ಹೊಟ್ಟೆ ಗುಡು ಗುಡು , ಗ್ಯಾಸ್ಟ್ರಿಕ್ ಇಂದ ಬಳಲುತ್ತಿರೋರು ಈ ಒಂದು ಮನೆಮದ್ದು ಮಾಡಿ ಕುಡಿಯಿರಿ ಸಾಕು ಕೆಲವೇ ದಿನಗಳಲ್ಲಿ ಬಾರಿ ಬದಲಾವಣೆ ನೋಡುತೀರಾ..

159

ಗ್ಯಾಸ್ಟ್ರಿಕ್ ಸಮಸ್ಯೆಗೆ ಒಂದೊಳ್ಳೆ ಪರಿಹಾರ ಇದಾಗಿದೆ ಈ ಮಾಹಿತಿಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ 2 ವಿಧಾನವನ್ನು ತಿಳಿಸಿಕೊಡುತ್ತೇವೆ, ಇದನ್ನು ನೀವು ಪಾಲಿಸಿಕೊಂಡು ಬಂದ್ದಿದಲ್ಲಿ ಗ್ಯಾಸ್ಟ್ರಿಕ್ ಎಂಬ ಸಮಸ್ಯೆ ಬಂದ ಕೂಡಲೇ ತಕ್ಷಣಕ್ಕೆ ಪರಿಹಾರ ಪಡೆದುಕೊಳ್ಳಬಹುದು ಅದು ಹೇಗೆ ಎಂಬುದನ್ನು ತಿಳಿಯುವುದಕ್ಕೆ ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ.

ಹೌದು ಗ್ಯಾಸ್ಟ್ರಿಕ್ ಸಮಸ್ಯೆ ಎಂಬುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಯಾಕೆಂದರೆ ತುಂಬ ಸರಳ ಕಾರಣ ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಮತ್ತು ಹೆಚ್ಚಿನ ಮಂದಿ ಕೆಲಸದ ಕಾರಣದಿಂದ ಬೆಳಿಗ್ಗೆ ತಿಂಡಿ ತಿನ್ನುವುದನ್ನು ಬಿಡುತ್ತಾರೆ. ಈ ಕಾರಣದಿಂದಾಗಿಯೇ ಗ್ಯಾಸ್ಟ್ರಿಕ್ ಎಂಬುದು ಹೆಚ್ಚಿನ ಮಂದಿಯಲ್ಲಿ ಕಾಡುತ್ತಿರುವುದರ ಹಿಂದಿನ ಕಾರಣ ಆಗಿದೆ.

ಹಾಗಾಗಿ ಗ್ಯಾಸ್ಟ್ರಿಕ್ ನಿವಾರಣೆಗೆ ನೀವು ಇದೊಂದು ಮನೆಮದ್ದನ್ನು ಮಾಡಿಕೊಳ್ಳಬೇಕಿರುತ್ತದೆ ಅಥವಾ ಯಾವುದೇ ಮನೆ ಮತ್ತು ಗಳನ್ನ ನೀವು ಪಾಲಿಸಿಕೊಂಡು ಬಂದರೆ ಗ್ಯಾಸ್ಟ್ರಿಕ್ ಎಂಬುದಕ್ಕೆ ಶಮನ ಪಡೆಯಬಹುದು ಇಲ್ಲವಾದಲ್ಲಿ ಈ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಿ ಊಟ ಬಿಡುವುದು ಇನ್ನಷ್ಟು ಗ್ಯಾಸ್ ಹೆಚ್ಚುವುದು ಇದರಿಂದ ಬೇರೆ ತರಹದ ಸಮಸ್ಯೆಗಳು ಬರುವುದು ಹಾಗೆ ಮೂಳೆ ನೋವು ಮಂಡಿನೋವು ಕೀಲುನೋವು ಇದೆಲ್ಲವೂ ಉಂಟಾಗುವುದೇ ಈ ವಾಯು ಸಮಸ್ಯೆಯಿಂದಾಗಿ. ಹಾಗಾಗಿ ಅದರ ನಿವಾರಣೆ ಮಾಡೋದಕ್ಕೆ ಈ ಸರಳ ಪರಿಹಾರ ಪ್ರಯತ್ನ ಮಾಡಿ ನೋಡಿ.

ಈ ಮನೆಮದ್ದು ಮಾಡೋದಕ್ಕೆ ಬೇಕಾಗಿರು ಪದಾರ್ಥಗಳು ಲವಂಗ ಸೈಂಧವ ಲವಣ ನಿಂಬೆಹಣ್ಣು ಶುಂಠಿ ಮತ್ತು ಇಂಗು.ಈ ಇಂಗು ಜೀರ್ಣಶಕ್ತಿಯನ್ನ ವೃದ್ಧಿಸುವುದಲ್ಲದೆ ಹಸಿವನ್ನು ಕೂಡ ಹೆಚ್ಚು ಮಾಡುತ್ತದೆ ಯಾಕೆಂದರೆ ಇದು ಜೀರ್ಣಕ್ರಿಯೆಯಲ್ಲಿ ಏನೇ ಸಮಸ್ಯೆಗಳಿದ್ದರೂ ಅದನ್ನು ಪರಿಹಾರ ಮಾಡುವುದಕ್ಕೆ ಸಹಕಾರಿಯಾಗಿರುವುದರಿಂದ ಇಂಗು ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಇರುವ ಹಾಗೆ ನೋಡಿಕೊಳ್ಳಿ ಇದು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಹಾಗೆ ಲವಂಗ ಕೂಡ ನಮ್ಮ ಜಟರದಲ್ಲಿರುವ ಅಗ್ನಿಯನ್ನು ವೃದ್ಧಿಸಿ ಹಸಿವಿಗೆ ಸಂಬಂಧ ಪಟ್ಟ ಸಮಸ್ಯೆಗಳು ದೂರವಾಗಿ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುತ್ತದೆ ಹಾಗೂ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ ಇದರಿಂದ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಎಂದಿಗೂ ಉಂಟಾಗುವುದಿಲ್ಲ.

ಇದರ ಜೊತೆಗೆ ನೀವು ಮಾಡಬೇಕಾದ ಪರಿಹಾರವೇನೆಂದರೆ ನಿಮ್ಮ ಆಹಾರ ಪದ್ದತಿಯನ್ನು ಸರಿಯಾಗಿ ಪಾಲಿಸಬೇಕು ಸರಿಯಾದ ಸಮಯಕ್ಕೆ ನೀವು ಊಟ ಮಾಡಬೇಕು.ಈಗ ನಾವು ಹೇಳಲು ಹೊರಟಿರುವ ಮನೆಮದ್ದು ಮಾಡುವ ಮೊದಲ ವಿಧಾನ ಮೊದಲಿಗೆ ನೀರನ್ನು ಕುದಿಸಿಕೊಳ್ಳಿ ಅದಕ್ಕೆ ಇಂಗನ್ನು ಹಾಕಿ ಬಳಿಕ ಆ ನೀರು ಸ್ವಲ್ಪ ತಣ್ಣಗೆ ಆದ ಮೇಲೆ ಅದಕ್ಕೆ ನಿಂಬೆ ಹಣ್ಣಿನ ರಸ ಮತ್ತು ಲವಂಗದ ಪುಡಿಯನ್ನು ಮಿಶ್ರಮಾಡಿ ಕುಡಿಯಿರಿ ಇದನ್ನು ನೀವು ಊಟವಾದ ಬಳಿಕ ಮಾಡಬೇಕು ಇದರಿಂದ ನಿಮಗೆ ತೇಗು ಬರುತ್ತದೆ ಹಾಗೆ ಆ ತೇಗು ಅಜೀರ್ಣವನ್ನು ದೂರ ಮಾಡಿ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡುತ್ತದೆ.

ಮಾಡಬಹುದಾದ ಎರಡನೇ ಪರಿಹಾರ ಶುಂಠಿಪುಡಿಯನ್ನು ತೆಗೆದುಕೊಳ್ಳಿ ಜೊತೆಗೆ ಇಂಗು ಸಹ ಇದಕ್ಕೆ ಬೇಕಾಗಿರುತ್ತದೆ ಹಾಗೆ ಚಿಟಿಕೆಯಷ್ಟು ಸೈಂಧವ ಲವಣ ಈ 3ಮಿಶ್ರಣವನ್ನು ಪುಡಿ ಮಾಡಿ ಇಟ್ಟುಕೊಂಡು, ಇದರ ಬಿಸಿ ನೀರಿಗೆ ಹಾಕಿ ಮಿಶ್ರ ಮಾಡಿ ಕುಡಿಯಿರಿ ಇದರಿಂದ ಕೂಡ ನಿಮಗೆ ಹಸಿವು ಚೆನ್ನಾಗಿ ಆಗುತ್ತದೆ ಹಾಗೂ ತಿಂದ ಆಹಾರ ಕೂಡ ಸರಿಯಾಗಿ ಜೀರ್ಣವಾಗುತ್ತದೆ.

ಈ ಪರಿಸರದಲ್ಲಿ ಯಾವುದೇ ವಿಧಾನವನ್ನು ನೀವು ಪಾಲಿಸಿದರೂ ಹಸಿವು ಚೆನ್ನಾಗಿ ಆಗುತ್ತೆ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುತ್ತೆ ಹಾಗೆ ಗ್ಯಾಸ್ಟ್ರಿಕ್ ಸಮಸ್ಯೆ ಎಂಬುದು ಕೂಡ ಪರಿಹರವಾಗುತ್ತದೆ. ಹೀಗೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಯಲ್ಲಿಯೇ ಮಾಡಬಹುದು ಉತ್ತಮ ಪರಿಹಾರ ಇದರಿಂದ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪ್ರಭಾವ ಬೀರುವುದಿಲ್ಲ.

WhatsApp Channel Join Now
Telegram Channel Join Now