ಮಂಗಳಮುಖಿ ಮಧ್ಯರಾತ್ರಿ ಮನೆಗೆ ಹೋಗುತ್ತಿದ್ದ ಹುಡುಗರಿಗೆ ಹೀಗೆ ಮಾಡಿದಳು ನಂತರ ಆಗಿದ್ದೇನು …!!!

104

ಸಾಮಾನ್ಯವಾಗಿ ಈ ಸಮಾಜದಲ್ಲಿ ಮಂಗಳಮುಖಿಯರು ಅಂದರೆ ಅವರನ್ನು ಬಹಳ ಕೀಳಾಗಿ ನೋಡುತ್ತಾರೆ ಇವತ್ತಿಗೂ ಸಹ ಮಂದಿ ವಿದ್ಯಾವಂತರಾದರೂ ಸಹ ಮಂಗಳಮುಖಿಯರನ್ನು ಕೀಳಾಗಿ ನೋಡುತ್ತಾರೆ ಹಾಗೂ ಅವರನ್ನು ತಮ್ಮಂತೆ ಮನುಷ್ಯರು ಎಂದು ಯಾರು ಭಾವಿಸುವುದೇ ಇಲ್ಲ ಆದರೆ ಮಂಗಳಮುಖಿಯರು ಇವತ್ತಿನ ಕಾಲದಲ್ಲಿ ಅವರು ಸಹ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಂಗಳಮುಖಿಯರು ಸಹ ನಮ್ಮಂತೆ ಮನುಷ್ಯರು ಅವರಿಗೂ ಸಹ ಮಾನವೀಯತೆ ಇದೆ ಎಂಬುದಕ್ಕೆ ನಾವು ಈ ದಿನ ತಿಳಿಸುವ ಈ ನೈಜ ಘಟನೆ ಸಾಕ್ಷಿಯಾಗಿದೆ. ಹೌದು ಬೆಂಗಳೂರಿನವರಾದ ಹರೀಶ್ ಮತ್ತು ಸುರೇಶ್ ಎಂಬುವವರು ಚೆನ್ನೈಗೆ ಹೋಗಿ ಅಲ್ಲಿ ಕೆಲಸ ಮಾಡುತ್ತಾ ಇರುತ್ತಾರೆ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕರ ಬಾಳಿನಲ್ಲಿ ನಡೆದ ಈ ಘಟನೆ ಅದೇನು ಅತ್ತ ತಿಳಿಯಿರಿ ಕೆಳಗಿನ ಲೇಖನದಲ್ಲಿ.

ಹರೀಶ್ ಮತ್ತು ಸುರೇಶ್ ಮೂಲತಃ ಬೆಂಗಳೂರಿನವರಾಗಿದ್ದು ರೂ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದರು ಪ್ರತಿ ದಿವಸ ಸಂಜೆಯ ನಂತರ ಆಫೀಸಿನಿಂದ ಹೋಗುವಾಗ ಬಸ್ ಇಳಿದು ಫುಟ್ ಪಾತ್ ನಲ್ಲಿ ನಡೆದು ಹೋಗುವಾಗ ಮಂಗಳಮುಖಿಯರನ್ನು ಕಂಡು ಇವರಿಬ್ಬರೇ ಅವರಿಗೆ ಬೈದು ಕೊಳ್ಳುತ್ತ ಹೋಗುತ್ತಾ ಇರುತ್ತಾರೆ ಇವರಿಗೆ ಇದೇ ಕೆಲಸಾನಾ ಬೇರೆ ಕೆಲಸವೇ ಇಲ್ಲವಾ ಎಂದು ಬೈದು ಹೋಗುತ್ತಿದ್ದ ಹರೀಶ್ ಮತ್ತು ಸುರೇಶ್ ಅವರು ಒಮ್ಮೆ ತಿಂಗಳಿನ ಸಂಬಳವನ್ನು ತೆಗೆದುಕೊಂಡು ಬರುತ್ತಿರುವಾಗ ಸುರೇಶ್ ಬಳಿ ಪರ್ಸ್ ಇರದ ಕಾರಣ ಸುರೇಶ್ ಬಳಿ ಇರುವ ಹಣವನ್ನು ಸಹ ಹರೀಶ್ ಬಳಿಯೇ ನೀಡಿರುತ್ತಾರೆ ಒಟ್ಟಾರೆಯಾಗಿ ಹರೀಶ್ ಬಳಿ ನಲವತ್ತು ಸಾವಿರ ರೂಪಾಯಿಗಳು ಅವನ ಜೇಬಿನಲ್ಲಿ ಇರುತ್ತದೆ.

ಬಸ್ ನಲ್ಲಿ ಪ್ರಯಾಣ ಮಾಡಿ ಮತ್ತೆ ಫುಟ್ ಪಾತ್ ನಲ್ಲಿ ನಡೆದು ಮನೆಗೆ ಹೋಗುವಾಗ ಅವತ್ತಿನ ದಿವಸವೂ ಸಹ ಸುರೇಶ್ ಮತ್ತು ಹರೀಶ್ ಮಂಗಳಮುಖಿಯರನ್ನು ಬೈದುಕೊಂಡೇ ಹೋಗುತ್ತಾರಾ ಮನೆಗೆ ಬಂದ ನಂತರ ಹರೀಶ್ ಮತ್ತು ಸುರೇಶ್ ಗೆ ಶಾಕ್ ಕಾದಿರುತ್ತದೆ ಜೇಬಿನಲ್ಲಿದ್ದ ನಲ್ವತ್ತು ಸಾವಿರ₹ಕಾಣುತ್ತ ಇರುವುದಿಲ್ಲ ಇಬ್ಬರೂ ಬೇಸರಗೊಂಡು ಮಾರನೆ ದಿವಸ ಆಫೀಸ್ ಗೆ ಹೋಗುತ್ತಾರೆ ಆಫೀಸ್ ನಲ್ಲಿರುವ ಹರೀಶ್ ಗೆ ಕಾಲ್ ಬರುತ್ತದೆ. ಹುಡುಗಿಯೊಬ್ಬಳು ಮಾತನಾಡಿ ನಿಮ್ಮ ಪರ್ಸ್ ನನ್ನ ಬಳಿಯೇ ಇದೆ ಎಂದು ಹೇಳಿ ತಾನು ಇರುವ ಅಡ್ರಸ್ ಅನ್ನು ಹೇಳುತ್ತಾಳೆ. ಸುರೇಶ್ ಹಾಗೂ ಹರೀಶ್ ಗೆ ಖುಷಿಯಾಗಿ ಆ ಹುಡುಗಿ ಹೇಳಿದ ವಿಳಾಸಕ್ಕೆ ಹೋದಾಗ ಅಲ್ಲಿ ಆ ಹೋಟೆಲ್ ನಲ್ಲಿ 4ಜನ ಹುಡುಗರು ಹಾಗೂ ಮಂಗಳಮುಖಿಯೊಬ್ಬಳು ಕುಳಿತಿರುತ್ತಾಳೆ.

ಆಗಲೂ ಕೂಡ ಮಂಗಳಮುಖಿ ಅನ್ನೋ ಬೈದುಕೊಳ್ಳುತ್ತ ಹರೀಶ್ ಮತ್ತು ಸುರೇಶ್ ಕರೆ ಮಾಡಿದ ಹುಡುಗಿಗೆ ಮತ್ತೆ ಹೋಟೆಲ್ ನಿಂದ ಹೊರ ಬಂದು ಕರೆ ಮಾಡುತ್ತಾರೆ. ಮಂಗಳಮುಖಿ ಹೊರಬಂದು ನಿಮ್ಮ ಪರ್ಸ್ ನನ್ನ ಬಳಿಯೇ ಇದೆ ತೆಗೆದುಕೊಳ್ಳಿ ನೀವು ಇದನ್ನು ಬಸ್ ಸ್ಟಾಂಡ್ ಬಳಿ ಬೆಳೆಸಿಕೊಂಡು ಹೋಗಿದ್ದೀರಿ ಎಂದು ಆ ಮಂಗಳಮುಖಿ ಹರೀಶ್ ಪರ್ಸನ್ನು ಹಿಂದಿರುಗಿಸುತ್ತಾಳೆ. ಇದರಿಂದಲೇ ತಿಳಿಯುತ್ತದೆ ಮಂಗಳಮುಖಿಯರು ಅಂದರೆ ಅವರೂ ಸಹ ಮನುಷ್ಯರೆ ಅವರಿಗೂ ಸಹ ಮಾನವೀಯತೆ ಇರುತ್ತದೆಯೆಂದು ಹಾಗೂ ಅಂದು ತಮ್ಮನ್ನು ತಾವು ಬೈದುಕೊಳ್ಳುತ್ತಾ ಅರಿವು ಮೂಡಿಸಿಕೊಂಡು ಹರೀಶ್ ಮತ್ತು ಸುರೇಶ್ ಆ ಮಂಗಳಮುಖಿಗೆ ಧನ್ಯವಾದಗಳನ್ನು ತಿಳಿಸಿ ಹೋಗುತ್ತಾರೆ. ಇದರಂತೆ ನೀವೂ ಸಹ ನಿಮ್ಮ ಆಲೋಚನೆ ಅನ್ನೋ ಬದಲಾವಣೆ ಮಾಡಿಕೊಳ್ಳಿ ಮಂಗಳಮುಖಿಯರು ಸಹ ನಮ್ಮಂತೆ ಮನುಷ್ಯರು ಅವರಿಗೂ ಸಹ ಈ ಸಮಾಜದಲ್ಲಿ ಸ್ಥಾನವನ್ನು ನೀಡಿ ಬೆಲೆ ನೀಡಿ ಧನ್ಯವಾದ.