ದೇವಸ್ಥಾನದ ಮುಂದೆ ಭಿಕ್ಷೆ ಬೇಡುವ ಈ ವೃದ್ಧ ಮಹಿಳೆ ಅದೇ ದೇವಸ್ಥಾನ ಕಟ್ಟಲು ಕೊಟ್ಟ ಹಣ ಎಷ್ಟು ಗೊತ್ತಾ…

83

ಇದೊಂದು ಸ್ಫೂರ್ತಿದಾಯಕ ಕಥೆಯೇ ಹೌದು ಎಷ್ಟು ಜನ ತಮ್ಮ ಬಳಿ ಕಂತೆ ಕಂತೆ ಹಣವಿದ್ದರೂ ಕೋಟಿ ಕೋಟಿ ತೊಟ್ಟಿದ್ದರೂ ದೇವಸ್ಥಾನ ಗಳಿಗಾಗಲಿ ಬಡವರಿಗೆ ಆಗಲಿ ಅದನ್ನು ಕೊಡೋದಕ್ಕೆ ಹಿಂದು ಮುಂದು ನೋಡುತ್ತಾರೆ .ಹಾಗೆಯೇ ಸಾಕಷ್ಟು ಯೋಚಿಸುತ್ತಾರೆ ಆದರೆ ಇಲ್ಲೊಂದು ವಯಸ್ಸಾದ ಮಹಿಳೆ ತಾನು ಭಿಕ್ಷೆ ಬೇಡಿ ಕೂಡಿಟ್ಟ ಹಣವನ್ನು ದೇವಸ್ಥಾನದ ನವೀಕರಣಕ್ಕಾಗಿ ಅಷ್ಟು ಹಣವನ್ನು ನೀಡಿದ್ದಾರೆ ಅಂದರೆ ಯಾರಿಗಾದರೂ ಅಚ್ಚರಿಯಾಗುತ್ತದೆ .

ಅಲ್ವಾ ಹಾಗಾದರೆ ಆ ಮಹಿಳೆ ಯಾರು, ಈ ಘಟನೆ ನಡೆದಿರುವುದು ಎಲ್ಲಿ ಅನ್ನೋದನ್ನು ತಿಳಿಯೋಣ ಸ್ನೇಹಿತರೆ ತಪ್ಪದೇ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರೊಂದಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳಿ.ಹೌದು ಇದೊಂದು ಘಟನೆ ನಡೆದಿರುವುದು ಮೈಸೂರಿನಲ್ಲಿ, ಅರಮನೆ ಮುಂದೆ ಇರುವಂತಹ ಪ್ರತಿಷ್ಠ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದ ಆ ಮಹಿಳೆ, ಆ ವೃದ್ಧ ಮಹಿಳೆಯ ಹೆಸರು ಸೀತಾ ಎಂದು ಈಕೆ ಬೆಳೆದದ್ದು .

ಮಾತ್ರ ಶ್ರೀಮಂತ ಕುಟುಂಬದಲ್ಲಿ ಆದರೆ ಈ ಮಹಿಳೆಗೆ ವಯಸ್ಸಾಯಿತೆಂದು ಆಕೆಯ ಕುಟುಂಬದವರು ಈಕೆಯನ್ನು ಮನೆ ಬಿಟ್ಟು ಆಚೆ ಕಳುಹಿಸಿದರು, ಕೈಕಾಲುಗಳಲ್ಲಿ ಶಕ್ತಿ ಇರುವವರೆಗೂ ಸೀತಮ್ಮನವರು ಆ ಮನೆ ಈ ಮನೆಯಲ್ಲಿ ಕೆಲಸವನ್ನು ಮಾಡಿ ಹಣವನ್ನು ಸಂಪಾದನೆ ಮಾಡುತ್ತಿದ್ದರು.

ಆದರೆ ಕೈ ಕಾಲುಗಳಲ್ಲಿ ಶಕ್ತಿ ಎಷ್ಟು ದಿನ ಇರುತ್ತದೆ ಹೇಳಿ ದಿನ ಕಳೆದಂತೆ ವರುಷಗಳು ಕಳೆದಂತೆ ಕೈಕಾಲುಗಳಲ್ಲಿ ಶಕ್ತಿ ಕುಂದುತ್ತದೆ ಆಗ ಆ ವಯಸ್ಸಾದ ವೃದ್ಧ ಮಹಿಳೆ ಸೀತಮ್ಮನವರು ಅರಮನೆಯ ಮುಂದೆ ಇರುವಂತಹ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದರು ಆ ನಂತರ ಅಲ್ಲಿ ಆ ಮಹಿಳೆ ಬೇಡುತ್ತಿದ್ದ ಹಣವನ್ನು ವಾರಕ್ಕೊಮ್ಮೆ ಬ್ಯಾಂಕಿನಲ್ಲಿ ಇಟ್ಟು ಉಳಿತಾಯ ಮಾಡಿದ್ದರು.ಹೀಗೆ ತಾನು ಭಿಕ್ಷೆ ಬೇಡಿ ಉಳಿತಾಯ ಮಾಡಿದಂತಹ ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಕೂಡಿಟ್ಟ ಹಣವನ್ನು ದೇವಸ್ಥಾನವನ್ನು ನವೀಕರಿಸುವಾಗ ಈ ಮಹಿಳೆ ಆ ದೇವಸ್ಥಾನದ ಮೇಲುಸ್ತುವಾರಿ ಕಚೇರಿಗೆ ಹೋಗಿ ಹೇಗೆ ತಾನು ಉಳಿತಾಯ ಮಾಡಿ ಇಟ್ಟಂತಹ ಹಣದ ಬಗ್ಗೆ ಹೇಳಿಕೊಂಡು, ಈ ದೇವಸ್ಥಾನದ ನವೀಕರಣ ನನ್ನದು ಕೂಡ ಒಂದು ಚಿಕ್ಕ ಸೇವೆ ಇರಲಿ ಎಂದು ಆ ಮಹಿಳೆ ತಾನು ಕೂಡಿಟ್ಟ ಹಣವನ್ನು ದೇವಸ್ಥಾನದ ನವೀಕರಣ ಗಾಗಿ ನೀಡುತ್ತೇನೆ ಎಂದು ಹೇಳಿಕೊಳ್ಳುತ್ತಾರೆ.

ಮೊದಲಿಗೆ ಬೇಡ ಎಂದ ಅಧಿಕಾರಿಗಳು ನಂತರ ವೃದ್ಧ ಮಹಿಳೆಯ ಹಣವನ್ನು ಸ್ವೀಕರಿಸಲು ಒಪ್ಪುತ್ತಾರೆ ಹಾಗೆ ಆ ಮಹಿಳೆ ತಾನು ಕೂಡಿಟ್ಟ ಎರಡು ಲಕ್ಷ ಹಣವನ್ನು ದೇವಸ್ಥಾನದ ನವೀಕರಣ ಗಾಗಿ ನೀಡುತ್ತಾಳೆ ಹಾಗೆಯೇ ನಾನು ದೇವಸ್ಥಾನದ ಮುಂದೆ ಕೂತು ಭಿಕ್ಷೆ ಬೇಡುತ್ತಾನೆ ಹಾಗೆಯೇ ಆ ದೇವರಿಂದ ನನ್ನ ಹೊಟ್ಟೆ ತುಂಬುತ್ತಿದೆ ಆದ್ದರಿಂದ ನಾನು ಕೂಡಿಟ್ಟ ಹಣವೂ ಕೂಡ ಆ ದೇವರ ಸೇವೆಗೆ ಮುಡಿಪಾಗಿ ರಲಿ ಎಂದು ಹೇಳುತ್ತಾ ಆ ಹಣವನ್ನು ದೇವಸ್ಥಾನದ ಅಭಿವೃದ್ಧಿಗಾಗಿ ನೀಡುತ್ತಾರೆ ಸೀತಮ್ಮನವರು.ಆ ವಯಸ್ಸಿನಲ್ಲಿಯೂ ಕೂಡ ದೇವರ ಸೇವೆ ಮಾಡಬೇಕೆಂಬ ಹಂಬಲ ಮತ್ತು ತಾನು ಬೇಡಿದ ಹಣವನ್ನು ಮತ್ತೆ ದೇವರ ಕಾರ್ಯಕ್ಕೆ ಬಳಸಬೇಕು ಅನ್ನೋ ವೃದ್ಧ ಮಹಿಳೆಯ ಆಸೆ ನಿಜಕ್ಕೂ ಅದು ಮುಗ್ಧತೆಯನ್ನು ತೋರಿಸುತ್ತದೆ ಅಲ್ವಾ ಸ್ನೇಹಿತರೆ, ನಿಮಗೆ ಈ ಮಾಹಿತಿಯ ಬಗ್ಗೆ ಏನು ಅನ್ನಿಸುತ್ತದೆ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಹಾಗೂ ದಯವಿಟ್ಟು ಮನೆಯಲ್ಲಿ ವಯಸ್ಸಾದ ವೃದ್ಧರಿದ್ದರೆ ಅವರುಗಳನ್ನು ಮಕ್ಕಳಂತೆ ಕಾಣಿ ಧನ್ಯವಾದ.