ನಿಮ್ಮ ಗಬ್ಬು ಹಲ್ಲು ,ಕಣ್ಣು ನರಮಂಡಲದ ಆರೋಗ್ಯಕ್ಕೆ,ಮೂತ್ರನಾಳದ ಸಮಸ್ಯಗೆ ಈ ಹಣ್ಣು ಬಳಸಿ ನೋಡಿ ಸಾಕು .. ಬಾರಿ ಅರೋಗ್ಯ ಹೊಂದಿದೆ ..

327

ಕಾಕಮಾಚಿ ಸೊಪ್ಪು ಇದರ ಹೆಸರು ಕೇಳಿದ್ದೀರಾ ಹೌದು ಈ ಕಾಕಮಾಚಿ ಸೊಪ್ಪು ಹಲವು ಅನಾರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಆಗಿದೆ. ಹಾಗಾದರೆ ಕಾಕಮಾಚಿ ಸೊಪ್ಪು ಅಥವಾ ಇದನ್ನು ಆಡುಭಾಷೆಯಲ್ಲಿ ಗಣಿಕೆ ಸೊಪ್ಪು ಅಂತ ಕೂಡ ಕರಿತಾರೆ ಇದರ ಪ್ರಯೋಜನಗಳನ್ನು ಈ ಪುಟದಲ್ಲಿ ತಿಳಿಯೋಣ ಸಂಪೂರ್ಣ ಮಾಹಿತಿಯನ್ನು ತಿಳಿದು ಸೊಪ್ಪಿನ ಪ್ರಯೋಜನವನ್ನ ನೀವು ಕೂಡ ಪಡೆದುಕೊಳ್ಳಿ.

ಪ್ರಕೃತಿದತ್ತವಾಗಿ ದೊರೆಯುವ ಅದೆಷ್ಟೊ ಸೊಪ್ಪು ಗಿಡ ಹೂವು ಹಣ್ಣು ಕಾಯಿ ಇವುಗಳೆಲ್ಲ ಔಷಧೀಯ ಗುಣವನ್ನು ಹೊಂದಿರುತ್ತದೆ ಆದರೆ ಅದರ ಔಷಧೀಯ ಮಹತ್ವವನ್ನು ತಿಳಿಯದೆ ನಾವು ಅದನ್ನು ಕಡೆಗಣಿಸಿ ಕಳೆಯನ್ನು ಕಿತ್ತು ಬಿಸಾಡಿ ಬಿಡುತ್ತೇವೆ. ಹೌದು ಹಸು ಕುರಿ ಕೋಳಿ ಎಮ್ಮೆ ಇವುಗಳೆಲ್ಲವೂ ಕೇವಲ ಸೊಪ್ಪುಗಳನ್ನು ಮೇಯ್ದು ಹಣ್ಣು ಕಾಯಿಗಳನ್ನು ತಿಂದು ಎಷ್ಟು ಆರೋಗ್ಯಕರವಾಗಿರುತ್ತವೆ ಯಾವುದೇ ಅನಾರೋಗ್ಯ ಸಮಸ್ಯೆ ಅವುಗಳಿಗೆ ಸೋಕುವುದಿಲ್ಲ ಅಕಸ್ಮಾತ್ ಅವುಗಳಿಗೆ ಆರೋಗ್ಯ ಕೆಟ್ಟರೆ ಆ ಸಮಸ್ಯೆಯನ್ನು ನಿವಾರಿಸುವ ರೋಗನಿರೋಧಕ ಶಕ್ತಿ ಆ ಪ್ರಾಣಿಗಳಲ್ಲಿರುತ್ತವೆ.

ಹಾಗಾಗಿ ಈ ಸೊಪ್ಪು ಕಾಯಿ ಹಣ್ಣು ಇವುಗಳಂತಹ ಪದಾರ್ಥಗಳ ಮಹತ್ವವನ್ನು ತಿಳಿದು ನಾವು ಅವುಗಳನ್ನ ಸೇವಿಸಬೇಕು ಅದರಿಂದ ದೊರೆಯುವ ಔಷಧಿ ಮಹತ್ವ ನಮ್ಮ ಆರೋಗ್ಯವನ್ನು ವೃದ್ಧಿ ಮಾಡುತ್ತದೆ.

ಹಾಗೆ ಈ ಕಾಕಾ ಮಾಚಿ ಸೊಪ್ಪು ಸಹ ಇದರ ಮಹತ್ವ ತೆರೆದರೆ ಖಂಡಿತ ನಿಮಗೂ ಕೂಡ ಅಚ್ಚರಿ ಆಗಬಹುದು, ಈ ಗಿಡದ ಹಣ್ಣು ಎಲೆ ಬಹಳ ಉಪಯುಕ್ತಕರವಾದ ಮನೆಮದ್ದುಗಳಲ್ಲಿ ಬಳಕೆ ಆಗುತ್ತದೆ ಈ ಸೊಪ್ಪನ್ನು ಹಿರಿಯರು ತಂಬುಳಿ ಪಲ್ಯ ಸಾಂಬಾರ್ ಗಳಲ್ಲಿ ಬಳಸಿ ಇದರ ಆರೋಗ್ಯಕರ ಪ್ರಯೋಜನಗಳನ್ನು ತಾವು ಪಡೆದುಕೊಳ್ಳುತ್ತಿದ್ದರು. ಇಂದಿನ ಈ ಮಾಹಿತಿಯಲ್ಲಿ ನಾವು ಗಣಿಕೆಸೊಪ್ಪಿನ ಪ್ರಯೋಜನಗಳ ತಿಳಿಯುತ್ತಿದ್ದೆವು ಅದರಲ್ಲಿಯೂ ಮೂತ್ರಪಿಂಡಗಳ ಆರೋಗ್ಯಕ್ಕೆ ಗಣಿಕೆಸೊಪ್ಪು ಅತ್ಯದ್ಭುತವಾಗಿದೆ. ಈ ಗಣಿಕೆ ಸೊಪ್ಪಿನ ಎಲೆಯ ರಸವನ್ನು ಪ್ರತಿದಿನ ಸೇವನೆ ಮಾಡುವುದರಿಂದ ಗೊನೇರಿಯಾ ದಂತಹ ಸಮಸ್ಯೆಯಿಂದ ಶಮನ ಪಡೆದುಕೊಳ್ಳಬಹುದು.

ಈ ಸೊಪ್ಪಿನ ಗಿಡದಲ್ಲಿ ಬಿಡುವ ಹಣ್ಣು ಬಲಿತ ಮೇಲೆ ಇದನ್ನು ಸುಟ್ಟಿ ಇದರಿಂದ ರಸವನ್ನ ಬೇರ್ಪಡಿಸಿ ಇದಕ್ಕೆ ಸ್ವಲ್ಪವೇ ಉಪ್ಪು ಮಿಶ್ರಣ ಮಾಡಿ ಸೇವನೆ ಮಾಡುತ್ತಾ ಬಂದರೆ, ಆಗುವ ಲಾಭವೇನು ಗೊತ್ತಾ ಹೌದು ಹೃದಯದ ಸಮಸ್ಯೆಯಿಂದ ಬಳಲುವವರಿಗೆ ಅಥವಾ ಹೃದಯ ಸಂಬಂಧಿ ಸಮಸ್ಯೆಗಳು ಬರಬಾರದು ಅಂದರೆ ಈ ವಿಧಾನದಲ್ಲಿ ಗಣಿಕೆಸೊಪ್ಪಿನ ಹಣ್ಣನ್ನು ಬಳಕೆ ಮಾಡಿ. ಖಂಡಿತಾ ಹೃದಯದ ಆರೋಗ್ಯ ವೃದ್ಧಿ ಆಗುತ್ತದೆ.

ಈ ಸೊಪ್ಪಿನ ಎಲೆಯ ಡಿಕಾಕ್ಷನ್ ಮಾಡಿ ಸೇವನೆ ಮಾಡುವುದರಿಂದ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಕಾಡುವ ಈ ನೋವಿನ ಬಾಧೆಯಿಂದ ಶಮನ ಪಡೆದುಕೊಳ್ಳಬಹುದು. ಹೌದು ಹೆಣ್ಣುಮಕ್ಕಳಿಗೆ ಋತುಸ್ರಾವದ ಸಮಯದಲ್ಲಿ ಅಧಿಕವಾಗಿ ಹೊಟ್ಟೆ ನೋವು ಇರುತ್ತದೆ. ಅಂತಹ ವೇಳೆ ಈ ಗಣಿಕೆಸೊಪ್ಪಿನ ಎಲೆಯ ಡಿಕಾಕ್ಷನ್ ಅನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ಹೊಟ್ಟೆನೋವು ಬಹಳ ಬೇಗ ಶಮನಗೊಳ್ಳುತ್ತದೆ.

ಗಣಿಕೆ ಸೊಪ್ಪಿನ ಹಣ್ಣನ್ನು ತೆಗೆದುಕೊಂಡು ಅದನ್ನು ತುಪ್ಪದಲ್ಲಿ ಹುರಿದು ಬಳಿಕ ಅದರಿಂದ ರಸವನ್ನು ತೆಗೆದು ಜೀರ್ಣ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಯಾರು ಬಳಲುತ್ತಾ ಇರುತ್ತಾರೆ ಅಂಥವರು ನಿಯಮಿತವಾಗಿ ಊಟಕ್ಕೂ ಮುಂಚೆ ಸೇವನೆ ಮಾಡುತ್ತಾ ಬಂದರೆ, ಹಸಿವು ಬೇಗ ಆಗಿ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ ಹಾಗೂ ಹಸಿವೂ ಆಗುವುದಿಲ್ಲ ಅನ್ನುವವರು ಕೂಡ ಈ ಸೊಪ್ಪಿನ ಹಣ್ಣಿನ ಪ್ರಯೋಜನವನ್ನು ಪಡೆದುಕೊಳ್ಳಿ.

ಅತ್ಯದ್ಭುತ ಲಾಭಗಳನ್ನ ಹೊಂದಿರತಕ್ಕಂತಹ ಈ ಗಣಿಕೆ ಸೊಪ್ಪಿನ ಅಥವಾ ಕಾಕ ಮಾಚಿ ಸೊಪ್ಪಿನ ಪ್ರಯೋಜನಗಳು ಇವುಗಳು ಹಾಗೆ ಈ ಸೊಪ್ಪಿಗೆ ಆಂಗ್ಲಭಾಷೆಯಲ್ಲಿ ಬ್ಲಾಕ್ & ವೈಟ್ ಶೇಡ್ ಅಂತ ಕರೀತಾರೆ ಹಾಗೆ ಸಂಸ್ಕೃತದಲ್ಲಿ ಸೋಲೊನಂ ನಿಗ್ರಂ ಅಂತ ಕರೆಯುತ್ತಾರೆ.