ಹಾವುಗಳಿಗೆ ಎರಡು ನಾಲಿಗೆ ಯಾಕೆ ಇರುತ್ತೆ ಅಂತ ನಿಮಗೆ ಏನಾದರೂ ಐಡಿಯಾ ಇದೆಯಾ..! ಇದಕ್ಕೆ ಏನು ಹೇಳುತ್ತಿದೆ ನಮ್ಮ ಪುರಾಣ !!!

90

ನಿಮಗೆ ಗೊತ್ತಿರಬಹುದು ಪುರಾಣದಲ್ಲಿ ಅವುಗಳ ಬಗ್ಗೆ ಹಲವಾರು ಕಥೆಗಳಿವೆ, ನೀವು ಪುರಾಣದ ಪುಸ್ತಕ ತೆಗೆದು ನೋಡಿದರೆ ಹಾವಿಗೆ ಸಂಬಂಧಪಟ್ಟಂತಹ ಹಲವಾರು ಕಥೆಗಳನ್ನು ನೀವು ಓದಬಹುದು.ಇವತ್ತು ನಾನು ನಿಮಗೆ ಪುರಾಣದ ಪ್ರಕಾರ ಹಾವುಗಳಿಗೆ ಯಾಕೆ 2  ನಾಲಿಗೆಗಳು ಇರುತ್ತದೆ. ಹಾಗೆ ಇದರ ಬಗ್ಗೆ ಪುರಾಣ ಏನು ಹೇಳುತ್ತದೆ ಎಂದು ತಿಳಿದುಕೊಳ್ಳೋಣ.ನಿಮಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ಹಾವುಗಳಿಗೆ ಇರುವಂತಹ ಎರಡು ನಾಲಿಗೆಯ ವಿಚಾರಕ್ಕೆ ಒಂದು ಕಥೆ ಇದೆಯಂತೆ ಕಥೆ ಏನಪ್ಪಾ ಅಂದರೆ ಮುಂದೆ ಓದಿ.

ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದಂತಹ ಬ್ರಹ್ಮನಿಗೆ ಎರಡು ಜನ ಮಕ್ಕಳಿದ್ದರು, ಆ ಎರಡು ಮಕ್ಕಳು ಹೆಣ್ಣು ಮಕ್ಕಳೇ. ಒಂದು ಹೆಣ್ಣು ಮಗಳ ಹೆಸರು ಕದ್ರು ಇನ್ನೊಂದು ಹೆಣ್ಣು ಮಗಳ ಹೆಸರು ವಿನುತ ಎಂದು. ಇವರಿಬ್ಬರಿಗೂ ವಯಸ್ಸಿಗೆ ಬಂದ ನಂತರ ಕಶ್ಯಪ ಮುನಿಗಳಿಗೆ ಮದುವೆಯನ್ನು ಮಾಡಿಕೊಟ್ಟರು.ಕಾಲಕ್ರಮದಲ್ಲಿ ಕದ್ರುವಿಗೆ ಮಕ್ಕಳಾದವು ಹಾಗೆಯೇ ಹುಟ್ಟಿದಂತಹ ಮಕ್ಕಳು ಸರ್ಪಗಳು. ಇನ್ನೊಂದು ಹೆಂಡತಿ ಆದಂತಹ ವಿನುತಾ  ಕೂಡ ಅರುಣ ಹಾಗೂ ಗರುಡ ಎನ್ನುವ ಮಕ್ಕಳು ಹುಟ್ಟಿದರು.ಕಾಲಕ್ರಮೇಣ ಈ ದೇವತೆಗಳು ಹಾಗೂ ರಾಕ್ಷಸರ ಸೇರಿ ಸಮುದ್ರವನ್ನುಅಂದರೆ ಕ್ಷೀರ ಸಾಗರವನ್ನು ಅಮೃತಕ್ಕಾಗಿ ಮಥನವನ್ನು ಮಾಡುತ್ತಾರೆ. ಹೀಗೆ ಮಂಥನ ಮಾಡಿದ ನಂತರ ಹಲವಾರು ವಸ್ತುಗಳು ದೊರಕುತ್ತವೆ.

ಹಾಗೆ ಈ ಕ್ಷೀರಸಾಗರದಲ್ಲಿ ಒಂದು ಬಿಳಿ ಕುದುರೆ ಕೂಡ ಹುಟ್ಟಿಕೊಳ್ಳುತ್ತದೆ. ಹೀಗೆ ಹುಟ್ಟಿಕೊಂಡ ಅಂತಹ ಆ ಬಿಳಿ ಕುದುರೆಯನ್ನು ಕುದ್ರ ಹಾಗೂ ವಿನುತಾ ಹಾಗೂ ಇಬ್ಬರು ನೋಡುತ್ತಾರೆ ಹಾಗೆ ಅದರ ಬಗ್ಗೆ ಚರ್ಚೆ ಮಾಡುತ್ತಾರೆ.ಆದರೆ ಈ ಚರ್ಚೆಯನ್ನು ಮಾಡುತ್ತಿರುವಾಗ ಕುದ್ರ  ಹೇಳುತ್ತಾಳೆ ಕುದುರೆ ಸಂಪೂರ್ಣವಾಗಿ ಬಿಳಿಯಾಗಿದೆ ಎಂದು. ಆದರೆ ಈ ಚರ್ಚೆಗೆ ಒಪ್ಪದಂತಹ ವಿನುತ ಆ ಕುದುರೆ ಬಾಲ ಕಪ್ಪಗಿದೆ ಎಂದು ಹೇಳುತ್ತಾಳೆ. ಇವರ ಮಧ್ಯೆ ಚರ್ಚೆ ಅತಿ ದೂರಕ್ಕೆ ಹೋಗಿ ಕೊನೆಗೆ ಅವರಿಬ್ಬರ ಮಧ್ಯೆ ಒಂದು ಶರತ್ತು ಬರುತ್ತದೆ. ಆ ಶರತ್ತು ಏನಪ್ಪಾ ಅಂದರೆ ಯಾರು ಮಾತು ನಿಜವಾಗಿ ಇರುತ್ತದೆಯೋ ಅವರ ದಾಸಿ ಆಗಬೇಕು ಎಂದು ಷರತ್ತು.

ಆದರೆ ಕದ್ರು ಗೆ ಸ್ವಲ್ಪ ಸಮಯದ ನಂತರ ಆ ಕುದುರೆಯ ಬಾಲ ಕಪ್ಪು ಬಣ್ಣದಲ್ಲಿ ಇಲ್ಲ ಎಂದು ಸ್ವಲ್ಪ ಸಮಯದಲ್ಲಿ ಅನುಮಾನ  ಬರಲು ಆರಂಭವಾಗುತ್ತದೆ. ಹೇಗಾದರೂ ಮಾಡಿ ಈ ಷರತ್ತಿನಲ್ಲಿ ನಾನು ಗೆಲ್ಲಲೇಬೇಕು ಎಂದು ತನ್ನ ಮಕ್ಕಳ ಅಂತಹ ಸರ್ಪಗಳನ್ನು ಕರೆಯುತ್ತಾಳೆ , ಹಾಗೆ ಬಂದಂತಹ ಸರ್ಪಗಳಿಗೆ ಹೇಳುತ್ತಾಳೆ ನೀವು ಆ ಕುದುರೆಯ ಬಾಲವನ್ನು ಕಾಣದಂತೆ ಮುಚ್ಚಿ ಬಿಡಿ ಎಂದು ಹೇಳುತ್ತಾಳೆ. ಹಾಗೆ ಮಾಡಿದರೆ ನೀವು ಆ ಕುದುರೆಯ ಬಾಲ ಕಪ್ಪಾಗಿ ಕಾಣುತ್ತದೆ.ಇದರಿಂದ ನಾನು ಷರತ್ತಿನಲ್ಲಿ ಗೆಲ್ಲುತ್ತೇನೆ ಎಂದು ಆ ಸರ್ಪಗಳಿಗೆ ಹೇಳುತ್ತಾಳೆ. ಹೀಗೆ ಬಾಲವನ್ನು ಸುತ್ತು ಕೊಂಡಂತಹ ಸರ್ಪಗಳನ್ನು  ಕುದ್ರು ತೋರಿಸಿ, ನೋಡು ಕುದುರೆಯ ಬಾಲ ಕಪ್ಪು ಬಣ್ಣವನ್ನು ಹೊಂದಿದೆ, ಷರತ್ತಿನಲ್ಲಿ ನಾನೆ ಗೆದ್ದೆ ಎಂದು ಕುದ್ರು ಗೆ ಹೇಳ್ತಾಳೆ. ಆದರೆ  ವಿನುತಾ ಮಗನಾದ ಗರುಡನಿಗೆ ಇದು ಸಹಿಸಲಾಗದೆ ಹೇಗಾದರೂ ಮಾಡಿ ತನ್ನ ಕುದ್ರು ಗೆ ದಾಸಿ ಆಗಬಾರದು ಎಂದು ಆಲೋಚನೆ ಮಾಡುತ್ತಾರೆ.

ಹಾಗೆ  ಆಲೋಚನೆ ಮಾಡಿದಂತಹ ವಿನುತಾ ಮಗನಾದ  ಗರುಡ, ಸರ್ಪಗಳ ಹತ್ತಿರ ಹೋಗಿ ತಾಯಿಯನ್ನು ಬಂದ ಮುಕ್ತಿ ಯಿಂದ ಮಾಡಬೇಕು ಎಂದು ಮಾತನಾಡುತ್ತಾನೆ.ಇದನ್ನು ಕೇಳಿದಂತಹ ಆ ಸರ್ಪಗಳು ದೇವಲೋಕದಿಂದ ನೀವೇನಾದರೂ ಅಮೃತವನ್ನು ತೆಗೆದುಕೊಂಡು ಬಂದು ನನಗೆ ಕೊಟ್ಟರೆ.ನಿಮ್ಮ ತಾಯಿ ವಿಮೋಚನೆ ಗೊಳ್ಳುತ್ತಾರೆ ಎಂದು ಹೇಳುತ್ತವೆ. ಹಾಗೆ ಶರವೇಗದಲ್ಲಿ  ಹೊರಟಂತಹ ಗರುಡ ಇಂದ್ರನನ್ನು ಭೇಟಿಯಾಗಿ ಅಮೃತವನ್ನು ಕೊಡಲು ಕೇಳುತ್ತಾನೆ ಆದರೆ ಅಮೃತವನ್ನು ಕೊಡಲು ಇಂದ್ರ ಹಿಂದೇಟು ಹಾಕುತ್ತಾನೆ. ಹಾಗೆ ಹೀಗೆ ಮಾಡಿ ಇಂದ್ರನನ್ನು ಒಪ್ಪಿಸಿ ತನ್ನ ತಾಯಿಯ ಶಾಪ ವಿಮೋಚನೆಗಾಗಿ ಅಮೃತ ಬೇಕೇ ಬೇಕು ಎಂದು ಪಟ್ಟು ಹಿಡಿದು ಅಮೃತ ವನ್ನು ತೆಗೆದು ಕೊಂಡು ಬರುತ್ತಾನೆ. ಆದರೆ ಅವನು  ತೆಗೆದುಕೊಂಡು ಬರುತ್ತಿದ್ದಂತಹ ಅಮೃತವನ್ನು ನೋಡಿ ಕುದ್ರ ,

ವಿನುತ ಗೆ ಇರುವಂತಹ ಶಾಪವನ್ನು ಕುದ್ರು ನಿವಾರಣೆ ಮಾಡುತ್ತಾಳೆ. ಅವಾಗ ಗರುಡ ತಾನು ತೆಗೆದುಕೊಂಡು ಬಂದಂತಹ ಅಮೃತವನ್ನು ಮತ್ತೆ ದೇವಲೋಕಕ್ಕೆ ವಾಪಸ್ ಹೋಗಿ ಕೊಟ್ಟು ಬರುತ್ತಾನೆ.ಹೀಗೆ ಬಂದಂತಹ ಗರುಡ  ಕಾಲಿ ಆದಂತಹ ಆ ತಂಬಿಗೆಯನ್ನು ಆ ಸರ್ಪಗಳು ಎದುರುಗಡೆ ಬಿಟ್ಟು ಹೋಗುತ್ತಾನೆ,ಆದರೆ ಆ ಸರ್ಪಗಳು ಅದರ ಒಳಗಡೆ ಅಮೃತ ಇದೆ ಎಂದು ಹುಚ್ಚು ನಂಬಿಕೆಯಿಂದ ಆ ತಂಬಿಗೆಯನ್ನು ನಾಲಿಗೆಯಿಂದ ನೆಕ್ಕಲು ಶುರು ಮಾಡುತ್ತವೆ. ಹೀಗೆ ಆದರೆ ಒಳಗಡೆ ಅಮೃತವೇ ಇಲ್ಲ ಎಂದು ತಿಳಿದಂತಹ ಆ ಸರ್ಪಗಳು ಸ್ವಲ್ಪ ಉಳಿದಂತಹ ಅಮೃತವನ್ನು ತಿನ್ನಲು ಆ ತಂಬಿಗೆಯನ್ನು ಅತಿ ಹೆಚ್ಚಾಗಿ ನೆಕ್ಕಿದ್ದರಿಂದ ಆ ಸರ್ಪಗಳು ನಾಲಿಗೆ ಸೀಳಿ ಹೋಗುತ್ತವೆ. ಅವತ್ತಿನಿಂದಲೇ ಗರುಡ ಹಾಗೂ ಸರ್ಪಗಳ ದ್ವೇಷ ಹುಟ್ಟಿದೆ ಎಂದು ಪುರಾಣ ಹೇಳುತ್ತದೆ. ಹೀಗೆ ಸರ್ಪಗಳ ನಾಲಿಗೆ ಎರಡಾಗಿ ಸೀಳಿ ಹೋಗಿದೆ ಎಂದು ಈ ಪುರಾಣದ ಪ್ರಕಾರ ತಿಳಿದುಕೊಳ್ಳಬಹುದಾಗಿದೆ.