Ad
Home ಅರೋಗ್ಯ ನಿಮ್ಮ ತಲೆಯಲ್ಲಿ ಹೇನು ,ಹೊಟ್ಟು , ಕೂದಲು ಉದುರುವಿಕೆ ಇದ್ರೆ ಈ ಒಂದು ಮನೆಯಲ್ಲಿ ಮಾಡಬಹುದಾದ...

ನಿಮ್ಮ ತಲೆಯಲ್ಲಿ ಹೇನು ,ಹೊಟ್ಟು , ಕೂದಲು ಉದುರುವಿಕೆ ಇದ್ರೆ ಈ ಒಂದು ಮನೆಯಲ್ಲಿ ಮಾಡಬಹುದಾದ ಎಣ್ಣೆಯನ್ನ ಹಚ್ಚಿ ಸಾಕು … ನಿಮ್ಮ ಕೂದಲು ದಟ್ಟವಾಗಿ ಬೆಳೆಯುತ್ತವೆ…

ನಮಸ್ಕಾರ ಮನೆಯಲ್ಲಿಯೇ ನೈಸರ್ಗಿಕವಾದ ಕೂದಲು ಉದುರುವ ಸಮಸ್ಯೆಯನ್ನು ನಿವಾರಣೆ ಮಾಡುವಂತಹ ಎಣ್ಣೆಯನ್ನು ಮಾಡಿ ತುಂಬ ಸುಲಭ ಹಾಗೂ ಪ್ರಭಾವವಾಗಿ ಕೂದಲು ಉದುರುವ ಸಮಸ್ಯೆಯನ್ನು ಡ್ಯಾಂಡ್ರಫ್ ಸಮಸ್ಯೆ ಯನ್ನು ಹಾಗೂ ಹೇನು ಸಮಸ್ಯೆಯನ್ನು ನಿವಾರಣೆ ಮಾಡುವಂತಹ ಉತ್ತಮ ಮನೆ ಮದ್ದು ಎಲ್ಲರಿಗೂ ಕೂಡ ಉತ್ತಮ ಫಲಿತಾಂಶ ಕೊಡುತ್ತೆ

ಇವತ್ತಿನ ದಿನಗಳಲ್ಲಿ ಕೂದಲು ಬೆಳೆಸುವ ಆಸೆ ಹೆಣ್ಣುಮಕ್ಕಳಿಗೆ ಆದರೆ ಹಲವರಿಗೆ ಈ ಕೂದಲು ಬೆಳೆಸುವಾಗ ಸಾಕಷ್ಟು ಅಡೆತಡೆಗಳು ಗಳು ಎದುರಾಗುತ್ತದೆ. ಹಾಗಾಗಿ ಇವತ್ತಿನ ಲೇಖನದಲ್ಲಿ ನಾವು ಹೇಳುವಂತಹ ಈ ಮನೆಮದ್ದನ್ನು ಪಾಲಿಸುವ ಮೂಲಕ ಕೂದಲು ಉದುರುವಂತಹ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದರ ಜೊತೆಗೆಈಗಾಗಲೇ ಹಿಂದಿನ ಮಾಹಿತಿ ಗಳಲ್ಲಿಯೂ ಕೂಡ ಮನೆಯಲ್ಲಿಯೇ ಮಾಡಬಹುದಾದ ನೈಸರ್ಗಿಕ ಶ್ಯಾಂಪೂ ಅಂದರೆ ಕೆಮಿಕಲ್ ರಹಿತ ಶಾಂಪೂವನ್ನು ಹೇಗೆ ಮಾಡುವುದು ಅದು ನೈಸರ್ಗಿಕವಾಗಿ ಹೇಗೆ ಕೂದಲುದುರುವ ಸಮಸ್ಯೆ ನಿವಾರಿಸುತ್ತೆ ಎಂಬುದನ್ನು ಕೂಡ ತಿಳಿಸಿಕೊಟ್ಟಿದ್ದೇವೆ

ಈ ದಿನ ಮನೆಯಲ್ಲಿಯೇ ಮಾಡಬಹುದಾದ ಹಾಗೂ ಕೂದಲು ಉದುರುವ ಸಮಸ್ಯೆಯನ್ನು ಏನು ಸಮಸ್ಯೆಯನ್ನು ಹುಟ್ಟಿವೆ ಸಮಸ್ಯೆಯನ್ನು ನಿವಾರಣೆ ಮಾಡುವಂತಹ ಕೆಮಿಕಲ್ ರಹಿತವಾದ ಎಣ್ಣೆಯನ್ನ ಮಾಡುವುದು ಹೇಗೆ ಅನ್ನೋದನ್ನ ತಿಳಿಸಿಕೊಡುತ್ತಾರೆ ಇದನ್ನ ನೀವು ಕೂಡ ಪಾಲಿಸಿ ಕೂದಲುದುರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ.ಹೌದು ಪ್ರಿಯ ಸ್ನೇಹಿತರೆ ಕೂದಲಿಗೆ ಸರಿಯಾದ ಪೋಷಣೆ ದೊರೆತಾಗ ಯಾವುದೇ ಕೂದಲಿನ ಸಂಬಂಧಿ ತೊಂದರೆಗಳು ಬರುವುದಿಲ್ಲ ಆದರೆ ಯಾವಾಗ ನಾವು ಕೂದಲಿಗೆ ಕಾಳಜಿ ಮಾಡುವುದಿಲ್ಲ ಆಗ ಡ್ಯಾಂಡ್ರಫ್ ಸಮಸ್ಯೆ ಆಗಲಿ ಅಥವಾ ಕೂದಲಿನ ಬುಡ ತುರಿಕೆ ಬರುವುದಾಗಲಿ ಇಂತಹ ಸಮಸ್ಯೆಗಳು ಕಾಡುತ್ತವೆ

ಆದರೆ ಈ ನೈಸರ್ಗಿಕವಾದ ಎಣ್ಣೆ ಇದೆಲ್ಲದಕ್ಕೂ ಪರಿಹಾರ ಕೊಡುತ್ತದೆ ಈ ಮನೆಮದ್ದು ಮಾಡುವುದಕ್ಕೆ ಬೇಕಾದರೂ ಈರುಳ್ಳಿ ಬೆಳ್ಳುಳ್ಳಿ ಅವನು ಎಣ್ಣೆ ಮತ್ತು ಕೊಬ್ಬರಿ ಎಣ್ಣೆ ಹಾಗೂ ಮೆಂತ್ಯೆ ಕಾಳುಗಳುಈ ಮನೆಮದ್ದು ಮಾಡುವಾಗ ಹಿಂದಿನ ದಿನವೇ ಮೆಂತ್ಯೆ ಕಾಳುಗಳನ್ನು ನೀರಿನಲ್ಲಿ ನೆನೆಸಿಡಬೇಕು ಮತ್ತು ಮಾರನೆ ದಿನ ಮೆಂತ್ಯೆ ಕಾಳು ಈರುಳ್ಳಿ ಮತ್ತು ಬೆಳ್ಳುಳ್ಳಿ ಅನ್ನು ರುಬ್ಬಿ ಪೇಸ್ಟ್ ಮಾಡಿಕೊಂಡು, ಇದನ್ನು ತಯಾರಿಸಿಕೊಂಡ ಬಳಿಕ ಕಬ್ಬಿಣದ ಬಾಣಲೆ ಕೊಬ್ಬರಿ ಎಣ್ಣೆಯನ್ನು ಹಾಕಿ ಈ ಕೊಬ್ಬರಿ ಎಣ್ಣೆಯ ಕಾಲು ಭಾಗದಷ್ಟು ಅವನೋನಿ ಎಣ್ಣೆಯನ್ನು ಹಾಕಿ ಎಣ್ಣೆಯನ್ನು ಬಿಸಿ ಆಗಲು ಇಡಬೇಕು

ಈ ಎಣ್ಣೆ ಬಿಸಿಯಾಗುವಾಗ ನೇ ಇದಕ್ಕೆ ತಯಾರಿಸಿ ಕೊಂಡಂತಹ ಪೇಸ್ಟ್ ಅನ್ನು ಹಾಕಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಬೇಕು ಈ ಎಣ್ಣೆಯ ಬಣ್ಣ ಸಂಪೂರ್ಣವಾಗಿ ಬದಲಾಗುವವರೆಗೂ ಎಣ್ಣೆಯನ್ನು ಕಾಯಿಸಿಕೊಳ್ಳಬೇಕು ನೆನಪಿನಲ್ಲಿಡಿ ಮಧ್ಯಮ ಉರಿಯಲ್ಲಿ ಇಟ್ಟು ಎಣ್ಣೆಯನ್ನು ಬಿಸಿ ಮಾಡಿಕೊಂಡು ಬನ್ನಿ ಬಳಿಕ ರಾತ್ರಿಯೆಲ್ಲಾ ಆ ಕಬ್ಬಿಣದ ಬಾಣಲೆಯಲ್ಲಿ ಈ ಎಣ್ಣೆಯನ್ನು ಇರಿಸಿಟ್ಟು ಮಾರನೆ ದಿನ ಇದನ್ನ ಶೋಧಿಸಿಕೊಂಡು ಇಟ್ಟುಕೊಳ್ಳಿ

ಇದನ್ನು ವಾರಕ್ಕೆ 3 ದಿನ ಕೂದಲಿನ ಬುಡಕ್ಕೆ ಹಚ್ಚಿ ಗಂಟೆಗಳಾದರೂ ಕೂದಲಿನಲ್ಲಿಯೇ ಎಣ್ಣೆ ಇರಬೇಕು ಬಳಿಕ ಶಾಂಪೂ ಬಳಸಿ ಕೂದಲನ್ನು ಸ್ವಚ್ಚ ಮಾಡಿ.ಈ ರೀತಿ ನೀವು ಈ ಪರಿಹಾರವನ್ನು ಪಾಲಿಸಿಕೊಂಡು ಬರುವುದು ನಿಂತ ಈರುಳ್ಳಿಯಲ್ಲಿ ಇರುವ ಸಲ್ಫರ್ ಅಂಶ ಕೂದಲುದುರುವ ಸಮಸ್ಯೆ ನಿವಾರಿಸುತ್ತದೆ ಹಾಗೂ ಕೂದಲನ್ನು ಸಿಲ್ಕಿ ಆಗಿಸುತ್ತದೆ, ಬೆಳ್ಳುಳ್ಳಿ ಕೂದಲಿನ ಬುಡದಲ್ಲಿರುವ ತುರಿಕೆಯನ್ನು ನಿವಾರಿಸುತ್ತದೆ.

ಮೆಂತ್ಯೆ ಕೂದಲನ್ನು ಪೋಷಣೆ ಮಾಡುತ್ತದೆ ಮತ್ತು ಕೊಬ್ಬರಿ ಎಣ್ಣೆ ಹಾಗೂ ಅವನೋನಿ ಎಣ್ಣೆ ಕೂದಲನ್ನು ಪೋಷಣೆ ಮಾಡುತ್ತದೆ ಈ ಸರಳ ಪರಿಹಾರವನ್ನು ಪಾಲಿಸಿ, ಕೂದಲನ್ನ ಕಾಳಜಿ ಮಾಡಿ ಕೂದಲು ಉದುರುವಂತಹ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿ ಧನ್ಯವಾದ.

Exit mobile version