ಸಿಕ್ಕಾಪಟ್ಟೆ ಋತು ಸ್ರಾವದಿಂದ ಕಂಗೆಟ್ಟಿದ್ದಾರೆ ಈ ಒಂದು ಮನೆಯಲ್ಲೇ ಮಾಡುವ ಮನೆಮದ್ದು ಮಾಡಿ ಕುಡಿದರೆ ಬೇಗ ತಡೆಗಟ್ಟುತ್ತೆ..

220

ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಅಂದರೆ ಅದು ಋತುಸ್ರಾವದಲ್ಲಿ ಎದುರಾಗುವಂತಹ ರಕ್ತಸ್ರಾವ ಸಮಸ್ಯೆ ಈ ರಕ್ತಹೀನತೆ ಸಮಸ್ಯೆ ಉಂಟಾಗುವುದು ಕೂಡ ಅಧಿಕ ರಕ್ತಸ್ರಾವ ಆಗುವ ಕಾರಣದಿಂದಾಗಿ ಮತ್ತು ನಮ್ಮ ಭಾರತ ದೇಶದಲ್ಲಿ ಸಂಶೋಧನೆ ನಡೆಸಿದಾಗ ನಮ್ಮ ಭಾರತ ದೇಶದಲ್ಲಿ ಸುಮಾರು ಐವತ್ತು ಪ್ರತಿಶತದಷ್ಟು ಹೆಣ್ಣು ಮಕ್ಕಳು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಾ ಇದ್ದರೆ.

ಅದಕ್ಕೆ ಮೂಲ ಕಾರಣ ಅಂದರೆ ಈ ಋತುಸ್ರಾವದಲ್ಲಿ ಉಂಟಾಗುವ ಅಧಿಕ ರಕ್ತ ಸ್ರಾವದಿಂದ ಆಗಿರುತ್ತದೆ ಅಂತಾ ಹೇಳಲಾಗಿದೆ. ಆದಕಾರಣ ಹೆಣ್ಣುಮಕ್ಕಳು ಅನುಭವಿಸುವಂತಹ ಈ ಅಧಿಕ ರಕ್ತಸ್ರಾವದ ಸಮಸ್ಯೆಗೆ ಪರಿಹಾರವನ್ನು ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ ಈ ಮನೆ ಮದ್ದನ್ನು ಪಾಲಿಸಿ ಮತ್ತು ರಕ್ತ ಹೀನತೆ ಸಮಸ್ಯೆ ಇಂದ ಮತ್ತು ಅಧಿಕ ರಕ್ತಸ್ರಾವದ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಿ.

ರಕ್ತಸ್ರಾವದ ಸಮಸ್ಯೆಗೆ ಮಾತ್ರೆಗಳ ಮೊರೆ ಹೋಗುವುದರಿಂದ ಮುಂದಿನ ದಿನಗಳಲ್ಲಿ ಈ ಮಾತ್ರೆಗಳು ಗರ್ಭಾಶಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಆದಕಾರಣ ಈ ಋತುಚಕ್ರಕ್ಕೆ ಸಂಬಂಧಪಟ್ಟಂತೆ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ಬು ಆದಷ್ಟು ಕಡಿಮೆ ಮಾಡಿ ಮತ್ತು ಋತು ಚಕ್ರದಲ್ಲಿ ಹೊಟ್ಟೆ ನೋವಿನ ಸಮಸ್ಯೆ ಉಂಟಾಗುತ್ತಿದೆ ಅಂದರೆ ಮೊದಲನೆಯ ದಿನ ನೀರಿಗೆ ಚಿಟಿಕೆ ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ನೋವು ಕಡಿಮೆ ಆಗುತ್ತದೆ. ಹಾಗೆ ಈ ಋತು ಚಕ್ರದ ಸಮಯದಲ್ಲಿ ಶುಂಠಿಯ ನೀರನ್ನು ಕುಡಿಯುವುದರಿಂದ ಕೂಡ ನೋವು ಕಡಿಮೆಯಾಗುತ್ತದೆ ಯಾಕೆಂದರೆ ಶುಂಠಿಯಲ್ಲಿ ಇರುವ ಆಂಟಿ ಇನ್ಫ್ಲಮೇಟರಿ ಗುಣ, ಇದು ಹೊಟ್ಟೆ ನೋವಿನ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಸಹಕಾರಿಯಾಗಿರುತ್ತದೆ.

ಅಧಿಕ ರಕ್ತಸ್ರಾವಕ್ಕೆ ಪರಿಹಾರ ಅಂದರೆ ಕೆಂಪು ದಾಸವಾಳ ಹೂವನ್ನು ಬಳಸಿ ಈ ಮನೆ ಮದ್ದನ್ನು ಮಾಡಬೇಕಾಗುತ್ತದೆ. ಅದೇನೆಂದರೆ ಅಗಲವಾದ ಬಲಿತ್ತಿರುವ ಕೆಂಪು ದಾಸವಾಳದ ದಳಗಳನ್ನು ತೆಗೆದುಕೊಂಡು ಒಂದು ದಳಕ್ಕೆ ಅರ್ಧ ಚಮಚ ಜೀರಿಗೆ ಅನ್ನು ಮಿಶ್ರ ಮಾಡಿ ಅದನ್ನ ಸೇವಿಸ ಬೇಕು ಆ ರೀತಿ ಒಂದು ದಿನಕ್ಕೆ ಒಂದು ಹೂವನ್ನು ಪೂರ್ತಿಯಾಗಿ ಸೇವಿಸಬೇಕು. ಈ ರೀತಿ ಮಾಡುವುದರಿಂದ ರಕ್ತ ಸ್ರಾವ ಬೇಗ ಕಡಿಮೆ ಆಗುತ್ತದೆ.

ಈ ಮೇಲೆ ತಿಳಿಸಿದ ಪರಿಹಾರ ಅಧಿಕ ರಕ್ತ ಸ್ರಾವಕ್ಕೆ ಆದರೆ ಕೆಲ ಹೆಣ್ಣುಮಕ್ಕಳು ವೈಟ್ ಡಿಸ್ಚಾರ್ಜ್ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಅದಕ್ಕೂ ಕೂಡ ಪರಿಹಾರ ಅಂದರೆ ಬಿಳಿ ದಾಸವಾಳದ ಹೂವನ್ನು ಕಷಾಯದ ರೂಪದಲ್ಲಿ ಸೇವಿಸಬಹುದು ಹೌದು ಈ ಬಿಳಿ ದಾಸವಾಳದ ಹೂವನ್ನು ಬಳಸಿ ಕಷಾಯವನ್ನು ಅಥವಾ ಟೀ ರೂಪದಲ್ಲಿ ಮಾಡಿ ಸೇವಿಸಿ ಇದರಿಂದ ನಿಮಗೆ ಎದುರಾಗುವ ವೈಟ್ ಡಿಸ್ಚಾರ್ಜ್ ಸಮಸ್ಯೆ ಕಡಿಮೆಯಾಗುತ್ತದೆ.

ಈ ರೀತಿ ನೀವು ಟೀ ರೂಪದಲ್ಲಿ ಸೇವಿಸುವಾಗ ಅದಕ್ಕೆ ಬೆಲ್ಲವನ್ನು ಮಿಶ್ರ ಮಾಡಿ ಸೇವಿಸಿ, ಸಕ್ಕರೆಯನ್ನು ಬಳಸುವುದು ಬೇಡ. ನೀವು ಈ ಪರಿಹಾರವನ್ನು ವಾರದಲ್ಲಿ ಮೂರು ಬಾರಿ ಮಾಡಿ ಸಾಕು. ಬೆಳಿಗ್ಗೆ ಟೀ ಅಥವಾ ಕಾಫಿ ಕುಡಿಯುವ ಸಮಯದಲ್ಲಿ ಈ ಬಿಳಿ ದಾಸವಾಳ ದಿಂದ ಮಾಡಿದ ಕಷಾಯ ಅಥವಾ ಟೀ ಅನ್ನು ಸೇವಿಸಿ ನಿಮಗೆ ಕಾಡುತ್ತ ಇರುವ ಈ ಸಮಸ್ಯೆಗೆ ಬೇಗ ಪರಿಹಾರ ಆಗುತ್ತದೆ ಧನ್ಯವಾದ.