ಬೆಳಿಗ್ಗೆ ಕಾಲಿಹೊಟ್ಟೆಯಲ್ಲಿ ಈ ಕಾಯಿಯನ್ನ ತಿಂದರೆ ಶರೀರದಲ್ಲಿ ಬರಬಹುದಾದ ಭಯಂಕರ ಕಾಯಿಲೆಗಳಿಂದ ದೂರ ಇರಬಹುದು ..

233

ಪೇರಲೆ ಎಲೆಯ ಪ್ರಯೋಜನ ನಿಮ್ಮ ಏನೇ ಸಮಸ್ಯೆ ಇದ್ದರೂ ದೂರ ಮಾಡುತ್ತೆ ಅದು ಹೇಗೆ ಗೊತ್ತಾ ಈ ಪೇರಲೆ ಎಲೆಯಲ್ಲಿರುವ ಅದ್ಭುತವಾದ ಅರೋಗ್ಯಕರ ಗುಟ್ಟು.ನಮಸ್ಕಾರಗಳು ಓದುಗರೇ ಇವತ್ತಿನ ಲೇಖನಿಯಲ್ಲಿ ನಿಮ್ಮ ಆರೋಗ್ಯ ವೃದ್ಧಿಸಿ ಕೊಳ್ಳು ವಂತಹ ಹಾಗೂ ಪ್ರಕೃತಿಯಲ್ಲಿ ಅಡಗಿರುವಂತಹ ಈ ಶಕ್ತಿಯ ಅದ್ಭುತವಾದ ಗುಟ್ಟು ವೊಂದರ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದಾಗ ನಿಮಗೆ ಗೊತ್ತಾಗುತ್ತದೆ ನಮ್ಮ ಪ್ರಕೃತಿ ಮಾತೆ ಎಂತಹ ಅದ್ಭುತವಾದ ಶಕ್ತಿ ತನ್ನಲ್ಲಿ ಅಡಗಿಸಿಕೊಂಡಿದ್ದಾಳೆಂದು.

ಪ್ರಿಯ ಸ್ನೇಹಿತರೆ ಇಂದಿನ ಫಾಸ್ಟ್ ಯುಗದಲ್ಲಿ ಎಲ್ಲರೂ ಕೂಡ ಫಾಸ್ಟ್ ಫುಡ್ ಅನ್ನು ಇಷ್ಟಪಡುತ್ತಾರೆ ಆದರೆ ಇದರಿಂದ ಫಾಸ್ಟಾಗಿ ಆರೋಗ್ಯ ಏನು ಸಿಗೋದಿಲ್ಲ.ಹೌದು ನಿಮ್ಮ ಆರೋಗ್ಯ ವೃದ್ಧಿಯಾಗಬೇಕು ಅಂದರೆ ನೀವು ಫಾಸ್ಟ್ ಆಗಿ ಆರೋಗ್ಯವಂತರಾಗಬೇಕು ಅಂದರೆ ಪ್ರಕೃತಿಯ ಅವಿಸ್ಮರಣೀಯ ಶಕ್ತಿಯ ಗುಟ್ಟನ್ನು ನೀವು ತಿಳಿಯಬೇಕು ಮತ್ತು ಆ ಗುಟ್ಟನ್ನು ನೀವು ತಿಳಿದು ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡಬೇಕು ಆಗ ನೀವು ಆರೋಗ್ಯವಂತರಾಗಿ ಆರೋಗ್ಯವೇ ಭಾಗ್ಯ ಅಂತ ಅಂದುಕೊಳ್ಳುತ್ತೀರ.

ಹಾಗಾಗಿ ಇಂದಿನ ಲೇಖನದಲ್ಲಿ ನಾವು ಎಲ್ಲರೂ ಗೂ ಇಷ್ಟ ಆಗುವಂತಹ ಪೇರಳೆ ಹಣ್ಣಿನ ಮರದಲ್ಲಿ ಅಡಗಿರುವಂತಹ ಗುಟ್ಟೊಂದನ್ನು ಹೇಳಲಿದ್ದೇವೆ ಹೌದು ಆ ಗುಟ್ಟು ಬೇರೆ ಯಾವುದೂ ಅಲ್ಲ ಪೇರಲೆ ಹಣ್ಣಿನ ಎಲೆಗಳು ಈ ಎಲೆಗಳು ಎಂತಹ ಅದ್ಭುತವಾದ ಶಕ್ತಿಯನ್ನು ಹೊಂದಿದೆ ಅಂದರೆ ತನ್ನಲ್ಲಿ ಫ್ಲೆವನಾಯ್ಡ್ಸ್ ನಿಂದ ಹಿಡಿದು ಆ್ಯಂಟಿ ಆಕ್ಸಿಡೆಂಟ್ ನಿಂದ ಹಿಡಿದು ಸಕ್ಕರೆ ಕಾಯಿಲೆ ಬಾರದಿರುವುದಕ್ಕೆ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಬೇಕು ಅಂತಹ ಉತ್ತಮ ಪೋಷಕಾಂಶಗಳನ್ನು ಕೂಡ ತನ್ನಲ್ಲಿ ಅಡಗಿಸಿಕೊಂಡಿದೆ ಈ ಪೇರಲೆ ಎಲೆ.

ನಿಮಗೇನಾದರೂ ಮಲಬದ್ಧತೆ ಕಾಡುತ್ತಿದೆಯೇ ಹೌದು ಬೆಳಿಗ್ಗೆ ಎದ್ದಕೂಡಲೇ ನಿತ್ಯ ಕರ್ಮಗಳನ್ನ ಮುಗಿಸಿ ಕೆಲವರಿಗೆ ದೊಡ್ಡ ಸಂಕಟ ಆಗಿರುತ್ತದೆ ಆದರೆ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕೇವಲ 3ಚಿಗುರೆಲೆಯ ಪೇರಲೆ ಎಲೆಯನ್ನು ತಿನ್ನುವುದರಿಂದ ಮಲಬದ್ಧತೆ ನಿಮ್ಮನ್ನು ಕಾಡುವುದೇ ಇಲ್ಲ ಪ್ರತಿದಿನದ ಬೆಳಿಗ್ಗೆಯನ್ನು ನೀವು ಫ್ರೆಶ್ ಆಗಿ ಕಳೆಯಬಹುದು.

ರಕ್ತ ಕೆಟ್ಟಿದೆಯಾ ಮತ್ತು ಹೊಟ್ಟೆಯಲ್ಲಿ ಜಂತು ಹುಳುಗಳು ಆಗಿದೆಯಾ ಹಾಗಾದರೆ ಚಿಂತೆ ಬೇಡ ಪೇರಲೆ ಎಲೆ ತಿನ್ನಿ ಸಾಕು.ಹೌದು ಈ ಎಲೆಯು ಕೆಟ್ಟಿರುವ ರಕ್ತವನ್ನು ಶುದ್ಧಿ ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ ಅಷ್ಟೇ ಅಲ್ಲ ರಕ್ತಹೀನತೆಯನ್ನು ಕೂಡ ಪರಿಹಾರ ಮಾಡುತ್ತದೆವಿಟಮಿನ್ ಸಿ ಜೀವಸತ್ವ ಎಲ್ಲರಿಗೂ ಕೊಡಬೇಕು ಈ ವಿಟಮಿನ್ ಸಿ ಜೀವಸತ್ವ ನ ಹುಳಿ ಇರುವ ಹಣ್ಣುಗಳನ್ನು ತಿನ್ನುವುದರಿಂದ ದೊರೆಯುತ್ತವೆ ಉದಾಹರಣೆಗೆ ಕಿತ್ತಳೆ ಹಣ್ಣು ಹೌದು ಅಧಿಕವಾದ ವಿಟಮಿನ್ ಸಿ ಜೀವಸತ್ವ ಕಿತ್ತಳೆಹಣ್ಣಿನಲ್ಲಿ ಇದೆ ಅಂತ ನಾವು ಅಂದುಕೊಂಡಿದ್ದೇವೆ.

ಆದರೆ ಪೇರಲೆ ಹಣ್ಣಿಗಿಂತ ಪೇರಲೆ ಎಲೆಯಲ್ಲಿ ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಜೀವಸತ್ವ ಕ್ಕಿಂತ ಅಧಿಕವಾಗಿ ವಿಟಮಿನ್ ಸಿ ಜೀವಸತ್ವ ಇದೆ ಹಾಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವಲ್ಲಿಯೂ ಕೂಡ ಈ ಪೇರಲೆ ಹಣ್ಣು ಮತ್ತು ಇದರ ಎಲೆಗಳು ಅತ್ಯದ್ಭುತವಾಗಿದೆ

ನೀವೂ ಸಹ ನಿಮ್ಮ ಆಲ್ರೌಂಡ್ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ಈ ಪೇರಲೆ ಎಲೆಯನ್ನೂ ತಿನ್ನುತ್ತ ಬನ್ನಿ. ಅಷ್ಟೆ ಅಲ್ಲ ಮುಖದ ಮೇಲೆ ಪಿಂಪಲ್ ಜಾಸ್ತಿಯಾಗಿದೆ ಸುಕ್ಕು ಹೆಚ್ಚಾಗಿದೆ ಅಂದರೆ ಪೇರಲೆ ಎಲೆಗಳನ್ನು ಅರೆದು ಅದರ ರಸವನ್ನು ಶೇಖರಣೆ ಮಾಡಿಕೊಂಡು ಅದನ್ನು ಮುಖಕ್ಕೆ ಹಚ್ಚುತ್ತಾ ಬಂದರೆ ಸುಕ್ಕು ಕೂಡ ನಿವಾರಣೆಯಾಗುತ್ತದೆ ಹಾಗೂ ಈ ಎಲೆಗಳನ್ನು ತಿನ್ನುವುದರಿಂದ ಕೂಡ ನಿಮ್ಮ ತ್ವಚೆಯ ಕಾಂತಿ ಹೆಚ್ಚುತ್ತದೆ.