ಹುಬ್ಬುಗಳ ಮದ್ಯ ನಿಮಗೆ ತಲೆ ನೋವು ಬಂದಂಗೆ ಆಗೋದು , ನಿದ್ರೆ ಬರದೇ ಇರೋದು , ವಿಪರೀತ ತಲೆನೋವು ಇವೆಲ್ಲ ಸಮಸ್ಸೆಗಳಿಗೆ ಇದನ್ನು ಮನೆಯಲ್ಲೆ ತಯಾರಿಸಿ ಹೀಗೆ ಸೇವಿಸಿ… ಎಲ್ಲ ಮಾಯಾ ಆಗುತ್ತೆ…

146

ಮೈಗ್ರೇನ್ ಸಮಸ್ಯೆಗೆ ಒಂದೊಳ್ಳೆ ಮನೆ ಮದ್ದು ಇದಾಗಿದೆ ಹೌದು ಇತ್ತೀಚಿನ ದಿನಗಳಲ್ಲಿ ಒತ್ತಡದ ಕಾರಣದಿಂದಾಗಿ ಮೈಗ್ರೇನ್ ಎಂಬ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ ಹೀಗಿರುವಾಗ ಇದಕ್ಕೊಂದು ಪರಿಹಾರ ಮಾಡಿಕೊಳ್ಳಲೇಬೇಕು ಅಲ್ವಾ. ಆದ್ದರಿಂದ ನೀವು ಕೂಡ ಒತ್ತಡದ ಬದುಕಿನಲ್ಲಿ ನಿಮ್ಮ ಜೀವನ ಸಾಗಿಸುತ್ತಿದ್ದಲ್ಲಿ ಅದಕ್ಕೆ ಪರಿಹಾರವಾಗಿ ಈ ಮನೆಮದ್ದನ್ನು ಮಾಡಿ.

ಹೌದು ಇಂದಿನ ವಾತಾವರಣ ಇಂದಿನ ಪರಿಸರ ಮತ್ತು ಜನರು ಮಾಡುತ್ತಿರುವ ಕೆಲಸ ಹಾಗೂ ಅವರು ಪಾಲಿಸುತ್ತಿರುವ ಆಹಾರ ಪದ್ದತಿ ಧೂಳು ಪ್ರದೂಷಣೆ ಇದೆಲ್ಲದರ ಕಾರಣದಿಂದಾಗಿ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಆದ್ದರಿಂದ ಇವತ್ತಿನ ಈ ಲೇಖನಿಯಲ್ಲಿ ಮೈಗ್ರೇನ್ ಎಂಬ ದೊಡ್ಡ ಸಮಸ್ಯೆಗೆ ಸರಳವಾಗಿ ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ.

ಈ ಪರಿಹಾರವನ್ನು ನಿಮ್ಮ ಜೀವನದ ಭಾಗವಾಗಿ ಮಾಡಿಕೊಂಡಿದ್ದೇ ಆದಲ್ಲಿ ಖಂಡಿತವಾಗಿಯೂ ನಿಮ್ಮ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಪಡೆದುಕೊಳ್ಳಬಹುದು ಹಾಗೂ ಈ ಪರಿಹಾರವನ್ನು ಪಾಲಿಸುವುದರಿಂದ ಕೇವಲ ಮೈಗ್ರೇನ್ ಸಮಸ್ಯೆ ಮಾತ್ರವಲ್ಲ ನಿಮ್ಮ ದೇಹಕ್ಕೆ ಉತ್ತಮ ಪೋಷಕಾಂಶ ದೊರೆತು ದೇಹ ಗಟ್ಟಿಮುಟ್ಟಾಗುತ್ತದೆ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ಈ ಮೈಗ್ರೇನ್ ತಲೆನೋವನ್ನು ನೀವೂ ದೂರಮಾಡಿಕೊಳ್ಳಬೇಕು ಅಂದಲ್ಲಿ ಮನೆಯಲ್ಲಿ ದೊರೆಯುವ ಕೊಬ್ಬರಿ ಗಸಗಸೆ ಮತ್ತು ಬಾದಾಮಿ ಇವುಗಳನ್ನು ಬಳಸಿಕೊಂಡು ಹೇಗೆ ಪರಿಹಾರ ಮಾಡಿಕೊಳ್ಳಬೇಕು ನೋಡಿ ಮೊದಲಿಗೆ ಕೊಬ್ಬರಿಯನ್ನ ತೆಗೆದುಕೊಳ್ಳಿ ಇದು ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಅಂದರೆ ಪ್ರತಿದಿನ ಕೊಬ್ಬರಿಯನ್ನ ಸ್ವಲ್ಪಮಟ್ಟಿಗೆ ತಿನ್ನುತ್ತಾ ಬಂದರೆ ಇದು ತಲೆನೋವನ್ನು ಮಾತ್ರವಲ್ಲ ರಕ್ತವನ್ನು ಶುದ್ಧಿ ಮಾಡುತ್ತದೆ ಹಾಗೂ ದೇಹವನ್ನು ಪುಷ್ಟಿ ಮಾಡುತ್ತೆ.

ಈ ಕೊಬ್ಬರಿಯನ್ನ ಸ್ವಲ್ಪ ರಂಧ್ರ ಮಾಡಿ ಅದರೊಳಗೆ ಗಸಗಸೆ ಮತ್ತು ಬಾದಾಮಿಯನ್ನು ಸಮ ಪ್ರಮಾಣದಲ್ಲಿ ಅಂದರೆ ಇಪ್ಪತ್ತು ಗ್ರಾಂನಷ್ಟು ಹಾಕಿ ಮುಕ್ಕಾಲು ಲೀಟರ್ ಹಾಲನ್ನು ತೆಗೆದುಕೊಂಡು ಆ ಹಾಲಿನೊಳಗೆ ಕೊಬ್ಬರಿಯನ್ನ ಇರಿಸಬೇಕು ಈ ಹಾಲು ಕುದಿವಾಗ ಕೊಬ್ಬರಿಯೊಳಗೆ ಇರುವ ಈ ಪದಾರ್ಥಗಳು ಕೂಡ ಬಿಸಿಯಾಗುತ್ತದೆ ಹಾಗೂ ಈ ಪದಾರ್ಥಗಳು ಮೆತ್ತಗೆ ಆಗುತ್ತದೆ.

ಇಷ್ಟಾದ ಮೇಲೆ ನೀವು ಈ ಕೊಬ್ಬರಿಯನ್ನು ತೆಗೆದು ಅದರೊಳಗಿರುವ ಮಿಶ್ರಣವನ್ನು ಅಂದರೆ ಕೊಬ್ಬರಿ ಒಳಗಿನ ಭಾಗವನ್ನು ಮತ್ತು ಗಸಗಸೆ ಹಾಗೂ ಬಾದಾಮಿಯನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ ಫ್ರಿಡ್ಜ್ ನೊಳಗೆ ಸ್ಟೋರ್ ಮಾಡಿ ಇಟ್ಟುಕೊಳ್ಳಿ ಅಥವಾ ನೀವು ಫ್ರೆಶ್ ಆಗಿ ಕೂಡ ಇದನ್ನು ತಯಾರಿ ಮಾಡಿಕೊಂಡು ಪ್ರತಿದಿನ ಸೇವನೆ ಮಾಡುತ್ತ ಬರಬಹುದು.

ಈ ರೀತಿ ಮಾಡುವುದರಿಂದ ಅಂದರೆ ಎಕರೆಯೊಳಗಿನ ಮಿಶ್ರಣವನ್ನು ತೆಗೆದುಕೊಂಡು ಅದರ ಪೇಸ್ಟ್ ಮಾಡಿಕೊಂಡು ಹಾಗೂ ಮಿಶ್ರ ಮಾಡಿ ಕುಡಿಯುತ್ತ ಬಂದರೆ ಸ್ಟ್ರೆಸ್ ನಿವಾರಣೆಯಾಗುತ್ತೆ ಜೊತೆಗೆ ಗಸಗಸೆ ನಿಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತಂದು ತಲೆನೋವನ್ನು ನಿಯಂತ್ರಿಸಲು ಸಹಕಾರಿಯಾಗಿರುತ್ತದೆ.ಈ ಸುಲಭ ಪರಿಹಾರ ತಲೆನೋವಿಗೆ ಮಾತ್ರವಲ್ಲ ಜೀರ್ಣಶಕ್ತಿಯನ್ನು ಕೂಡ ಉತ್ತಮವಾಗಿ ಬಿದ್ದ ಹಾಗೆ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುತ್ತೆ.

ಬಾದಾಮಿಯನ್ನು ತಿನ್ನುವುದರಿಂದ ದೇಹಕ್ಕೆ ಉತ್ತಮ ಪೋಷಕಾಂಶಗಳು ದೊರೆಯುತ್ತದೆ.ಈ ಕಾರಣಕ್ಕಾಗಿಯೇ ಕೊಬ್ಬರಿ ಬಾದಾಮಿ ಮತ್ತು ಗಸಗಸೆಯ ಮಿಶ್ರಣ ಮೈಗ್ರೇನ್ ಸಮಸ್ಯೆಗೂ ಪರಿಹಾರ ನೀಡಿ ನಿಮಗೆ ಬಂದಿರುವ ತಲೆ ನೋವನ್ನು ಆದಷ್ಟು ಬೇಗ ನಿವಾರಣೆ ಮಾಡಿ ನಿಮ್ಮನ್ನು ನೋವು ಮುಕ್ತವಾಗಿ ಮಾಡಿ ಆರೋಗ್ಯವನ್ನು ವೃದ್ಧಿಸುತ್ತದೆ.ಹೀಗೆ ಈ ಸರಳ ಪರಿಹಾರ ಪಾಲಿಸಿ ನಿಮ್ಮ ಮೈಗ್ರೇನ್ ಅಥವಾ ಈ ಅರ್ಧ ತಲೆನೋವಿಗೆ ಪರಿಹಾರ ಕಂಡುಕೊಳ್ಳಿ ಧನ್ಯವಾದ.