ಈ ಗಿಡದ ಹೆಸರು ತುತ್ತಿ ಗಿಡ ಅಂತ ಇದು ಯಾವುದಕ್ಕೆ ಪರಿಹಾರ ನೀಡುತ್ತೆ ಗೊತ್ತಾ? ಇಂದು ದೊಡ್ಡ ಸಮಸ್ಯೆಯಾಗಿರುವಂತಹ 9ವಿಧದ ಪೈಲ್ಸ್ ಸಮಸ್ಯೆಗೂ ಈ ಗಿಡಮೂಲಿಕೆ ಮನೆಮದ್ದು ಆಗಿ ಕೆಲಸ ಮಾಡಿ ನಿಮ್ಮ ಫೈಲ್ ಸಮಸ್ಯೆಗೆ ಪರಿಹಾರ ಕೊಡುತ್ತದೆ.ಇದನ್ನು ಬಳಸುವುದು ಹೇಗೆ ಮತ್ತು ಇನ್ನೂ ಕೆಲ ಸಮಸ್ಯೆಗಳಿಗೆ ಇದು ಶಮನ ಕೊಡುತ್ತೆ ಸಹ, ಎಲ್ಲವನ್ನ ತಿಳಿಯೋಣ ಬನ್ನಿ ಕೆಳಗಿನ ಮಾಹಿತಿಯಲ್ಲಿ.
ಕೆಲವು ಸಮಸ್ಯೆಗಳ ಹಾಗೆ ಎಷ್ಟೇ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ನಾವು ಚಿಕಿತ್ಸೆ ಪಡೆದುಕೊಂಡು ಬಂದರು ಪರಿಹಾರವೇ ದೊರೆತಿರುವುದಿಲ್ಲ ಆದರೆ ಚಿಕ್ಕ ಮನೆ ಮದ್ದಿನಿಂದ ಎಷ್ಟೋ ಸಮಸ್ಯೆಗಳು ಪರಿಹಾರ ಆಗಿರುವಂತಹ ನಿದರ್ಶನಗಳೂ ಉಂಟು.ಹೌದು ಹೇಳುತ್ತಾರಲ್ಲ ದೊಡ್ಡ ದೊಡ್ಡ ಬೀಗ ತೆಗೆಯಲು ಚಿಕ್ಕ ಬೀಗದ ಕೈ ಸಾಕು ಅಂದ ಹಾಗೆ ನಿಮ್ಮ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಚಿಕ್ಕದಾದ ಮನೆಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡಿ ನಿಮ್ಮ ಸಮಸ್ಯೆಗಳಿಗೆ ಶಮನ ಕೊಡುತ್ತೆ ಹಾಗೆ ಈ ಪೈಲ್ಸ್ ಕೂಡ ಈ ಮೊದಲೇ ಹೇಳಿದಂತೆ ಈ ಫೈಲ್ಸ್ ನಲ್ಲಿ 9 ವಿಧ ಇರುತ್ತದೆ.
ಇದರಿಂದ ಶಮನ ಪಡೆದುಕೊಳ್ಳುವುದಕ್ಕಾಗಿ ಬಹಳಷ್ಟು ಮಂದಿ ಬಹಳಷ್ಟು ವಿಧದ ಪ್ರಯತ್ನಗಳನ್ನು ಮಾಡಿರುತ್ತಾರೆ.ಇಂದಿನ ಈ ಲೇಖನದಲ್ಲಿಯೂ ಕೂಡ ಪೈಲ್ಸ್ ಸಮಸ್ಯೆಗೆ ಪರಿಹಾರವೇನು ಮತ್ತು ಅದು ಉಂಟಾಗುವುದಕ್ಕೆ ಕಾರಣಗಳೇನು ಅವುಗಳ ಲಕ್ಷಣಗಳೇನು ಎಲ್ಲವನ್ನು ತಿಳಿಯೋಣ.ಯಾವಾಗ ಆಹಾರ ಪದಾರ್ಥದಲ್ಲಿ ಮುಖ್ಯ ಪೋಷಕಾಂಶಗಳಾದ ಆಗಿರುವ ಈ ಫೈಬರ್ ಅಂಶ ಕಡಿಮೆ ಇರುತ್ತದೆ ಅಂಥವರಲ್ಲಿ ಎ ಮಲಬದ್ಧತೆ ಮತ್ತು ಪೈಲ್ಸ್ ಅಂತಹ ಸಮಸ್ಯೆ ಉಂಟಾಗಿರುತ್ತದೆ ಮೊದಲು ಪೈಲ್ಸ್ ಸಮಸ್ಯೆ ಉಂಟಾಗುವುದು ಮಲಬದ್ಧತೆ ಮೂಲಕ.
ಹೌದು ಯಾರಿಗೆಲ್ಲಾ ಮಲಬದ್ಧತೆ ಉಂಟಾಗುತ್ತದೆ ಅಂದರೆ ಗರ್ಭಧಾರಣೆ ಮಾಡಿರುವ ಹೆಣ್ಣುಮಕ್ಕಳಲ್ಲಿ ಹಾಗೆ ಯಾರು ಸರಿಯಾದ ಪೋಷಕಾಂಶಗಳಿರುವ ಊಟ ಮಾಡುವುದಿಲ್ಲ ಹಾಗೂ ಕಡಿಮೆ ನೀರು ಕುಡಿಯುತ್ತಾರೆ ಹಾಗೂ ಹೆಚ್ಚು ಇರುವ ಆಹಾರ ಪದಾರ್ಥಗಳನ್ನು ಅಥವಾ ಆಚೆ ತಿನಿಸುಗಳನ್ನ ಹೆಚ್ಚಾಗಿ ತಿನ್ನುವವರಲ್ಲಿ ಯಾರಲ್ಲಿ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವುದಿಲ್ಲ ಅವರಲ್ಲಿ ಈ ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡಿರುತ್ತದೆ.ಮಲಬದ್ಧತೆ ನಿರ್ಲಕ್ಷ್ಯ ಮಾಡಿದಾಗಲೇ ಈ ಮೂಲವ್ಯಾಧಿ ಕೂಡ ಉಂಟಾಗುವುದು.ದೇಹದ ಉಷ್ಣಾಂಶ ಅತಿ ಇರುವವರಿಗೂ ಕೂಡ ಮೂಲವ್ಯಾಧಿ ಸಮಸ್ಯೆ ಉಂಟಾಗಿರುತ್ತದೆ. ಈ ರೀತಿ ಹಲವು ಕಾರಣಗಳಿಂದ ಉಂಟಾಗುವ ಮೂಲವ್ಯಾಧಿಗೆ ಪರಿಹಾರ ಈ ತುತ್ತಿ ಗಿಡ.
ಹೌದು ಈ ಗಿಡವನ್ನು ಹೇಗೆ ನೀವು ಗಿಡಮೂಲಿಕೆಯಾಗಿ ಬಳಕೆ ಮಾಡುವುದು ಅಂದರೆ ಇದರ ಎಲೆಗಳನ್ನು ಸ್ವಲ್ಪ ಜಜ್ಜಿ ಇದನ್ನು ಮೂಲದ ನೋವು ಇರುವ ಭಾಗಕ್ಕೆ ಕಟ್ಟಬೇಕು, ರಾತ್ರಿಯಿಡಿ ಹಾಗೆ ಬಿಟ್ಟು ಬೆಳಿಗ್ಗೆ ಎದ್ದು ಬೆಚ್ಚಗಿನ ನೀರಿನಿಂದ ಆ ಭಾಗವನ್ನು ಸ್ವಚ್ಛ ಮಾಡಿಕೊಳ್ಳಬೇಕು.
ಅಥವಾ ಈ ಎಲೆಗಳಿಂದ ಕಷಾಯ ಮಾಡಿ ಕೂಡ ಸೇವಿಸಬಹುದು ಈ ಎಲೆಗಳ ಕಷಾಯಕ್ಕೆ ಸ್ವಲ್ಪ ಜೀರಿಗೆ ಮಿಶ್ರಮಾಡಿ ಕಷಾಯ ಮಾಡಿ ಕುಡಿಯುವುದು ಮೂಲವ್ಯಾಧಿ ಸಮಸ್ಯೆಯು ಬಹಳ ಬೇಗ ನಿವಾರಣೆಯಾಗುತ್ತೆ ಜೊತೆಗೆ ನೋವು ಕೂಡ ಕಡಿಮೆ ಆಗುತ್ತೆ.
ಈ ಎಲೆಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ವರುಷವಿಡೀ ಅದರ ಬಳಕೆ ಮಾಡಬಹುದು ಬೆಚ್ಚಗಿನ ನೀರಿಗೆ ಇದರ ಎಲೆಗಳ ಪುಡಿಯನ್ನು ಮಿಶ್ರಮಾಡಿ ಕುಡಿಯುತ್ತ ಬಂದರೆ ಮಲಬದ್ಧತೆ ಮೂಲವ್ಯಾಧಿ ಅಂತಹ ಸಮಸ್ಯೆಗಳು ಬಹಳ ಬೇಗನೆ ಪರಿಹಾರ ಆಗುತ್ತೆ. ಈ ರೀತಿಯಾಗಿ ಹೆಚ್ಚು ಬಾಧೆ ನೀಡುವ ಪೈಲ್ಸ್ ಗೆ ಈ ಗಿಡ ಮೂಲಿಕೆ ಉತ್ತಮ ಆಗಿದೆ.