Ad
Home ಅರೋಗ್ಯ ನಿಮಗೆ ಎಷ್ಟೇ ಕೆಮ್ಮು ಕಫ ಇದ್ದರೂ ಒಂದೇ ದಿನದಲ್ಲಿ ಕಡಿಮೆ ಮಾಡುವ ಪರಿಣಾಮಕಾರಿ ಮನೆಮದ್ದು.ಇದರ ಉಪಯೋಗ...

ನಿಮಗೆ ಎಷ್ಟೇ ಕೆಮ್ಮು ಕಫ ಇದ್ದರೂ ಒಂದೇ ದಿನದಲ್ಲಿ ಕಡಿಮೆ ಮಾಡುವ ಪರಿಣಾಮಕಾರಿ ಮನೆಮದ್ದು.ಇದರ ಉಪಯೋಗ ನೋಡಿ

ಕೆಮ್ಮು ಕಫ ಕ್ಷಣಮಾತ್ರದಲ್ಲಿಯೇ ಉಪಶಮನ ಆಗಬೇಕಾದಲ್ಲಿ ಮನೆಯಲ್ಲೆ ಈ ಸಣ್ಣ ಪರಿಹಾರ ಪಾಲಿಸೆ ಇಂಗ್ಲಿಷ್ ಮೆಡಿಸಿನ್ ಗೆ ಗುಡ್ ಬೈ ಹೇಳಿ…ಇಂದು ಮಳೆಗಾಲ, ಈ ಕಾಲದಲ್ಲಿ ಕೆಮ್ಮು ಜ್ವರ ಶೀತ ತಲೆನೋವು ಗಂಟಲು ಕಡಿತ ಗಂಟಲಿನಲ್ಲಿ ನೋವು ಇಂತಹ ಸಮಸ್ಯೆಗಳೆಲ್ಲ ಸಹಜ. ಈ ಚಿಕ್ಕಪುಟ್ಟ ಸಮಸ್ಯೆಗಳಿಗೆ ಮಾತ್ರೆಗಳ ಮೊರೆ ಹೋಗುವುದರ ಬದಲು ಮನೆಯಲ್ಲಿಯೇ ಹಿರಿಯರು ಕೆಲವೊಂದು ಪರಿಹಾರಗಳನ್ನು ಮಾಡಿ ಪಾಲಿಸುತ್ತಿದ್ದರೂ ಅದರಿಂದ ಕೆಮ್ಮು ಕಫ ಎಲ್ಲಾ ಹೆಚ್ಚು ದಿನಗಳು ಇರದೆ ವಿವರಣೆ ಆಗುತ್ತಿತ್ತು ಆದರೆ ಇವತ್ತಿನ ದಿನಗಳಲ್ಲಿ ಇಂಗ್ಲಿಷ್ ಮೆಡಿಸಿನ್ ಗಳ ಮೊರೆ ಹೋಗುವ ಜನರು ಮಾತ್ರೆ ತೆಗೆದುಕೊಳ್ಳುತ್ತಾರೆ ಆದರೆ ಸಮಸ್ಯೆ ಮಾತ್ರ ಬೇಗ ಪರಿಹಾರ ಆಗುವುದಿಲ್ಲ.

ಈಗ ನೇರವಾಗಿ ವಿಚಾರಕ್ಕೆ ಬರುವುದಾದರೆ ಇವತ್ತಿನ ಈ ಮಾಹಿತಿಯಲ್ಲಿ ನಿಮಗೆ ಕೆಮ್ಮು ಕಫಾ ಸಮಸ್ಯೆಗೆ ಸರಳ ಮನೆಮದ್ದು ತಿಳಿಸಿಕೊಡುತ್ತೇವೆ ಇದನ್ನು ಹಿಪ್ಪುನೇರಳೆಯ ಸಹಾಯದಿಂದ ಮಾಡಬೇಕಿರುತ್ತದೆ. ಇದನ್ನು ಹೇಗೆ ಮಾಡುವುದು ಯಾವ ವಿಧಾನದಲ್ಲಿ ನೀವು ಪಾಲಿಸಬೇಕಾಗಿರುತ್ತದೆ ಎಷ್ಟು ವರ್ಷದವರಿಂದ ಈ ಮನೆಮದ್ದನ್ನು ಔಷಧಿಯಾಗಿ ತೆಗೆದುಕೊಳ್ಳಬಹುದು ಎಲ್ಲದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ.

ಹೌದು ಹಿಪ್ಪುನೇರಳೆ ಇದು ನಿಮಗೆ ಆಯುರ್ವೇದ ಅಂಗಡಿಗಳಲ್ಲಿ ದೊರೆಯುತ್ತದೆ ಇದನ್ನು ತಂದು ನೀವು ಚೆನ್ನಾಗಿ ತೊಳೆದು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬಹುದು ಅಥವಾ ಈ ಹಿಪ್ಪುನೇರಳೆಯನ್ನು ಬೇಯಿಸಿ ಅದಕ್ಕೆ ಒಣ ಮೆಣಸಿನ ಪುಡಿಯನ್ನು ಬೆರೆಸಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಹಾಗೂ ಸಂಜೆ ಸಮಯದಲ್ಲಿ ಸ್ವಲ್ಪ ಸ್ವಲ್ಪವೇ ತೆಗೆದುಕೊಳ್ಳಬೇಕು.

ಈ ಹಿಪ್ಪುನೇರಳೆಯ ಮನೆ ಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಮತ್ತು ಕೆಮ್ಮ ಕಫಕ್ಕೆ ಅತ್ಯದ್ಬುತ ಔಷಧಿಯಾಗಿದೆ ಹಾಗಾಗಿ ಇದನ್ನು ಚಿಕ್ಕವರಿಂದ ದೊಡ್ಡವರವರೆಗೂ ಸಹ ಈ ಮನೆಮದ್ದನ್ನು ಪಾಲಿಸಬಹುದು.ಕೆಮ್ಮು ಮತ್ತು ಶೀತಕ್ಕೆ ಸಾಮಾನ್ಯವಾಗಿ ಔಷಧಿಗಳನ್ನು ಮಾತ್ರೆಗಳಿಂದ ಸಿರಪ್ ಗಳನ್ನು ತೆಗೆದುಕೊಂಡಿದ್ದಾರೆ ಆದರೆ ಹೆಚ್ಚು ಸಮಯ ಹಿಡಿಯುತ್ತದೆ ಇಂತಹ ಮಾತ್ರೆಗಳು ಔಷಧಿಗಳು ಕೆಲಸ ಮಾಡುವುದಕ್ಕೆ. ಆದರೆ ನಿಮಗೆ ಈ ಸರಳ ಮನೆಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡೇ ಕೆಮ್ಮಿಗೆ ಬಹಳ ಬೇಗ ಶಮನವನ್ನು ನೀಡುತ್ತದೆ ಹಾಗಾಗಿ ಚಿಕ್ಕವರಿಗೆ ಆದರೆ ಕಡಿಮೆ ಪ್ರಮಾಣದಲ್ಲಿ ಅರ್ಧ ಚಮಚದಷ್ಟು ಪೂರ್ತಿ ದಿನ ಔಷಧಿಯಾಗಿ ಇದನ್ನ ತೆಗೆದುಕೊಂಡರೆ ದೊಡ್ಡವರು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಹಿಪ್ಪುನೇರಳೆಯ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಕೆಮ್ಮು ಕಫ ಗಂಟಲು ನೋವು ನಿವಾರಣೆ ಆಗುತ್ತದೆ.

ಮತ್ತೊಂದು ಮನೆಮದ್ದು ಯಾವುದು ಅಂದರೆ ವಿಳ್ಳೇದೆಲೆ ಹೌದು ವಿಳ್ಯದೆಲೆಗೆ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ಕೆಮ್ಮು ಬಹಳ ಬೇಗ ನಿವರಣೆಯಾಗುತ್ತದೆ ಇದನ್ನು ಮಕ್ಕಳಿಗೆ ಮಾಡಬಹುದು ಹೌದು ವೀಳ್ಯದೆಲೆ ತೆಗೆದುಕೊಂಡು ಅದರೊಟ್ಟಿಗೆ ಮೆಣಸನ್ನು ಇಟ್ಟು ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಬೇಕು ಬಳಿಕ ಅದರಿಂದ ರಸವನ್ನು ಬೇರ್ಪಡಿಸಿ ಸ್ವಲ್ಪ ಜೇನುತುಪ್ಪವನ್ನು ಮಿಶ್ರಮಾಡಿ ಮಕ್ಕಳ ನಾಲಿಗೆಗೆ ಈ ವೀಳ್ಯದೆಲೆಯ ರಸವನ್ನು ಹಚ್ಚುವುದರಿಂದ ಗಂಟಲಿನಲ್ಲಿ ಕಟ್ಟಿರುವ ಕಫ ಕರಗುತ್ತದೆ ಕೆಮ್ಮು ಕೂಡ ಬಹಳ ಬೇಗ ಶಮನಗೊಳ್ಳುತ್ತದೆ.

ಹಿಪ್ಪು ನೇರಳೆ ಮತ್ತು ಮೆಣಸಿನ ಪುಡಿಯನ್ನು ಮಿಶ್ರ ಮಾಡಿದಾಗ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಳ್ಳಿ. ಆಗ ಈ ಮನೆ ಮದ್ದು ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಈ ಎರಡು ಮನೆ ಮದ್ದುಗಳಲ್ಲಿ ನಿಮಗೆ ಯಾವುದು ಅನುಕೂಲಕರವಾಗಿರುತ್ತದೆ ಆ ಮನೆಮದ್ದನ್ನು ನೀವು ಪಾಲಿಸಬಹುದು ಹಾಗೆ ಮಕ್ಕಳಿಗೂ ಕೂಡ ಈ ಔಷಧಿಯನ್ನು ಮಾಡಬಹುದು, ಆದರೆ ಕಡಿಮೆ ಪ್ರಮಾಣದಲ್ಲಿ ಮಕ್ಕಳಿಗೆ ಈ ಔಷಧಿಯನ್ನು ನೀಡಿ. ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಕೆಮ್ಮು ಕಫ ಪರಿಣಾಮಕಾರಿಯಾದ ಔಷಧಿ ಇದಾಗಿದ್ದು ಮಾತ್ರೆಗಳ ಬದಲು ಈ ಮನೆಮದ್ದುಗಳು ಆರೋಗ್ಯಕ್ಕೂ ಉತ್ತಮವಾಗಿದೆ ರೋಗನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸುತ್ತದೆ.

Exit mobile version