ಮನೆ ಮುಂದೆ ಯಾಕೆ ರಂಗೋಲಿ ಹಾಕಬೇಕು ಗೊತ್ತಾ.. ರಂಗೋಲಿಯ ಮಹತ್ವದ ಕುರಿತಾಗಿ ಇಲ್ಲಿದೆ ಮಾಹಿತಿ…!!!!

136

ಮನೆಯ ಮುಂದೆ ರಂಗೋಲಿ ಅನ್ನು ಯಾಕೆ ಹಾಕಬೇಕು ಈ ರೀತಿ ರಂಗೋಲಿ ಹಾಕುವುದರಿಂದ ಏನೂ ಇದೇ ಪ್ರಯೋಜನ ಎಂಬುದನ್ನು ತಿಳಿಯುವುದಕ್ಕಾಗಿ ಇಂದಿನ ಮಾಹಿತಿಯನ್ನು ತಪ್ಪದೆ ಸಂಪೂರ್ಣವಾಗಿ ತಿಳಿಯಿರಿ ಹಾಗೂ ರಂಗೋಲಿ ಹಾಕುವುದರ ಮಹತ್ವವನ್ನು ತಿಳಿದು ಮನೆಯ ಮುಂದೆ ರಂಗೋಲಿ ಹಾಕದೆ ಇರುವವರು ಇಂದಿನಿಂದಲೇ ಮನೆಯ ಮುಂದೆ ರಂಗೋಲಿಯನ್ನು ಹಾಕಿ ಈ ರಂಗೋಲಿ ಹಾಕುವುದರಿಂದ ದೊರೆಯುವ ಪ್ರಯೋಜನವನ್ನು ನೀವು ಕೂಡ ಪಡೆದುಕೊಳ್ಳಿ.ಹೌದು ನಮ್ಮ ಪದ್ಧತಿಯಲ್ಲಿ ಒಂದಾಗಿರುವಂತೆ ಮನೆಯ ಮುಂದೆ ರಂಗೋಲಿ ಬಿಡುವುದು ಒಂದು ಪದ್ಧತಿಯು ಬಹಳ ಮಹತ್ವಕರ ಹಾಗೆಂದು ಬಹಳ ಪ್ರಾಮುಖ್ಯತೆಯನ್ನು ಕೂಡ ಪಡೆದುಕೊಂಡಿದೆ ಅಂತ ಹೇಳಿದರೆ ತಪ್ಪಾಗಲಾರದು.

ಸಾಮಾನ್ಯವಾಗಿ ರಂಗೋಲಿಯನ್ನು ಕಲ್ಲಿನ ಮೇಲೆ ಸಗಣಿ ಸಾರಿಸಿದ ನೆಲದ ಮೇಲೆ ಟೈಲ್ಸ್ ನೆಲದ ಮೇಲೆ ಬಿಡಬಹುದಾಗಿದೆ ಮತ್ತು ಮನೆಯ ಸಿಂಹ ದ್ವಾರದ ಎದುರು ರಂಗೋಲಿಯನ್ನು ಬಿಡುವುದರಿಂದ ಒಳ್ಳೆಯ ಪ್ರಯೋಜನವಾಗುತ್ತದೆ ಮತ್ತು ಮನೆಗೆ ನಕಾರಾತ್ಮಕ ಶಕ್ತಿಯ ಪ್ರವೇಶ ಆಗುವುದಿಲ್ಲ ಎಂದು ಕೂಡ ನಂಬಲಾಗಿದೆ ಹಾಗೂ ಇದು ಸತ್ಯ ಕೂಡ.ಮನೆಯ ಮುಂದೆ ರಂಗೋಲಿಯನ್ನು ಬಿಡುವುದರಿಂದ ಈ ರಂಗೋಲಿಯಲ್ಲಿ ಇರುವ ಅಂಶವು ಮನೆಯೊಳಗೆ ಯಾವುದೇ ಕೀಟ ಬ್ಯಾಕ್ಟೀರಿಯಾಗಳ ಕ್ರಿಮಿಕೀಟಗಳ ಪ್ರವೇಶ ಹಾಕದೇ ಇರುವ ಹಾಗೇ ನೋಡಿಕೊಳ್ಳುತ್ತದೆ ಮತ್ತು ಮಕ್ಕಳು ಇರುವಂತಹ ಮನೆಯಲ್ಲಿ ಅಂತೂ ರಂಗೋಲಿ ಬಿಡುವುದರಿಂದ ತುಂಬಾನೇ ಒಳ್ಳೆಯ ಕೆಲಸ ಇದು ಅಂತ ಹೇಳಬಹುದು.

ಧರ್ಮ ಕಾರ್ಯಗಳಲ್ಲಿ ಶುಭ ಸಮಾರಂಭಗಳಲ್ಲಿ ಮನೆಯಲ್ಲಿ ರಂಗೋಲಿಯನ್ನು ಬಿಡುವುದು ಒಳ್ಳೆಯದು ಮತ್ತು ಇದು ಮನೆಯಲ್ಲಿ ಅಥವಾ ಆಚೆಯಿಂದ ಎದುರಾಗುವ ಕೆಟ್ಟ ಕಂಪನಿಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಹೊಂದಿದ್ದು ಮನೆಯಲ್ಲಿ ರಂಗೋಲಿಯನ್ನು ಬಿಡುವುದರಿಂದ ಯಾವ ಕೆಟ್ಟ ಶಕ್ತಿಯ ಪ್ರಭಾವವೂ ಏದುರಾಗುವುದಿಲ್ಲ ಎಂದು ಹೇಳಲಾಗಿದೆ.ವೈಜ್ಞಾನಿಕವಾಗಿಯೂ ಆಧ್ಯಾತ್ಮಿಕವಾಗಿಯೂ ರಂಗೋಲಿ ಒಳ್ಳೆಯ ಮಹತ್ವವನ್ನು ಪಡೆದಿದ್ದು ಇದು ಮನೆಯ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ ಮತ್ತು ಹೆಚ್ಚಾಗಿ ಹೆಂಗಳೆಯರೇ ಈ ಒಂದು ರಂಗೋಲಿಯನ್ನು ಬಿಡಿಸುವುದು, ರಂಗೋಲಿಯನ್ನು ಬಿಡುವಾಗ ಹೆಣ್ಣು ಮಕ್ಕಳು ಕುಳಿತು ರಂಗೋಲಿಯನ್ನು ಬಿಡುತ್ತಾರೆ ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಹೇಗೆ ಅಂದರೆ ದೇಹಕ್ಕೆ ವ್ಯಾಯಾಮವು ಕೂಡ ಆಗುತ್ತದೆ ಮತ್ತು ಗರ್ಭಕೋಶ ಸಮಸ್ಯೆಗಳು ಕ್ರಮೇಣವಾಗಿ ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ.

ಈ ಒಂದು ರಂಗೋಲಿಯನ್ನು ದೇವರ ಪೂಜೆಯಲ್ಲಿ ಹೋಮ ಹವನಗಳಲ್ಲಿ ಹಾಕುವುದರ ಹಿಂದೆ ಇರುವ ಕಾರಣವೇನು ಎಂದರೆ ಒಳ್ಳೆಯ ಪಾಸಿಟಿವ್ ಎನರ್ಜಿಯನ್ನು ಪಸರಿಸುವ ಶಕ್ತಿ ಈ ರಂಗೋಲಿಯಲ್ಲಿ ಇದೇ ಮತ್ತು ಈ ರಂಗೋಲಿಯನ್ನು ಹಾಕಿದ ಸುತ್ತಮುತ್ತಲಿನಲ್ಲಿ ಇರುವ ನಕಾರಾತ್ಮಕತೆಯನ್ನು ಹೀರಿ ಸಕಾರಾತ್ಮಕತೆಯನ್ನು ಪಸರಿಸುವ ಈ ರಂಗೋಲಿ ಮನೆಯನ್ನು ತಂಪಾಗಿರಿಸಲು ಕೂಡ ಸಹಕರಿಸುತ್ತದೆ.ಇನ್ನು ಹತ್ತಾರು ಪ್ರಯೋಜನಗಳನ್ನೂ ಪಡೆದುಕೊಳ್ಳಬಹುದು ಮನೆಯ ಮುಂದೆ ಮತ್ತು ದೇವರ ಕೋಣೆಯಲ್ಲಿ ಹೋಮ ಹವನಗಳಲ್ಲಿ ರಂಗೋಲಿಯನ್ನು ಹಾಕುವುದರಿಂದ, ನಮ್ಮ ಸಂಪ್ರದಾಯದಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿರುವಂತಹ ರಂಗೋಲಿಯನ್ನು, ನೀವು ಕೂಡ ಇನ್ನು ಮುಂದೆ ನಿಮ್ಮ ಮನೆಯ ಸಿಂಹ ದ್ವಾರದ ಎದುರು ಹಾಕಿ ಇದರಿಂದ ಉಂಟಾಗುವ ಪಾಸಿಟಿವ್ ವೈಬ್ರೇಶನ್ ಅನ್ನು ಪಡೆದುಕೊಂಡು ಜೀವನದಲ್ಲಿ ಉತ್ಸಾಹದಿಂದ ಉಲ್ಲಾಸದಿಂದ ಸುಖ ಶಾಂತಿ ನೆಮ್ಮದಿಯಿಂದ ಬದುಕಿರಿ.ಈ ದಿನದ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೇ ಮಾಹಿತಿ ಲೈಕ್ ಹಾಗೂ ಶೇರ್ ಮಾಡಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೊ ಮಾಡಿ ಶುಭ ದಿನ ಧನ್ಯವಾದ.

WhatsApp Channel Join Now
Telegram Channel Join Now