ನಿಮ್ಮ ಹಲ್ಲು ಎಷ್ಟೇ ಹಳದಿ ಆಗಿ ಕಂಗೆಟ್ಟು ಹೋಗಿದ್ದರು ಸಹ ಈ ಒಂದು ಮನೆ ಮದ್ದು ಮಾಡಿ ಬಳಸಿ ಸಾಕು ಕ್ರಮೇಣ ಹಲ್ಲುಗಳು ಬೆಳ್ಳಗಾಗುತ್ತೆ…

162

ಎಷ್ಟೇ ಕರೆಗಟ್ಟಿದ ಹಲ್ಲು ಅದರೂ ಅದನ್ನು ಹೊಳಪಾಗಿಸಲು ಈ ಪರಿಹಾರವನ್ನು ಮಾಡಿ ಚಿಂತಿಸಬೇಡಿ ಮನೆಯಲ್ಲಿಯೇ ಪಡೆದುಕೊಳ್ಳಬಹುದು ಹೊಳಪಾದ ದಂತಗಳನ್ನು…ಕೆಲವೊಂದು ಬಾರಿ ಎಲ್ಲರೂ ಕೂಡ ನಮ್ಮ ಜೊತೆ ನಿಂತು ಮಾತನಾಡುತ್ತಾ ಇರುತ್ತಾರೆ. ನಾವು ಎಲ್ಲರ ನಡುವೆ ಮಾತನಾಡುತ್ತಾ ಆಗ ನಗುವುದಕ್ಕೂ ಹಿಂಜರಿಯುತ್ತಿದ್ದೇವೆ ಅಂದಾಗ, ಅದಕ್ಕೆ ಕಾರಣ ನಮ್ಮ ದಂತಗಳೆ ಆಗಿರುತ್ತದೆ ಯಾಕೆ ಅಂತೀರಾ. ಯಾಕೆಂದರೆ ನಮಗೆ ಮುಜುಗರ ಆಗುತ್ತಾ ಇರುತ್ತದೆ,

ಯಾರು ನಮ್ಮ ಹಲ್ಲುಗಳನ್ನು ನೋಡುತ್ತಾರೊ, ನಮ್ಮ ಹಲ್ಲುಗಳು ಹಳದಿ ಕಟ್ಟಿರುವುದನ್ನು ನೋಡಿದರೆ ನಮ್ಮನ್ನು ನೋಡಿ ಬೇರೆಯವರು ಹೀಯಾಳಿಸುತ್ತಾರೆ ಅಥವಾ ನಮ್ಮ ಹಲ್ಲುಗಳನ್ನು ನೋಡಿ ಅವರು ಮುಜುಗರಪಟ್ಟುಕೊಳ್ತಾರೊ ಎಂಬ ಆಲೋಚನೆ ಕೆಲವೊಂದು ಸನ್ನಿವೇಶಗಳಲ್ಲಿ ನಮಗೆ ಬಂದಿರುತ್ತದೆ. ಇದನ್ನು ಸಾಮಾನ್ಯವಾಗಿ ಹಳದಿ ಗಟ್ಟಿರುವಂತಹ ಹಲ್ಲುಗಳನ್ನು ಉಳ್ಳವರು ಅನುಭವಿಸಿರುತ್ತಾರೆ ಅಥವಾ ಯೋಚನೆ ಮಾಡಿರುತ್ತಾರೆ.

ಆದ್ದರಿಂದ ಈ ದಿನದ ಲೇಖನಿಯಲ್ಲಿ ಹೊಳಪಾದ ಹಲ್ಲುಗಳನ್ನು ಪಡೆದುಕೊಳ್ಳುವುದಕ್ಕೆ ಸುಲಭ ಮತ್ತು ಸರಳ ಮನೆಮದ್ದು ತಿಳಿಸಿಕೊಡುತ್ತೇನೆ ಕೆಲವರಂತೂ ತಮ್ಮ ಹಲ್ಲುಗಳನ್ನು ಹೊಳಪಾಗಿಸಲು ಚಿಕಿತ್ಸೆ ಪಡೆದುಕೊಳ್ಳುತ್ತಾರೆ, ಯಾಕೆಂದರೆ ಹಲ್ಲುಗಳು ಹೊಳಪಾಗಲಿ ಅಂತ ಹಾಗೆ ನಮ್ಮ ದಂತಗಳ ಸುಂದರವಾಗಿ ಕಾಣಲಿ ಎಂದು ಆದರೆ ಈ ರೀತಿ ನೀವು ಟ್ರೀಟ್ಮೆಂಟ್ ತೆಗೆದುಕೊಂಡಾಗ ಅಥವಾ ಇಲ್ಲಸಲ್ಲದ ಪೇಸ್ಟುಗಳು ಇಲ್ಲಸಲ್ಲದ ಚಿಕಿತ್ಸೆಗಳು ಮಾಡಿಕೊಂಡಾಗ ಹಲ್ಲುಗಳ ಮೇಲಿರುವ ಎನಾಮಲ್ ಗೆ ಡ್ಯಾಮೇಜ್ ಆಗುವ ಸಾಧ್ಯತೆ ಬಹಳ ಇರುತ್ತದೆ.

ಯಾವಾಗ ನಮ್ಮ ಹಲ್ಲುಗಳ ಮೇಲಿರುವ ಈ ಎನಾಮಲ್ ಡ್ಯಾಮೇಜ್ ಆಗುತ್ತದೆ ಆಗ ನಮ್ಮ ಹಲ್ಲುಗಳು ತನ್ನ ಸೆನ್ಸಿಟಿವಿಟಿ ಅನ್ನು ಕಳೆದುಕೊಳ್ಳುತ್ತದೆ. ಅಂತಹ ಸಮಯದಲ್ಲಿ ಹಲ್ಲುಗಳು ಜುಮ್ಮಾ ಅನಿಸುವುದು ಇಂತಹ ಎಲ್ಲಾ ಸಮಸ್ಯೆಗಳು ಎದುರಾಗುತ್ತದೆ. ಆದರೆ ಕೆಲವೊಂದು ಸುಲಭವಾದ ಸರಳವಾದ ಪರಿಣಾಮಕಾರಿಯಾದ ಮನೆಮದ್ದನ್ನೂ ಮಾಡಿಕೊಂಡಾಗ ಇಂತಹ ಯಾವುದೇ ಸಮಸ್ಯೆಗಳು ಎದುರಾಗದೆ ಹೊಳಪಾದ ದಂತಗಳನು ನಮ್ಮದಾಗಿಸಿಕೊಳ್ಳಬಹುದು, ಇದನ್ನು ವಾರಕ್ಕೆ 2 ಬಾರಿ ಪಾಲಿಸುತ್ತ ಬಂದರೆ ಸಾಕು ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಹಾಗೂ ದಂತಗಳು ಕೂಡ ಹೊಳಪಾಗಿರುತ್ತದೆ ಹಾಗೂ ದಂತಗಳ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು 2ಎಸಳು ಬೆಳ್ಳುಳ್ಳಿ ಹಾಗೂ ಉಪ್ಪು ಮತ್ತು ಸ್ವಲ್ಪ ತೆಂಗಿನ ಎಣ್ಣೆ ಹಾಕಿ ನೀವು ದಿನ ಬಳಸುವ ಪೇಸ್ಟ್ ಮತ್ತು ನಿಂಬೆಹಣ್ಣಿನ ರಸ.

ಮೊದಲು ಬೆಳ್ಳುಳ್ಳಿಯನ್ನು ತುರಿದು ಪೇಸ್ಟ್ ಮಾಡಿಕೊಳ್ಳಬೇಕು ಇದಕ್ಕೆ ಉಪ್ಪು ತೆಂಗಿನ ಎಣ್ಣೆ ದಿನಾ ಬಳಸುವ ಪೇಸ್ಟ್ ಹಾಗೂ ಸ್ವಲ್ಪವೇ ಸ್ವಲ್ಪ ನಿಂಬೆಹಣ್ಣಿನ ರಸ, ಮಿಶ್ರಮಾಡಿ ಪೇಸ್ಟ್ ಮಾಡಿಕೊಂಡು ನೀವು ಪ್ರತಿದಿನ ಹೇಗೆ ಹಲ್ಲುಜ್ಜುತ್ತೀರ ಹಾಗೆ ಈ ಬೆಳ್ಳುಳ್ಳಿ ಪೇಸ್ಟ್ ನಿಂದ ನಿಮ್ಮ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳಿ.

ಇದರಿಂದ ಹಲ್ಲುಗಳ ಮೇಲಿರುವ ಕೊಳೆ ತೆಗೆದುಹಾಕಿ ಹಲ್ಲುಗಳು ನೈಸರ್ಗಿಕವಾಗಿ ಹೊಳಪಾಗಿ ಕಾಣುತ್ತದೆ ಆದರೆ ನೆನಪಿನಲ್ಲಿಡಿ, ಬೆಳ್ಳುಳ್ಳಿಯೊಂದಿಗೆ ಅದಷ್ಟು ನಿಂಬೆಹಣ್ಣಿನ ರಸವನ್ನು ಕಡಿಮೆ ಹಾಕಿ ಮತ್ತು ಪದೇ ಪದೇ ಈ ರೀತಿ ಮನೆಮದ್ದನ್ನು ಪಾಲಿಸಬಾರದು ವಾರಕ್ಕೆ ಕೇವಲ 2 ದಿನಗಳು ಮಾತ್ರ ಈ ಪರಿಹಾರವನ್ನು ಮಾಡಿ. ಹಲ್ಲುಗಳನ್ನು ಯಾವುದೇ ಕಾರಣಕ್ಕೂ ಅಡುಗೆ ಸೋಡದಿಂದ ಉಚ್ಛಾರದ ಹಾಗೆ ಪದೇ ಪದೇ ಪೇಸ್ಟುಗಳನ್ನು ಬದಲಾಯಿಸಬಾರದು.

ಮತ್ತು ಬ್ರೆಶ್ ಮಾಡುವಾಗಲು ಕೂಡ ತುಂಬ ಜೋರಾಗಿ ಹಲ್ಲುಗಳನ್ನು ಉಜ್ಜಬಾರದು ಯಾಕೆಂದರೆ ಈ ಮೊದಲೇ ಹೇಳಿದಂತೆ ಹಲ್ಲುಗಳ ಮೇಲಿರುವ ಸೂಕ್ಷ್ಮವಾದ ಪದರವಾಗಿರುವ ಎನಾಮಲ್ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಆದ್ದರಿಂದ ನಾವು ತೊಡಗಿಸಿದ ಈ ಸುಲಭ ಪರಿಹಾರವನ್ನು ಪಾಲಿಸಿ ಹಾಗೂ ಹಳದಿಯಾಗಿರುವ ಹಲ್ಲುಗಳನ್ನ ಹೊಳಪಾಗಿಸಲು ಸರಳ ಮನೆಮದ್ದು ಮಾಡಿ ಸಮಸ್ಯೆ ಗೆ ಪರಿಹಾರ ಮಾಡಿಕೊಳ್ಳಿ ಧನ್ಯವಾದ.

WhatsApp Channel Join Now
Telegram Channel Join Now