ಶಿವಣ್ಣನನ್ನು ನೋಡಿದ ಕೂಡಲೇ ಅಪ್ಪು ಎಂದು ಕೂಗಿ ಓಡೋಡಿ ಬಂದ ಮಗು.. ಆಗ ಅಲ್ಲೇ ಇದ್ದ ಅಶ್ವಿನಿ ಮಾಡಿದ್ದೇನು ನೋಡಿ

167

ಒಬ್ಬ ವ್ಯಕ್ತಿ ಅನ್ನೋ ನಾವು ನೋಡಿದ ಕೂಡಲೇ ಅವರು ಏನೆಂದು ತಿಳಿದುಕೊಳ್ಳಲು ಸಾಧ್ಯವಿಲ್ಲ ಹಾಗೆ ಅವರ ಜೊತೆ ಒಡನಾಟ ಇರದೇ ಇದ್ದರೂ ಕೂಡ ಅವರು ಏನು ಅಂತ ಅರ್ಥ ಆಗೋದಿಲ್ಲ. ಹಾಗೆ ವ್ಯಕ್ತಿಯ ಜೊತೆ ಇದ್ದಾಗಲೇ ಅವನ ವ್ಯಕ್ತಿತ್ವವನ್ನು ನಾವು ತಿಳಿದುಕೊಳ್ಳಲು ಸಾಧ್ಯ ಅಲ್ವಾ ಆದರೆ ಅಪ್ಪು ಅವರು ಅದ್ಯಾಕೋ ಎಲ್ಲರಿಗೂ ಬಹು ಬೇಗ ಇಷ್ಟ ಆಗಿ ಹೋದರು ತಮ್ಮ ಬಾಲ್ಯದಲ್ಲಿಯೆ ಸಿನಿಮಾರಂಗಕ್ಕೆ ಬಂದ ಅಪ್ಪು ಚಿಕ್ಕವಯಸ್ಸಿನಲ್ಲಿಯೇ ಬಹಳಷ್ಟು ಸಾಧನೆಗಳನ್ನು ಮಾಡಿದರು ನ್ಯಾಷನಲ್ ಪ್ರಶಸ್ತಿ ಪಡೆದುಕೊಂಡರು ಹಾಗೆ ನಟನಾಗಿಯೂ ಕೂಡ ಬಹಳಷ್ಟು ಅವಾರ್ಡ್ ಗಳನ್ನ ಪಡೆದುಕೊಂಡಿರುವಂತಹ ನಟ ಪುನೀತ್ ರಾಜ್ ಕುಮಾರ್ ಅವರು ಅವರ ವ್ಯಕ್ತಿತ್ವಕ್ಕೆ ಯಾವ ಅವಾರ್ಡ್ ಕೊಟ್ಟರೂ ಸಾಲದು.

ಹೌದು ಅಪ್ಪು ಕೇವಲ ನಟನೆಯಿಂದ ಮಾತ್ರ ಎಲ್ಲರನ್ನೂ ತನ್ನತ್ತ ಸೆಳೆದಿದ್ದ ಅವರು ಮಾಡುವ ಒಳ್ಳೆಯ ಕೆಲಸ ಸದಾ ನಗುವ ಭಾವನೆ ಎಲ್ಲರ ಬಳಿಯೂ ಸರಳವಾಗಿರುವುದು ನಮ್ಮವರೇ ಅಂದುಕೊಳ್ಳುವ ಆ ಗುಣ ಇವರನ್ನು ಎಲ್ಲರೂ ಇಷ್ಟ ಪಡುವಂತೆ ಮಾಡಿದೆ ಹೌದು ಇವರೊಬ್ಬರು ಅಜಾತಶತ್ರು ಅಪ್ಪು ಇಲ್ಲ ಅನ್ನುವ ವಿಷಯ ತಿಳಿಯುತ್ತಿದ್ದ ಹಾಗೆ ಅಂತಹ ಮಹಾತ್ಮನನ್ನು ನಮ್ಮ ರಾಷ್ಟ್ರದ ಮಹಾಪಿತ ಅಂತ ಅಂತಾರೆ ಅವರನ್ನು ಅಂತಿಮವಾಗಿ ನೋಡೋದಕ್ಕೆ ಬರುವುದಕ್ಕಿಂತ ಅಧಿಕ ಮಂದಿ ಅಪ್ಪು ಅವರನ್ನ ನೋಡಲು ಬಂದಿದ್ದಾರೆ ಅಂದರೆ ತಿಳಿಯಿರಿ ಅಪ್ಪು ಎಂತಹ ಮಹಾತ್ಮಾ ಅಂತ, ಅವರು ಎಂತಹ ವ್ಯಕ್ತಿತ್ವವನ್ನ ಹೊಂದಿದ್ದರೂ ಅಂತ ಹೌದು ಇವರು ಯಾವತ್ತಿಗೂ ಬಲಗೈ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಅನ್ನುವ ವ್ಯಕ್ತಿತ್ವವುಳ್ಳವರು ಇಂತಹವರನ್ನು ಇವರ ಜೊತೆ ಇದ್ದೆ ಇವರನ್ನು ಅರ್ಥ ಮಾಡಿಕೊಳ್ಳಬೇಕಿಲ್ಲ ದೂರದಿಂದಲೇ ಇವರೇನು ಎಂದು ಎಲ್ಲರಿಗೂ ಈಗಾಗಲೇ ಗೊತ್ತಿದೆ. ಹೌದು ಬರೀ ಕರ್ನಾಟಕಕ್ಕೆ ಮಾತ್ರವಲ್ಲ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವದೆಲ್ಲೆಡೆ ಅಪ್ಪು ಅವರು ಇಲ್ಲ ಎಂಬ ವಿಚಾರ ತಿಳಿದಿದ್ದ ಹಾಗೆ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದರು.

ಇಷ್ಟು ಮಾತ್ರವಲ್ಲ ಅವರು ಇಲ್ಲ ವಾದಾಗಿನಿಂದಲೂ ರಾಜ್ಯದಲ್ಲಿ ಏನೇ ಕಾರ್ಯಕ್ರಮಗಳು ನಡೆದರೂ ಜಾತ್ರಾಮಹೋತ್ಸವ ನಡೆದರೂ ಅಲ್ಲಿ ಅಪ್ಪು ಅವರ ಫೋಟೋವನ್ನ ನಾವು ನೋಡಿರುತ್ತೆವೆ ಅವರನ್ನು ದೇವರ ರೀತಿ ನೋಡಲಾಗುತ್ತಿದೆ. ಎಷ್ಟೋ ಜನರು ಇವತ್ತಿಗೂ ಅಪ್ಪು ಅವರ ಫೋಟೋವನ್ನು ನೋಡಿಯೇ ತಮ್ಮ ದಿನ ಶುರು ಮಾಡುತ್ತಿದ್ದಾರೆ ಅಂತಹ ಆದರ್ಶ ವ್ಯಕ್ತಿ ಮತ್ತು ಇವರನ್ನ ನೋಡಿ ಬಹಳಷ್ಟು ಮಂದಿ ಒಳ್ಳೆಯತನವನ್ನು ಕಲಿತಿದ್ದಾರೆ ಇವರನ್ನ ನೋಡಿ. ಈಗಾಗಲೇ ಇವರನ್ನ ನೋಡಿಯೇ ಬಹಳಷ್ಟು ಜನ ಅಪ್ಪು ಹಾದಿಯಲ್ಲಿಯೇ ತಾವು ನಡೆಯಬೇಕು ಅಂತ ನೇತ್ರದಾನವನ್ನು ಕೂಡ ಮಾಡಿದ್ದಾರೆ.

ಇಂತಹ ಮುಗ್ಧ ಮನಸ್ಸಿನ ವರಣ್ಣ ಕಳೆದುಕೊಂಡು ನಾವೇ ಇಷ್ಟು ಬೇಸರ ಮಾಡಿಕೊಳ್ಳುತ್ತಿದ್ದೇವೆ ದೊಡ್ಮನೆ ಜನರಿಗೆ ಹೇಗಾಗಿರಬೇಡ ತನ್ನ ತಮ್ಮನನ್ನು ಕಳೆದುಕೊಂಡ ಶಿವಣ್ಣ ಮತ್ತು ರಾಘಣ್ಣ ನಿಗೆ ಬದುಕೇ ಬೇಡವೆನ್ನಿಸಿತ್ತು ಆದರೆ ಅಪ್ಪು ಅವರು ನಡೆಸಿಕೊಡುತ್ತಿದ್ದ ಬಹಳಷ್ಟು ಸಮಾಜಮುಖಿ ಕೆಲಸಗಳು ಕಾರ್ಯಕ್ರಮಗಳನ್ನ ಅಪ್ಪು ಇಲ್ಲದ ಸಮಯದಲ್ಲಿ ನಾವು ನೋಡಿಕೊಳ್ಳಬೇಕೆಂದು ಈ ಇಬ್ಬರು ಸಹೋದರರು ಬಹಳಷ್ಟು ಪುಣ್ಯಕೆಲಸಗಳನ್ನು ಈಗಾಗಲೇ ಮಾಡಿದರೆ ಹಾಗೆ ತಮ್ಮನನ್ನು ಮರೆಯಲು ಸಾಧ್ಯವಾಗದೆ ಶಿವಣ್ಣ ಅವರು ಬಹಳಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಹಾಗೆ ರಿಯಾಲಿಟಿ ಶೋವೊಂದರಲ್ಲಿ ಕೂಡ ತೀರ್ಪುಗಾರರಾಗಿ ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ ಶಿವಣ್ಣ.

ಶಿವಣ್ಣ ಅವರ ಬಗ್ಗೆ ಮಾತನಾಡುವಾಗ ಆ ವಿಚಾರವೂ ಕೂಡ ಮಾತನಾಡಬೇಕು ತನ್ನ ತಮ್ಮನನ್ನು ಕಳೆದುಕೊಂಡು ಬಹಳ ನೋವು ಎದುರಿಸುತ್ತಿರುವ ಶಿವಣ್ಣ ಮಕ್ಕಳ ಜೊತೆ ಮಕ್ಕಳಾಗಿ ಹೌದು ಕಳೆದ ಕಾರ್ಯಕ್ರಮವೊಂದರಲ್ಲಿ ಶಿವಣ್ಣ ಅವರು ಕೂಡ ಭಾಗಿಯಾಗಿದ್ದು ಆ ಮಗುವಿನ ತೊಟ್ಟಿಲು ಶಾಸ್ತ್ರದಲ್ಲಿ ತಾವು ಕೂಡ ಮಗುವಾಗಿದ್ದಾರೆ ಹಾಗೆ ಶಿವಣ್ಣ ಅವರನ್ನ ನೋಡಿ ಮಗುವೊಂದು ಅಪ್ಪು ಎಂದು ಶಿವಣ್ಣ ಅವರನ್ನು ಕೂಗಿ ಮಾತನಾಡಿಸಿದ್ದು, ನಾನು ಅಪ್ಪು ರೀತಿ ಕಾಣಿಸುತ್ತಿದ್ದೀನ, ಹೌದು ನಾನೂ ಅವನ ಹಾಗೆ ಇರೋದು ಅಂತ ಆ ಮಗುವನ್ನು ನಗುತ್ತ ಮಾತನಡೆಸಿದ್ದಾರೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.