Ad
Home ಅರೋಗ್ಯ ನಿಮ್ಮ ದೇಹ ದಣಿದಾಗ , ಸಿಕ್ಕಾಪಟ್ಟೆ ಆಯಾಸ ಅನ್ನಿಸಿದಾಗ ಈ ಒಂದು ಮನೆಮದ್ದು ಮಾಡಿ ಸೇವಿಸಿ...

ನಿಮ್ಮ ದೇಹ ದಣಿದಾಗ , ಸಿಕ್ಕಾಪಟ್ಟೆ ಆಯಾಸ ಅನ್ನಿಸಿದಾಗ ಈ ಒಂದು ಮನೆಮದ್ದು ಮಾಡಿ ಸೇವಿಸಿ ಸಾಕು , ತಕ್ಷಣಕ್ಕೆ ನಿಮ್ಮ ದೇಹಕ್ಕೆ ಶಕ್ತಿಯನ್ನ ಒದಗಿಸಿಕೊಡೋ ಅದ್ಬುತ ಮನೆಮದ್ದು ಇದು ..

ದೇಹ ಆಯಾಸವಾಗಿದ್ದರೆ ಅಥವಾ ಕೈಕಾಲು ನೋವು ಬಾಧಿಸುತ್ತಿದ್ದರೆ ಮತ್ತು ದೇಹದಲ್ಲಿರುವ ಟಾಕ್ಸಿನ್ ಅಂಶವನ್ನು ಹೊರಹಾಕೋದಕ್ಕೇ ಈ ಪರಿಹಾರವನ್ನು ಈ ಮನೆ ಮತ್ತು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳೇನು ಈ ಮನೆಮದ್ದನ್ನು ಪಾಲಿಸುವುದು ಹೇಗೆ ಇನ್ನೂ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಲ್ಲವನ್ನು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ

ಹೌದು ಮೊದಲನೆಯದಾಗಿ ಈ ಮನೆಮದ್ದು ಪಾಲಿಸುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಏನು ಅಂದರೆ ಹೌದು ಈ ಮನೆಮದ್ದು ಪಾಲಿಸುವುದಕ್ಕೆ ಮುಖ್ಯವಾಗಿ ಬೇಕಾಗಿರುವಂತಹ ಪದಾರ್ಥ ಅಜ್ವಾನ ಅಥವಾ ಇದನ್ನು ಓಂಕಾಳು ಅಂತ ಕೂಡ ಕರೆಯುತ್ತಾರೆ.ನಂತರ ಶುಂಠಿ ಪುಡಿ ಮೆಣಸು ಪುಡಿ ಮಾಡಿದ ಬೆಲ್ಲ ಇದಿಷ್ಟು ಪದಾರ್ಥಗಳು ಬೇಕಾಗಿರುತ್ತದೆ ಜತೆಗೆ ಈ ಮನೆ ಮದ್ದು ಹಾಕಿ ಜೀರಿಗೆ ಕೂಡ ಅತ್ಯವಶ್ಯಕ, ಈಗ ಮನೆಮದ್ದು ಮಾಡುವ ವಿಧಾನವನ್ನು ಹೇಳುವುದಾದರೆ ಮೊದಲಿಗೆ ಓಂಕಾಳನ್ನು ಹುರಿದುಕೊಳ್ಳಬೇಕು ಸ್ವಲ್ಪ ಸಮಯ ಹುರಿಯಬೇಕು ಇದರ ಹಸಿ ವಾಸನೆ ಹೋಗುವವರೆಗೂ ಈ ಅಜ್ಞಾನವನ್ನು ಹುರಿದುಕೊಳ್ಳಬೇಕು.

ನಂತರ ಈ ಮನೆಮದ್ದು ಮಾಡುವುದರ ಮುಂದಿನ ವಿಧಾನ ಓಂ ಕಾಳನ್ನು ಹುರಿದು ಕೊಂಡ ಮೇಲೆ ಮೆಣಸು ಜೀರಿಗೆ ಅನ್ನೋ ಸಹ ಸ್ವಲ್ಪ ಸಮಯ ಹುರಿದುಕೊಳ್ಳಬೇಕು ನಂತರ ಶುಂಠಿಯನ್ನು ಪುಡಿಮಾಡಿಕೊಂಡು ಈ ಮಿಶ್ರಣದೊಂದಿಗೆ ಮಿಶ್ರ ಮಾಡಿಕೊಂಡು ಇದೆಲ್ಲವನ್ನ ನಯವಾಗಿ ಪುಡಿ ಮಾಡಿಕೊಂಡ ನಂತರ ಇದಕ್ಕೆ ಪುಡಿಮಾಡಿದ ಬೆಲ್ಲವನ್ನೂ ಸೇರಿಸಿ

ಇದನ್ನು ಡಬ್ಬವೊಂದಕ್ಕೆ ಅಂದರೆ ಏರ್ ಟೈಟ್ ಕಂಟೈನರ್ ಗೆ ಶೇಖರಣೆ ಮಾಡಿ ಇಟ್ಟುಕೊಳ್ಳಿ. ಈ ಪರಿಹಾರವನ್ನು ಪಾಲಿಸುವುದು ಹೇಗೆಂದರೆ ಕುದಿಯುವ ನೀರಿಗೆ ಈ ಪುಡಿಯನ್ನು ಒಂದು ಚಮಚದಷ್ಟು ಮಿಶ್ರ ಮಾಡಿ ನಂತರ ಶೋಧಿಸಿಕೊಂಡು ಈ ಡ್ರಿಂಕ್ ಅನ್ನ ಪ್ರತಿದಿನ ಬೆಳಿಗ್ಗೆ ಸಮಯದಲ್ಲಿ ಅಂದರೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿದ ನಂತರ ಆ ಬಳಿಕ ಈ ಕಷಾಯವನ್ನು ಕುಡಿಯುತ್ತ ಬಂದರೆ ದೇಹದಲ್ಲಿ ಸುಮ್ಮನೆ ಎದುರಾಗುವ ಸುಸ್ತು ಇದೆಲ್ಲವೂ ನಿವಾರಣೆಯಾಗುತ್ತದೆ.

ಈ ಮನೆ ಮದ್ದಿನಲ್ಲಿ ಬಳಸಿರುವಂತಹ ಅಜ್ವಾನ ರಕ್ತಶುದ್ಧಿ ಮಾಡುತ್ತವೆ ಮತ್ತು ದೇಹದಲ್ಲಿ ಬೇಡದಿರುವ ಅಂಶವನ್ನು ಹೊರಹಾಕಲು ಸಹಕಾರಿ ಅಜೀರ್ಣತೆ ಮತ್ತು ಸುಸ್ತು ನಿವಾರಣೆ ಮಾಡಲು ಉತ್ತಮವಾಗಿದೆ ಅಜ್ವಾನ.ಜೀರಿಗೆ ಮೆಣಸು ಸಹ ಒಂದೊಳ್ಳೆ ಮಸಾಲೆ ಪದಾರ್ಥವಾಗಿ ಔಷಧೀಯ ಗುಣವನ್ನು ಹೇರಳವಾಗಿ ಹೊಂದಿದೆ ಜೀರಿಗೆ ಅಜೀರ್ಣತೆಯಿಂದ ದೂರ ಮಾಡುತ್ತೆ ಮತ್ತು ಸುಸ್ತನ್ನು ನಿವಾರಿಸುತ್ತದೆ ಮತ್ತು ರಕ್ತದಲ್ಲಿ ಇರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿರುತ್ತದೆ, ಹಾಗೆ ಮೆಣಸು ಕೂಡ ಇದು ದೇಹದಲ್ಲಿರುವ ನಂಜನ್ನು ನಿವಾರಿಸಿ ಸುಸ್ತನ್ನು ನಿವಾರಿಸಲು ಸಹಕಾರಿಯಾಗಿರುತ್ತದೆ.

ಶುಂಠಿ ಪುಡಿ ಸಹ ಜೀರ್ಣಕ್ರಿಯೆ ವೃದ್ಧಿಸಿ ದೇಹದಲ್ಲಿರುವ ಬೇಡದ ಇರುವ ಅಂಶವನ್ನು ಹೊರಹಾಕಲು ಸಹಕಾರಿ. ಹಾಗಾಗಿ ಈ ಪದಾರ್ಥಗಳಿಂದ ಮಾಡಿದ ಕಷಾಯವು ಸುಸ್ತನ್ನು ನಿವಾರಿಸುತ್ತದೆ ಮತ್ತು ಹೊಟ್ಟೆಯ ನ ಕ್ಲೀನ್ ಮಾಡುತ್ತಾ ಹಾಗೆ ರಕ್ತ ಶುದ್ಧಿ ಮಾಡಲು ಕೂಡ ಸಹಕಾರಿ.ಆದ್ದರಿಂದ ಸಾಮಾನ್ಯವಾಗಿ ಕಾಡುವ ಸೃಷ್ಟಿಗೆ ಈ ರೀತಿ ಕಷಾಯ ಮಾಡಿ ಪ್ರತಿದಿನ ಕುಡಿಯುತ್ತ ಬನ್ನಿ ಮತ್ತು ಬಹಳಷ್ಟು ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಿ ಈ ಕಷಾಯವನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನು ಸಹ ವೃದ್ಧಿಸುವಲ್ಲಿ ಜೊತೆಗೆ ಮಲಬದ್ಧತೆ ಮೂಲವ್ಯಾಧಿ ಇಂತಹ ಸಮಸ್ಯೆಗಳು ಬಾರದಿರುವ ಹಾಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಜತೆಗೆ ಈ ಕಷಾಯವನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಕೂಡ ಬಾಧಿಸುವುದಿಲ್ಲ ಧನ್ಯವಾದ.

Exit mobile version