Ad
Home ಅರೋಗ್ಯ ನಿಮ್ಮ ಕಣ್ಣುಗಳಲ್ಲಿ ನರಗಳ ಸಮಸ್ಸೆ ನೀವು ಇರೋವರೆಗೂ ಬರಬಾರದು ಅಂದರೆ ಈ ಸಸ್ಯದ ಎಲೆಯನ್ನ ಪಲ್ಯ...

ನಿಮ್ಮ ಕಣ್ಣುಗಳಲ್ಲಿ ನರಗಳ ಸಮಸ್ಸೆ ನೀವು ಇರೋವರೆಗೂ ಬರಬಾರದು ಅಂದರೆ ಈ ಸಸ್ಯದ ಎಲೆಯನ್ನ ಪಲ್ಯ ಮಾಡಿ ತಿನ್ನಿ..

ಕಳೆ ಎಂದು ಕಿತ್ತಿ ಬಿಸಾಡುವ ಈ ಎಲೆಯಿಂದ ಮಲೆನಾಡಿಗರು ರುಚಿಕರವಾದ ಅಡುಗೆಯನ್ನು ಮಾಡಿ ಸವೆಯುತ್ತಾರೆ ಹಾಗೆ ನಾಲಿಗೆ ಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಪುಷ್ಟಿ ನೀಡುವ ಈ ಎಲೆಯು ಎಲ್ಲಿಯೆ ಸಿಕ್ಕರು ಬಿಡಬೇಡಿ…

ನಮಸ್ಕಾರಗಳು ಓದುಗರೆ, ಸಾಮಾನ್ಯವಾಗಿ ನಾವು ನಮ್ಮ ಪ್ರಕೃತಿಯ ನಡುವಲ್ಲಿ ಬಹಳಷ್ಟು ವಿಧದ ಮರ ಗಿಡ ಹಣ್ಣು ಕಾಯಿ ಗಿಡ ಎಲ್ಲವನ್ನ ನೋಡುತ್ತೆವೆ ಅಲ್ವಾ ಹಾಗೆ ಕೆಲವೊಂದು ಗಿಡಗಳು ಬೆಳೆದಾಗ ಅದನ್ನೂ ಕಳೆ ಎಂದು ಅದರಿಂದ ಉಪಯೋಗವಿಲ್ಲವೆಂದು ಕಿತ್ತು ಬಿಸಾಡುತ್ತೇವೆ. ಆದರೆ ನಮಗೆ ಗೊತ್ತಿಲ್ಲದೇ ಇರುವ ಸಂಗತಿ ಏನು ಅಂದರೆ ಬಹಳಷ್ಟು ಕಳೆ ಎಂದು ಬಿಸಾಡುವ ಗಿಡಗಳಲ್ಲಿಯೇ ಅಗಾಧವಾದ ಔಷಧೀಯ ಗುಣ ಅಡಗಿರುತ್ತದೆ ಗೊತ್ತಾ.

ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಲು ಬಂದಿರುವುದು ಅದೇ, ನಿಮಗೆ ಗೊತ್ತಿಲ್ಲ ಈ ಗಿಡದ ಉಪಯೋಗ ಆದರೆ ಇದನ್ನು ನಾವು ಕಳೆಯೆಂದು ಕಿತ್ತು ಬಿಸಾಡುತ್ತೇವೆ. ಹೌದು ಇದರ ಹೆಸರು ಕೆಸುವಿನ ಎಲೆ ಇದನ್ನು ಮಲೆನಾಡಿಗರು ಈ ಎಲೆಯಿಂದ ಪತ್ರೊಡೆ ಸಾಂಬಾರು ಅಂತಹಾ ರುಚಿಕರವಾದ ಆಹಾರ ಪದಾರ್ಥಗಳನ್ನು ಮಾಡಿ ಸೇವಿಸುತ್ತಾರೆ ಹೆಚ್ಚಾಗಿ ತಂಪಾದ ಹೆಚ್ಚು ನೀರು ಇರುವ ಪ್ರದೇಶಗಳಲ್ಲಿ ಕಾಣಸಿಗುವ ಈ ಕೆಸುವಿನ ಎಲೆ ಇದನ್ನು ಬಳಸುವ ಮುನ್ನ ಚೆನ್ನಾಗಿ ಸ್ವಚ್ಛ ಮಾಡಿ ಬಳಿಕ ನೀರಿನಲ್ಲಿ ಕುದಿಸಿ ಆ ನಂತರವೇ ಇದನ್ನು ಆಹಾರ ಪದಾರ್ಥಗಳಲ್ಲಿ ಆಹಾರ ಖಾದ್ಯ ತಯಾರಿಸಲು ಬಳಸಬೇಕು.

ಕೆಸುವಿನ ಎಲೆಯನ್ನು ನೀನು ಕೂಡ ನೋಡಿರುತ್ತಿರಾ ನಿಮ್ಮ ಮನೆಯ ಹಿತ್ತಲಿನಲ್ಲಿ ಬೆಳೆದಿರುತ್ತದೆ ಆಗಾಗ ಇದನ್ನು ಕಳೆಯೆಂದು ಕಿತ್ತು ಬಿಸಾಡುತ್ತೇವೆ ಆದರೆ ಕೆಸುವಿನ ಎಲೆಯಲ್ಲಿ ಅಗಾಧವಾದ ಆರೋಗ್ಯಕರ ಲಾಭಗಳಿದ್ದು ಇದನ್ನು ಮಳೆಗಾಲದಲ್ಲಿ ಆಹಾರದ ರೂಪದಲ್ಲಿ ಸೇವನೆ ಮಾಡುವುದರಿಂದ ನಮ್ಮ ದೇಹ ಬೆಚ್ಚಗಿರುತ್ತದೆ ಹಾಗೂ ಮಳೆಗಾಲದಲ್ಲಿ ಕಾಡುವ ಹಲವು ಸಮಸ್ಯೆಗಳಿಗೆ ಈ ಕೆಸುವಿನ ಎಲೆ ಸೇವನೆಯಿಂದ ಗುಡ್ ಬೈ ಹೇಳಬಹುದು ಹಾಗೆಯೇ ಮಲೆನಾಡಿಗರು ಕೆಸುವಿನ ಎಲೆಯಿಂದ ರುಚಿಕರವಾದ ಖಾದ್ಯವನ್ನು ತಯಾರಿಸಿ ಕೊಂಡು ತಿನ್ನುತ್ತಾರೆ ನಿಮಗೂ ಕೂಡ ಈ ಮಳೆಗಾಲದಲ್ಲಿ ಕೆಸುವಿನ ಎಲೆ ದೊರೆತರೆ ಅದರಿಂದ ರುಚಿಕರವಾದ ಖಾದ್ಯ ತಯಾರಿಸಿ ತಿನ್ನಿ. ಇದರ ಪ್ರಯೋಜನಗಳು ಅಪಾರ ಹಾಗೆ ಜೀರ್ಣಶಕ್ತಿ ವೃದ್ಧಿ ಮಾಡುತ್ತದೆ ಹಾಗೇ ನಮ್ಮ ದೇಹವನ್ನು ಬೆಚ್ಚಗೆ ಇಟ್ಟು ಹಲವು ಸಮಸ್ಯೆಗಳನ್ನು ದೂರ ಮಾಡುತ್ತದೆ.

ಕೆಸುವಿನ ಎಲೆ ಸೇವನೆಯಿಂದ ಮೂಳೆಗಳ ಆರೋಗ್ಯ ವೃದ್ಧಿ ಆಗುತ್ತದೆ ಹಾಗೆ ಈ ಎಲೆಯನ್ನು ತಿನ್ನುವುದರಿಂದ ದೇಹವನ್ನ ದೃಢವಾಗಿಸಿಕೊಳ್ಳಬಹುದು, ಗಟ್ಟಿಯಾಗಿಸಿಕೊಳ್ಳಲು ಸಹಕಾರಿ. ಹಾಗಾಗಿ ಮಲೆನಾಡಿಗರು ಹೆಚ್ಚಾಗಿ ಮಳೆಗಾಲದಲ್ಲಿ ಈ ಎಲೆಯ ಸೇವನೆ ಮಾಡುತ್ತಾರೆ.ಇದನ್ನು ರುಚಿಕರವಾಗಿ ಮಾಡಿ ತಿನ್ನಬಹುದು ಹಾಗಾಗಿಯೇ ಪತ್ರೊಡೆ ಅಂತಹ ರುಚಿಕರವಾದ, ನಾಲಿಗೆಗೆ ರುಚಿ ನೀಡುವ ಆಹಾರ ಪದಾರ್ಥವಾಗಿ ಇದರ ಸೇವನೆ ಮಾಡಲಾಗುತ್ತದೆ.

ನೀವು ಕೂಡ ಸೇವಿಸಬಹುದು ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ, ಆದರೆ ಸೇವನೆ ಮಾಡುವ ಮುನ್ನ ಇದನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಬೇಯಿಸಿ ಬಳಿಕವೇ ಇದರ ಪ್ರಯೋಜನ ಪಡೆದುಕೊಳ್ಳಬೇಕು.ಮಳೆಗಾಲದಲ್ಲಿ ಸಾಮಾನ್ಯವಾಗಿ ಜೀರ್ಣಕ್ರಿಯೆ ಮಂದಗತಿಯಲ್ಲಿ ನಡೆಯುತ್ತದೆ, ಅಂತಹ ಸಮಯದಲ್ಲಿ ಕೆಸುವಿನ ಎಲೆಯ ಸೇವನೆ ಮಾಡುವುದು ಉತ್ತಮವಾಗಿದೆ ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ಅಜೀರ್ಣತೆ ಅಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಹಾಗಾಗಿ ಮಳೆಗಾಲದಲ್ಲಿ ಕೆಸವಿನಕೆರೆ ಸೇವಿಸುವುದು ಸೂಕ್ತವಾಗಿರುವ ಕಾರಣ, ಈ ಕೆಸುವಿನ ಎಲೆಯ ಆರೋಗ್ಯಕರ ಪ್ರಯೋಜನಗಳನ್ನು ನೀವು ಕೂಡ ಪಡೆದುಕೊಳ್ಳಿ. ಈ ಕೆಸುವಿನ ಎಲೆ ಅನ್ನೂ ಮಳೆಗಾಲದಲ್ಲಿ ತಿನ್ನುವುದರಿಂದ ಶೀತ ಕೆಮ್ಮು ಜ್ವರದಂಥ ಸಮಸ್ಯೆ ಉಂಟಾಗುವುದು ಕಡಿಮೆಯಾಗುತ್ತದೆ, ಕಾರಣ ಕೆಸುವಿನ ಎಲೆ ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿದೆ. ಇದನ್ನು ಕೊಡವ ಭಾಷೆಯಲ್ಲಿ ತೇರೊ ಅಥವಾ ತಾರೊ ಅಥವಾ ಕೆಸವಿನ ದಂಟು ಅಂತ ಕರೆಯುತ್ತಾರೆ.

Exit mobile version