Ad
Home ಅರೋಗ್ಯ ಕೀಲು ನೋವು, ಕೈ ಕಾಲು ನೋವು , ಮೂಳೆಗಳ ಸವೆತ ಇವೇಲ್ಲಾಕ್ಕೂ ಈ ಒಂದು ಮನೆಮದ್ದು...

ಕೀಲು ನೋವು, ಕೈ ಕಾಲು ನೋವು , ಮೂಳೆಗಳ ಸವೆತ ಇವೇಲ್ಲಾಕ್ಕೂ ಈ ಒಂದು ಮನೆಮದ್ದು ಶಕ್ತಿಶಾಲಿ ರಾಮಬಾಣ…

ಕೀಲುನೋವು ಮಂಡಿನೋವು ಸಮಸ್ಯೆ ಇದ್ದವರು ಮಾಡಿ ಈ ಪರಿಹಾರ ಈ ಸರಳ ಮನೆಮದ್ದಿನಿಂದ ಕೀಲುನೋವು ಮಂಡಿನೋವಿಗೆ ತಕ್ಷಣಕ್ಕೆ ಪರಿಹಾರ ದೊರೆಯುತ್ತದೆ!ನಮಸ್ಕಾರಗಳು ಎಂದು ನಾವು ಹೇಳಲು ಹೊರಟಿರುವ ಆ ಪರಿಹಾರ ವಯಸ್ಸಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವಂತಹ ಸಮಸ್ಯೆಯಾಗಿದೆ. ಹೌದು ವಯಸ್ಸಾದವರು ಅಂದರೆ ಅವರ ಆರೋಗ್ಯ ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಚಿಕಿತ್ಸೆ ಮೇಲೆ ಚಿಕಿತ್ಸೆ ಪಡೆದುಕೊಳ್ಳುವುದಾಗಲಿ ಮಾತ್ರೆ ತೆಗೆದುಕೊಳ್ಳುತ್ತಲೇ ಇರುವುದಾಗಲಿ ಆಗುವುದಿಲ್ಲ. ಹಾಗಾಗಿ ಈ ಮಂಡಿನೋವು ಕೀಲುನೋವು ಸಮಸ್ಯೆಗೆ ಆದಷ್ಟು ಸೂಕ್ಷ್ಮವಾಗಿ ಪರಿಹಾರ ಮಾಡಿಕೊಳ್ಳಬೇಕಾಗಿರುತ್ತದೆ.

ಇಂದಿನ ಲೇಖನದಲ್ಲಿ ವಯಸ್ಸಾದವರು ಅನ್ನದೆ ವಯಸ್ಕರಲ್ಲಿಯೂ ಕಾಣಿಸಿಕೊಳ್ಳುವಂತಹ ಕೀಲು ನೋವು ಮಂಡಿ ನೋವಿಗೆ ಪರಿಹಾರ ತಿಳಿಸಿಕೊಡುತ್ತಿದ್ದೇವೆ, ಬನ್ನಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಜೊತೆಗೆ ಯಾರಿಗೇ ಆಗಲಿ ಈ ಮಂಡಿ ನೋವು ಕೈ ಕಾಲು ನೋವು ಕೀಲು ನೋವು ಕಾಣಿಸಿಕೊಳ್ಳುತ್ತಿದ್ದರೆ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಹೇಗೆ ಈ ನೋವಿನಿಂದ ಹೊರ ಬರುವುದು ನೋವನ್ನು ಹೇಗೆ ಶಮನ ಮಾಡಿಕೊಳ್ಳುವುದು ತಿಳಿಯೋಣ ಕೆಳಗಿನ ಲೇಖನದಲ್ಲಿ.

ಮಂಡಿನೋವು ಮತ್ತು ಕೀಲು ನೋವು ಸಾಮಾನ್ಯವಾಗಿ ಬರುವುದು ನಮ್ಮ ದೇಹದಲ್ಲಿ ಶಕ್ತಿ ಕುಂದುವುದರಿಂದ, ಹಾಗಾಗಿ ನಾವು ಮೊದಲು ನಮ್ಮ ದೇಹಕ್ಕೆ ಶಕ್ತಿ ನೀಡಬೇಕು ಈ ಶಕ್ತಿ ಯಾವುದರಿಂದ ಸಿಗುತ್ತದೆ ನಾವು ಆಹಾರವನ್ನು ಸೇವನೆ ಮಾಡುವುದರಿಂದ, ಹಾಗಾಗಿ ಉತ್ತಮ ಆಹಾರ ಪದಾರ್ಥಗಳನ್ನೂ ತಿನ್ನುವ ರೂಢಿ ಮಾಡಿಕೊಳ್ಳಬೇಕು.

ಈ ಲೇಖನದಲ್ಲಿ ಮಂಡಿನೋವು ಕೀಲುನೋವು ಸಮಸ್ಯೆ ಬಾರದಿರುವ ಹಾಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಯಾವ ರೀತಿಯ ಆಹಾರ ಪದಾರ್ಥಗಳನ್ನು ತಿನ್ನಬೇಕು ಎಂಬುದನ್ನು ಕೂಡಾ ಸರಳವಾಗಿ ತಿಳಿಯೋಣ ಹೌದು ಮೊದಲಿಗೆ ವಿಟಮಿನ್ ಸಿ ಜೀವಸತ್ವ ಹೆಚ್ಚು ಇರುವ ಆಹಾರ ಪದಾರ್ಥಗಳು ಮುಖ್ಯವಾಗಿ ಕ್ಯಾಲ್ಸಿಯಂ ಹೆಚ್ಚಿರುವ ಆಹಾರ ಪದಾರ್ಥಗಳನ್ನು ತಿನ್ನಬೇಕು.

ಮತ್ತು ಪ್ರತಿದಿನ ಹೆಚ್ಚು ನೀರು ಕುಡಿಯಬೇಕು ಹಾಗೂ ಧೂಮಪಾನ ಮದ್ಯಪಾನ ಮಾಡುವ ರೂಢಿ ಇದ್ದರೆ ಆ ಅಭ್ಯಾಸದಿಂದ ಹೊರಬರುವುದು ಆರೋಗ್ಯಕ್ಕೆ ತುಂಬ ಒಳ್ಳೆಯದು.ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ತಂದುಕೊಳ್ಳಿ ಪ್ರತಿದಿನ ಸ್ವಲ್ಪ ನಡೆಯುವುದು ವಾಕ್ ಮಾಡುವುದು ಶರೀರವನ್ನು ದಂಡಿಸುವುದು ಯಾವುದಾದರೂ ಯೋಗ ಮಾಡುವುದು ಈ ರೀತಿಯ ಪರಿಹಾರಗಳನ್ನು ಮಾಡುವುದು ತುಂಬಾನೇ ಒಳ್ಳೆಯದು ಹಾಗೂ ಇದೊಂದು ಉತ್ತಮ ಜೀವನ ಶೈಲಿ ಸಹ ಆಗಿದೆ.

ಮಂಡಿ ನೋವು ಕೈಕಾಲು ನೋವು ಯಾರಿಗೆ ಕಾಣಿಸಿಕೊಳ್ಳುತ್ತ ಇರುತ್ತದೆ ಅಂಥವರು ಪ್ರತಿ ದಿನ ರಾತ್ರಿ ಕಪ್ಪುದ್ರಾಕ್ಷಿಯನ್ನು ನೆನೆಸಿಟ್ಟು ಬೆಳಿಗ್ಗೆ ದ್ರಾಕ್ಷಿ ಹಾಗೂ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಜೊತೆಗೆ ನೀರನ ಕುದಿಯಲು ಇಟ್ಟು ಇದಕ್ಕೆ ಶುಂಠಿ ರಸ ಮಿಶ್ರಣ ಮಾಡಿ ಬಳಿಕ ಸ್ಟವ್ ಆಫ್ ಮಾಡಿ, ನೀರು ಸ್ವಲ್ಪ ತಣ್ಣಗಾದ ಮೇಲೆ ಇದಕ್ಕೆ ಅರಿಶಿನ ಮಿಶ್ರಣ ಮಾಡಿ ಈ ನೀರನ್ನು ಕುಡಿಯುತ್ತ ಬರಬೇಕು ಇದರಿಂದ ನಮ್ಮ ದೇಹದೊಳಗೆ ಅಕಸ್ಮಾತ್ ಯೂರಿಕ್ ಆ್ಯಸಿಡ್ ಅಂಶ ಹೆಚ್ಚಾಗಿದ್ದು ಅದರಿಂದ ಮಂಡಿ ನೋವು ಕೀಲು ನೋವು ಕಾಣಿಸಿಕೊಳ್ಳುತ್ತಿದೆ ಆದರೆ ಆ ಸಮಸ್ಯೆ ಪರಿಹಾರವಾಗುತ್ತದೆ ಈ ಸರಳ ಮನೆಮದ್ದಿನಿಂದ.

ನೋವಿರುವ ಭಾಗಕ್ಕೆ ಕರ್ಪೂರ ಹಾಗೂ ಸಾಸಿವೆ ಎಣ್ಣೆಯ ಮಿಶ್ರಣವನ್ನು ನೋವಿರುವ ಭಾಗಕ್ಕೆ ಲೇಪನ ಮಾಡಬೇಕು, ಈ ಮಿಶ್ರಣವನ್ನು ನೋವಿರುವ ಭಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ ನಂತರ ಬಿಸಿ ನೀರನ್ನು ಸಹಾಯದಿಂದ ಆ ಭಾಗವನ್ನು ಅಂದರೆ ಮಂಡಿ ಹಾಗೂ ಕೀಲುಗಳ ತೊಳೆಯ ಬೇಕು. ಇಂತಹ ಕೆಲವೊಂದು ಸರಳ ಪರಿಹಾರಗಳು ಮಂಡಿ ನೋವು ಕೀಲು ನೋವಿಗೆ ಶಮನ ಕೊಡುತ್ತದೆ.

Exit mobile version