ಮನೆಯಲ್ಲಿ ಸಂಜೆ ಆಗುತ್ತಿದ್ದಂತೆ ಈ ಒಂದು ವಸ್ತುವನ್ನ ಮನೆಯ ಕೋಣೆಯಲ್ಲಿ ಇಟ್ಟರೆ ಸಾಕು ಸೊಳ್ಳೆಗಳು ನಿಮ್ಮ ಮನೆಯ ಆಜು ಬಾಜು ಕೂಡ ಬರೋದೇ ಇಲ್ಲ..

137

ಸೊಳ್ಳೆಗಳ ನಿವಾರಣೆಗೆ ಮಾಡಿ ಈ ಪರಿಹಾರ ಇದರಿಂದ ಮನೆಯಲ್ಲಿ ಸೊಳ್ಳೆಗಳು ಕ್ಷಣಮಾತ್ರದಲ್ಲಿಯೇ ಪರಿಹಾರವಾಗುತ್ತದೆ ಈ ಮನೆಮದ್ದನ್ನು ಮಾಡುವುದಕ್ಕೆ ಕೇವಲ ಸರಳ ಪದಾರ್ಥಗಳ ಅಗತ್ಯತೆ ಇರುತ್ತದೆ ಅಷ್ಟೆಹಾಗಾಗಿ ಮನೆಯಿಂದ ಓಡಿಸೋದಕ್ಕೆ ನೀವು ಹೆಚ್ಚು ಕಷ್ಟ ಪಡಬೇಕಾಗಿಲ್ಲ ಕೈಗೆಟಕುವ ಬೆಲೆಯಲ್ಲಿ ದೊರೆಯುವ ಪದಾರ್ಥಗಳನ್ನು ಬಳಸಿ ಯಾವುದೇ ತರಹದ ಅಡ್ಡಪರಿಣಾಮಗಳು ಮನೆಯ ಸದಸ್ಯರ ಮೇಲೆ ಉಂಟಾಗದೆ ಮನೆಯಿಂದ ಸೊಳ್ಳೆಗಳನ್ನು ಓಡಿಸಬಹುದು

ಬನ್ನಿ ಮಾಹಿತಿ ಕುರಿತು ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ ನಿಮ್ಮ ಮನೆಯಲ್ಲಿಯೂ ಕೂಡ ಸೊಳ್ಳೆಗಳ ಕಾಟ ಇದ್ದಲ್ಲಿ ಈ ಕೆಲವೊಂದು ಮನೆ ಮದ್ದುಗಳನ್ನು ಪಾಲಿಸಿ ಮನೆಯಿಂದ ಸೊಳ್ಳೆಗಳನ್ನು ಓಡಿಸಿ.ಹೌದು ಪ್ರತಿದಿನ ಸಂಜೆಯಾಗುತ್ತಿದ್ದ ಹಾಗೆ ಸೊಳ್ಳೆ ಮನೆಯೊಳಗೆ ಓಡಿ ಬರುತ್ತದೆ ಈ ಸೊಳ್ಳೆ ಮನೆಯೊಳಗೆ ಬಂದರೆ ಮನೆಯಲ್ಲಿ ಸದಸ್ಯರ ಪರದಾಟ ಹೇಳತೀರದು, ಅದರಲ್ಲಿಯೂ ಮಕ್ಕಳ ಕಾಳಜಿ ಮಾಡುವುದು ಅಷ್ಟೇ ಕಷ್ಟವಾಗಿರುತ್ತದೆ, ಯಾಕೆ ಅಂತೀರಾ ಹೌದು ನಾವು ಸೊಳ್ಳೆ ಬಂದಾಗ ಏನು ಮಾಡ್ತೇನೆ ಸೊಳ್ಳೆ ಹೋಗಲಿ ಎಂದು ಕಾಯಿಲ್ ಹಚ್ಚುತ್ತೇವೆ ಅಥವಾ ಸೊಳ್ಳೆ ಓಡಿಸುವ ಲಿಕ್ವಿಡ್ ಹಾಕುತ್ತೇವೆ ಆದರೆ ಇದೆಲ್ಲವೂ ತಕ್ಷಣಕ್ಕೆ ಪರಿಹಾರ ನೀಡಿದರು

ಮನೆಯಲ್ಲಿ ಮಕ್ಕಳು ಇದ್ದರೆ ಅಥವಾ ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆಗಳಿಂದ ಬಳಲುತ್ತಿದ್ದವರು ಇದ್ದರೆ ಈ ಲಿಕ್ವಿಡ್ ಕಾಯಿಲ್ ಇದರಿಂದ ಸಾಕಷ್ಟು ತೊಂದರೆಗಳು ಆಗುತ್ತದೆ ಮತ್ತು ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಹಾಗಾಗಿ ಇಂಥ ಹೊಸ ಪರಿಹಾರಗಳನ್ನು ಬಳಸುವುದಕ್ಕಿಂತ ಕೆಲವೊಂದು ನೈಸರ್ಗಿಕ ಪರಿಸರವನ್ನು ಪಾಲಿಸುವ ಮೂಲಕ ಸೊಳ್ಳೆಗಳಿಂದ ಪರಿಹಾರ ಪಡೆದುಕೊಳ್ಳಿ

ಮೊದಲನೆಯದಾಗಿ ಮಾಡಬಹುದಾದ ಪರಿಹರ ಏನಪ್ಪಾ ಅಂದರೆ ಟೀ ಟ್ರೀ ಆಯಿಲ್ ಇದು ಮಾರುಕಟ್ಟೆಯಲ್ಲಿ ಮತ್ತು ಆನ್ ಲೈನ್ ನಲ್ಲಿ ದೊರೆಯುತ್ತದೆ ಈ ಟೀ ಟ್ರೀ ಆಯಿಲ್ ಅನ್ನು ನೀರಿಗೆ ಮಿಶ್ರಣ ಮಾಡಿ ಬಾಡಿ ಲೋಷನ್ ತರಹ ನಿಮ್ಮ ಕೈ ಕಾಲುಗಳಿಗೆ ಲೇಪ ಮಾಡಿಕೊಳ್ಳಬೇಕು ಇದರಿಂದ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ ಮತ್ತು ಮಕ್ಕಳಿಗೂ ಕೂಡ ಹಚ್ಚುವುದರಿಂದ ಚರ್ಮದ ಮೇಲೆ ಯಾವುದೇ ತರಹದ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ ಯಾಕೆ ಅಂದರೆ ಈ ಆಯಿಲ್ ನಲ್ಲಿ ಓದಿ ತರದ ಕೆಮಿಕಲ್ ಇರುವುದಿಲ್ಲ

ಎರಡನೆಯದಾಗಿ ಮಾಡಬಹುದಾದ ಪರಿಹಾರ ಪಾತ್ರೆಗೆ ನೀರು ಹಾಕಿ ಅದಕ್ಕೆ ಕಾಫಿ ಪುಡಿ ಹಾಕಿ ನೀರನ್ನು ಕುದಿಸಿ ಸೊಳ್ಳೆಗಳು ವಿಪರೀತ ಇರುವ ಜಾಗಕ್ಕೆ ಆ ಪಾತ್ರೆಯನ್ನು ತೆಗೆದುಕೊಂಡು ಹೋಗಿ ಇಡಬೇಕು ಇದರಿಂದ ಕೂಡ ಯಾವುದೇ ಕಾರಣಕ್ಕೂ ಆ ವಾತಾವರಣದಲ್ಲಿ ಸೊಳ್ಳೆಗಳು ಇರುವುದಿಲ್ಲಕೊಬ್ಬರಿ ಎಣ್ಣೆಗೆ ಪಚ್ಚ ಕರ್ಪೂರವನ್ನು ಪುಡಿಮಾಡಿ ಆ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರ ಮಾಡಿ ಸೊಳ್ಳೆ ಇರುವ ಜಾಗದಲ್ಲಿ ಇಡುವುದರಿಂದ ಕರ್ಪೂರದ ಗ್ರಾಮಕ್ಕೆ ಸೊಳ್ಳೆಗಳು ಬರುವುದಿಲ್ಲ ನೀವು ಕೂಡ ಒಮ್ಮೆ ಬೇಕಾದರೆ ಟ್ರೈ ಮಾಡಿ ನೋಡಿ

ನಿಂಬೆಹಣ್ಣನ್ನು ಹೋಳಾಗಿಸಿ ಅದರ ಮೇಲೆ ಲವಂಗವನ್ನು ಚುಚ್ಚಿ ಸೊಳ್ಳೆಗಳು ಓಡಾಡುವ ಜಾಗದಲ್ಲಿ ಇರಿಸಿದರೆ ಅಥವಾ ಮನೆಯ ಕಿಟಕಿಗಳ ಬಳಿ ಇರಿಸಿದರೆ ಸೊಳ್ಳೆಗಳು ಬರುವುದಿಲ್ಲನೀರಿಗೆ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಇದನ್ನು ಕಿಟಕಿ ಬಳಿ ಇರಿಸಬೇಕು ಬೆಳ್ಳುಳ್ಳಿಯ ಗ್ರಾಮದಿಂದ ಸಹ ಸೊಳ್ಳೆಗಳು ಬರುವುದಿಲ್ಲ

ಮತ್ತೊಂದು ಪರಿಹಾರ ಏನೆಂದರೆ ಸೊಳ್ಳೆ ಕಾಯಿಲ್ ಲಿಕ್ವಿಡ್ ಇವುಗಳನ್ನು ಬಳಸುವುದಕ್ಕಿಂತ ಸೊಳ್ಳೆಬ್ಯಾಟ್ ಬೆಳೆಸಿ ಮನೆಯಲ್ಲಿರುವ ಸೊಳ್ಳೆಯನ್ನು ಹೊಡೆದರೆ ಬಹಳ ಬೇಗ ಸೊಳ್ಳೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು ಹಾಗೂ ಇದರಿಂದ ಯಾವುದೇ ತರದ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುವುದಿಲ್ಲ.

WhatsApp Channel Join Now
Telegram Channel Join Now