ಬೆಕ್ಕಿನ ಮರಿಗಳು ಎಂದುಕೊಂಡು ಆ ಬೆಕ್ಕಿನ ಮರಿಗಳನ್ನು ಮನೆಗೆ ತಂದ ಹುಡುಗ ನಂತರ ಆಗಿದ್ದೇನು…ಗೊತ್ತ

100

ಹಲೋ ಫ್ರೆಂಡ್ಸ್ ಇವತ್ತಿನ ಈ ಲೇಖನದಲ್ಲಿ ತಿಳಿಯೋಣ ಒಂದು ಪ್ರಾಣಿ ಮತ್ತು ಮಗುವಿನ ನಡುವೆ ಬೆಳೆದ ಒಂದು ಬಾಂಧವ್ಯದ ಕಥೆಯನ್ನು ಹಾಗೂ ಆ ಚಿರತೆ ಮರಿಗಳನ್ನು ಬೆಕ್ಕಿನ ಮರಿ ಎಂದು ತಂದು ಸಾಕಿದ ಆ ಪುಟ್ಟ ಹುಡುಗ ನಿಜಕ್ಕೂ ಧೈರ್ಯಶಾಲಿ ಅಲ್ವಾ ಹಾಗಾದರೆ,ಆ ಹುಡುಗ ಮತ್ತು ಹುಲಿ ಮರಿಯ ಕತೆ ಏನಾಯ್ತು ಮುಂದೆ ಅನ್ನೋದನ್ನು ತಿಳಿಯೋಣ ಬನ್ನಿ ಈ ಕೆಳಗಿನ ಲೇಖನದಲ್ಲಿ ನೀವು ಕೂಡ ಈ ಕಥೆಯನ್ನು ಓದುತ್ತಿದ್ದರೆ ನಿಮ್ಮ ಫ್ರೆಂಡ್ಸ್ ಗಳೊಂದಿಗೂ ಕೂಡ ಇದನ್ನು ಶೇರ್ ಮಾಡಿ ಮತ್ತು ನಿಮಗೂ ಕೂಡ ಯಾವುದಾದರೂ ಪೆಟ್ಟ್ ಅನಿಮಲ್ ಇದ್ದರೆ ಅದನ್ನು ನಮಗೆ ಮಿಸ್ ಮಾಡದೇ ಕಾಮೆಂಟ್ ಮಾಡಿ.

ನಮ್ಮ ಬಾಲ್ಯದಲ್ಲಿ ನಾವು ಈ ರೀತಿ ಒಂದಲ್ಲ ಒಂದು ಬಾರಿ ಮಾಡಿಯೇ ಇರುತ್ತೇವೆ ಅದೇನೆಂದರೆ ರಸ್ತೆಗಳ ಅಕ್ಕಪಕ್ಕದಲ್ಲಿ ಯಾವುದಾದರೂ ಮುದ್ದಾದ ಬೆಕ್ಕಿನ ಮರಿ ನಾಯಿ ಮರಿಯನ್ನು ಅಥವಾ ಪಕ್ಷಿ ಮರಿಯೊ ಕಂಡರೆ ಅದನ್ನು ಮನೆಗೆ ತಂದು ಸಾಕುತ್ತಿದ್ದೆವು. ಅದೆಲ್ಲವೂ ಬಾಲ್ಯದ ಒಂದು ಸವಿ ಸವಿ ನೆನಪಾಗುತ್ತಿದ್ದವು .ಅದೇ ರೀತಿಯಲ್ಲಿ ನಮ್ಮ ಈ ಕಥೆಯಲ್ಲಿಯೂ ಕೂಡ ಒಬ್ಬ ಪುಟಾಣಿ ಹುಡುಗ ಆ ಹುಡುಗ ಆಂಧ್ರಪ್ರದೇಶದ ವಿಶಾಖಪಟ್ಟಣಂ ಗೆ ಸೇರಿದ ಗುಂಡೂರು ಎಂಬ ಹಳ್ಳಿ ಅರಣ್ಯ ಪಕ್ಕದಲ್ಲಿಯೇ ಇದೆ ಈ ಊರಿನಲ್ಲಿ ಪುಟ್ಟ ಹುಡುಗ ಆಟವಾಡುತ್ತಿರುವಾಗ ಎರಡು ಮರಿಗಳನ್ನು ಕಂಡು ಅದು ಬೆಕ್ಕಿನ ಮರಿ ಎಂದು ಮನೆಗೆ ತಂದು ಸಾಕಿಕೊಂಡ.

ಆ ಎರಡು ಪುಟ್ಟ ಮರಿಗಳ ಜೊತೆ ಹೆಚ್ಚು ಬಾಂಧವ್ಯವನ್ನು ಮೂಡಿಸಿಕೊಂಡ ಹುಡುಗ ಪ್ರತಿದಿನ ಆ ಎರಡು ಮರಿಗಳೊಂದಿಗೆ ಆಟವನ್ನು ಆಡುತ್ತ ತನ್ನ ಸಮಯವನ್ನು ಕಳೆಯುತ್ತಿದ್ದ. ಸ್ವಲ್ಪ ದಿನಗಳು ಕಳೆದ ಮೇಲೆ ಊರಿನವರೆಲ್ಲ ಸೇರಿ ಆ ಮರಿಗಳನ್ನು ಸರಿಯಾಗಿ ಪರಿಶೀಲಿಸಿ ಅದು ಬೆಕ್ಕಿನ ಮರಿಗಳೆಲ್ಲ ಚಿರತೆಯ ಮರಿ ಎಂದು ಹೇಳಿದರೂ ನಂತರ ಈ ವಿಚಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಕೂಡ ತಿಳಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಆ ಹುಡುಗನ ಮನೆಗೆ ಬಂದು ಮರಿಗಳನ್ನು ಕರೆದುಕೊಂಡು ಹೋದರು.

ಹುಡುಗನು ಮರಿಗಳೊಂದಿಗೆ ಆಟವಾಡುತ್ತಾ ಸುಮಾರು ಏಳು ದಿನಗಳ ಕಾಲ ಕಳೆದು ಹೋಯಿತು ಆ ಮರಿಗಳಿಗೆ ಹಾಲುಣಿಸುವುದು ಮರಿಗಳ ಕೆಲಸ ಎಲ್ಲವನ್ನೂ ಕೂಡ ಉಡುಗೊರೆ ಮಾಡುತ್ತಿದ್ದ ಕಾರಣ ಅದರ ಜೊತೆ ಉತ್ತಮವಾದ ಬಾಂಧವ್ಯ ಕೂಡ ಬೆಳೆದಿತ್ತು ಆದರೆ ಆ ಮರಿಗಳನ್ನು ಕರೆದುಕೊಂಡು ಹೋಗುವಾಗ ಆತನಿಗೆ ಬಹಳ ಬೇಸರವಾಯಿತು ಜೊತೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಮಾತುಗಳನ್ನ ಕೇಳಿ ಊರಿನವರು ಶಾಕ್ ಆದರು.

ಅರಣ್ಯ ಇಲಾಖೆಯವರು ಊರಿನವರಿಗೆ ಹೇಳಿದ ಮಾತುಗಳೇನು ಅಂದರೆ ಆ ಹುಡುಗ ತುಂಬಾ ಅದೃಷ್ಟಶಾಲಿ ಯಾಕೆ ಅಂದರೆ ಆ ಮರಿಗಳ ತಾಯಿ ಮರಿಗಳನ್ನು ಕಳೆದುಕೊಂಡದ್ದಕ್ಕೆ ತುಂಬಾನೇ ಕೋಪ ಗೊಂಡಿರುತ್ತದೆ ಮರಿಗಳನ್ನು ಆ ಹುಡುಗನೇ ಎತ್ತಿಕೊಂಡು ಬರುವುದನ್ನು ಕಂಡಿದ್ದರೆ ಚಿರತೆ ಆ ಹುಡುಗನನ್ನು ಸುಮ್ಮನೆ ಬಿಡುತ್ತಿರಲಿಲ್ಲ .ಎಂದು ಹೇಳಿದರೂ ಹಾಗೆ ಮನುಷ್ಯ ಕೂಡ ತನ್ನ ದುರಾಸೆಯಿಂದ ಆ ಹಳ್ಳಿಯ ಸುತ್ತ ಇರುವ ಅರಣ್ಯ ಪ್ರದೇಶಗಳನ್ನು ಸ್ವಚ್ಛ ಪಡಿಸಿಕೊಂಡು ವ್ಯವಸಾಯ ಮಾಡಲು ಶುರು ಮಾಡಿದ್ದರು ಆದರೆ ಚಿರತೆ ಅದು ಅರಣ್ಯ ಪ್ರದೇಶವೆಂದು ತನ್ನ ಮರಿಯನ್ನು ಅಲ್ಲೇ ಬಿಟ್ಟು ಬೇಟೆಯಾಡಲೆಂದು ಹೋಗಿತ್ತು. ಈ ಕಥೆಯಿಂದ ನಾವು ತಿಳಿದುಕೊಳ್ಳಬೇಕಾದದ್ದು ಏನು ಅಂದರೆ ಅರಣ್ಯವನ್ನು ಉಳಿಸಿ ಅರಣ್ಯವನ್ನು ಬೆಳೆಸಿ ಧನ್ಯವಾದ.