ಮುಖದಲ್ಲಿ ಎಷ್ಟೇ ಹಳೆಯ ಕಪ್ಪು ಕಲೆಗಳು , ಬೋಂಗು , ಮೊಡವೆಗಳು ಇದ್ದರು ಸಹ ಇದನ್ನ ಹಚ್ಚಿದರೆ ಮಂಗಾ ಮಾಯಾ ಆಗುತ್ತೆ..

602

ಕೇವಲ ಮನೆಯಲ್ಲಿ ದೊರೆಯುವ ಪದಾರ್ಥಗಳನ್ನು ಬಳಸುವ ಮೂಲಕ ಮುಖದ ಮೇಲೆ ಉಂಟಾಗಿರುವ ಮೊಡವೆ ಕಪ್ಪು ಕಲೆ ಮತ್ತು ಮುಖದ ಮೇಲೆ ಮೂಡಿರುವ ಸುಕ್ಕುಗಳನ್ನು ನಿವಾರಣೆ ಮಾಡಬಹುದು ಅದು ಹೇಗೆ ಅಂತಾ ನಾವು ಈ ಮಾಹಿತಿಯಲ್ಲಿ ಹೇಳಲಿದ್ದೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಿಮ್ಮ ಮುಖದ ಕಾಳಜಿಯನ್ನ ಈ ವಿಧಾನದಲ್ಲಿ ಮಾಡುತ್ತ ಬಂದರೆ ಕಪ್ಪು ಕಲೆ ಮೊಡವೆ ಏನೇ ಇದ್ದರೂ ಅದು ಪರಿಹಾರವಾಗುತ್ತೆ.

ಹೌದು ಫೇಸ್ ಈಸ್ ದಿ ಇಂಡೆಕ್ಸ್ ಆಫ್ ಮೈಂಡ್ ಅಂತ ಹೇಳುತ್ತಾರೆ ಇದೊಂದು ಪ್ರಸಿದ್ಧ ಆಂಗ್ಲ ಭಾಷೆಯ ಗಾದೆ ಮಾತಿದೆ ಹೌದು ಕೆಲವರು ಮನುಷ್ಯನ ವಧನವನ್ನು ನೋಡಿ ಅವನ ಮನಸ್ಸಿನ ಭಾವನೆಗಳನ್ನು ಅರೆಯುತ್ತಾರೆ, ಅಂಥದೊಂದು ಶಕ್ತಿ ಕೆಲವರಲ್ಲಿ ಇದೆ ಮನುಷ್ಯನ ಮುಖವನ್ನ ನೋಡಿ ಅವನು ಖುಷಿಯಾಗಿದ್ದಾರೋ ಬೇಸರದಲ್ಲಿ ಇದ್ದನು ಈ ಚಿಂತೆ ಮಾಡುತ್ತಿದ್ದಾನೆ ಇದೆಲ್ಲದನ್ನು ಕಂಡುಹಿಡಿಯಬಹುದು ಹಾಗಾಗಿಯೇ ಮುಖ ಎಂಬುದು ಸದಾ ಖುಷಿಯಿಂದ ಕೂಡಿರಬೇಕು ಅಂತ ಹೇಳುವುದು.

ಅಷ್ಟೇ ಅಲ್ಲ ನಮ್ಮ ಕನ್ನಡದಲ್ಲಿಯೂ ಕೂಡ ಪ್ರಸಿದ್ಧ ಗಾದೆ ಮಾತು ಇದೆ ಹಾಗೆ ಆ ಮಾತು ಸಾವಿರಾ ಪಟ್ಟು ನಿಜ ಕೂಡ ಕೂಡ ಹೊಂದಿದೆ ಅದೇನೆಂದರೆ ಮುಖ ನೋಡಿ ಮಣೆ ಹಾಕ ಬೇಡ ಅಂತ ಬಹಳಷ್ಟು ಮಂದಿ ಮುಖ ನೋಡಿ ವ್ಯಕ್ತಿಯ ಗುಣವನ್ನು ಅರಿಯುತ್ತಾರೆ ಆದರೆ ಅದು ಹಾಗಲ್ಲ ಆ ರೀತಿ ಯಾವತ್ತಿಗೂ ಮಾಡಬಾರದು ಮನುಷ್ಯನ ಮುಖ ಎಲ್ಲವನ್ನು ಹೇಳುವುದಿಲ್ಲ ಹಾಗಾಗಿ ಮನುಷ್ಯನ ಮುಖ ನೋಡಿ ಮಣೆ ಹಾಕಬಾರದು ಅಂತ ಹೇಳ್ತಾರೆ.

ಈ ರೀತಿ ಮುಖವೇ ಮನಸ್ಸಿನ ಕನ್ನಡಿ ಆಗಿರಬಹುದು ಆದರೆ ಮುಖ ಮಾತ್ರ ಎಲ್ಲರಿಗೂ ಚೆನ್ನಾಗಿ ಕಾಣಿಸಬೇಕು ಇದು ಎಲ್ಲರ ಆಶಯವೇ ಆಗಿರುತ್ತೆ ಈಗ ಮಾಹಿತಿಗೆ ಬರುವುದಾದರೆ ಪುರುಷರು ಮಹಿಳೆಯರು ಅನ್ನದ ಮುಖದ ಮೇಲೆ ಕೆಲವೊಂದು ವಯಸ್ಸಿನಲ್ಲಿಯೇ ಹಾರ್ಮೋನ್ ಇಂಬ್ಯಾಲೆನ್ಸ್ ಕಾರಣದಿಂದ ಮೊಡವೆ ಉಂಟಾಗುತ್ತದೆ ಹಾಗು ಆ ಸಮಯದಲ್ಲಿ ಮೂಡಿದ ಮೊಡವೆಗಳು ಮುಖದ ಮೇಲೆ ಕಲೆಗಳು ಶಾಶ್ವತವಾಗಿ ಉಳಿದುಬಿಡುತ್ತದೆ.

ಆದ್ದರಿಂದ ಇಂತಹ ಕಲೆಗಳನ್ನು ನಿವಾರಣೆ ಮಾಡುವುದಕ್ಕೆ ಚಿಕಿತ್ಸೆಯ ಮೊರೆ ಹೋಗದೆ ಮನೆಯಲ್ಲಿಯೇ ದೊರೆಯುವ ಕೆಲವೊಂದು ಪದಾರ್ಥಗಳನ್ನು ಬಳಸಿ ಪ್ರತಿದಿನ ಫೇಸ್ ಪ್ಯಾಕ್ ಹಾಕುತ್ತಾ ಬಂದರೆ ಈ ಮೊಡವೆ ಕಲೆಗಳು ಆದಷ್ಟು ಬೇಗ ಕ್ಲಿಯರ್ ಆಗುತ್ತದೆ ಜೊತೆಗೆ ತ್ವಚೆಯ ಅಂದವನ್ನು ಕೂಡ ಹೆಚ್ಚು ಮಾಡುತ್ತದೆ.

ಹೌದು ಕೆಲವರು ಪಾಲಿಸುವ ಆಹಾರ ಪದ್ದತಿ ಜೀವನ ಶೈಲಿಯಿಂದ ಈ ರೀತಿ ಮುಖದ ಮೇಲೆ ಮೊಡವೆಗಳು ಮೂಡಿದರೆ ಇನ್ನೂ ಕೆಲವರಿಗೆ ಹಾರ್ಮೋನ್ ಇಂಬ್ಯಾಲೆನ್ಸ್ ಯಿಂದಾಗಿ ಮೊಡವೆಗಳು ಮೂಡಿರುತ್ತದೆ ಅದಕ್ಕೆ ಏನು ಸಹ ಮಾಡೋದಕ್ಕೆ ಆಗೋದಿಲ್ಲ ಆದರೆ ನಮ್ಮ ಜೀವನ ಶೈಲಿಯಿಂದ ನಿಮ್ಮ ತ್ವಚೆಗೆ ಅಡ್ಡಪರಿಣಾಮ ಬೀರುತ್ತದೆ ಅಂದರೆ ಅದನ್ನು ನಾವು ಬದಲಾಯಿಸಿಕೊಂಡು ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಈ ಮಾಹಿತಿಗೆ ಬಂದು ಮನೆಮದ್ದಿನ ಕುರಿತು ಮಾತನಾಡುವುದಾದರೆ ತ್ವಚೆಯ ಮೇಲಿರುವ ಕಪ್ಪು ಕಲೆ ಸುಕ್ಕು ತೆಗೆದುಹಾಕಲು ಮೊಡವೆ ಕಲೆ ತೆಗೆದುಹಾಕಲು ಮಾಡುವ ಫೇಸ್ ಪ್ಯಾಕ್ ಗೆ ಬೇಕಾಗಿರುವುದು ಮೊಸರು 1 ಚಮಚ ಮುಲ್ತಾನಿ ಮಿಟ್ಟಿ ಚಮಚ ಗಂಧದ ಪುಡಿ ಅರ್ಧ ಚಮಚ ಅವರಿಕೆ ಪುಡಿ 1 ಚಮಚ ಬೇವಿನ ಪುಡಿ 1 ಚಮಚ ಪುದೀನಾ ಪುಡಿ ಇಷ್ಟು ಪದಾರ್ಥಗಳು ಬೇಕಾಗಿರುತ್ತದೆ.

ಇದನ್ನ ಮಿಶ್ರಮಾಡಿ ಮೊಸರಿನಿಂದ ಪೇಸ್ಟ್ ಮಾಡಿ ಮುಖಕ್ಕೆ ಮಾಡುತ್ತಾ ಬನ್ನಿ ದಿನಬಿಟ್ಟು ದಿನ ಈ ಪರಿಹಾರವನ್ನು ಮಾಡುತ್ತಾ ಬನ್ನಿ ಖಂಡಿತಾ ಮೊಡವೆ ಕಲೆಗಳು ನಿವಾರಣೆಯಾಗುತ್ತದೆ ಚರ್ಮ ಕೂಡ ಮೃದುವಾಗುತ್ತದೆ.