Ad
Home ಎಲ್ಲ ನ್ಯೂಸ್ ತಿನ್ನೋದಕ್ಕೆ ಒಂದೊತ್ತು ಊಟ ಇಲ್ಲದೆ ಜೀವನವನ್ನೇ ಕಳೆದುಕೊಳ್ಳಬೇಕು ಅಂತ ಹೋಗಿದ್ದ ಸಾಧುಕೋಕಿಲ ಅವರ ಜೀವನದ ಕಣ್ಣೀರಿನ...

ತಿನ್ನೋದಕ್ಕೆ ಒಂದೊತ್ತು ಊಟ ಇಲ್ಲದೆ ಜೀವನವನ್ನೇ ಕಳೆದುಕೊಳ್ಳಬೇಕು ಅಂತ ಹೋಗಿದ್ದ ಸಾಧುಕೋಕಿಲ ಅವರ ಜೀವನದ ಕಣ್ಣೀರಿನ ಕಥೆ ನೋಡಿ….

ಸಿನಿಮಾದಲ್ಲಿ ಯಾವುದೇ ಗಾಡ್ಫಾದರ್ ಇಲ್ಲ ಅಂದ್ರೆ ಸಿನಿಮಾದಲ್ಲಿ ಬರುವುದಕ್ಕೆ ಅಷ್ಟು ಸುಲಭವಾದಂತಹ ಮಾತು ಅಲ್ಲ ಯಾರಾದರೂ ನಮ್ಮ ನೆಂಟರು ಅಥವಾ ನಮಗೆ ಗೊತ್ತಿರುವ ಅಂತಹ ವ್ಯಕ್ತಿಗಳು ಸಿನಿಮಾದಲ್ಲಿ ಇದ್ದರೆ ನಾವು ಸರಾಗವಾಗಿ ಸಿನಿಮಾದಲ್ಲಿ ಎಂಟ್ರಿ ಕೊಡಬಹುದು ಆದರೆ ಅಲ್ಲಿ ದೊಡ್ಡ ಹೀರೋ ಆಗುತ್ತೋ ಬಿಡುತ್ತೋ ಗೊತ್ತಿಲ್ಲ ಆದರೆ ಸಿನಿಮಾ ಒಳಗಡೆ ಹೋಗುವುದಕ್ಕೆ ಯಾರಾದರೂ ಸಹಾಯ ಬೇಕೇ ಬೇಕಾಗುತ್ತದೆ.ಆದರೆ ಇವತ್ತು ನಾವು ನೋಡುವಂತಹ ದೊಡ್ಡ ದೊಡ್ಡ ನಟರು ತುಂಬಾ ಕಷ್ಟಪಟ್ಟು ಬಂದಿರುತ್ತಾರೆ ಹಾಗೂ ನೀವು ಗಮನಿಸಬಹುದು ಯಾವುದೇ ಒಬ್ಬ ನಟ ಯಾವುದೇ ಬೆಂಬಲವಿಲ್ಲದೆಇಂಡಸ್ಟ್ರಿಗೆ ಬಂದಿರುತ್ತಾನೆ ದೊಡ್ಡಮಟ್ಟದಲ್ಲಿ ಇಷ್ಟ ಆಗಿರುತ್ತಾನೆ ಇದನ್ನು ಕೇವಲ ನಮ್ಮ ಕನ್ನಡದಲ್ಲಿ ಮಾತ್ರವಲ್ಲ ಎಲ್ಲಾ ಸಿನಿಮಾ ಚಿತ್ರರಂಗದಲ್ಲಿ ಕೂಡ ನೀವು ಗಮನಿಸಿ ನೋಡಿ ಆ ರೀತಿಯಾದಂತಹ ವ್ಯಕ್ತಿಗಳನ್ನು ನೀವು ನೋಡಬಹುದು.

 

ಸ್ನೇಹಿತರೆ ಸಾಧುಕೋಕಿಲಾ ಗುರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸಾಧುಕೋಕಿಲ ಅವರು ತೆರೆಯ ಮೇಲೆ ಬಂದಿದ್ದರೆ ಸಾಕುಜನರು ಹುಚ್ಚೆದ್ದು ನಗುತ್ತಾರೆ ಅಷ್ಟೊಂದು ಚೆನ್ನಾಗಿ ತಮ್ಮ ನಯವಾದ ಆಕ್ಟಿಂಗ್ ಮುಖಾಂತರ ಹಾಗೂ ತನ್ನ ಹಾಸ್ಯದ ಮುಖಾಂತರ ಹಲವಾರು ಅಭಿಮಾನಿಗಳನ್ನು ಇವತ್ತು ಸಂಪಾದಿಸಿದ್ದಾರೆ ಅದಲ್ಲದೆ ಸಾಧುಕೋಕಿಲ ಕೇವಲ ಹಾಸ್ಯ ಮಾತ್ರವಲ್ಲ ಉತ್ತಮವಾಗಿ ಸಂಗೀತವನ್ನು ಮಾಡುವಂತಹ ಒಬ್ಬ ಶ್ರೇಷ್ಠ ಕಲಾವಿದ ಅಂತ ಹೇಳಬಹುದು ಇವರು ಒಂತರ ಆಲ್ರೌಂಡರ್ ವ್ಯಕ್ತಿ ಅಂತ ಹೇಳಬಹುದು ಯಾವ ರೀತಿ ಅಂದರು ಸಿನಿಮಾ ನಿರ್ದೇಶನವನ್ನು ಮಾಡುತ್ತಾರೆ ಸಂಗೀತ ನಿರ್ದೇಶನ ಮಾಡುತ್ತಾರೆ ಹಾಗೂ ಸಿನಿಮಾದಲ್ಲಿ ನಟನೆಯನ್ನು ಕೂಡ ಮಾಡುತ್ತಾರೆ ಹೀಗೆ ನಾನಾ ರೀತಿಯಾದಂತಹ ಒಂದು ಸಾಮರ್ಥ್ಯವನ್ನು ಹೊಂದಿರುವಂತಹ ಸಾಧುಕೋಕಿಲಾ ಅವರ ಕೆಲವು ಜೀವನಚರಿತ್ರೆಯನ್ನು ತೆಗೆದುಕೊಳ್ಳೋಣ ಬನ್ನಿ.

ಸಾಧುಕೋಕಿಲ ಅವರು ಒಂದು ಸಮಯದಲ್ಲಿ ಊಟಕ್ಕೆ ಹಣ ಇಲ್ಲದೆ ಹಾಗೂ ಊಟವನ್ನು ಸಿಗದೆ ಮಾವಿನಹಣ್ಣಿನ ತಿಂದು ಬದುಕುತ್ತಿದ್ದ ಹಾಗೂ ಕೆಲವೊಂದು ಅಂಗಡಿಯಲ್ಲಿ ಹಾಗೂ ಆರ್ಕೆಸ್ಟ್ರಾದಲ್ಲಿ ಕೆಲಸವನ್ನು ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದರು ಹೀಗೆ ತಮ್ಮ ಜೀವನದಲ್ಲಿ ಹಲವಾರು ಅವಮಾನಗಳುಹಾಗಿದ್ದರೆ ಹೀಗೆ ಇವೆಲ್ಲಾ ಅವಮಾನಗಳನ್ನು ತಾಳಲಾರದೆ ಒಂದು ಸಾರಿ ಇವರು ಜೀವನವೇ ಬೇಡ ಅಂತ ಆಗಿತ್ತು ಅಂತ ಹೇಳಿದ್ದರು. ಆದರೆ ಇವತ್ತು ಸಾಧು ಮಹಾರಾಜ್ ಅನ್ನುವಂತಹ ಹೆಸರಿನಲ್ಲಿ ಕರ್ನಾಟಕ ಜನರು ಮೆಚ್ಚುವಂತಹ ಹಾಗೂ ಹಲವಾರು ಅಭಿಮಾನಿಗಳನ್ನು ಇವರು ಹೊಂದಿದ್ದಾರೆ.

ಇನ್ನು ನಾವು ಸಾಧುಕೋಕಿಲಾ ಅವರ ಕುಟುಂಬದ ವಿಚಾರಕ್ಕೆ ಬರುವುದಾದರೆ ಸಾಧುಕೋಕಿಲ ಅವರು ಸಂಗೀತ ಕುಟುಂಬದಲ್ಲಿ ಇದ್ದಂತಹ ವ್ಯಕ್ತಿ ಇವರು ಹುಟ್ಟಿದಾಗಿನಿಂದಲೂ ಕೂಡ ತುಂಬಾ ಕಷ್ಟವನ್ನು ನೋಡಿದಂತಹ ವ್ಯಕ್ತಿ ಹೀಗೆ ಕಷ್ಟದಿಂದಲೇ ಬಂದಂತಹ ಹಾಗೂಹೊತ್ತು ಊಟಕ್ಕೂ ಕೂಡ ಕಷ್ಟಪಟ್ಟು ಬೆಳೆದು ಬಂದ ಅಂತಹ ವ್ಯಕ್ತಿ ಅಂತ ನಾವು ಹೇಳಬಹುದು ಸಾಧುಕೋಕಿಲ ಅವರು ಮೊದಲ ಬಾರಿಗೆ ಸೆಂಟ್ ಜೋಸೆಫ್ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ . ನಿಮಗೆ ಗೊತ್ತಾ ಸಾಧುಕೋಕಿಲಾ ಅವರ ತಾಯಿ ನಾಲ್ಕು ಕಿಲೋಮೀಟರ್ ಗಳ ಕಾಲ ನಡೆದುಕೊಂಡು ಹೋಗಿ ತನ್ನ ಮಗನಿಗೆ ಮಧ್ಯಾಹ್ನದ ಊಟಕ್ಕೆ ಒಂದು ಮಾವಿನ ಹಣ್ಣನ್ನು ಕೊಡುತ್ತಿದ್ದಾರಂತೆ.

ಹೀಗೆ ಮನೆಯಲ್ಲಿ ಸಿಕ್ಕಾಪಟ್ಟೆ ಬಡತನ ಇದ್ದ ಕಾರಣ ಕೇವಲ 8ನೇ ತರಗತಿಯನ್ನು ಮುಗಿಸಿ ದಂತಹ ಸಾಧುಕೋಕಿಲ ಅವರು ತನ್ನ ಬಡತನದ ಮನೆಯನ್ನು ಹೇಗಾದರೂ ಉದ್ಧಾರ ಮಾಡಬೇಕು ಅಂತ ನಿಟ್ಟಿನಲ್ಲಿ ಅವತ್ತಿನ ಸಂದರ್ಭದಲ್ಲಿದುಡಿಯಲು ಶುರುಮಾಡುತ್ತಾರೆ ತದನಂತರ ಕಸ್ತೂರಿ ಶಂಕರ್ ರಾವ್ ಎನ್ನುವಂತಹ ಅಂಗಡಿಯಲ್ಲಿ ವಾದ್ಯಗಳನ್ನು ಬರುವಂತಹ ಹಾಗೂ ಕಸಗುಡಿಸುವ ಅಂತಹ ಕೆಲಸವನ್ನು ಕೂಡ ಮಾಡುತ್ತಾರೆ. ಹೀಗೆ ಸಂಗೀತದ ವಸ್ತುಗಳ ಮೇಲೆ ಇದ್ದಂತಹ ದೂಳನ್ನು ವರಿಸುವುದು ಈ ರೀತಿಯಾದಂತಹ ಕೆಲಸವನ್ನು ಮಾಡುತ್ತಿರುವಂತಹ ಸಂದರ್ಭದಲ್ಲಿ ಸಾಧುಕೋಕಿಲ ಅವರಿಗೆ ಸಂಗೀತದ ಮೇಲೆ ತುಂಬಾ ಆಸಕ್ತಿ ಮೂಡುತ್ತದೆ ನಾನು ಕೂಡ ಸಂಗೀತ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಹಾಗೂ ದೊಡ್ಡಮಟ್ಟದಲ್ಲಿ ಬೆಳೆಯಬೇಕು ಎನ್ನುವಂತಹ ಚಲ ಅವತ್ತಿನ ದಿನ ಅವರಿಗೆ ಹುಟ್ಟುತ್ತದೆ.

ಅವತ್ತಿನ ಸಂದರ್ಭದಲ್ಲಿ ಸಾಧುಕೋಕಿಲ ಅವರು ದಿನಕ್ಕೆ ಹತ್ತು ರೂಪಾಯಿ ಸಂಬಳವನ್ನು ತೆಗೆದುಕೊಳ್ಳುತ್ತಿದ್ದರು ಹಾಕಿ ಒಂದು ದಿನ ಅವರಿಗೆ ಇನ್ನೊಂದು ಅವಮಾನ ಉಂಟಾಗುತ್ತದೆ ಆರ್ಕೆಸ್ಟ್ರಾದಲ್ಲಿಒಬ್ಬ ವ್ಯಕ್ತಿ ವಾದ್ಯವನ್ನು ಚೆನ್ನಾಗಿ ಜೋಡಿಸಿಲ್ಲ ಎನ್ನುವಂತಹ ನಿಟ್ಟಿನಲ್ಲಿ ಸಾಧುಕೋಕಿಲ ಅವರಿಗೆ ಬಯ್ಯುತ್ತಾರೆ ಇದಕ್ಕಾಗಿ ಸಿಕ್ಕಾಪಟ್ಟೆ ಬೇಜಾರು ಮಾಡಿಕೊಂಡಿದ್ದರಂತೆ ನಮ್ಮ ಸಾಧುಕಕಿಲ.ಸಾಧುಕೋಕಿಲ ಅವರಿಗೆ ಬರುವಂತಹ ಸಂಬಳದಲ್ಲಿ ಹಣವನ್ನು ಕೊಡುವ ಬದಲು ಒಂದು ಟಿಶರ್ಟನ್ನು ಕೊಡುತ್ತಾರೆ ಹೀಗೆ ಟಿಶರ್ಟನ್ನು ಹಾಕಿಕೊಳ್ಳಲಾಗಿದೆ ಸಾಧುಕೋಕಿಲ ಅವರದು ಹೊರಗಡೆ ಬರುತ್ತಾರೆ ಹೀಗೆ ತದನಂತರ ಸಾಧುಕೋಕಿಲ ತನ್ನ ಅಣ್ಣ ಹತ್ತಿರ ಹೋಗಿ ನಾನು ಬರ್ತೀನಿ ಇಲ್ವೋ ಗೊತ್ತಿಲ್ಲ ಅಂತ ಹೇಳಿ ಒಂದು ಸೈಕಲನ್ನು ಹತ್ತಿಕೊಂಡು ಹಲಸೂರು ಕೆರೆಯ ಹತ್ತಿರ ಹೋಗುತ್ತಿರುತ್ತಾರೆ ಆದರೆ ಆ ಸಂದರ್ಭದಲ್ಲಿ ಹೋಗುವಂತಹ ದಾರಿಯಲ್ಲಿ ಒಂದು ಇಂಗ್ಲಿಷ್ ಸಿನಿಮಾದ ಒಂದು ಪೋಸ್ಟರನ್ನು ನೋಡುತ್ತಾರೆ ಹೀಗೆ ನನ್ನ ಜೀವನವನ್ನು ಕಳೆದುಕೊಳ್ಳುವುದಕ್ಕಿಂತ ಮುಂಚೆ ನಾನು ಈ ಸಿನಿಮಾವನ್ನು ನೋಡಿ ಹೋಗುತ್ತೇನೆ ಎನ್ನುವಂತಹ ಒಂದು ನಿರ್ಧಾರವನ್ನ ಮಾಡುತ್ತಾರೆ.

ಹೀಗೆ ಸಾಧುಕೋಕಿಲ ಅವರನ್ನು ಜೀವನವನ್ನೇ ಬದಲಾಯಿಸಿತು ಆ ಸಿನಿಮಾ ಏಕೆಂದರೆ ಆ ಸಿನಿಮಾವನ್ನು ನೋಡುವಂತಹ ಸಂದರ್ಭದಲ್ಲಿ ಸಿನಿಮಾದಲ್ಲಿ ಬರುವಂತಹ ಕಾಮಿಡಿ ವಿಚಾರವನ್ನು ನೋಡಿ ಸಾಧುಕೋಕಿಲ ಸಿಕ್ಕಾಪಟ್ಟೆ ಹಾಗೂ ಅವರ ಸಿನಿಮಾ ಜೀವನಕ್ಕೆ ಇದು ಒಂದು ದೊಡ್ಡ ತಿರುವಂತಪುರ ಹೇಳಿದ್ದಾರೆ.ಹೀಗೆ ಆ ಸಂದರ್ಭದಲ್ಲಿ ನಾನು ದೊಡ್ಡ ಸಂಗೀತಗಾರನಾಗಿ ಬೆಳೆದು ನಿಲ್ಲುತ್ತೇನೆ ಕೆಲವೇ ಕೆಲವು ವರ್ಷಗಳಲ್ಲಿಯೇ ನನ್ನನ್ನು ಅವಮಾನ ಮಾಡಿದಂತಹ ವ್ಯಕ್ತಿಗಳಿಗೆ ನಾನು ಏನಾದರೂ ಮಾಡಿ ತೋರಿಸಬೇಕು ಎನ್ನುವಂತಹ ನಿಟ್ಟಿನಲ್ಲಿಸಾಧುಕೋಕಿಲ ಅವರು ಕೆಲವೇ ಕೆಲವು ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಸಂಗೀತ ನಿರ್ದೇಶಕನಾಗಿ ತನಗೆ ಅವಮಾನ ಮಾಡಿದಂತಹ ವ್ಯಕ್ತಿಯನ್ನು ಕರೆದು ಆಲ್ಬಮ್ ಒಂದಕ್ಕೆ ಹಾಡನ್ನು ಕೂಡ ಹಾಡಲು ಹೇಳುತ್ತಾರಂತೆ.

ಹೀಗೆ ತನ್ನ ಬದುಕಿನಲ್ಲಿ ಸಿಕ್ಕಾಪಟ್ಟೆ ಸಾಧನೆ ಮಾಡಿದಂತಹ ಸಾಧುಕೋಕಿಲ ಅವರು ಮೊದಲು ಹಂಸಲೇಖ ಹಾಗೂ ಇನ್ನಿತರ ಸಂಗೀತ ನಿರ್ದೇಶಕರ ಅವರ ಜೊತೆಗೆ ಕೆಲಸವನ್ನು ಮಾಡುತ್ತಾರೆ ತದನಂತರ ಉಪೇಂದ್ರ ಅವರ ಸಿನಿಮಾಗಳನ್ನು ಕೂಡ ನಟನೆ ಹಾಗೂ ಮ್ಯೂಸಿಕ್ ಡೈರೆಕ್ಟರ್ ಆಗಿ ಕೆಲಸವನ್ನು ಮಾಡುತ್ತಾರೆ ಹೀಗೆ ಉಪೇಂದ್ರ ಅವರ ನಿರ್ದೇಶನದ ಮಾಡಿದಂತಹ ಬ್ಲಾಕ್ಬಸ್ಟರ್ ಸಿನಿಮಾದಲ್ಲಿ ಹಿಟ್ ಆಗುವುದಕ್ಕೆ ಕಾರಣ ಇವರ ಮ್ಯೂಸಿಕ್.ಸಾಧುಕೋಕಿಲ ಅವರನ್ನು ನೋಡಿ ಉಪೇಂದ್ರ ಅವರು ಒಂದು ಡ್ರೆಸ್ಸನ್ನು ಹಾಕಿಸಿ ನೀನು ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ನಟನೆ ಕೂಡ ಮಾಡು ಎನ್ನುವಂತಹ ಮಾತನ್ನ ಸಾಧುಕೋಕಿಲ ಅವರಿಗೆ ಹೇಳಿರುತ್ತಾರೆ ಹೀಗೆ ನಟನೆಯ ಫೀಲ್ಡ್ ಕೂಡ ಬಂದಂತಹ ಸಾಧುಕೋಕಿಲ ಕಾಮಿಡಿ ನಟನಾಗಿ ಅವತ್ತಿನಿಂದ ಸಿಕ್ಕಾಪಟ್ಟೆ ಆಗುತ್ತಾರೆ. ನಂತರ ಸಾಧುಕೋಕಿಲ ಅವರು ಹಿಂದೆ ನೋಡುವುದೇ ಇಲ್ಲ. ಯಾವುದು ಬರ್ತಾರ್ ನಟನ ಸಿನಿಮಾದಲ್ಲಿ ಸಾಧುಕೋಕಿಲ ಅವರ ಒಂದು ಕಾಮಿಡಿ ಸೀನ್ ಇರಲೇಬೇಕು ಆ ರೀತಿಯಾಗಿ ತನ್ನ ಜೀವನವನ್ನು ಬದಲಾಯಿಸಿ ಕೊಂಡಂತಹ ಸಾಧುಕೋಕಿಲ ಅವರು ನಿಜವಾಗ್ಲೂ ಗ್ರೇಟ್ ಅಂತ ನಾವು ಹೇಳಬಹುದು.

Exit mobile version