಾಗಬೇಕಾಗಿತ್ತು ನೀವೇ ಒಮ್ಮೆ ಯೋಚನೆ ಮಾಡಿ ಖಂಡಿತವಾಗಿಯೂ ಅಪ್ಪ ಅಮ್ಮನಿಗೆ ಇಂತಹ ನೋವು ನೀಡಬೇಡಿ ವಯಸ್ಸಾದ ಕಾಲಕ್ಕೆ ಅವರನ್ನ ಮಕ್ಕಳಂತೆ ನೋಡಿಕೊಳ್ಳಿ.