ಇಂದಿನ ಮಾಹಿತಿಯಲ್ಲಿ ಕೋಳಿ ಸಾಕಾಣಿಕೆ ಮಾಡುವವರಿಗೆ ಅಥವಾ ಮನೆಯಲ್ಲಿ ಕೆಲವರು ಸಣ್ಣದಾಗಿ ಬಿಸಿನೆಸ್ ಗಾಗಿ ನಾಟಿ ಕೋಳಿಗಳನ್ನು ಸಾಕಣೆ ಮಾಡುತ್ತ ಇರುತ್ತಾರೆ ಅಂಥವರಿಗಾಗಿ ಇಂದಿನ ಮಾಹಿತಿಯಲ್ಲಿ 1ಉಪಯುಕ್ತವಾದ ವಿಚಾರಗಳನ್ನು ತಿಳಿಸಿಕೊಡುತ್ತದೆ ಅದೇನು ಅಂದರೆ ಕೋಳಿಗಳಿಗೆ ವಾತಾವರಣ ಬದಲಾವಣೆ ಆದಕಾರಣ ಅಥವಾ ನೀರಿನಲ್ಲಿ ವ್ಯತ್ಯಾಸವಾದ ಕಾರಣ ಶೀತ ಮತ್ತು ಗುರುಕೆಯ ಸಮಸ್ಯೆ ಉಂಟಾಗುತ್ತದೆ ಅಂತಹ ಸಮಯದಲ್ಲಿ ಕೋಳಿ ಸಾಕಾಣಿಕೆ ಮಾಡುವವರು ಒಂದಿಷ್ಟು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಆ ಹುಷಾರಿಲ್ಲದೆ ಇರುವಂತಹ ಅಂದರೆ ಅನಾರೋಗ್ಯಕ್ಕೆ ಒಳಗಾಗಿರುವ ಕೋಳಿಯನ್ನು ಬೇರೆ ಕೋಳಿಗಳಿಂದ ಬೇರ್ಪಡಿಸಿ ಅದನ್ನು ಬೇರೆ ಬಾಕ್ಸ್ ಒಂದರಲ್ಲಿ ಇರಿಸಬೇಕು.
ಇನ್ನು ಈ ಕೋಳಿಗೆ ಈ ರೀತಿ ಸಮಸ್ಯೆ ಬರುವುದು ಸಹಜ ಆದಕಾರಣ ಅದಕ್ಕಾಗಿ 1ಸಣ್ಣ ಪರಿಹಾರವನ್ನ ಮಾಡಿಕೊಂಡಿದ್ದೇ ಆದಲ್ಲಿ ಕೋಳಿಗೆ ಎದುರಾಗಿರುವ ಈ ಗುರುಕೆಯ ಸಮಸ್ಯೆಯನ್ನು ಮತ್ತು ಶೀತದ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು ಆದರೆ ನಿರ್ಲಕ್ಷ್ಯ ಮಾಡಲು ಹೋಗಬಾರದು. ಕೋಳಿ ಸಾಕಾಣಿಕೆ ಮಾಡುವಾಗ ಅತ್ಯಂತ ಜಾಗರೂಕತೆಯಿಂದ ಇರಬೇಕಾಗುತ್ತದೆ ಯಾಕೆಂದರೆ 1ಕೋಳಿ ರೋಗಕ್ಕೆ ಒಳಗಾಗಿದ್ದರೆ ಅಥವಾ ಈ ರೀತಿ ಶೀತದ ಸಮಸ್ಯೆಗೆ ಒಳಗಾಗಿದ್ದರೆ ಕೆಮ್ಮಿನ ಸಮಸ್ಯೆಗೆ ಒಳಗಾಗಿದ್ದರೆ ಅದನ್ನು ಆದಷ್ಟು ಬೇಗ ಬೇರ್ಪಡಿಸುವುದು ಒಳ್ಳೆಯದು ಇಲ್ಲದಿದ್ದಲ್ಲಿ ಬೇರೆ ಕೋಳಿಗಳಿಗೂ ಕೂಡ ಹರಡಿ ಬಿಡುತ್ತದೆ.
ಇದೀಗ ಈ ಪರಿಹಾರವೇನು ಅಂದರೆ ಅರ್ಧ ಲೀಟರ್ ನೀರನ್ನು ತೆಗೆದುಕೊಳ್ಳಬೇಕು ನಂತರ ಅದಕ್ಕೆ ಮೆರಿಕ್ಯೂನ್ ಅನ್ನೊ ಒಂದು ಔಷಧಿ ಇದೆ ಅದು ವೆಟರ್ನರಿ ಹಾಸ್ಪಿಟಲ್ ಗಳಲ್ಲಿ ದೊರೆಯುತ್ತದೆ ಅಥವಾ ಮೆಡಿಕಲ್ ಶಾಪ್ ಗಳಲ್ಲಿ ಕೂಡ ದೊರೆಯುತ್ತದೆ. ಅದನ್ನು ಒಂದು ಎಂ.ಎಲ್ ನಷ್ಟು ತೆಗೆದುಕೊಳ್ಳಬೇಕು. ಇದು ಆ್ಯಂಟಿ ಬಯೋಟಿಕ್ ಆಗಿರುತ್ತದೆ ಅದನ್ನು ನೀರಿಗೆ ಮಿಶ್ರ ಮಾಡಬೇಕು. ನಂತರ ಈ ನೀರಿಗೆ H Liv.52 ಇದು ಲಿವರ್ ಟಾನಿಕ್ ಆಗಿರುತ್ತದೆ ಹಿಮಾಲಯ ಕಂಪೆನಿಯದ್ದು ಇದನ್ನು ಕೂಡ ನೀರಿಗೆ ಮಿಶ್ರ ಮಾಡಬೇಕು ಎಷ್ಟು ಅಂದರೆ ಅರ್ಧ ಚಮಚದಷ್ಟು.
ಈ ಎರಡರ ನಂತರ ಟೆಟ್ರಾಸೈಕ್ಲಿನ್ ಅನ್ನೊ ಒಂದು ಆ್ಯಂಟಿಬಯೋಟಿಕ್ ಕೂಡ ದೊರೆಯುತ್ತದೆ. ಅದನ್ನು ಕೂಡ ಒಂದು ಚಮಚದಷ್ಟು ಪ್ರಮಣದಲ್ಲಿ ಅರ್ಧ ಲೀಟರ್ ನೀರಿಗೆ ಮಿಶ್ರಣ ಮಾಡಬೇಕು. ಇದನ್ನು ಕೋಳಿಗೆ ನೀಡಬೇಕು ಬೆಳಿಗ್ಗೆ ಮತ್ತು ಸಂಜೆ ನೀಡಬೇಕು ಒಂದು ಸಮಯ ಇಟ್ಟ ನೀರನ್ನು ಕೋಳಿ ಕುಡಿಯದೆ ಇದ್ದಾಗ. ಅದನ್ನು ಬಿಸಾಡಿ ಮತ್ತೆ ಸಂಜೆ ಬೇರೆ ನೀರನ್ನು ಇಡಬೇಕು ಅದೇ ಉಳಿದಿದೆಯೆಂದು ಆ ನೀರನ್ನೇ ಇಟ್ಟರೆ ಕೋಳಿಗೆ ರೋಗ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಇನ್ನು ಕೋಳಿಗೂ ಕೂಡಾ ಜ್ವರ ಬರುತ್ತದೆ ಆಗ ಮನುಷ್ಯರು ತೆಗೆದುಕೊಳ್ಳುವ ಡೋಲೋ 650 ಮಾತ್ರೆಯನ್ನೆ ಜಜ್ಜಿ ಪುಡಿಮಾಡಿ ನೀರಿಗೆ ಹಾಕಿ ಮಿಶ್ರ ಮಾಡಿ. ಒಂದು ಸಿರಿಂಜ್ ನ ಸಹಾಯದಿಂದ ಕೋಳಿಗೆ ಆ ನೀರನ್ನು ಕುಡಿಸಬೇಕು. ಇದರಿಂದ ಜ್ವರ ಕಡಿಮೆಯಾಗುತ್ತದೆ ಇನ್ನು ಕೋಳಿ ಸುಸ್ತಾಗಿರುವ ಹಾಗೆ ಅನಿಸಿದರೆ ಅದಕ್ಕೆ ಓಆರ್ಎಸ್ ಅನ್ನು ಕೂಡ ಕೊಡಿಸಬಹುದು. ಇದನ್ನು ಕೂಡ ಸಿರೆನ್ಸ್ ಸಹಾಯದಿಂದ ಕೋಳಿಗಳಿಗೆ ಕುಡಿಸುವುದರಿಂದ ಸುಸ್ತು ಕಡಿಮೆಯಾಗುತ್ತದೆ. ಈ ರೀತಿ ಕೋಳಿಗಳಿಗೂ ಕೂಡಾ ಆರೋಗ್ಯ ಕೆಟ್ಟಾಗ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ರೋಗ ಹೆಚ್ಚಾಗಿ ಕೋಳಿಗಳು ಸತ್ತು ಹೋಗುವ ಸಾಧ್ಯತೆ ಇರುತ್ತದೆ.