Ad
Home ಅರೋಗ್ಯ ನಿಮ್ಮ ಅಂದವಾದ ಕಣ್ಣುಗಳ ಸುತ್ತ ಕಪ್ಪು ಕಲೆಗಳು ಆಗಿದೆಯಾ , ಈ ಒಂದು ಮನೆಮದ್ದು ಮಾಡಿ...

ನಿಮ್ಮ ಅಂದವಾದ ಕಣ್ಣುಗಳ ಸುತ್ತ ಕಪ್ಪು ಕಲೆಗಳು ಆಗಿದೆಯಾ , ಈ ಒಂದು ಮನೆಮದ್ದು ಮಾಡಿ ಹಚ್ಚಿ ಸಾಕು ಒಂದೇ ದಿನದಲ್ಲಿ ಮಂಗಮಾಯ…

ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಮತ್ತು ಕಣ್ಣಿನ ಸುತ್ತ ಇರುವಂತಹ ನೆರಿಗೆಗಳನ್ನು ತೆಗೆದು ಹಾಕಲು ಮಾಡಿ ಸರಳ ಪರಿಹಾರ ಇದನ್ನು ಪಾಲಿಸುವುದು ಹೇಗೆ ಮತ್ತು ಈ ಮನೆಮದ್ದು ಮಾಡುವುದಕ್ಕಾಗಿ ಯಾವೆಲ್ಲ ಪದಾರ್ಥಗಳು ಬೇಕಾಗಿರುತ್ತದೆ ತಿಳಿಯೋಣ ಬನ್ನಿ ಈ ನೈಸರ್ಗಿಕ ಮನೆಮದ್ದು ಕಣ್ಣಿಗೆ ಯಾವುದೇ ತರದ ಸೈಡ್ ಎಫೆಕ್ಟ್ ಗಳು ಇಲ್ಲ!!! ನಮಸ್ಕಾರಗಳು ಎಂದು ನಾವು ಹೇಳಲು ಹೊರಟಿರುವ ಅಂತಹ ಮಾಹಿತಿ ತುಂಬ ಸೂಕ್ಷ್ಮವಾದದ್ದು ಹೌದು ಯಾಕೆ ಅಂದರೆ ನಮ್ಮ ಈ ಕಣ್ಣು ಕೂಡಾ ತುಂಬಾ ಸೂಕ್ಷ್ಮವಾದದ್ದು ಅಲ್ವ ಹಾಗಾಗಿ ನಾವು ಹೇಳಲು ಹೊರಟಿರುವ ಅಂತಹ ಈ ಮನೆ ಮದ್ದು ಸಹ ತುಂಬಾ ಸೂಕ್ಷ್ಮವಾದುದು.

ಹೌದು ಕಣ್ಣಿನ ಸುತ್ತ ಕಪ್ಪು ಕಲೆಗಳು ಕಪ್ಪು ಮಚ್ಚೆಗಳು ಸಾಮಾನ್ಯವಾಗಿ ಹಲವರಿಗೆ ಇರುತ್ತದೆ ಈ ಸಮಸ್ಯೆ ಅನ್ನೋ ಪರಿಹಾರ ಮಾಡಿಕೊಳ್ಳುವುದಕ್ಕೆ ಮಾಡಬಹುದಾದ ಸರಳ ವಿಧಾನ ಯಾವುದು ಅಂತ ನಾವು ತಿಳಿಸಿಕೊಡಲಿದ್ದೇವೆ ನೀವು ಮಾರುಕಟ್ಟೆಯಲ್ಲಿ ದೊರೆಯುವ ಹಲವು ಕ್ರೀಮ್ ಗಳನ್ನು ಬಳಸುವುದರಿಂದ ಅದು ಕಣ್ಣಿಗೆ ಅಡ್ಡ ಪರಿಣಾಮ ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಹಾಗಾಗಿ ಈ ಮನೆಮದ್ದುಗಳನ್ನು ಅನುಸರಿಸುವ ಮೂಲಕ ನಾವು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಜೊತೆಗೆ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಸಹ ಪರಿಹಾರ ಮಾಡಬಹುದು ಹಾಗಾದರೆ ಮನೆಮದ್ದು ಯಾವುದು ಜತೆಗೆ ಈ ಕಣ್ಣಿನ ಸುತ್ತ ಕಪ್ಪು ಕಲೆ ಉಂಟಾಗುವುದಕ್ಕೆ ಕಾರಣಗಳೇನಿರಬಹುದು ಎಲ್ಲವನ್ನ ತಿಳಿಯೋಣ ಬನ್ನಿ.

ಕೆಲವರಿಗೆ ಕಣ್ಣಿನ ಸುತ್ತ ಇರುವ ಕಪ್ಪು ನೆರಿಗೆಗಳು ಬೇಗನೆ ನಿವಾರಣೆ ಮಾಡಿಕೊಳ್ಳಬಹುದು ಆದರೆ ಇನ್ನು ಕೆಲವರಿಗೆ ಕಣ್ಣಿನ ಸುತ್ತ ಕಪ್ಪು ಕಲೆಗಳು ಹೆರಿಡಿಟಿ ಆಗಿರುತ್ತದೆ ಅಥವಾ ಕೆಲವೊಂದು ಪ್ರೋಟಿನ್ ಕೊರತೆಯಿಂದ ಸಹ ಈ ಸಮಸ್ಯೆ ಉಂಟಾಗಿರುತ್ತದೆ.ಈಗ ಮನೆ ಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಅಂದರೆ ಟೊಮೆಟೊ ರಸ ಅಲೋವೆರಾ ಜೆಲ್ ಮತ್ತು ವಿಟಮಿನ್ ಇ ಕ್ಯಾಪ್ಸೂಲ್

ಟೊಮೆಟೊ ರಸವನ್ನು ತೆಗೆದುಕೊಂಡು ಅದರೊಳಗಿರುವ ಬೀಜವನ್ನು ಬೇರ್ಪಡಿಸಬೇಕು, ಇದಕ್ಕೆ ಕೆಮಿಕಲ್ ರಹಿತ ಅಲೋವೆರಾ ಜೆಲ್ ಹಾಕಿ ವಿಟಮಿನ್ ಇ ಕ್ಯಾಪ್ಸೂಲ್ ಅನ್ನೋ ಇದಕ್ಕೆ ಹಾಕಿ ಎಲ್ಲವನ್ನೂ ಮಿಶ್ರ ಮಾಡಿ ಬಳಿಕ ಈ ಪೇಸ್ಟ್ ಅನ್ನು ಕಣ್ಣಿನ ಸುತ್ತ ಲೇಪನ ಮಾಡಬೇಕು.ಆದರೆ ಕಣ್ಣಿನ ಸುತ್ತ ಹಚ್ಚುವ ಮೊದಲು ಒಮ್ಮೆ ಫೇಸ್ ವಾಶ್ ಮಾಡಿ ಬಳಿಕ, ಈ ಮನೆಮದ್ದು ಪಾಲಿಸಿ ಇದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ಅಥವಾ ಈ ಕಪ್ಪು ನೆರಿಗೆಗಳು ಬಹುಬೇಗ ನಿವರಣೆಯಾಗುತ್ತದೆ ದಿನದಿಂದ ದಿನಕ್ಕೆ ಬದಲಾವಣೆಯನ್ನ ನೀವು ಕಾಣಬಹುದು.

ಆದರೆ ಈ ಮನೆಮದ್ದಿನ ಜೊತೆಗೆ ನೀವು ಮತ್ತೊಂದು ವಿಚಾರವನ್ನು ಸಹ ತಿಳಿದಿರಬೇಕು ಅದೇನೆಂದರೆ ನಿಮ್ಮ ಮುಖದ ಮೇಲೆ ಮೂಡುವ ನೆರಿಗೆಗಳಿಗೆ ಕಾರಣ ನಾವು ಪಾಲಿಸುವ ಆಹಾರ ಪದ್ಧತಿ ಸಹ ಆಗಿರುತ್ತದೆ ಹಾಗೆ ಈ ಕಣ್ಣಿನ ಸುತ್ತ ಆಗಿರುವ ಕಪ್ಪು ಕಲೆಗಳು ಸಹ ನಮ್ಮ ಜೀವನಶೈಲಿ ಆಧಾರದ ಮೇಲೆ ಉಂಟಾಗಿರುತ್ತದೆ.

ಹಾಗಾಗಿ ಮೊದಲು ನಾವು ನಮ್ಮ ಜೀವನ ಶೈಲಿಯನ್ನು ಸರಿಯಾಗಿ ರೂಡಿಸಿಕೊಳ್ಳಬೇಕು ಹೆಚ್ಚು ಸಮಯ ಮೊಬೈಲ್ ನೋಡುವುದು ಟಿವಿ ನೋಡುವುದು ಲ್ಯಾಪ್ಟಾಪ್ ನೋಡುವುದು ನಿದ್ರೆ ಗೆಡುವುದು ಇಂತಹ ತಪ್ಪು ಅಭ್ಯಾಸಗಳನ್ನು ಬಿಡಬೇಕು ಮತ್ತು ಅದಷ್ಟು ಹೆಲ್ದಿ ಆಹಾರ ಪದ್ದತಿಯನ್ನು ಪಾಲಿಸಬೇಕು, ಆರೋಗ್ಯಕ್ಕೂ ಒಳ್ಳೆಯದು ಹಾಗೂ ನಮ್ಮ ತ್ವಚೆಗೆ ಒಳ್ಳೆಯದು ಧನ್ಯವಾದ.

Exit mobile version