Ad
Home ಉಪಯುಕ್ತ ಮಾಹಿತಿ ದೇವರ ದರ್ಶನವನ್ನ ಈ ರೀತಿಯಾಗಿ ಮಾಡಿ ಸಾಕು ನಿಮ್ಮ ಇಷ್ಟಾರ್ಥಗಳು ಬಹುಬೇಗ ಈಡೇರುತ್ತವೆ… ಅಷ್ಟಕ್ಕೂ ಹೇಗೆ...

ದೇವರ ದರ್ಶನವನ್ನ ಈ ರೀತಿಯಾಗಿ ಮಾಡಿ ಸಾಕು ನಿಮ್ಮ ಇಷ್ಟಾರ್ಥಗಳು ಬಹುಬೇಗ ಈಡೇರುತ್ತವೆ… ಅಷ್ಟಕ್ಕೂ ಹೇಗೆ ಪ್ರಾರ್ಥನೆ ಮಾಡಬೇಕು ಗೊತ್ತ …

ನಮಸ್ಕಾರಗಳು ಎಲ್ಲರಿಗೂ ಇವತ್ತಿನ ಮಾಹಿತಿಯಲ್ಲಿ ಎಲ್ಲರಿಗೂ ಉಪಯುಕ್ತವಾಗುವಂತಹ ಎಲ್ಲರೂ ತಿಳಿದುಕೊಳ್ಳಬೇಕು ದಂತಹ ಮಾಹಿತಿಯೊಂದರ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಈ ವಿಚಾರ ಪ್ರತಿ ಒಬ್ಬರಿಗೂ ಉಪಯುಕ್ತವಾಗುವ ಕಾರಣ ಎಲ್ಲರಿಗೂ ಈ ವಿಚಾರವನ್ನ ಹಂಚಿಕೊಳ್ಳಿ. ಹೌದು ಅದೇನೆಂದರೆ ದೇವಸ್ಥಾನಗಳಿಗೆ ಹೋದಾಗ ನೀವು ದೇವರ ದರ್ಶನ ಪಡೆಯುವಾಗ ಈ ತಪ್ಪನ್ನು ಮಾಡುತ್ತಿದ್ದಲ್ಲಿ ಖಂಡಿತವಾಗಿಯೂ ಇನ್ನು ಮುಂದಿನ ದಿವಸಗಳಲ್ಲಿ ಇಂತಹ ತಪ್ಪನ್ನು ಮಾಡದಿರಿ ಹೌದು ದೇವಾಲಯಗಳಿಗೆ ನಾವು ಹೋದಾಗ ಅಲ್ಲಿ ತಪ್ಪದೆ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಹಾಗೆ ನಮಗೆ ದೇವಾಲಯಗಳಿಗೆ ಹೋಗುತ್ತಿದ್ದ ಹಾಗೆ ನಾವು ಅಂದುಕೊಳ್ಳುವುದೇ ಬೇಡ ನಮ್ಮಲ್ಲಿ ನ ಶಾಂತತೆ ಎಂಬುದು ನೆಲೆಯೂರಿ ಬಿಡುತ್ತದೆ ನಮ್ಮ ಆಲೋಚನೆಗಳು ಕೂಡ ಬದಲಾಗಿಬಿಡುತ್ತದೆ ಅದೆಲ್ಲ ದೇವಸ್ಥಾನದ ಧನಾತ್ಮಕ ಸಕಾರಾತ್ಮಕ ವಾತಾವರಣದ ಪ್ರಭಾವದಿಂದಾಗಿ ನಮಗೆ ಈ ಅನುಭವವಾಗುತ್ತದೆ.

ಹೌದು ಹಿಂದೂ ಸಂಪ್ರದಾಯದಲ್ಲಿ ದೇವಾಲಯಗಳಿಗೆ ಹೋಗುವುದು ಬಹಳ ವಿಶೇಷವಾದ ಪದ್ದತಿಯಾಗಿದೆ ಯಾರು ಪ್ರತೀದಿನ ದೇವಾಲಯಗಳಿಗೆ ಹೋಗಿ ಬರುತ್ತಾರೆ, ಅಂಥವರಲ್ಲಿ ವಿಶೇಷ ಸಕಾರಾತ್ಮಕ ಶಕ್ತಿ ಇರುವುದನ್ನು ನಾವು ಕಾಣಬಹುದಾಗಿದೆ. ಅಷ್ಟೇ ಅಲ್ಲ ಯಾರೂ ಪ್ರತೀದಿವಸ ದೇವಾಲಯಗಳಿಗೆ ಹೋಗಿ ಬರುತ್ತಾರೆ ಅವರ ಮನದಿಚ್ಛೆ ಸಂಪೂರ್ಣವಾಗಿ ನೆರವೇರುತ್ತದೆ ಅಂತ ಸಹ ಹೇಳಲಾಗುತ್ತೆ ಸ್ವಾರ್ಥದ ಎಂಬುದು ನಮ್ಮಿಂದ ದೂರ ಇರುವಂತೆ ದೇವಾಲಯಗಳಿಗೆ ಹೋಗುವವರು ದೇವರ ದರ್ಶನ ಪಡೆಯುವುದಕ್ಕೆ ಹೋಗುವ ಉದ್ದೇಶವನ್ನು ಇಟ್ಟುಕೊಂಡು ಹೋದರೆ ಇದರ ಜೊತೆಗೆ ನಮಗೆ ಇನ್ನೂ ಹಲವಾರು ಲಾಭಗಳು ಕೂಡ ಲಭಿಸುತ್ತದೆ ಪ್ರಶಾಂತವಾದ ನಗುಮುಖದ ದೇವರ ವಿಗ್ರಹವನ್ನು ನೋಡುತ್ತಿದ್ದರೆ ನಮ್ಮಲ್ಲಿಯೂ ಕೂಡ ಆಲೋಚನೆಗಳು ಬದಲಾಗಿ ನಮ್ಮ ಮುಖದ ಮೇಲೆಯೂ ನಗು ಮೂಡುತ್ತದೆ ಅಷ್ಟೆಲ್ಲಾ ದೇವಾಲಯಗಳಿಗೆ ಹೋಗುವುದರಿಂದ ಅಲ್ಲಿರುವಂತಹ ಗ್ರ್ಯಾವಿಟೇಷನಲ್ ಪವರ್ ಇದ್ದು, ನಮ್ಮಲ್ಲಿರುವ ಕೆಟ್ಟತನವನ್ನು ಕೆಟ್ಟಾ ಆಲೋಚನೆಯನ್ನ ದೂರ ಮಾಡಿ ನಮ್ಮಲ್ಲಿ ಶಾಂತತೆ ಅನ್ನೂ ಉಂಟು ಮಾಡುತ್ತದೆ.

ಹೌದು ದೇವಾಲಯಗಳಿಗೆ ಹೋಗುವುದರಿಂದ ದೇವರ ದರ್ಶನ ಪಡೆಯುವುದರ ಜತೆಗೆ ಈ ಮೊದಲೇ ಹೇಳಿದಂತೆ ಬಹಳಷ್ಟು ಉತ್ತಮ ಲಾಭಗಳನ್ನು ಪಡೆದುಕೊಳ್ಳಬಹುದು. ಅದರಂತೆ ನಮ್ಮ ಮಾನಸಿಕ ಆರೋಗ್ಯ ಜೊತೆಗೆ ದೈಹಿಕ ಆರೋಗ್ಯವೂ ಕೂಡ ವೃದ್ಧಿ ಆಗುತ್ತದೆ. ಆದರೆ ಈ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಮಾಹಿತಿಯೇ ಬೇರೆಯಾಗಿದೆ ಅದೇನೆಂದರೆ ದೇವಾಲಯದಲ್ಲಿ ದೇವರ ದರ್ಶನ ಪಡೆಯುವಾಗ ಯಾವತ್ತಿಗೂ ದೇವರ ಅಭಿಮುಖವಾಗಿ ಅಂದರೆ ದೇವರ ವಿಗ್ರಹದ ಎದುರು ನಿಂತು ದೇವರ ದರ್ಶನ ಮಾಡಬಾರದು.

ದಕ್ಷಿಣಮೂರ್ತಿ ದೇವಾಲಯ :ಹೌದು ಈ ಮೊದಲು ತಿಳಿಸಿದಂತೆ ಎಲ್ಲಾ ದೇವಾಲಯಗಳಲ್ಲಿಯೂ ದೇವರ ಅಭಿಮುಖವಾಗಿ ನಿಂತು ನಾವು ದೇವರ ದರ್ಶನ ಮಾಡಬಾರದು ಆದರೆ ದಕ್ಷಿಣಮೂರ್ತಿ ದೇವಾಲಯದಲ್ಲಿ ವಿಶೇಷವಾಗಿ ನಾವು ದೇವರ ಎದುರು ನಿಂತು ದೇವರ ದರ್ಶನ ಮಾಡಬೇಕು. ಯಾಕೆ ಅಂದರೆ ದಕ್ಷಿಣಾ ಮೂರ್ತಿ ದೇವಾಲಯದಲ್ಲಿ ದೇವರು ದಕ್ಷಿಣಾಭಿಮುಖವಾಗಿ ಅಂದರೆ ದಕ್ಷಿಣಕ್ಕೆ ಮುಖ ಮಾಡಿ ನಿಂತಿರುವುದರಿಂದ ನಾವು ದೇವರ ಪ್ರಾರ್ಥನೆ ಮಾಡುವಾಗ ಉತ್ತರ ದಿಕ್ಕಿನೆಡೆಗೆ ನಿಂತು ಪ್ರಾರ್ಥನೆ ಮಾಡ್ತಾರೆ ಈ ರೀತಿ ಮಾಡುವುದರಿಂದ ನಮ್ಮ ಅಪಮೃತ್ಯು ಸಮಸ್ಯೆ ದೂರವಾಗುತ್ತದೆ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ.

ಹೌದು ವಿಶೇಷವಾಗಿ ಯಾವ ದೇವಾಲಯದಲ್ಲಿ ವಿಗ್ರಹವು ದಕ್ಷಿಣಾಭಿಮುಖವಾಗಿ ಪ್ರತಿಷ್ಠಾಪನೆ ಮಾಡಲಾಗಿರುತ್ತದೆ ಅಂತಹ ದೇವಾಲಯಗಳಲ್ಲಿ ದೇವರ ಅಭಿಮುಖವಾಗಿ ನಿಂತು ಪ್ರಾರ್ಥನೆ ಮಾಡುವುದರಿಂದ ನಮ್ಮಲ್ಲಿರುವ ಹಲವು ಸಮಸ್ಯೆಗಳು ದೂರಾಗುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ಪೂರ್ವಾಭಿಮುಖ ಉತ್ತರಾಭಿಮುಖ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪನೆಗೊಂಡಿರುವ ದೇವಾಲಯಗಳಲ್ಲಿ ಯಾವತ್ತಿಗೂ ತೇವರ್ ಅಭಿಮುಖವಾಗಿ ನಿಂತು ಪ್ರಾರ್ಥನೆ ಮಾಡಬಾರದು ಇದರಿಂದ ಅಪಮೃತ್ಯು ಉಂಟಾಗುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಹೀಗೆ ದೇವಸ್ಥಾನಗಳಿಗೆ ಹೋದಾಗ ದೇವರ ದರ್ಶನವನ್ನು ಈ ರೀತಿ ಮಾಡಿ ಯಾವುದೇ ಕಾರಣಕ್ಕೂ ದೇವರ ದರ್ಶನ ಪಡೆಯುವಾಗ ಕೆಲವೊಂದು ತಪ್ಪುಗಳನ್ನು ಮಾಡದೆ ಹಾಗೆ ಕೆಲವೊಂದು ದೇವಾಲಯಗಳಲ್ಲಿ ದೇವರ ದರ್ಶನ ಪಡೆಯುವಾಗ ದೇವರ ಅಭಿಮುಖವಾಗಿ ನಿಲ್ಲಬೇಡಿ. ಆದರೆ ದಕ್ಷಿಣಾಭಿಮುಖವಾಗಿ ಪ್ರತಿಷ್ಠಾಪನೆಗೊಂಡಿರುವ ವಿಗ್ರಹದ ದೇವಾಲಯದಲ್ಲಿ ನೀವು ದೇವರ ಅಭಿಮುಖವಾಗಿ ನಿಂತು ದೇವರ ದರ್ಶನ ಪಡೆಯಬಹುದು ಪ್ರಾರ್ಥನೆ ಮಾಡಬಹುದು.

Exit mobile version