500 ಚಿತ್ರಗಳ ಸರದಾರ ವೈಜನಾಥ್ ಬಿರಾದಾರ್ ಇವರ ಸಾಧನೆಯೂ ಯಾವ ನಾಯಕನಿಗೂ ಕಡಿಮೆ ಇಲ್ಲ…

324

ಸಿನಿಮಾ ಲೋಕವೇ ಹಾಗೆ ಈ ಬಣ್ಣದ ಲೋಕ ನಿತ್ಯವೂ ತನ್ನತ್ತ ಸಾವಿರಾರು ಜನರನ್ನ ಕೈ ಬೀಸಿ ಕರೆಯುತ್ತೆ ಕರೆಯುತ್ತೇನೋ ನಿಜ ಆದರೆ ಹಾಗೆ ಬಳಿ ಬಂದ ಎಲ್ಲರನ್ನು ಅದು ಸುಲಭವಾಗಿ ಸ್ವಾಗತ ಕೋರುವುದಿಲ್ಲ ಈ ನಿರೀಕ್ಷಿತ ಸ್ವಾಗತವನ್ನು ಪಡೆಯದ ಅನೇಕರು ನಿರಾಶರಾಗುತ್ತಾರೆ ಹಾಗೆ ನಿರಾಶರಾದವರಲ್ಲಿ ಈ ಉತ್ತರ ಕರ್ನಾಟಕ ಹುಡುಗನು ಒಬ್ಬನಾಗಿದ್ದ ಓದಿದ್ದು ಮೂರನೆ ತರಗತಿ ಆದರೂ ಕೂಡ ಬಣ್ಣದ ಗೀಡು ಸಿಂಹ ನಟ ಆಗಬೇಕು ಅಂತ ಅವರಿವರ ಕೈ ಕಾಲು ಹಿಡಿದು ಮದ್ರಾಸ್ ತಲುಪಿದ ಹುಡುಗ ಅಲ್ಲಿಂದ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಬಂದು ನಿಂತ ಬಂದು ತಕ್ಷಣ ಅಲ್ಲಿ ಸಿನಿಮಾ ಚಾನ್ಸ್ ಸಿಗಬೇಕಲ್ಲ .

ಅವಕಾಶಕ್ಕಾಗಿ ಅನೇಕರ ಬಳಿ ಅಂಗಲಾಚದ ಹಲವಾರು ಮನೆ ಬಾಗಿಲು ತಟ್ಟುತ್ತಾ ಪ್ರಯೋಜನವಾಗಲಿಲ್ಲ ಆತನಿಗೆ ಅಲ್ಲಿ ಯಾರು ನೆರವು ಸಹ ಸಿಗಲಿಲ್ಲ ತಿನ್ನಲು ಊಟವಿಲ್ಲ ತಂಗಲು ಮನೆಯಿಲ್ಲ ಅಕ್ಷರ ಸಹ ಅದು ನಾಯಿ ಪಾಡು ಯಾರದ್ದು ಸಹಾಯದಿಂದ ತಂಗಲು ಒಂದು ಸೂರಿನ ವ್ಯವಸ್ಥೆ ಸಿಕ್ತು ಅಲ್ಲಿ ಚಿಕ್ಕಪುಟ್ಟ ಕೆಲಸ ಮಾಡಿದ ಹುಡುಗ ಯಾವ ಸಿನೆಮಾಗೂ ಅವಕಾಶ ಸಿಗದೇ ಹೈರಾಣಾಗಿ ಹೋಗಿದ್ದ ಹಾರೇಳು ತಿಂಗಳ ಕಾಲ ಹೊಟ್ಟೆ ತುಂಬಾ ಊಟವನ್ನು ಸಹ ಮಾಡಲಾಗದಂತೆ ಮಾಡಿದ್ದ ಈ ಸಿಟಿ ಜೀವನ ಆತನಿಗೆ ಸಾಕಾಗಿ ಹೋಗಿತ್ತು ಊರು ಬಿಟ್ಟು ಕೆಟ್ಟನೇನೋ ಎಂಬ ಹತಾಶ ಭಾವ ಅವನಲ್ಲಿ ಮನೆ ಮಾಡಿತು ತಾನು ನಂಬಿ ಬಂದಿದ್ದ ದೇವರ ಮೊರೆ ಹೋದ ಕೈ ಹಿಡಿಯದೇ ಹೋದರೆ ಪೂಜೆ ಪುನಸ್ಕಾರಗಳನ್ನ ಸಂಪೂರ್ಣವಾಗಿ ತ್ಯಜಿಸುವ ಬಗ್ಗೆ ಬೆದರಿಕೆ ಹಾಕ್ತಾ ಹೀಗಿದ್ದಾಗ ಯಾವುದೊ ಒಂದು ತಂಡ ತನ್ನ ನಾಟಕದ ತಯಾರಿಗೆ ಆತನನ್ನ ತನ್ನೊಟ್ಟಿಗೆ ಇರೋದಕ್ಕೆ ಕೇಳಿಕೊಳ್ತು ಹುಡುಗ ಕೂಡ ಒಬ್ಬ ಆತನಿಗೆ ಇಪ್ಪತ್ತು ರೂಪಾಯಿಗಳ ನಗದು ಹಣವನ್ನು ಸಹ ತಂಡ ಕೊಡ್ತು ಎಷ್ಟೋ ದಿನಗಳ ಬಳಿಕ ಅಷ್ಟು ಹಣವನ್ನ ಕಂಡ ಹುಡುಗ ಬೆರಗಾದ.

ಅದು ಅವನ ಐದು ದಿನದ ಊಟದ ಹೋಟೆಲ್ಗೆ ಹೋಗಿ ಮೊದಲು ಹೊಟ್ಟೆ ತುಂಬಾ ಊಟ ಮಾಡಿದ ಆ ಹಣ ಅಂದು ಆತನಿಗೆ ಹಸಿವಿನ ಒಂದು ಅತ್ಯಂತ ಕೆಟ್ಟ ಮುಖದ ಪರಿಚಯವನ್ನು ಮಾಡಿಸ್ತು ಅದೇ ಇಪ್ಪತ್ತು ರೂಪಾಯಿ ಸಂಭಾವನೆಯಿಂದ ಒಂದೊಂದೇ ಚಿತ್ರದಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ನಿರ್ವಹಿಸಲು ಶುರು ಮಾಡಿ ಮುಂದೆ ಅಂತರರಾಷ್ಟ್ರೀಯ ಮಟ್ಟದವರೆಗೂ ನಟನೆಯಲ್ಲಿ ಗುರುತಿಸಿಕೊಳ್ಳುವ ಹಾಗೆ ಬೆಳೆದ ಈ ಜವಾರಿ ಕಲಾವಿದನ ಹೆಸರೇ ಶ್ರೀ ವೈದ್ಯನಾಥ್ ಬಿರಾದರ್ ಹಲವು ರೀತಿಯ ಪೋಷಕ ಹಾಗೂ ಕಾಮಿಡಿ ಪಾತ್ರಗಳನ್ನು ನಿರ್ವಹಿಸಿದ ಈ ನಟರು ವಿಶೇಷವಾಗಿ ಭಿಕ್ಷುಕ ಪಾತ್ರಗಳಲ್ಲಿ ಸೈ ಅನಿಸಿಕೊಂಡು ಬನ್ನಿ ವೀಕ್ಷಕರೇ ಕಡು ಕಷ್ಟದಿಂದ ಮೇಲೆ ಬಂದ ಈ ನೈಜ್ಯ ಕಲಾವಿದನ ಕುರಿತು ಒಂದಷ್ಟು ಸ್ವಾರಸ್ಯಕರ ಅಂಶಗಳನ್ನ ತಿಳಿಯೋಣ ಶ್ರೀ ವೈದ್ಯನಾಥ್ ಬಿರಾದರ್ ಮೂಲತಃ ಬೀದರ್ ಜಿಲ್ಲೆಯವರು ಇವರು ನಾಗಮ್ಮ ಹಾಗು ಬಸಪ್ಪ ದಂಪತಿಗಳ ನಾಲ್ಕು ಮಕ್ಕಳಲ್ಲಿ ಹಿರಿಯವರಾಗಿ ಸಾವಿರದ ಒಂಬೈನೂರ ಐವತ್ತೆರಡರ ಜೂನ್ ಇಪ್ಪತ್ತಾರರಂದು ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ತೇಗಂಪುರ್ ಎಂಬ ಗ್ರಾಮದಲ್ಲಿ ಜನಿಸ್ತಾರೆ.

ಬಡ ಕುಟುಂಬದಲ್ಲಿ ಜನಿಸಿದ ಬಿರಾದಾರ್ ಗೆ ಇಬ್ಬರು ಕಿರಿ ಸೋದರರು ಹಾಗೂ ಓರ್ವ ಕಿರಿ ಸೋದರಿ ಸಹ ಇದ್ದರು ಒಬ್ಬ ಕಿರಿ ಸೋದರನ ಹೆಸರು ಕಲ್ಲಪ್ಪ ಬಿರಾದರ್ ಇನ್ನೋರ್ವ ಕೊನೆ ತಮ್ಮ ಹಾಗು ತಂಗಿ ಚೆನ್ನಮ್ಮ ಈ ಇಬ್ಬರು ಹೆಚ್ಚು ಕಾಲ ಉಳಿಯಲಿಲ್ಲ ಸಣ್ಣ ವಯಸ್ಸಲ್ಲೇ ಅವರು ತೀರಿ ಹೋದರು ಹಿರಿಯವರಾದ ವೈಜನಾಥ್ ಬಿರಾದರ್ ಹೆಚ್ಚು ಓದಿದವರಲ್ಲ ಅವರು ಓದಿದ್ದು ಕೇವಲ ಮೂರನೆ ತರಗತಿಯವರಿಗೆ ಅಷ್ಟೇ ನಾಲ್ಕನೇ ತರಗತಿ ಓದುವಾಗ ಅವರ ತಂದೆ ಬಸಪ್ಪ ಕಾಲವಾದ್ದರಿಂದ ಜಮೀನು ಕೆಲಸ ಮುಂದುವರೆಸುವ ಸಲುವಾಗಿ ಬಿರಾದರ್ ಅವರ ತಾಯಿ ಶಾಲೆ ಬಿಡಿಸಿ ಬಿರಾದರ್ ಅವರನ್ನ ಕೆಲಸಕ್ಕೆ ನಿಯಮಿಸಿದರು ಇನ್ನು ಬಣ್ಣದ ಗೀಲು ಅಭಿನಯ ಹಾಗು ಸಂಗೀತದ ಅಭಿರುಚಿ ಬಿರಾದರ್ ಅವರಿಗೆ ಚಿಕ್ಕಂದಿನಿಂದಲೇ ಇತ್ತು ಅವರ ಬಸಪ್ಪ ರೈತರು ಆಗಿದ್ದರು ತಂದೆಯೊಂದಿಗೆ ಹೆಚ್ಚಿನ ಒಡನಾಟದ ಭಾಗ್ಯ ಬಿರಾದರ್ ಅವರಿಗೆ ದೊರೆಯಲೇ ಇಲ್ಲ ಇನ್ನು ತಾಯಿಯವರು ಮೂಲತಃ ಬೀದರ್ ನವರೇ ಆಗಿದ್ದು ಊರಿನ ವಿಶೇಷ ಸಂದರ್ಭಗಳಲ್ಲಿ ಹಬ್ಬ ಹರಿದಿನಗಳಲ್ಲಿ ಊರಲ್ಲಿ ನಡೆಯುವ ಶುಭಕಾರ್ಯಗಳಲ್ಲಿ ಸೋಬಾನೆ ಪದ ಹೊಸಗೆ ಹಾಡುಗಳು ಮುಂತಾದ ಹಾಡುಗಳನ್ನ ಅವರು ಹಾಡುತ್ತಿದ್ದರು.

ಊರಲ್ಲಿ ನಡೆಯುವ ಮುಖ್ಯವಾದ ಎಲ್ಲಾ ಪೂಜಾ ಕಾರ್ಯಗಳಲ್ಲೂ ಅವರ ಹಾಡುಗಳು ಇದ್ದೆ ಇರುತ್ತಿದ್ದವು ತನ್ನ ತಾಯಿಯಿಂದಲೇ ತನಗೆ ಈ ಕಲಾಸಕ್ತಿಯ ಗುಣ ಬಂದಿರಬೇಕು ಅಂತ ವೈದ್ಯನಾಥ್ ಅವರ ಅಭಿಪ್ರಾಯ ಶಾಲೆ ತ್ಯಜಿಸಿದ ಬಿರಾದಾರ್ ತಮ್ಮದೇ ಒಂದಷ್ಟು ಭೂಮಿಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಾ ಕಾಲ ಕಳೆದರು ಜೊತೆಗೆ ಊರಲ್ಲಿ ನಡೆಯುವ ಜಾತ್ರೆ ಪರೀಕ್ಷೆಗಳಲ್ಲಿ ಕೋಲಾಟ ದೊಡ್ಡಾಟ ಹಾಗೂ ಡ್ರಾಮಾಗಳನ್ನು ಮಾಡುತ್ತಾ ಇದ್ದರು ಅಲ್ಲಿನ ಊರಿನ ಸ್ಥಳೀಯರಾದ ರಘುನಾಥ್ ಎಂಬುವವರು ಬಿರಾದರ್ ರ ಈ ಕಲೆಯ ಬಗ್ಗೆ ತಿಳಿದು ನಾಟಕ ಮಂಡಳಿಗೆ ಸೇರಿ ಅದರಿಂದ ಮುಂದೆ ಸಿನಿಮಾಗಳಲ್ಲಿಯೂ ಅಭಿನಯಿಸುವಂತೆ ಸಲಹೆ ಕೊಟ್ಟರು ಈ ಸಲಹೆ ಅವರನ್ನು ಹುರಿದುಂಬಿಸುತ್ತಿದ್ದರು ಸಿನಿಮಾಗಳಲ್ಲಿ ಅಭಿನಯಿಸಬೇಕಾದರೆ ಹೆಚ್ಚು ಓದಿಕೊಂಡಿರಬೇಕು ಹಾಗೂ ನೋಡಲು ಸಹ ಆಕರ್ಷಕವಾಗಿರಬೇಕು ಮೇಲಾಗಿ ಅಲ್ಲಿ ನೆಲೆ ಊರಲು ಬೆನ್ನ ಹಿಂದೆ ಸಾಕಷ್ಟು ಬೆಂಬಲ ತನಗೆ ಯಾವುದು ಸಹ ಇಲ್ಲ ಹಾಗಾಗಿ ಈ ದಾರಿ ಕಷ್ಟ ಸಾಧ್ಯ ಎಂದು ಸ್ವತಃ ಬಿರಾದರ್ ಅವರೇ ಈ ಒಂದು ಯೋಜನೆಯನ್ನ ಕೈ ಬಿಟ್ಟರು ಬಿರಾದರ್ ಅವರಿಗೆ ಆಗ ಕನ್ನಡ ಪುಸ್ತಕಗಳನ್ನ ಕೊಂಡು ಓದುವ ಹವ್ಯಾಸವಿತ್ತು.

ಅವರು ಬೀದರನ ಸಿಟಿಗೆ ಯಾವಾಗಲು ಹೋದರು ಅಲ್ಲಿ ಕನ್ನಡ ಪುಸ್ತಕಗಳನ್ನ ಹಾಗು ಸಿನೆಮಾಗೆ ಸಂಬಂಧಿಸಿದ ಕೆಲವೊಂದಷ್ಟು ಬುಕ್ಗಳನ್ನ ಕೊಂಡು ಓದುತ್ತಿದ್ದರು ಒಮ್ಮೆ ಒಂದು ಸಿನಿಮಾ ವಿವರವಿದ್ದ ಕನ್ನಡದ ಪುಸ್ತಕ ಒಂದನ್ನ ಅವರು ಓದುವಾಗ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಅದರಲ್ಲಿ ಒಂದು ಸಣ್ಣ ಲೇಖನ ಪ್ರಕಟವಾಗಿತ್ತು ಅದರ ಹೆಸರು ಕಥಾನಾಯಕನ ಕಥೆ ಅದನ್ನ ಆಸಕ್ತಿಯಿಂದ ಓದಲು ಶುರುಮಾಡಿದ ಬಿರಾದರರಿಗೆ ಈ ಲೇಖನದಲ್ಲಿ ನಾಲ್ಕನೇ ತರಗತಿಯವರೆಗೆ ಅಷ್ಟೇ ಓದಿದ ಡಾಕ್ಟರ್ ರಾಜಕುಮಾರ್ ಅವರು ಸಹ ಒಂದು ಸಣ್ಣ ಹಳ್ಳಿಯಿಂದ ಬಂದು ನಾಟಕದ ಕಂಪನಿಗಳಲ್ಲಿ ಸೇರಿ ಹೇಗೆ ಇಷ್ಟು ದೊಡ್ಡ ಮಟ್ಟದಲ್ಲಿ ನಟರಾಗಿ ಹೊರಹೊಮ್ಮಿದರು ಅಂತ ಸವಿವರವಾದ ಮಾಹಿತಿ ಇತ್ತು ಇದನ್ನ ಸಂಪೂರ್ಣವಾಗಿ ಓದಿದ ಬಿರಾದರರು ಮೇರು ನಟ ಡಾಕ್ಟರ್ ರಾಜಕುಮಾರ್ ಜೀವನ ಸಾಧನೆಯಿಂದ ತಾವು ಸಹ ಪ್ರಭಾವಿತರಾದರು ಆ ವರೆಗೆ ಡಾಕ್ಟರ್ ರಾಜ್ ಒಬ್ಬ ಮೇರು ಚಿತ್ರನಟ ಎಂದಷ್ಟೇ ಭಾವಿಸಿದ್ದ ಬಿರಾದರರಿಗೆ ಆ ಪುಸ್ತಕದ ಸಹಾಯ ಅವರು ಬೆಳೆದು ಬಂದ ರೀತಿಯ ಬಗ್ಗೆಯೂ ತಿಳಿತು ಅದೇ ರೀತಿ ತಾನು ಯಾಕೆ ಪ್ರಯತ್ನಿಸಿ ಮೇಲೆ ಬರಬಾರದು ಅಂತ ಯೋಚನೆ ಮಾಡಿದರು .

ಆ ಲೇಖನದಿಂದ ಅವರು ತಿಳಿದ ಸತ್ಯವೇನೆಂದರೆ ಅಚಲವಾದ ಗುರಿ ಶ್ರಮ ನಿಷ್ಠೆ ಹಾಗು ಛಲ ಇರುವ ವ್ಯಕ್ತಿಗೆ ಇಲ್ಲಿ ಯಾವುದು ಅಸಾಧ್ಯವಲ್ಲ ಎಂಬುದು ಡಾಕ್ಟರ್ ರಾಜಕುಮಾರ್ ಅವರಿಗೆ ಸಾಧ್ಯವಾದ ಈ ಸಾಧನೆ ತನಗೂ ಸಹ ಸಾಧ್ಯ ಎಂದು ಬಿರಾದರ್ ನಂಬಿದರು ಆದರೆ ಈ ಬಗ್ಗೆ ಅವಸರಿಸುವ ಹಾಗಿರಲಿಲ್ಲ ಮೇಲಾಗಿ ಈ ಸಮಯದಲ್ಲಿ ಬಿರಾದರರ ವಯಕ್ತಿಕ ಜೀವವನ್ನು ಸಹ ಶೋಚನೀಯವಾಗಿತ್ತು ಜೀವನಕ್ಕೆ ಆಧಾರವಾಗಿದ್ದ ಅವರ ಸಹ ಅವರ ಪಾಲಿಗೆ ಇಲ್ಲದಂತಾಯಿತು ತಂದೆಯ ಸಾವು ಸಹೋದರ ಹಾಗೂ ಸಹೋದರಿಯರ ಅಕಾಲ ಮೂರ್ತಿಗಳು ಅವರನ್ನ ಕುಗ್ಗಿಸಿದವು ಇದಾದ ಬಳಿಕ ಅಲ್ಲಿನ ಸ್ಥಳೀಯ ನಾಟಕ ಕಂಪೆನಿಗಳಲ್ಲಿ ಸೇರಿಕೊಂಡು ಸಮಯ ಸಿಕ್ಕಂತೆಲ್ಲ ಬಿರಾದಾರರು ನಾಟಕಗಳನ್ನ ಪ್ರದರ್ಶಿಸುತ್ತ ಹಾಸ್ಯ ಪಾತ್ರಗಳನ್ನ ನಿರ್ವಹಿಸುತ್ತಾ ಬಂದರು ಅವರ ಸಿನಿಮಾ carrier ಮೊಟ್ಟೆ ಮೊದಲು ಶುರುವಾಗಿದ್ದು ಸಾವಿರದ ಒಂಬೈನೂರ ಎಂಬತ್ತೆರಡರಲ್ಲಿ ಖ್ಯಾತ ನಿರ್ದೇಶಕರಾದ MS ಸತ್ಯ ಅವರ ನಿರ್ದೇಶನದಲ್ಲಿ ಮೂಡಿಬಂದ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಬರ ಸಿನಿಮಾದ ಮೂಲಕ ಈ ಚಿತ್ರತಂಡ ಚಿತ್ರೀಕರಣ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಸೆಟ್ ಹಾಕಿತ್ತು ಅದರಂತೆಯೇ ಬೀದರ್ ನಲ್ಲು ಸಹ ತಂಡ ಠಿಕಾಣಿಯನ್ನ ಹೂಡಿತ್ತು.

ಇದರ ಹೀರೋ ಅನಂತನಾಗ್ ಅವರು ಸೆಟ್ ನಲ್ಲಿ ಮರಾಠಿ ಹಾಗು ಕನ್ನಡ ಎರಡರಲ್ಲೂ ಸಹ ಮಾತಾಡ್ತಾಯಿದ್ದರು ಶೂಟಿಂಗ್ ನೋಡೋದಕ್ಕೆ ಬಿರಾದರರು ಆಗಾಗ ಅಲ್ಲಿಗೆ ಬರ್ತಾಯಿದ್ದರೂ ಅಲ್ಲಿನ ಬಿಸಿಲ ಝಳಕ್ಕೆ ಸುಸ್ತಾದ ಅನಂತನಾಗ್ ಊಟಕ್ಕೆ ತುಸು ಮಜ್ಜಿಗೆ ಹಾಗು ಮೊಸರು ಬೇಕು ಎಂದು ಕೇಳಿಕೊಂಡಾಗ ಅದನ್ನ ಕೇಳಿಸಿಕೊಂಡ ಬಿರಾದಾರ್ ತಮ್ಮ ಮನೆಯಲ್ಲೇ ತಯಾರಿಸಿದ ಮೊಸರು ಹಾಗು ಮಜ್ಜಿಗೆಯನ್ನ ಶೂಟಿಂಗ್ ಸೆಟ್ ಗೆ ಸ್ವತಃ ತಾವೇ ಒದಗಿಸಿದರು ಬೆಳಗಿನ ತಿಂಡಿಗೆ ಮೊಸರನ್ನ ಒದಗಿಸಿ ಸಹಾಯ ಮಾಡಿದ ಬಿರಾದರರ ಪ್ರವರ ಕೇಳಿ ತಿಳ್ಕೊಂಡ ಅನಂತ್ನಾಗ್ ನಿರ್ದೇಶಕರಿಗೆ Biradar ರನ್ನು ಪರಿಚಯಿಸಿದರು ಇನ್ನು ಬಿರಾದರ್ ಅವರಿಗೂ ಸಹ ಮರಾಠಿ ಅಲ್ಪ ಸ್ವಲ್ಪ ಬರ್ತಾ ಇತ್ತು ಮರಾಠಿ ಮಾತನಾಡುವ ಕನ್ನಡದ ನಾಟಕ ಕಲಾವಿದ ಎಂಬ ಗುರುತಿನೊಂದಿಗೆ ಬಿರಾದಾರ್ ರಿಗೆ ಬರ ಚಿತ್ರದಲ್ಲಿ ಚಿಕ್ಕ ಪಾತ್ರವೊಂದನ್ನು ಸಹ ನೀಡಲಾಯಿತು ಇದಕ್ಕೂ ಮುನ್ನ ಅಥವಾ ಹೆಚ್ಚು ಕಡಿಮೆ ಇದೆ ಸಮಯದಲ್ಲಿ ಬಿರಾದಾರ್ ಬೆಂಗಳೂರನ್ನ ಸೇರಿ ಡಾಕ್ಟರ್ ರಾಜಕುಮಾರ್ ಅವರನ್ನು ಕಂಡು ಭೇಟಿಯಾಗಿ ಅವರ ಸಹಾಯದಿಂದ ಸಿನಿಮಾಗಳಲ್ಲಿ ಅಭಿನಯಿಸಬೇಕು ಅಂತ ಹಿಡಿದರು.

ಬೀದರನಿಂದ ಬೆಂಗಳೂರು ತಲುಪಲು ಆ ಕಾಲದಲ್ಲಿ ಮೂವತ್ತೊಂದು ರೂಪಾಯಿ ಬಸ್ ಚಾರ್ಜ್ ಇತ್ತು ಈ ಹಣ ಒಟ್ಟುಗೂಡಿಸಲು ಬಿರಾದರಿಗೆ ಅಂದಿಗೆ ಒಂದು ತಿಂಗಳ ಅವಧಿ ಬೇಕಾಯಿತು ಈ ಹಣಕ್ಕಾಗಿ ನಾನಾ ರೀತಿ ಕಷ್ಟ ಪಟ್ಟು ಚಿಲ್ಲರೆ ಎಲ್ಲ ಸೇರಿಸಿದರು ಹಣ ಸಾಲಲಿಲ್ಲ ಕೊನೆಗೆ ಇದ್ದ ಹಣದಲ್ಲೇ ಪಕ್ಕದೂರಿನ ತಮ್ಮ ಕುಟುಂಬದ ಬಂಧು ಒಬ್ಬರ ಬಳಿ ಹೋದರು ಅವರ ಬಳಿ ಹೋಗಿ ಬೆಂಗಳೂರಿಗೆ ಹೋಗೋದಕ್ಕೆ ಹಣದ ಸಹಾಯ ಪಡೆದರು ನಂತರ ಅಲ್ಲಿಂದ ಬೆಂಗಳೂರಿಗೆ ಬಂದರು ಆಗ ಡಾಕ್ಟರ್ ರಾಜಕುಮಾರ್ ಅವರ ನಿವಾಸ ಚೆನ್ನೈ ಅಥವಾ ಹಳೆಯ ಮದ್ರಾಸ್ ನಲ್ಲಿ ಇತ್ತು ಸರಿ ಎಂದು ಅಲ್ಲಿಗೆ ನೇರ ಹೊರಟರು ಆಗ ಡಾಕ್ಟರ್ ರಾಜಕುಮಾರ್ ತಾಯಿಗೆ ತಕ್ಕ ಮಗ ಚಿತ್ರದ ಶೂಟಿಂಗ್ ನಲ್ಲಿ ಇದ್ದರು ಹೇಗೋ ಭಾಷೆ ತಿಳಿಯದ ಊರಿನಲ್ಲಿ ಡಾಕ್ಟರ್ ರಾಜಕುಮಾರ್ ಅವರನ್ನು ಪತ್ತೆ ಹಚ್ಚಿದ ಬಿರಾದಾರ್ ಅವರ ಮನೆ ಮುಂದೆ ಹೋಗಿ ಅವರಿಗಾಗಿ ಕಾದರು ಬಿರಾದರ್ ಅವರನ್ನು ಗಮನಿಸಿದ ಡಾಕ್ಟರ್ ರಾಜಕುಮಾರ್ ಅವರು ಮಾತನಾಡಿಸಿದರು ಬಿರಾದರ್ ಕಥೆ ಕೇಳಿ ಅವರು ಒಬ್ಬ ರಂಗಭೂಮಿ ಕಲಾವಿದರು ಅಂತ ತಿಳಿದು ಬೆಂಗಳೂರಿನಲ್ಲಿ ತಮ್ಮನ್ನು ಕಾಣುವಂತೆ ಸಲಹೆ ಕೊಟ್ಟು ಬಸ್ ಚಾರ್ಜ್ ನ ಹಣವನ್ನು ನೀಡಿ ಸಹಾಯ ಮಾಡಿದರು .

ಈ ಹಣದ ಸಹಾಯದಿಂದ ಪುನಃ ಬೆಂಗಳೂರಿಗೆ ಬಂದ ಬಿರಾದರ್ ಅಲ್ಲಿನ ಕಂಠೀರವ ಸ್ಟುಡಿಯೋಗೆ ಗಡಿಬಿಡಿಯಲ್ಲಿ ಚೆನ್ನೈನಲ್ಲಿ ಬರೆದು ಕೊಟ್ಟಿದ್ದ ವಿಳಾಸದ ಚೀಟಿ ಕಳೆದುಹೋಗಿ ಬೆಂಗಳೂರಲ್ಲಿ ಬಿರಾದರ್ ಅಕ್ಷರಶಃ ಪರದಾಡುವಂತಾಯಿತು ಮಲಗಳು ಸ್ಥಳ ಇಲ್ಲ ತಿನ್ನಲು ಊಟ ಇಲ್ಲ ಇಂತಹ ದುಸ್ಥಿತಿಯಲ್ಲಿ ಬಿರಾದರು ಅಲ್ಲಿನ ಚಿಕ್ಕ ಲಾಲಬಾಗ್ ಬಳಿ ಜಗಲಿಯ ಮೇಲೆ ಮಲಗುತ್ತಿದ್ದರು ಅಲ್ಲಿ ಸೌತೆಕಾಯಿಯನ್ನ ಮಾರುವ ತಳ್ಳುಗಾಡಿ ಒಂದು ಇತ್ತು ಬಿರಾದಾರರ ಬಳಿ ಚಿಲ್ಲರೆ ಕಾಸು ಮಾತ್ರವೇ ಇತ್ತು ಊಟಕ್ಕೆ ಒಂದರಿಂದ ಎರಡು ರೂಪಾಯಿವರೆಗೂ ಹಣ ಖರ್ಚಾಗುತ್ತಿತ್ತು ಅದೇ ಐದು ಪೈಸೆ ಕೊಟ್ಟರೆ ಒಂದು ಪೀಸ್ ಸೌತೆಕಾಯಿ ಸಿಗುತ್ತಿತ್ತು ಎಂದು ತಿಳಿದ ಬಿರಾದರು ಐದು ಪೈಸೆಗೆ ಸೌತೆಕಾಯಿ ಬಡೆದು ಅದಕ್ಕೆ ಕಾರವನ್ನ ವಿಪರೀತ ಹಚ್ಚಿಕೊಂಡು ತಿನ್ನುತಿದ್ದರು ಕಾರ ಹೆಚ್ಚಾದರೆ ಹೆಚ್ಚು ನೀರನ್ನಾದರೂ ಕುಡಿದು ಹೊಟ್ಟೆಯನ್ನ ತುಂಬಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ಕಡೆಗೆ ಹಕ್ಕಿಪೇಟೆಯಲ್ಲಿ ಅವರಿಗೆ ಯಾರದೋ ನಿರ್ವಿನಿಂದ ತಂಗೋದಕ್ಕೆ ಸ್ಥಳಾವಕಾಶ ದೊರೆಯಿತು.

ಅವರಿಗೆ ಬೆಂಗಳೂರಿನಲ್ಲಿ ಸಿನಿಮಾ ಅವಕಾಶ ಕೊಟ್ಟವರು ನಟ ಹಾಗೂ ನಿರ್ದೇಶಕ ದಿವಂಗತ ಕಾಶಿನಾಥ್ ರವರು ಅವರ ಅಜಗಜಾಂತರ ಅನಂತರ ಅವಾಂತರ ಮುಂತಾದ ಚಿತ್ರಗಳಲ್ಲಿ ನಟ ಬಿರಾದಾರ್ ಗೆ ಆರಂಭಿಕ ಅವಕಾಶಗಳು ಲಭಿಸಿದ್ದವು ನಂತರ ಉಪೇಂದ್ರರವರ ಹಾಗು ತರ್ಲೆ ನನ್ನ ಮಗ ಚಿತ್ರಗಳಲ್ಲಿ ಬಿರಾದಾರ್ ನಟಿಸಿದರು ಸಾವಿರದ ಒಂಬೈನೂರ ತೊಂಬತ್ತೆರಡರಲ್ಲಿ ತೆರೆ ಕಂಡ ಉಪೇಂದ್ರರವರ ನಿರ್ದೇಶನದ ತರಲೆ ನನ್ನ ಮಗ ಚಿತ್ರದಲ್ಲಿ ಬಿರಾದರ್ ಭಿಕ್ಷುಕನ ಪಾತ್ರವನ್ನು ನಿರ್ವಹಿಸಿದರು ಮುಂದೆ ಇದೆ ಮಾದರಿಯ ಪಾತ್ರಗಳಿಗೆ ಅವರು ಬ್ರಾಂಡ್ ಆಗಿ ಹೋದರು ಭಿಕ್ಷುಕ ಪಾತ್ರಗಳೇ ನನ್ನ ವೃತ್ತಿ ಜೀವನದ ಅಕ್ಷಯ್ ಪಾತ್ರಗಳು ಆದವು ಎನ್ನುವ ಬಿರಾದಾರ್ ಸಹಜ ಹಾಗೂ ನೈಜ್ಯ ಕಲಾವಿದರು ಮುಂದೆ ಕೆ.

ವಿ. ರಾಜು ರವರ ಹುಲಿಯ ಬಲ್ಲನ್ಮಗ ಓಂ ಮಲ್ಲಿಗೆ ಲವ್ ಟ್ರೇನಿಂಗ ಏಕದಂತ ಸೂರಪ್ಪ ಮುಂತಾದ ನೂರಾರು ಚಿಕ್ಕಪುಟ್ಟ ಪಾತ್ರಗಳನ್ನ ನಿರ್ವಹಿಸುತ್ತಾ ಕನ್ನಡದ ಅತ್ಯುತ್ತಮ ಪೋಷಕ ಹಾಗೂ ಹಾಸ್ಯ ಕಲಾವಿದರಾಗಿ ಹೊರಹೊಮ್ಮಿದ ಬಿರಾದರ್ ಅವರ ವೃತ್ತಿ ಬದುಕಿನ ಮಹತ್ತರವಾದ ಚಿತ್ರವೆಂದರೆ ಎರಡು ಸಾವಿರದ ಹತ್ತರಲ್ಲಿ ತೆರೆಕಂಡ ಅವರ ಕನಸು ಎಂಬ ಕುದುರೆ ಏರಿ ಸಿನಿಮಾ ಖ್ಯಾತ ಕಲಾತ್ಮಕ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ನಟನೆಗೆ ಬಿರಾದಾರ್ ಎರಡು ಸಾವಿರದ ಹನ್ನೊಂದರ ಅಂತರರಾಷ್ಟ್ರೀಯ ಶ್ರೇಷ್ಠ ನಟ ಪ್ರಶಸ್ತಿ ಪಡೆದರು ಸ್ಪೇನ್ ನ ಮ್ಯಾಟ್ರಿಟ್ ಎಂಬಲ್ಲಿ ನಡೆದ .

ಇಂಡಿಯಾ ಇಮ್ಯಾಜಿನ್ ಎಂಬ ಸಿನಿಮಾ ಫೆಸ್ಟಿವಲ್ ನಲ್ಲಿ ಪ್ರದರ್ಶನ ಕಂಡ ಈ ಚಿತ್ರದ ನಟನೆಗೆ ಅವರು ಮಹೋನ್ನತವಾದ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದರು ಎರಡು ಸಾವಿರದ ಹತ್ತು ಹನ್ನೊಂದರ ಸಾಲಿನ ರಾಷ್ಟ್ರ ಪ್ರಶಸ್ತಿಯೂ ಅವರಿಗೆ ಸ್ವಲ್ಪದರಲ್ಲೇ ಇಲ್ಲಿ miss ಆಗಿತ್ತು ಆದರೆ ಅದರ ನಿರಾಶೆಯನ್ನ ಈ ಪ್ರಶಸ್ತಿ ನೀಗಿಸಿತ್ತು ಅವರ ನಟನೆಯ ತದಾತ್ಮತೆಗೆ ಹಾಗು ಅವರಲ್ಲಿನ ಸಮರ್ಪಣಾ ಭಾವಕ್ಕೆ ಈ ಒಂದು ಚಿತ್ರ ಉತ್ತಮ ಉದಾಹರಣೆ ಅರವತ್ತೆಂಟು ವರ್ಷ ಪ್ರಾಯದ ನಟ ವೈಜನಾಥ್ ಬಿರಾದರ್ ಇಂದು ಸರಿ ಸುಮಾರು ಐನೂರು ಸಿನಿಮಾಗಳ ಹೊಸ್ತಿಲಲ್ಲಿ ನಿಂತಿದ್ದಾರೆ ನಟನೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳು ಅವರ ಮುಡಿಗೇರಿವೆ ಅವರು ರಾಜ್ಯೋತ್ಸವ ಪ್ರಶಸ್ತಿಗೂ ಸಹ ಭಾಜನರಾಗಿದ್ದಾರೆ.

ಪ್ರಸ್ತುತ ಕರ್ನಾಟಕ ಸರ್ಕಾರದ ವತಿಯಿಂದ ಕರ್ನಾಟಕ, ನಾಟಕ ಅಕಾಡೆಮಿಯ ಸದಸ್ಯರಾಗಿ ಬಿರಾದರ್ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಇಂತಹ ಮಹನೀಯರಿಗೆ ಸಲ್ಲಬೇಕಾದ ಗೌರವಾನು ಸಹ ಇವರಿಗೆ ಸಲ್ಲಲಿ ಹಾಗೂ ಬಿರಾದರ್ ಅವರು ಇನ್ನಷ್ಟು ಎತ್ತರಕ್ಕೆ ಏರಲಿ ಎಂಬ ಆಶಯದೊಂದಿಗೆ ಈ ಒಂದು ವಿಡಿಯೋವನ್ನ ಮುಗಿಸ್ತಾಯಿದ್ದೀನಿ. ನಮಸ್ಕಾರ.

WhatsApp Channel Join Now
Telegram Channel Join Now