ಬಾರಿ ತಿರುವು ಪಡೆದುಕೊಂಡ ಕೆಜಿಫ್ 3 , ಪ್ರಭಾಸ್ ಎಂಟ್ರಿ ಯಾರು ಊಹಿಸದ ದೊಡ್ಡ ತಿರುವು.. ಅಷ್ಟಕ್ಕೂ ಪ್ರಭಾಸ್ ಗೆ ಯಾವ ಪಾತ್ರ…

134

ಹೌದು ಈಗಾಗಲೇ ಭಾರತದೆಲ್ಲೆಡೆ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಕೆಜಿಎಫ್ 2 ಅಲೆ ಹಬ್ಬಿದೆ. ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಎಷ್ಟು ದೊಡ್ಡ ಸಾಧನೆ ಮಾಡಿದೆ ಎಂದರೆ ಬಹಳಷ್ಟು ಸಿನೆಮಾದ ಇತಿಹಾಸಗಳನ್ನು ಮೂಲೆಗುಂಪು ಮಾಡಿದೆ ಕೆಜಿಎಫ್ ಸಿನಿಮಾ. ಕೆಜಿಎಫ್ ಸಿನಿಮಾ ನೋಡುವಾಗ ನಿಮಗೆ ಮತ್ತೊಂದು ವಿಷಯ ತಿಳಿದಿರುತ್ತದೆ. ಅದೇನಪ್ಪ ಅಂದರೆ ಕೆಜಿಎಫ್ ಚಾಪ್ಟರ್ 3 ಕೂಡ ಮೂಡಿ ಬರಲಿದೆ ಹಾಗೂ ಈ ವಿಚಾರ ಬಹಳಷ್ಟು ಮಂದಿಗೆ ಈಗಾಗಲೇ ಕುತೂಹಲ ಮೂಡಿಸಿದೆ ಕೆಜಿಎಫ್ ಚಾಪ್ಟರ್ 3 ಸಹ ಹೇಗೆ ಬರಲಿದೆ ಎಂಬುದು ಈಗಾಗಲೇ ಬಹಳಷ್ಟು ಮಂದಿಯಲ್ಲಿ ಕುತೂಹಲವನ್ನು ಮೂಡಿಸಿದೆ ಹಾಗಾದ್ರೆ ಕೆಜಿಎಫ್ ಚಾಪ್ಟರ್ 3 ಹೇಗೆ ಮೂಡಿ ಬರಲಿದೆ ಗೊತ್ತಾ ಈ ಕುರಿತು ಇಲ್ಲಿದೆ ನೋಡಿ ಸಣ್ಣ ಮಾಹಿತಿ.

ಹೌದು ಕೆಜಿಎಫ್ ಚಾಪ್ಟರ್ 1 ಸಿನಿಮಾ ರಿಲೀಸ್ ಆದಾಗಲೇ ಎಷ್ಟು ಹಿಟ್ ಕಾಣುತ್ತೆ ಅಂತ ಯಾರು ಕೂಡ ಊಹೆ ಮಾಡಿರಲಿಲ್ಲ ಆದರೆ ಚಾಪ್ಟರ್ 2 ಜನರಲ್ಲಿ ಬಹಳ ಕುತೂಹಲವನ್ನು ಮೂಡಿಸಿತ್ತು ಮತ್ತು ಸಿನಿಮಾ ರಿಲೀಸ್ ಆದಾಗಲೂ ಕೂಡ ಬಹಳಷ್ಟು ಮಂದಿ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನ ವೀಕ್ಷಣೆ ಮಾಡಲೇಬೇಕಂತ ಪ್ರಯತ್ನಪಟ್ಟು ಮೊದಲ ದಿನವೇ ಸಿನಿಮಾ ವೀಕ್ಷಣೆ ಮಾಡಿದ್ದರು ಕೂಡ ಹಾಗೆ ವಾರಕ್ಕೂ ಮುನ್ನವೇ ಟಿಕೆಟ್ ಗಳು ಬುಕ್ ಆಗಿದ್ದವು ಈಗಾಗಲೇ ಸಾವಿರದ ಇನ್ನೂರು ಕೋಟಿ ರೂಪಾಯಿ ದೋಸೆ ಸಿನಿಮಾ ವಿಶ್ವದೆಲ್ಲೆಡೆ ಭಾರೀ ಸಂಚಲನ ಮೂಡಿಸಿದ್ದು ಕೂಡ ಹಾಗೆ ಇವತ್ತಿಗೂ ವೀಕೆಂಡ್ ನಲ್ಲಿ ಜನರು ಕೆಜಿಎಫ್ ಚಾಪ್ಟರ್ 2 ಸಿನಿಮಾ ವೀಕ್ಷಣೆ ಮಾಡಲು ಬರುತ್ತಿದ್ದಾರೆ.

ಈಗ ಕೆಜಿಎಫ್ 2 ಸಿನೆಮಾ ಓಟಿಟಿ ಗೂ ಕೂಡ ಬಂದಿತು ಅಮೆಜಾನ್ ಪ್ರೈಮ್ ನಲ್ಲಿಯೇ ಈ ಸಿನೆಮಾ ವೀಕ್ಷಣೆ ಮಾಡುವರು 199ರೂಪಾಯಿಗಳನ್ನು ನೀಡಿ ಸಿನೆಮಾ ನೋಡಬೇಕಿದೆ ಆದರೆ ಈ ಆಫರ್ ಕೆಲವು ದಿನಗಳು ಮಾತ್ರ ಬಳಿಕ ಅಮೆಜಾನ್ ಪ್ರೈಮ್ ನಲ್ಲಿ ಉಚಿತವಾಗಿ ನೀವು ಕಾಣಬಹುದು. ಸದ್ಯ ಕೆಜಿಎಫ್ ಚಾಪ್ಟರ್ 2 ಹಾಡುಗಳು ಯೂಟ್ಯೂಬ್ ನಲ್ಲಿ ಲಹರಿ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ಈ ಸಿನೆಮಾದ ತೂಫಾನ್ ಹಾಡು ಸಖತ್ ಸದ್ದು ಮಾಡಿತ್ತು, ಹಾಗೆ ಈ ಹಾಡಿನಲ್ಲಿ ಚಿತ್ರದ ನಾಯಕಿಗೆ ರಾಕಿ ಭಾಯ್ ಕುರಿತು ಹುಡುಗರು ಅರ್ಧದಷ್ಟು ಕಥೆಯನ್ನು ಹೇಳಿದ್ದು ಹಾಡು ಮಾತ್ರ ಭಾರಿ ಸದ್ದು ಮಾಡಿತ್ತು. ಸಿನಿಮಾದಲ್ಲಿ ರವಿ ಬಸ್ರೂರ್ ಅವರ ಹಾಡು ಈ ಬಾರಿಯೂ ಕೂಡಾ ಭಾರಿ ಹಿಟ್ ಆಗಿದ್ದು ಜನರ ಮನ ಮುಟ್ಟಿದೆ.

ಸದ್ಯ ಕೆಜಿಎಫ್ ಚಾಪ್ಟರ್ 2ರ ಬಳಿಕ ಎಲ್ಲರ ಗಮನ ಇರುವುದು ಕೆಜಿಎಫ್ ಚಾಪ್ಟರ್ 3 ಮೇಲೆ ಹೌದು ಕೆಜಿಎಫ್ ಚಾಪ್ಟರ್ 3 ಹೇಗೆ ಮೂಡಿಬರಲಿದೆ ಯಾರೆಲ್ಲ ಇರಲಿದ್ದಾರೆ ಅನ್ನುವ ಕುತೂಹಲ ಮಾತ್ರ ಜನರಲ್ಲಿ ಕಾಡುತ್ತಿದ್ದು, ಸಿನೆಮಾ ನಿರ್ದೇಶಕರಾಗಿರುವ ಪ್ರಶಾಂತ್ ನೀಲ್ ಅವರು ಪ್ರಭಾಸ್ ರವರ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ಸದ್ಯ ಹರಿದಾಡುತ್ತಿರುವ ವಿಚಾರವೇನು ಅಂದರೆ ಕೆಜಿಎಫ್ ಚಾಪ್ಟರ್ 3ರಲ್ಲಿ ಪ್ರಭಾಸ್ ಅವರು ಕೂಡ ಎಂಟ್ರಿ ಕೊಡಲಿದ್ದು, ಅವರ ಜೊತೆ ಸಾಕಷ್ಟು ಹಾಲಿವುಡ್ ನಟರು ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

ಅವರು ಸೀರೀಸ್ ನಲ್ಲಿ ಮೂಡಿಬರಲಿದ್ದು ಈಗಾಗಲೇ ಕೆಜಿಎಫ್ ಚಾಪ್ಟರ್ 3 ಕೂಡ ಭಾರೀ ಕುತೂಹಲವನ್ನು ಮೂಡಿಸಿದೆ. ಅಷ್ಟೇ ಅಲ್ಲ ಪ್ರಶಾಂತ್ ನೀಲ್ ಅವರು ಸದ್ಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಈ ಸಿನಿಮಾದ ಚಿತ್ರೀಕರಣ ಮುಗಿದ ಮೇಲೆ ಕೆಜಿಎಫ್ ಚಾಪ್ಟರ್ 3 ಸೆಟ್ಟೇರಲಿದೆ.