ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಈ ವಸ್ತು ಇಟ್ಟು ನೋಡಿ ಸಾಕು ನಿಮ್ಮ ಜೀವನ ಕೆಲವೇ ದಿನಗಳಲ್ಲಿ ಬಾರಿ ಬದಲಾವಣೆ ಆಗುತ್ತೆ..

135

ನಿಮ್ಮ ಮನೆಯಲ್ಲಿ ಪೂಜಾ ಕೋಣೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಅಥವಾ ಈ ಕೆಲವೊಂದು ವಸ್ತುಗಳನ್ನು ತೆಗೆದರೆ ಎಷ್ಟೂ ಅದೃಷ್ಟ ಉಂಟಾಗುತ್ತದೆ ಅನ್ನುವುದು ನೋಡಿ ನೀವು ನಂಬಲಾಗುವುದಿಲ್ಲ ಆದರೂ ಇದು ಸತ್ಯ…ಹೌದು ನಮಸ್ಕಾರಗಳು ಪ್ರಿಯ ಸ್ನೇಹಿತರೆ ಹಿಂದೂ ಸಂಪ್ರದಾಯದಲ್ಲಿ ದೇವರ ಆರಾಧನೆಗೆ ಎಂತಹ ಪ್ರಾಧಾನ್ಯತೆ ಪ್ರಾಮುಖ್ಯತೆ ನೀಡಲಾಗಿದೆ.

ಎಂಬುದು ಗೊತ್ತೇ ಇದೆ ಮತ್ತು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಮನೆಯಲ್ಲಿ ಕಡ್ಡಾಯವಾಗಿ ನಾವುಗಳು ಪೂಜೆ ಮಾಡುತ್ತೇವೆ ದೇವರ ಆರಾಧನೆ ಮಾಡುತ್ತೇವೆ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಮತ್ತು ನಾವು ಮಾಡಿರುವಂತಹ ಪಾಪಕರ್ಮಗಳು ನಿವಾರಣೆಯಾಗಲಿವೆ ಎಂಬ ಕಾರಣಕ್ಕಾಗಿ ಪೂಜೆ ಮಾಡ್ತೇವೆ ಹಾಗೂ ನಮ್ಮ ಕೋರಿಕೆಗಳನ್ನು ದೇವರಲ್ಲಿ ಪ್ರಾರ್ಥಿಸಿ ಕೊಳ್ಳುವ ಮೂಲಕ ದೇವರಲ್ಲಿ ಕೇಳಿಕೊಳ್ಳುವ ಮೂಲಕ ನಮ್ಮ ಕಷ್ಟಗಳನ್ನು ದೂರ ಮಾಡು ಎಂದು.

ಎಲ್ಲಾ ಸಮಯದಲ್ಲಿಯೂ ದೇವರನ್ನ ನೋಡುವುದಕ್ಕೆ ದೇವರ ದರ್ಶನ ಪಡೆಯುವುದಕ್ಕೆ ಮತ್ತು ದೇವರನ್ನು ಪ್ರಾರ್ಥಿಸಿ ಕೊಳ್ಳುವುದಕ್ಕೆ ದೇವಾಲಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ನಾವುಗಳು ಮನೆಯಲ್ಲಿಯೇ ಮನೆಯ ಮುಖ್ಯ ಭಾಗವೆಂದು ಮನೆಯ ಪ್ರಾಣ ಸ್ಥಾನವೆಂದು ದೇವರ ಮನೆಯನ್ನು ಮಾಡಿರುತ್ತೇವೆ ಮತ್ತು ಪ್ರತ್ಯೇಕವಾಗಿ ದೇವರ ಕೊಠಡಿಯನ್ನು ಸದಾ ಸ್ವಚ್ಛವಾಗಿ ಇಡುವುದು ಒಳ್ಳೆಯದು. ಹೌದು ಯಾರ ಮನೆಯಲ್ಲಿ ದೇವರ ಕೋಣೆ ಸ್ವಚ್ಛವಾಗಿರುತ್ತದೆ ಹಾಗೂ ದೇವರ ಕೋಣೆಯಲ್ಲಿ ಈ ಕೆಲವೊಂದು ವಸ್ತುಗಳು ಇರುತ್ತದೆ ಅಂಥವರ ಮನೆಯಲ್ಲಿ ಸದಾ ಅದೃಷ್ಟವೆಂಬುದು ನೆಲೆ ಆಗಿರುತ್ತದೆ ಲಕ್ಷ್ಮೀ ದೇವಿಯ ಅನುಗ್ರಹ ಎಂಬುದು ಅವರ ಮೇಲೆ ಸದಾ ಇರುತ್ತದೆ.

ಹಾಗಾದರೆ ಅದೃಷ್ಟವನ್ನ ಸೆಳೆಯುವ ಸಕಾರಾತ್ಮಕ ಶಕ್ತಿಯನ್ನು ಸೆಳೆಯುವ ಆ ವಸ್ತು ಯಾವುದು ಎಂಬುದನ್ನ ಹೇಳ್ತೆವೆ ಬನ್ನಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.ಹೌದು ಸ್ನೇಹಿತರೆ ದೇವರ ಕೋಣೆಯಲ್ಲಿ ಅಂದಿನ ಕಾಲದಲ್ಲಿ ಕೆಲವೊಂದು ವಸ್ತುಗಳ ಕಡ್ಡಾಯವಾಗಿ ಇಡುತ್ತಿದ್ದರು ದೊಡ್ಡವರ ಮನೆ ನೋಡಿದಾಗ ಅವರ ಮನೆ ಎಷ್ಟು ಕಳೆಯಿಂದ ಕೂಡಿರುತ್ತಿತ್ತು .

ಅಂತಹ ಮನೆಯಲ್ಲಿ ಕಾಲು ಇಡುತ್ತಿದ್ದ ಹಾಗೆ ನಮ್ಮಲ್ಲಿ ಏನೋ ಚಂದದ ಅನುಭವ ನಮ್ಮಲ್ಲಿರುವ ನೋವು ದೂರವಾಗಿ ತನ್ನಿಂತಾನಾಗೇ ಮುಖದ ಮೇಲೆ ಸಂತಸ ಮೂಡುತ್ತಿತ್ತು ಮನಸ್ಸಿನಲ್ಲಿ ಇರುವ ಭಾರ ಕಡಿಮೆಯಾಗಿ ಮುಖದಲ್ಲಿ ಕಳೆ ಹುಟ್ಟುತ್ತಿತ್ತು ಅಂತಹ ಅನುಭವ ನಮಗೆ ಆಗುತ್ತಿದ್ದದ್ದು ಯಾಕೆ ಅಂದರೆ ಅದು ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯ ಪ್ರಭಾವ ಅಂತ ಹೇಳಬಹುದು.

ಹಾಗಾಗಿ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಜೊತೆಗೆ ದೇವರ ಕೋಣೆಯಲ್ಲಿ ಈ ಒಂದು ವಸ್ತುವನ್ನ ಇಡುವುದು ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿಯ ನೆಲೆಯಾಗಿರುತ್ತದೆ. ಆ ವಸ್ತು ಯಾವುದು ಅಂದರೆ ಮಜ್ಜಿಗೆ ಕಡೆಯುವ ಕೋಲು. ಹೌದು ಮಜ್ಜಿಗೆ ಕಡೆಯುವ ಕೋಲನ ನೀವು ನೋಡಿದ್ದೀರಾ ಅಂದಿನ ಕಾಲದಲ್ಲಿ ಯಾರೂ ಕೂಡ ಈ ವಸ್ತುವನ್ನು ಕಾಲಿಂದ ಒದಿಯುವುದಾಗಲೀ ಅಥವಾ ಎಲ್ಲೆಂದರೆ ಅಲ್ಲಿ ಮಜ್ಜಿಗೆ ಕಡೆಯುವ ಕಡಗೋಲನ್ನು ಇಡುತ್ತಿರಲಿಲ್ಲ ಅದನ್ನು ದೇವರ ಕೋಣೆಯಲ್ಲಿ ಇಡುತ್ತಿದ್ದರು ಆ ಮಜ್ಜಿಗೆ ಕಡೆಯುವ ಕೋಲನ್ನು ಮನ್ ಅಂತ ಕೂಡ ಕರೀತಾರೆ ಇದು ಸಾಗುವಾನಿ ಮರದಿಂದ ಮಾಡಿದ ವಸ್ತುವೇ ಆಗಿರಬೇಕು, ಅದನ್ನು ದೇವರ ಕೋಣೆಯಲ್ಲಿ ಇಡುವುದರಿಂದ ಅಲ್ಲಿ ಏನೊ ವಿಶೇಷ ಶಕ್ತಿ ಇರುವ ಅನುಭವವಾಗುತ್ತದೆ.

ಮತ್ತೊಂದು ವಸ್ತು ಯಾವುದು ಅಂದರೆ ಗೋಪಾಲ ಇದನ್ನು ನೀವು ನೋಡಿರ್ತೀರಾ ಶ್ರಾವಣದಲ್ಲಿ ಮನೆಯ ದಾಸರು ಬಂದಾಗ ಅವರ ಜೊತೆ ಅಕ್ಕಿ ತುಂಬಿಸಿಕೊಳ್ಳುವುದಕ್ಕೆ ಈ ವಸ್ತು ತರುತ್ತಿದ್ದರು, ಇದಕ್ಕೆ ಗೋಪಾಲ ಅಂತ ಕರಿತಾರೆ ಅದನ್ನು ದೇವರ ಕೋಣೆಯಲ್ಲಿ ಇರಿಸಬೇಕು, ಸದಾ ಆ ಗೋಪಾಲ ಧಾನ್ಯಗಳಿಂದ ಪೂರ್ತಿ ಆಗಿರಬೇಕಿತ್ತು ಇದರ ಸಂಕೇತವೇನೂ ಅಂದರೆ ಅದು ಮನೆಯಲ್ಲಿ ಧಾನ್ಯಗಳ ಕೊರತೆ ಆಗದಿರುವ ಹಾಗೆ ಇದು ಕಾಪಾಡುತ್ತದೆ ಸದಾ ಮನೆಯಲ್ಲಿ ಅನ್ನಪೂರ್ಣೇಶ್ವರಿಯ ಅನುಗ್ರಹ ಇರುವಂತೆ ಮಾಡುತ್ತದೆ. ಈ ಎರಡೂ ವಸ್ತುಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಕೇತವಾಗಿರುತ್ತದೆ, ಮನೆಗೆ ತಾಯಿ ಲಕ್ಷ್ಮೀ ದೇವಿಯ ಅನುಗ್ರಹ ಆಗುವಂತೆ ಮಾಡುತ್ತದೆ.