ನಮಸ್ತೆ ಪ್ರಿಯ ಸ್ನೇಹಿತರೇ ಇವತ್ತಿನ ಮಾಹಿತಿಯಲ್ಲಿ ನಮ್ಮ ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕ ರಾಗಿರುವ ಹಾಗೂ ನಿರೂಪಕರು ಕೂಡ ಹೌದು ಅವರ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ ರ ತಿಳಿಸಿಕೊಡುತ್ತೇವೆ. ಹೌದು ನಾವು ಮಾತಾಡ್ತಾ ಇರೋದು ನಟ ನಿರ್ದೇಶಕ ರಮೇಶ್ ಅರವಿಂದ್ ಅವರ ಕುರಿತು. ಹೌದು ಇವರು ನಮ್ಮ ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ನಟರಾಗಿದ್ದಾರೆ ರಮೇಶ್ ಅರವಿಂದ್ ಅವರು 1964ರಲ್ಲಿ ತಮಿಳುನಾಡಿನಲ್ಲಿ ಕುಂಭಕೋಣಂ ನಲ್ಲಿ ಜನಿಸಿದರು, ಇವರು ಎಂಜಿನಿಯರಿಂಗ್ ಪದವಿ ಅನ್ನೋ ಮುಗಿಸಿದ್ದು ನಮ್ಮ ರಾಜಧಾನಿಯಲ್ಲಿ. ಹೌದು ಕಾಲೇಜು ಜೀವನದಲ್ಲಿ ರಮೇಶ್ ಅವರು ಹಲವು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ರಮೇಶ್ ಅರವಿಂದ್ ಅವರ ಪ್ರತಿಭೆ ಅನ್ನೋ ಗುರುತಿಸಿತ್ತು ಮಾತ್ರ ಭಾರತೀಯ ಚಿತ್ರೋದ್ಯಮ ದಲ್ಲಿ ಖ್ಯಾತಿಗಳಿಸಿರುವ ದಿವಂಗತ ಕೆ ಬಾಲಚಂದರ್ ಅವರು. ಇನ್ನು ರಮೇಶ್ ಅರವಿಂದ್ ಅವರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ದೊಡ್ಡ ಕನಸಿತ್ತು. ಇನ್ನು ಈ ನಟನೆಗೆ ಬಾಲಚಂದರ್ ರವರು ಅವಕಾಶ ನೀಡಿದ್ದು 1986ರಲ್ಲಿ ತೆರೆಜಂ ಸೂಪರ್ ಹಿಟ್ ಸಿನಿಮಾ ಸುಂದರ ಸ್ವಪ್ನಗಳು ಚಿತ್ರದ ಮೂಲಕ.
ನಟ ರಮೇಶ್ ಅರವಿಂದ್ ಹಾಗೂ ಶಿವರಾಜ್ ಕುಮಾರ್ ಮತ್ತು ಜಗ್ಗೇಶ್ ಬೆಳ್ಳಿತೆರೆಗೆ ಪಾದಾರ್ಪಾಣೆ ಮಾಡಿದ್ದು ಒಂದೇ ಸಮಯದಲ್ಲಿ ಎನ್ನಬಹುದು. ಇನ್ನು ಕಿರುತೆರೆಯಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರಮೇಶ್ ಅವರು ವೀಕೆಂಡ್ ವಿತ್ ರಮೇಶ್ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸುತ್ತಾರೆ. ತಮ್ಮ ಸಿನಿಮಾ ವೃತ್ತಿ ಬದುಕಿನ ಮೂವತ್ತರ ಆಸುಪಾಸಿನಲ್ಲಿರುವ ರಮೇಶ್ ಅರವಿಂದ್ ನಾಯಕ ನಟ ಸೇರಿದಂತೆ ಪೋಷಕ ನಟನಾಗಿಯೂ ಕೂಡ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ನಮ್ಮ ರಮೇಶ್ ಅರವಿಂದ್ ಅವರದ್ದು ಸರಳ ನುಡಿ ಹಾಗೂ ಇವರು ವಿಚಾರ ವಾದಿ ವ್ಯಕ್ತಿತ್ವ ಸುಂದರವಾದ ಸರಳ ನುಡಿ ಸುಂದರವಾದ ಮುಖ. ಇನ್ನೂ ನಟನೆ ಎಂದು ಬಂದರೆ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ನಮ್ಮ ರಮೇಶ್ ಅರವಿಂದ್ ಅವರು ಅತ್ಯುತ್ತಮರು ಮತ್ತು ಕರುನಾಡ ಮನೆ ಮಾತಾಗಿರುವ ಇವರು 4ದಶಕಗಳಿಂದ ವಿಭಿನ್ನ ಸಿನಿಮಾ ಸಿನಿಮಾಗಳಲ್ಲಿ ಕಾಮಿಡಿ ಸಿನಿಮಾಗಳಲ್ಲಿ ಮತ್ತು ಭಾವನಾತ್ಮಕ ಸಿನಿಮಾಗಳಲ್ಲಿ ಅಭಿನಯಿಸಿ ಅಂದಿನ ಕಾಲದ ಸುಂದರ ಹಾಗೂ ಬೇಡಿಕೆಯ ನಟರಾಗಿ ಹೊರಹೊಮ್ಮಿದ್ದರು.
ಇವರು 80ರ ದಶಕದಿಂದ ಇಲ್ಲಿ ವರೆಗೂ ಸುಮಾರು 100ಕ್ಕೂ ಅಧಿಕ ಚಿತ್ರಗಳನ್ನು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಅಭಿನಯ ಮಾಡಿದ್ದಾರೆ ಮತ್ತು 30 ತಮಿಳು ಚಿತ್ರಗಳನ್ನು 10ತೆಲುಗು ಚಿತ್ರಗಳು ಹಾಗೂ 2ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ರಮೇಶ್ ಅರವಿಂದ್, ವೃತ್ತಿಜೀವನದಲ್ಲಿ ಹಲವಾರು ಪ್ರಶಸ್ತಿಗಳಿಗೆ ಭಾಜಿನಾರಾಗಿದ್ದು ಅತ್ಯುತ್ತಮ ನಟನಿಗಾಗಿ ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳು ಅತ್ಯುತ್ತಮ ನಟನಿಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಗಳು ಹೂಮಾಲೆ ಚಿತ್ರಕಥೆಗಾಗಿ ಅತ್ಯುತ್ತಮ ಕಥೆ ಮತ್ತು ಉದಯ ಟಿವಿ ಮತ್ತು ಸುವರ್ಣ ಟಿವಿ ಪ್ರಶಸ್ತಿಗಳು ಸೇರಿ ಪ್ರಶಸ್ತಿಗಳ ಮಾಲೆಯನ್ನೇ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ ಕನ್ನಡ ಕಂಪನ್ನು ವಿಶ್ವದಲ್ಲೇ ಹರಡುತ್ತಿದ್ದಾರೆ ನಮ್ಮ ರಮೇಶ್ ಅರವಿಂದ್ ರವರು.
ಕೇವಲ ನಟನೆ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು ಹೌದು ಟಿವಿ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಚಿತ್ರಕಥೆಗಾರರಾಗಿ ಪ್ರೇರಕ ಭಾಷಣಗಾರರಾಗಿ ಮತ್ತು ಲೇಖನ ರಾಗಿ ಸುಮಾರು 30ವರ್ಷಗಳ ಮನರಂಜನಾ ಉದ್ಯಮದಲ್ಲಿ ಇರುವ ಇವರು ಸಿನಿ ಜೀವನದಲ್ಲಿ ಅಪಾರ ಯಶಸ್ಸು ಸಾಧಿಸಿದ್ದು ರಮೇಶ್ ಅರವಿಂದ್ ಅವರ ವೃತ್ತಿ ಬದುಕಿನ ಯಶಸ್ಸಿನ ಹಿಂದೆ ಅವರ ಪತ್ನಿ ಆಗಿರುವ ಅರ್ಚನಾ ಹಾಗೂ ಅವರ ಇಬ್ಬರು ಮಕ್ಕಳು ಸಹ ಬಹಳ ಸಹಕಾರ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ ರಮೇಶ್ ಇವರ ಮುತ್ತಾತ ಕುಟುಂಬದ ಫೋಟೋವನ್ನು ಈ ಲೇಖನದಲ್ಲಿ ನೀವು ಕಾಣಬಹುದು. ರಮೇಶ್ ಅರವಿಂದ್ ಅವರ ಮಾತುಗಳು ಹಾಗೂ ಮೋಟಿವೇಷನ್ ಸ್ಪೀಚ್ ಗಳು ಅದೆಷ್ಟು ಕುಗ್ಗಿದ ಹೃದಯಗಳಿಗೆ ಸ್ಪೂರ್ತಿದಾಯಕವಾಗಿದೆ ಎಂಬುದು ಮಾತ್ರ ಸತ್ಯ ಹೌದು ಇವರ ಹಲವು ಭಾಷಣಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೇವೆ ರಮೇಶ್ ಅರವಿಂದ್ ಅವರ ನಟನೆ ಹಾಗೂ ನಿರೂಪಣೆ ಇವರ ನಿರ್ದೇಶನ ಹಾಗೂ ಇವರ ಭಾಷಣ ಎಲ್ಲವೂ ಇಷ್ಟವಾಗಿದ್ದಲ್ಲಿ ನಿಮ್ಮ ಅನಿಸಿಕೆ ಅನ್ನ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.