ಕಾಲಿನಲ್ಲಿ ಆಗಿರುವ ಅಣಿಯನ್ನು ತೆಗೆದು ಹಾಕಬೇಕೆ? ಅಣಿ ನೋವನ್ನು ತಡೆಯಲು ಸಾಧ್ಯವಾಗುತ್ತಿಲ್ಲವಾ, ಹಾಗಾದರೆ ಅದಕ್ಕೆ ಮಾಡಿ ಈ ಸರಳ ಪರಿಹಾರ…ನಮಸ್ಕಾರಗಳು ಪ್ರಿಯ ಓದುಗರೆ ಮನುಷ್ಯನಿಗೆ ಮುಳ್ಳು ಚುಚ್ಚಿದರೂ ತಡೆಯಲು ಸಾಧ್ಯವಾಗುವುದಿಲ್ಲ ಆದರೆ ಬೇರೆಯವರಿಗೆ ಮಾತ್ರ ವಿಪರೀತ ನೋವು ನೀಡುತ್ತಾನೆ ಅಷ್ಟೇ ಅಲ್ಲ ಬೇರೆಯವರಿಗೆ ಯಾಕೆ, ಮೂಕ ಪ್ರಾಣಿಗಳ ಮೇಲೆಯೂ ಕೂಡ ತನ್ನ ಬಲವನ್ನು ತನ್ನ ಸ್ವಾರ್ಥವನ್ನು ಹೇರುತ್ತಾನೆ. ಆದರೆ ಅವನಿಗೆ ಮಾತ್ರ ಚಿಕ್ಕ ಕಲ್ಲು ಮುಳ್ಳು ಹೊಕ್ಕಿದರೂ ಅದು ದೊಡ್ಡ ನೋವಂತೆ ಪರಿಣಮಿಸುತ್ತದೆ, ಆ ನೋವನ್ನು ತಡೆಯಲಾಗದೆ ಬಹಳಷ್ಟು ಪರಿಹಾರ ಮಾಡಿಕೊಳ್ಳಲು ಮುಂದಾಗುತ್ತಾನೆ ಮಾನವ.
ಹೌದು ಇವತ್ತಿನ ಕಾಲದಲ್ಲಿ ಕಾಲಿಗೆ ಚಪ್ಪಲಿ ಆದರೆ ಅಂದಿನ ಕಾಲದಲ್ಲಿ ಹಾಗಿರಲಿಲ್ಲ ಹಿರಿಯರು ಬರಿಗಾಲಿನಲ್ಲಿಯೇ ಓಡಾಡಬೇಕಿತ್ತು ಮತ್ತು ಆಗ ಆ ಸಮಯದಲ್ಲಿ ಬರಿಗಾಲಿನಲ್ಲಿ ಓಡಾಡಿದರೂ ಆರೋಗ್ಯವೃದ್ಧಿ ಆಗುತ್ತಿತ್ತು. ಆದರೆ ಇವತ್ತಿನ ದಿನಗಳಲ್ಲಿ ಬರೀ ಕಾಲಿನಲ್ಲಿ ಓಡಾಡಿದರೂ ಕೆಲವೊಂದು ಸಮಸ್ಯೆಗಳು ಉಂಟಾಗುತ್ತದೆ. ಹಾಗೆಯೇ ನಾವು ಧರಿಸುವ ಚಪ್ಪಲಿ ಕೂಡ ನಮ್ಮ ಕಾಲಿಗೆ ಕೆಲವೊಂದು ಸಮಸ್ಯೆಯನ್ನು ಕೊಡುತ್ತದೆ. ಹೌದು ಇಷ್ಟು ಸಮಯ ಚಪ್ಪಲಿ ಧರಿಸುವುದು ಅಥವಾ ಹೆಚ್ಚು ಸಮಯ ಶೂ ಸಾಕ್ಸ್ ಗಳನ್ನು ಧರಿಸಿ ಇರುವುದು ಹೀಗೆ ಮಾಡುವುದರಿಂದ ಕಾಲಿನಲ್ಲಿ ಅಣಿ ಎಂಬ ಸಮಸ್ಯೆ ಉಂಟಾಗುತ್ತದೆ ಆ ಅಣಿ ಒಮ್ಮೊಮ್ಮೆ ಎಷ್ಟು ನೋವನ್ನು ನೀಡುತ್ತದೆ ಅಂದರೆ ಆ ನೋವು ತಡೆಯಲು ಸಾಧ್ಯವಾಗುವುದಿಲ್ಲ ಆ ಅಣಿಯಾಗಿರುವ ಭಾಗಕ್ಕೆ ಇನ್ನೂ ಸ್ವಲ್ಪ ನೋವಾದರೂ ಪ್ರಾಣ ಹೋದಂತೆ ನೋವಾಗುತ್ತದೆ.
ಇದು ಅಣಿ ಆಗುವುದಕ್ಕೆ ಮತ್ತೊಂದು ಕಾರಣವೇನು ಅಂದರೆ ಯಾವಾಗ ನಮ್ಮ ದೇಹದಲ್ಲಿನ ಜೀವಕೋಶಗಳು ನಶಿಸುತ್ತವೆ ಅದೇ ಜಾಗದಲ್ಲಿ ಮತ್ತೊಂದು ಜೀವಕೋಶ ಹುಟ್ಟಿಕೊಳ್ಳುತ್ತದೆ ಆದರೆ ಆ ಸತ್ವ ಕಳೆದುಕೊಂಡ ಜೀವಕೋಶ ಸಮೂಹವಾಗಿ ಒಂದೆಡೆ ಇದ್ದರೆ ಅದು ಪಾದದಲ್ಲಿ ಉಂಟಾದರೆ ಅದು ಅಣಿಯಾಗಿ ಬಹಳ ನೋವನ್ನು ನೀಡುತ್ತಾ ಇರುತ್ತದೆ.
ಕೆಲವೊಂದು ಬಾರಿ ಕಾಲಿಗೆ ಮುಳ್ಳು ಹೊಡೆದರು ಅಥವಾ ಕಲ್ಲು ಹೊಡೆದರು ಆ ಭಾಗದಲ್ಲಿ ಇರುವ ಜೀವಕೋಶ ಅದರ ಸಮಯಕ್ಕಿಂತ ಮೊದಲೇ ನಶಿಸಿದಾಗ, ಅಲ್ಲಿ ನೋವುಂಟಾಗುತ್ತದೆ ಬಿಳಿಭಾಗದ ರೀತಿಯಲ್ಲಿ ಗಾಯ ಉಂಟಾಗಿ ವಿಪರೀತ ನೋವು ಕೊಡುತ್ತಾ ಇರುತ್ತದೆ.
ಹಾಗಾಗಿ ಇಂತಹ ಅಣಿ ನಿಮ್ಮ ಪಾದಗಳಲ್ಲಿ ಆಗಿದ್ದರೆ ಅಥವಾ ಕಲ್ಲು ಹೊಡೆದು ಆ ಭಾಗದಲ್ಲಿ ವಿಪರೀತ ನೋವು ಉಂಟಾಗುತ್ತಿದ್ದರೆ ಅದಕ್ಕೆ ಈ ಪರಿಹಾರವನ್ನು ರವಾನಿಸಿ ತುಂಬಾ ಸರಳ ಮತ್ತು ನಿಮ್ಮ ಪಾದಗಳ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ಅತ್ಯವಶ್ಯಕವಾಗಿರುತ್ತದೆ ಹಾಗಾಗಿ ನಿಮ್ಮ ಪಾದಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ದೇಹದ ಪ್ರತಿಯೊಂದು ಅದರ ಕೊನೆಯು ಪಾದಗಳಲ್ಲಿ ಆಗುವುದರಿಂದ ಆ ಪಾದವನ್ನು ವಾರಕ್ಕೊಮ್ಮೆಯಾದರೂ ಬಿಸಿ ನೀರಿನಲ್ಲಿ ಹೆಚ್ಚು ಸಮಯ ಅದ್ದಿ ಇಡುವುದರಿಂದ ಪಾದಗಳ ಆರೋಗ್ಯ ಕಾಪಾಡಿಕೊಳ್ಳಬಹುದು ಮತ್ತು ನರಮಂಡಲದ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.
ಈ ರೀತಿ ಮಾಡುವುದರಿಂದ ಅಣಿ ಅಂತಹ ಸಮಸ್ಯೆಗಳು ಕೂಡ ಉಂಟಾಗುವುದಿಲ್ಲ ಹಾಗೆ ಪ್ರತ್ಯೇಕವಾಗಿ ಅಣಿ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳಬೇಕು ಅಂದರೆ ಏನು ಮಾಡಬೇಕು ಅಂತೀರಾ ತುಂಬಾ ಸುಲಭ ಅಣಿಯಾಗಿರುವ ಭಾಗಕ್ಕೆ ಮೊದಲು ಬಿಸಿನೀರಿನಿಂದ ಚೆನ್ನಾಗಿ ಸ್ವಚ್ಛ ಮಾಡಬೇಕು ಬಳಿಕ ಅಡುಗೆ ಸೋಡವನ್ನು ಆ ಭಾಗದಲ್ಲಿ ಇತ್ತು ಕಾಟನ್ ಬಟ್ಟೆಯೊಂದನ್ನು ಕಟ್ಟಬೇಕು. ಮಾರನೇ ದಿನ ಬೆಳಿಗ್ಗೆ ಅದನ್ನು ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸಬೇಕು, ಇದೇ ರೀತಿ ಪ್ರತಿ ದಿನ ಮಾಡಬೇಕು ವಾರದಲ್ಲಿಯೇ ಅಣಿ ಸಮಸ್ಯೆಯಿಂದ ಆ ನೋವಿನಿಂದ ನೀವು ಶಮನ ಪಡೆದು ಕೊಳ್ಳಬಹುದು.