Ad
Home ಅರೋಗ್ಯ ತಲೆಯಲ್ಲಿ ಸಿಕ್ಕಾಪಟ್ಟೆ ಹೊಟ್ಟು ಆಗುತ್ತಾ ಇದೆಯಾ , ಕೆರಕೊಂಡು ಕೆರಕೊಂಡು ತಲೆಕೆಟ್ಟು ಹೋಗಿದೆಯಾ ಹಾಗಾದರೆ ಈ...

ತಲೆಯಲ್ಲಿ ಸಿಕ್ಕಾಪಟ್ಟೆ ಹೊಟ್ಟು ಆಗುತ್ತಾ ಇದೆಯಾ , ಕೆರಕೊಂಡು ಕೆರಕೊಂಡು ತಲೆಕೆಟ್ಟು ಹೋಗಿದೆಯಾ ಹಾಗಾದರೆ ಈ ಒಂದು ಮನೆಮದ್ದು ಮಾಡಿ ಸಾಕು … ಎಲ್ಲ ಕ್ಲೀನ್ ಕಿಸ್ನಪ್ಪ ಆಗುತ್ತೆ…

ಹೌದು ತಲೆಹೊಟ್ಟು ಸಮಸ್ಯೆಗೆ ನಿಮಗೆ ತಿಳಿಯದ ಪರಿಹಾರ ತಿಳಿಸಿಕೊಡುತ್ತೇವೆ ಬನ್ನಿ ಈ ಪರಿಹಾರ ಮಾಡಿ ನಿಮ್ಮ ತಲೆ ಹೊಟ್ಟು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಇದಂತೂ ತುಂಬ ಸುಲಭವಾದ ಪರಿಹಾರ, ಇದನ್ನು ಮಾಡುವ ವಿಧಾನ ತಿಳಿಯಿರಿ ಈ ಲೇಖನದಲ್ಲಿ ಮತ್ತು ಬೇರೆಯವರಿಗು ಸಹ ಈ ಮನೆಮದ್ದಿನ ಕುರಿತು ತಿಳಿಸಿಕೊಡಿ.

ನಮಸ್ಕಾರ ಸಾಮಾನ್ಯವಾಗಿ ತಲೆಹೊಟ್ಟು ಸಮಸ್ಯೆ ಪುರುಷರು ಮಹಿಳೆಯರು ಎನ್ನದೆ ಇಬ್ಬರಿಗೂ ಸದಾ ಕಾಡುತ್ತಿರುತ್ತದೆ.ಹಾಗಾಗಿ ಈ ಸಮಸ್ಯೆಗೆ ಹಲವರು ಮಾಡುವ ಪರಿಹರ ಅಂದರೆ ಡ್ಯಾಂಡ್ರಫ್ ಕಂಟ್ರೋಲ್ ಶಾಂಪೂ ಬಳಸುವುದು ಆದರೆ ಇದನ್ನೇ ಬಳಸುವುದರಿಂದ ಸಮಸ್ಯೆ ಪರಿಹಾರ ಆಗುತ್ತದೆ ಅಂತ ಅಲ್ಲ ಇದಕ್ಕೆ ಕೆಲವೊಂದು ಬೇರೆ ಮನೆಮದ್ದುಗಳು ಕೂಡ ಇದೆ.

ಆ ಮನೆ ಮದ್ದುಗಳನ್ನು ಪಾಲಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಇವತ್ತಿನ ಲೇಖನಿಯಲ್ಲಿ ಡ್ಯಾಂಡ್ರಫ್ ಸಮಸ್ಯೆಗೆ ಜೊತೆಗೆ ಕೂದಲು ಉದುರುವ ಸಮಸ್ಯೆಗೆ ಪರಿಹಾರವನ್ನು ತಿಳಿಸಿಕೊಡುತ್ತಿದ್ದೇವೆ ಬನ್ನಿ ಈ ಮನೆಮದ್ದುಗಳನ್ನು ತಿಳಿದು ನೀವು ಕೂಡ ಪಾಲಿಸುವ ಮೂಲಕ ಕೂದಲಿನ ಕಾಳಜಿ ಮಾಡಿ ಮತ್ತು ಈ ಹೊಟ್ಟಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ಹೌದು ಮೊದಲಿಗೆ ತಲೆಹೊಟ್ಟು ಸಮಸ್ಯೆ ಉಂಟಾಗುವುದಕ್ಕೆ ಕಾರಣ ತಲೆ ಸ್ನಾನ ಮಾಡದೇ ಇರುವುದು ಮತ್ತು ಕೂದಲಿನ ಬುಡದಲ್ಲಿ ಡ್ರೈನೆಸ್ ಉಂಟಾಗುವುದು.ಹಾಗಾಗಿ ತಲೆಯಲ್ಲಿ ಡ್ರೈನೆಸ್ ಅಂದರೆ ಕೂದಲಿನ ಬುಡದಲ್ಲಿ ಡ್ರೈನೆಸ್ ಇರಬಾರದು ಅಂದರೆ ಕೂದಲಿಗೆ ಎಣ್ಣೆಯನ್ನು ಹಾಕಬೇಕು ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆ ಅಥವಾ ಹರಳೆಣ್ಣೆ ಇವುಗಳಲ್ಲಿ ಯಾವುದೇ ಎಣ್ಣೆಯನ್ನು ಕೂದಲಿಗೆ ಕೂದಲಿನ ಬುಡಕ್ಕೆ ಹಚ್ಚುವುದರಿಂದ ಸಮಸ್ಯೆ ಪರಿಹಾರವಾಗುತ್ತೆ ಅಂದರೆ ಕೂದಲ ಬುಡದಲ್ಲಿ ಡ್ರೈನೆಸ್ ನಿವಾರಣೆಯಾಗುತ್ತದೆ ಹಾಗೂ ನೀವು ಬಳಸುವ ಶ್ಯಾಂಪೂ ಕೂಡ ತಲೆಹೊಟ್ಟಿಗೆ ಕಾರಣವಾಗುತ್ತದೆ.

ಹಾಗಾಗಿ ಡ್ರೈನೆಸ್ ಉಂಟು ಮಾಡದಿರುವ ಅಥವಾ ಶಾಂಪೂ ಬಳಸುವಾಗ ಅದಕ್ಕೆ ಸ್ವಲ್ಪ ನೀರು ಮಿಶ್ರ ಮಾಡಿ ನಂತರ ಕೂದಲಿಗೆ ಹಚ್ಚಿ ಕೂದಲನ್ನು ಸ್ವಚ್ಛ ಮಾಡಿ ಈ ರೀತಿ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.ಈಗ ಡ್ರೈನೆಸ್ ಅಥವಾ ತಲೆಹೊಟ್ಟು ಸಮಸ್ಯೆಗೆ ಮಾಡಬಹುದಾದ ಪರಿಹಾರ ಕುರಿತು ಹೇಳುವುದಾದರೆ ಕೊಬ್ಬರಿ ಎಣ್ಣೆಗೆ ಕಾಫಿ ಪುಡಿ ಮಿಶ್ರ ಮಾಡಿ ಅದನ್ನು ಕೂದಲಿನ ಬುಡಕ್ಕೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ ಬಳಿಕ ತಲೆ ಸ್ನಾನ ಮಾಡಬೇಕು .

ತಲೆಸ್ನಾನ ಮಾಡುವಾಗ ನೀವು ಬಳಸುವ ಶಾಂಪೂಗೆ ನಿಂಬೆಹಣ್ಣಿನ ರಸ ಮತ್ತು ಸ್ವಲ್ಪ ಲೋಳೆರಸ ಹಾಗೂ ನೀರು ಮಿಶ್ರ ಮಾಡಿ ನಂತರ ಆ ಶಾಂಪೂವನ್ನು ಕೂದಲಿಗೆ ಹಚ್ಚಿ, ಕೂದಲನ್ನ ಸ್ವಚ್ಛ ಮಾಡಿ ಕೂದಲಿನ ಸ್ವಚ್ಛ ಮಾಡುವಾಗ ತಪ್ಪದೆ ತಣ್ಣೀರನ್ನು ಅಥವಾ ಬೆಚ್ಚಗಿನ ನೀರನ್ನು ಬಳಸಿ ಕೂದಲಿಗೆ ತುಂಬಾ ಒಳ್ಳೆಯದುನಂತರ ಕೂದಲನ್ನು ಒಣಗಿಸಿದ ಮೇಲೆ, ನೀರಿಗೆ ಆಪಲ್ ಸೈಡರ್ ವಿನೆಗರ್ ಅನ್ನು ಅರ್ಧ ಚಮಚದಷ್ಟು ಮಿಶ್ರಮಾಡಿ ಸ್ಪ್ರೇ ಬಾಟಲ್ ಸಹಾಯದಿಂದ ಕೂದಲಿನ ಬುಡಕ್ಕೆ ಸ್ಪ್ರೇ ಮಾಡಬೇಕು.

ಈ ರೀತಿ ದಿನಬಿಟ್ಟು ದಿನ ಮಾಡುತ್ತ ಬರುವುದರಿಂದ ಅಂದರೆ ಕೂದಲಿನ ಬುಡಕ್ಕೆ ಅಥವಾ ತಲೆಸ್ನಾನ ಮಾಡಿದ ದಿನದಂದು ಆ್ಯಪಲ್ ಸೈಡರ್ ವಿನಿಗರ್ ಸೇರಿಸಿ ಮಿಶ್ರ ಮಾಡಿ ಕೂದಲಿನ ಬುಡಕ್ಕೆ ಸ್ಪ್ರೇ ಮಾಡುತ್ತ ಬರುವುದರಿಂದ ತಲೆ ಹೊಟ್ಟಿನ ಸಮಸ್ಯೆಗೆ ಬಹಳ ಬೇಗ ಪರಿಹಾರ ದೊರೆಯುತ್ತದೆ ಈ ಕೆಲವೊಂದು ಮನೆಮದ್ದುಗಳನ್ನು ನೀವು ಕೂಡ ಪಾಲಿಸಿ ಖಂಡಿತ ಇರುವ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳುತ್ತೀರ ಧನ್ಯವಾದ.

Exit mobile version