ನಮಸ್ಕಾರಗಳು ಈ ಮನೆಮದ್ದನ್ನು ಪಾಲಿಸುವುದರಿಂದ ಕಣ್ಣಿಗೆ ಸಂಬಂಧಪಟ್ಟಂತಹ ಕೆಲವೊಂದು ಸಮಸ್ಯೆಗಳು ಮತ್ತು ಕೆಲವೊಂದು ಸೋಂಕುಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ ಹಾಗಾಗಿ ಮನೆಮದ್ದು ಕುರಿತು ತಿಳಿದುಕೊಳ್ಳೋಣ ಬನ್ನಿ ಇದನ್ನು ಹತ್ತು ವರ್ಷ ಮೇಲ್ಪಟ್ಟ ಮಕ್ಕಳಿಂದ ಹಿಡಿದು ಹಿರಿಯರು ಪಾಲಿಸಬಹುದು.
ಹೌದು ಕಣ್ಣು ಎಷ್ಟು ಸೂಕ್ಷ್ಮವಾದ ಅಂಗ ಕಣ್ಣಿನ ಸೋಂಕು ಕಣ್ಣಿಗೆ ಸಂಬಂಧಪಟ್ಟ ತೊಂದರೆಗಳು ನಮಗೆ ವಯಸ್ಸು ಹೆಚ್ಚಾಗುತ್ತಾ ಹೋದಂತೆ ಎದುರಾಗುತ್ತದೆ ಕೆಲವರಿಗೆ ಅದರಲ್ಲಿಯೂ ಚಿಕ್ಕಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಈ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ತೊಂದರೆಗಳು ಎದುರಾಗಿರುತ್ತದೆ.
ಹಾಗಾಗಿ ಇಂದಿನ ಲೇಖನಿಯಲ್ಲಿ ನಾವು ಯಾರಿಗೆ ಕಣ್ಣಿನ ಸಮಸ್ಯೆಗಳು ಎದುರಾದರೂ ಅಥವಾ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವಂತಹ ಉತ್ತಮ ಮನೆಮದ್ದಿನ ಬಗ್ಗೆ ನಾವು ಈ ಮಾಹಿತಿಯಲ್ಲಿ ಮಾತನಾಡುತ್ತಿದ್ದೇವೆ, ಈ ಮಾಹಿತಿ ನಿಮಗೂ ಸಹ ಉಪಯುಕ್ತವಾಗುತ್ತದೆ ಎಂದು ಭಾವಿಸಿದ್ದೇವೆ ಹೌದು ಈ ಮೊದಲೇ ಹೇಳಿದ್ದೆವು ಕಣ್ಣು ಅತ್ಯಂತ ಸೂಕ್ಷ್ಮ ಅಂಗವಾಗಿರುತ್ತದೆ. ಆದ್ದರಿಂದ ಕಣ್ಣಿಗೆ ಸಂಬಂಧಪಟ್ಟ ತೊಂದರೆಗಳು ಎದುರಾದಾಗ ಅದನ್ನು ನಿರ್ಲಕ್ಷ್ಯ ಮಾಡದೆ ಅದಕ್ಕೆ ತಕ್ಕ ಚಿಕಿತ್ಸೆ ಆಗಲಿ ಪರಿಹಾರವಾಗಲೀ ಮಾಡಿಕೊಳ್ಳಿ.
ಪರಿಹಾರ ಕುರಿತು ಹೇಳುವುದಾದರೆ ಈ ಮನೆಮದ್ದನ್ನು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಅಂದರೆ ಹಾಲು ದಾಲ್ಚಿನಿ ಚಕ್ಕೆ ಕರಿಬೇವಿನ ಸೊಪ್ಪು ಮತ್ತು ಬೆಳ್ಳುಳ್ಳಿ ಎಸಳು ಈ ಎಲ್ಲಾ ಸಾಮಗ್ರಿಗಳು ಮನೆಯಲ್ಲಿಯೇ ದೊರೆಯುತ್ತವೆ, ನಾವು ಪ್ರತಿ ನಿತ್ಯ ಅಡುಗೆಗೆ ಬಳಸುವಂತಹ ಪದಾರ್ಥಗಳೇ ಇವುಗಳು.
ಆದ್ದರಿಂದ ಈ ಪದಾರ್ಥಗಳನ್ನು ಬಳಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಮುಖ್ಯವಾಗಿ ಕಣ್ಣಿನ ಆರೋಗ್ಯವನ್ನು ಕಣ್ಣಿನ ದೃಷ್ಟಿಯನ್ನು ವೃದ್ಧಿಸಿಕೊಳ್ಳಿ ಬನ್ನಿ ಈ ಮನೆಮದ್ದು ಮಾಡುವ ವಿಧಾನವನ್ನು ತಿಳಿಯೋಣ, ಬಳಿಕ ಈ ಮನೆ ಮದ್ದಿನಿಂದ ಇನ್ನೂ ಏನೆಲ್ಲ ಆರೋಗ್ಯಕರ ಪ್ರಯೋಜನಗಳು ದೊರೆಯುತ್ತವೆ ಅನ್ನುವುದನ್ನ ಸಹ ತಿಳಿಯೋಣ.
ಮೊದಲಿಗೆ ಅಗಲವಾದ ಪಾತ್ರೆಗೆ ಹಾಲನ್ನು ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು ಈ ಹಾಲು ಬಿಸಿ ಆದ ಮೇಲೆ ಇದಕ್ಕೆ ಕರಿಬೇವಿನ ಸೊಪ್ಪು ಮತ್ತು ಬೆಳ್ಳುಳ್ಳಿಯನ್ನು ಹಾಕಿ ಒಮ್ಮೆ ಹಾಲನ್ನ ಕುದಿಸಿಕೊಳ್ಳಬೇಕು ಈ ಹಾಲು ಕುದಿಯುವಾಗಲೇ ಇದಕ್ಕೆ ದಾಲ್ಚಿನ್ನಿ ಚಕ್ಕೆಯನ್ನು ಕುಟ್ಟಿ ಪುಡಿ ಮಾಡಿಕೊಂಡು ಹಾಲಿಗೆ ಹಾಕಿ ಈ ಹಾಲನ್ನು ಸಂಪೂರ್ಣವಾಗಿ ಕುದಿಸಿದ ಮೇಲೆ ಇದನ್ನ ಶೋಧಿಸಿಕೊಂಡು,
ಬಳಿಕ ಈ ಹಾಲನ್ನು ಕುಡಿಯಿರಿ ಯಾವ ಸಮಯದಲ್ಲಿ ಕುಡಿಯಬೇಕು ಅಂದರೆ ಅದಕ್ಕೂ ಹಾಲನ್ನು ರಾತ್ರಿ ಸಮಯದಲ್ಲಿ ಕುಡಿದರೆ ಇನ್ನಷ್ಟು ಹೆಚ್ಚಿನ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು.ಹೌದು ಸ್ನೇಹಿತರೆ ಹಾಲು ಕುಡಿಯುವುದಕ್ಕೆ ಉತ್ತಮ ಸಮಯ ರಾತ್ರಿ ಸಮಯ ಹಾಕಿದೆ ಹೌದು ಮಲಗುವುದಕ್ಕೂ 1ಗಂಟೆಯ ಮುನ್ನ ಹಾಲು ಕುಡಿಯುವುದು ತುಂಬಾ ಒಳ್ಳೆಯದು ಮತ್ತು ಬರೀ ಹಾಲನ ಕುಡಿಯುವುದಕ್ಕಿಂತ ಈ ಹಾಲಿಗೆ ಈ ರೀತಿ ನಾವು ಈ ಮೇಲೆ ತಿಳಿಸಿದಂತಹ ವಿಧಾನದಲ್ಲಿ ಹಾಲನ್ನೂ ತಯಾರಿಸಿಕೊಂಡು ಕುಡಿಯುತ್ತ ಬಂದರೆ ಕಣ್ಣಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ಎದುರಾಗುವುದಿಲ್ಲ ಮತ್ತು ಜೀವನದಲ್ಲಿ ಈ ದೃಷ್ಟಿಗೆ ಸಂಬಂಧಪಟ್ಟ ತೊಂದರೆಗಳು ಯಾವತ್ತಿಗೂ ಬರುವುದಿಲ್ಲಾ.
ಹಾಗಾಗಿ ಈ ಲೇಖನದಲ್ಲಿ ನಾವು ತಿಳಿಸಿರುವಂತಹ ಸುಲಭ ವಿಧಾನವನ್ನು ನೀವು ಕೂಡ ಪಾಲಿಸುತ್ತಾ ಬನ್ನಿ ನಿಮ್ಮ ಕಣ್ಣಿನ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಿ ಜೊತೆಗೆ ಈ ಮನೆ ಮದ್ದಿನಲ್ಲಿ ಬಳಸಿರುವಂತಹ ಕರಿಬೇವಿನ ಎಲೆ ಇದು ನಮ್ಮ ದೇಹಕ್ಕೆ ಕಬ್ಬಿಣದ ಅಂಶವನ್ನು ನೀಡುತ್ತದೆ.ಇದರಿಂದ ರಕ್ತ ಶುದ್ಧಿಯಾಗುತ್ತದೆ ಜೊತೆಗೆ ಡಯಾಬಿಟಿಕ್ ಪೇಷೆಂಟ್ ಗಳಿಗೂ ಕೂಡ ಈ ಮನೆ ಮದ್ದು ಉತ್ತಮವಾಗಿದೆ ಮತ್ತು ಬೆಳ್ಳುಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಹಾಗೂ ದಾಲ್ಚಿನ್ನಿ ಚಕ್ಕೆ ರಕ್ತವನ್ನು ಶುದ್ದಿ ಮಾಡುವುದರ ಜೊತೆಗೆ ಆರೋಗ್ಯವನ್ನು ವೃದ್ಧಿಸಲು ಸಹಕಾರಿ ಜೊತೆಗೆ ಕಣ್ಣಿನ ದೃಷ್ಟಿಯನ್ನು ಕೂಡ ಹೆಚ್ಚು ಮಾಡುತ್ತದೆ.