ಪುನೀತ್ ರಾಜ್ ಕುಮಾರ್ ಮೆಚ್ಚಿನ ಬೈಕ್ ನಂಬರ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ… ಹಾಗಾದರೆ ಏನಿದರ ಹಿಂದಿನ ಮರ್ಮ ..

204

ಒಬ್ಬೊಬ್ಬರಿಗೆ ಒಂದೊಂದರಲ್ಲಿ ನಂಬಿಕೆ ಇರುತ್ತದೆ ಅದೇ ರೀತಿ ನಮ್ಮ ಭಾರತ ದೇಶದಲ್ಲಿ ಹಲವು ಮಂದಿಗೆ ಈ ಜ್ಯೋತಿಷ್ಯಶಾಸ್ತ್ರ ಎಂಬುದರ ಮೇಲೆ ಬಹಳ ನಂಬಿಕೆ ಇರುತ್ತದೆ ಹಾಗೆ ಜ್ಯೋತಿಷಶಾಸ್ತ್ರದ ಭಾಗವಾಗಿರುವ ಸಂಖ್ಯಾಶಾಸ್ತ್ರವನ್ನು ಸಹ ಜನರು ಬಹಳ ನಂಬುತ್ತಾರೆ. ಹೌದು ಈ ಸಂಖ್ಯಾಶಾಸ್ತ್ರವನ್ನು ಜನರು ನಂಬುವುದು ಅಷ್ಟೇ ಅಲ್ಲ ನಮ್ಮ ದಿನನಿತ್ಯ ಜೀವನದಲ್ಲಿ ನಡೆಯುವ ಕೆಲವೊಂದು ವಿಚಾರಗಳಿಗೂ ಸಹ ಹೋಲಿಕೆ ಮಾಡಿಕೊಂಡು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಸಂಖ್ಯಾಶಾಸ್ತ್ರವನ್ನು ಬಳಸಿಕೊಳ್ಳುತ್ತಾರೆ ಅದರಂತೆ ತಾವು ಮನೆಗೆ ಗಾಡಿ ತೊಂದರೆ ಅಥವಾ ತಮ್ಮ ಮನೆಯ ಸಂಖ್ಯೆ ಇನ್ನೂ ತಮ್ಮ ಜನ್ಮದಿನದ ದಿನಾಂಕದ ಆಧಾರದ ಮೇಲೆ ತಮ್ಮ ಪರೀಕ್ಷಿಸಿಕೊಳ್ಳುತ್ತಾರೆ. ಇನ್ನೂ ಗಾಡಿ ಸಂಖ್ಯೆ ಅಂದಕೂಡಲೆ ಇದೀಗ ವೈರಲ್ ಆಗುತ್ತಲೇ ಇರುವ ವಿಚಾರವೇನೆಂದರೆ ಅದು ಪುನೀತ್ ರಾಜ್ ಕುಮಾರ್ ಅವರ ಗಾಡಿಯ ನಂಬರ್ ಪ್ಲೇಟ್ ಸಂಖ್ಯೆ ಹಾಗಾದರೆ ಏನಿದು ವಿಚಾರ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಎ 2020 ಹಾಗೂ 2021ವರುಷ ನಮ್ಮ ಚಿತ್ರರಂಗಕ್ಕೆ ಬಹಳ ಕರಾಳ ವರ್ಷಗಳು ಅಂತ ಹೇಳಬಹುದು ಒಂದೇ ವರ್ಷದಲ್ಲಿ ಚಿಕ್ಕವಯಸ್ಸಿನ ಅದ್ಭುತ ನಟರನ್ನು ನಾವು ಕಳೆದುಕೊಂಡಿದ್ದೇವೆ ಹಾಗೂ ಸಣ್ಣ ವಯಸ್ಸಿನಲ್ಲೇ ವಿಧಿಯಾಟಕ್ಕೆ ಬಲಿಯಾದ ಚಿರಂಜೀವಿ ಸರ್ಜಾ ನಟ ಸಂಚಾರಿ ವಿಜಯ್ ಹಾಗೂ ಮೊನ್ನೆ ಮೊನ್ನೆ ಅಷ್ಟೇ ಒಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಪುನೀತ್ ರಾಜ್ ಕುಮಾರ್ ಅವರು ಹೌದು ಈ ಮೂವರು ನಟರು ಹುಟ್ಟಿದ್ದು 17ನೇ ತಾರೀಕಿನಂದು. ಈ ಈ ವಿಚಾರ ಕುರಿತು ಈಗಾಗಲೇ ಸಾಕಷ್ಟು ಮಂದಿ ಹಲವು ಚರ್ಚೆಗಳನ್ನು ಮಾಡಿದ್ದು ನಟ ಪುನೀತ್ ಅವರ ಜೀವನದಲ್ಲಿ ನಡೆದಿರುವ ಘಟನೆ ನಿಗೂಢ ಆಗಿದೆ.

ಕಾಕತಾಳೀಯವಾದರೂ ಕೆಲವರು ಅಪ್ಪು ಜೀವನದ ರಹಸ್ಯ ಹಾಗೂ ಅವರ ಸಾವಿನ ಬಗ್ಗೆ ಮುನ್ಸೂಚನೆ ಕೊಡುವಂತಿತ್ತು ಅಂತ ಕೆಲವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ನಟ ಪುನೀತ್ ರಾಜಕುಮಾರ್ ಅವರು ಹುಟ್ಟಿದ್ದು 1975 ಮಾರ್ಚ್ 17ನೇ ತಾರಿಜಕಿ ನಂದು, ಅವರು ಮರಣ ಹೊಂದಿದ್ದು ಅಕ್ಟೋಬರ್ 29ರಂದು. 17 ಮತ್ತು 29ನ್ನು ಒಟ್ಟುಗೂಡಿಸಿದರೆ ಬರುವ ಮೊತ್ತ 46 ಆಗಿದೆ. ನಟ ಪುನೀತ್ ಅವರು ತಮ್ಮ 46ನೆ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಕಾರಣ, ಅವರು ಜನಿಸಿದ ದಿನಾಂಕ ಮತ್ತು ಮರಣ ಹೊಂದಿದ ದಿನಾಂಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಸಂಖ್ಯಾಶಾಸ್ತ್ರ ಎಂಬುದು ಅಪ್ಪು ಅವರ ಜೀವನದಲ್ಲಿ ಕಾಕತಾಳಿಯವೋ ನಿಗೂಢವೋ ಎಂಬುದು ಅರ್ಥವೇ ಆಗುತ್ತಾ ಇಲ್ಲ ಹಾಗೂ ಅಪ್ಪು ಅವರ ಕೊನೆಯ ಚಿತ್ರ ಆಗಿರುವ ಯುವರತ್ನ ಸಿನಿಮಾದಲ್ಲಿ ಅವರು ನಾಯಕ ನಟನಾಗಿ ಅಭಿನಯ ಮಾಡಿರುವ 29ನೇ ಸಿನಿಮಾ ಆಗಿದೆ. ಇನ್ನೂ ಕೆಎ 01 ಪಿಎಸ್ 0029 ಎಂದು ಅದರಲ್ಲಿ ಉಲ್ಲೇಖವಿದ್ದು ನಂಬರ್ ಒನ್ ನಟ ಮತ್ತು 29 ನೇ ಚಿತ್ರ ಎಂಬುದನ್ನು ಈ ಸಂಖ್ಯೆ ಹೇಳುತ್ತಾ ಇತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು, ಅವರು ಅಭಿನಯ ಮಾಡಿರುವ ಚಲನಚಿತ್ರ ಆಗಿರುವ ಯುವರತ್ನ ಸಿನಿಮಾದಲ್ಲಿ ಅವರು ಸೀನ್ ಒಂದರಲ್ಲಿ ಧರಿಸಿರುವ ಜರ್ಸಿ ಮೇಲೆಯೂ ಸಹ, 29 ಎಂದು ಬರೆದಿತ್ತು, ಇನ್ನೂ ಅಕ್ಟೋಬರ್ 29ರಂದು ಅವರು ಮರಣ ಹೊಂದಿರುವುದು ವಿಪರ್ಯಾಸ.

ನಟ ಪುನೀತ್ ಅವರ ಸಾವಿನ ಕುರಿತು ಅಭಿಮಾನಿಗಳು ಕಣ್ಣೀರು ಹಾಕುತ್ತ ಇದ್ದಾರೆ, ಅವರ ಅಂತಿಮ ದರ್ಶನಕ್ಕೆ 25 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಪುನೀತ್ ಅವರ ಸಮಾಧಿ ದರ್ಶನ ಪಡೆಯುವುದಕ್ಕೆ ಇವತ್ತಿಗೂ ಸಹ ಸಾವಿರ ಸಾವಿರ ಲೆಕ್ಕದಲ್ಲಿ ಜನರು ಬರುತ್ತ ಇದ್ದು, ವೀಕೆಂಡ್ ನಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚು ಇರುತ್ತದೆ. ನಿಜಕ್ಕೂ ಇಂತಹ ವ್ಯಕ್ತಿಯನ್ನು ಕಳೆದುಕೊಂಡಿರುವ ನಾವುಗಳು ನಿಜಕ್ಕೂ ಪಾಪಿಗಳು ಆದರೆ ಅಪ್ಪು ಅವರು ಸದಾ ಕರುನಾಡ ರಾಜಕುಮಾರ ಅವರು ಸದಾ ಅಮರರಾಗಿರುತ್ತಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ.

WhatsApp Channel Join Now
Telegram Channel Join Now