Ad
Home ಉಪಯುಕ್ತ ಮಾಹಿತಿ ನಿಮ್ಮ ಮನೆಯಲ್ಲಿ ಪುಟಾಣಿ ಮಕ್ಕಳು ಇದ್ದರೆ ಅವುಗಳು ಬಹಳ ಅಳುತ್ತಾ ಇದ್ದಾರೆ ಅದನ್ನ ದೃಷ್ಟಿ ಅನ್ನುತ್ತಾರೆ…...

ನಿಮ್ಮ ಮನೆಯಲ್ಲಿ ಪುಟಾಣಿ ಮಕ್ಕಳು ಇದ್ದರೆ ಅವುಗಳು ಬಹಳ ಅಳುತ್ತಾ ಇದ್ದಾರೆ ಅದನ್ನ ದೃಷ್ಟಿ ಅನ್ನುತ್ತಾರೆ… ಕೇವಲ ಹೇಗೆ ಮಾಡಿ ಸಾಕು ಯಾವುದೇ ನಕಾರಾತ್ಮಕ ಶಕ್ತಿಗಳು ನಿಮ್ಮ ಮಗುವನ್ನ ಏನು ಮಾಡೋದಕ್ಕೆ ಆಗೋದೇ ಇಲ್ಲ…..

ನಮಸ್ಕಾರಗಳು ಪ್ರಿಯ ಓದುಗರೆ ಮಕ್ಕಳು ಇದ್ದ ಮನೆ ನಂದಗೋಕುಲ ಅಲ್ವಾ. ಆದರೆ ಮಕ್ಕಳು ಜನಿಸಿದಾಗ ಅಷ್ಟೊಂದು ಯಾಕೆ ಹೇಳುತ್ತಾರೆ ಗೊತ್ತಾ ಹೌದು ಮಕ್ಕಳು ಅಳುವುದಕ್ಕೂ ಕೂಡ ಕಾರಣವಿದೆ. ಹೌದು ತಾಯಿಯ ಗರ್ಭದಲ್ಲಿರುವ ಮಗು ಗರ್ಭದಲ್ಲಿ ಮಗು ಸುರಕ್ಷಿತವಾಗಿರುತ್ತದೆ ಯಾವುದೇ ಶಬ್ದವಿರುವುದಿಲ್ಲ ತಾಯಿಯ ಹೃದಯ ಬಡಿತವನ್ನು ಕೇಳುತ್ತಾ 9 ತಿಂಗಳುಗಳ ಕಾಲ ಬೆಳೆಯುವ ಮಗುವಿಗೆ ಪ್ರಪಂಚದ ಅರಿವು ಇರುವುದಿಲ್ಲ ಪ್ರಪಂಚದ ಸದ್ದುಗದ್ದಲದ ಅರಿವು ಇರುವುದಿಲ್ಲ ಆದರೆ ಯಾವಾಗ ಮಗು ತಾಯಿಯ ಗರ್ಭದಿಂದ ಆಚೆ ಬರುತ್ತೆ ಆಗ ಈ ಶಬ್ಧಕ್ಕೆ ತಾಯಿಯ ಹೃದಯದ ಬಡಿತ ಕೇಳುತ್ತಿಲ್ಲ ತಾಯಿಯ ಬೆಚ್ಚಗಿನ ಅಪ್ಪುಗೆಯ ಇಲ್ಲ ಎಂಬ ಭಯದಿಂದ ಆ ಮಗು ಅಳುತ್ತಾ ಇರುತ್ತದೆ ಆದರೆ ಯಾವಾಗ ಮತ್ತೆ ತಾಯಿಯ ಬೆಚ್ಚಗಿನ ಅಪ್ಪುಗೆ ಸಿಗುತ್ತೆ ಮಗು ಮತ್ತೆ ಅಳು ನಿಲ್ಲಿಸುತ್ತದೆ ಈ ರೀತಿ ಹುಟ್ಟಿದಾಗ ಮಗು ಅಳುವುದಕ್ಕೆ ಇದೆ ಕಾರಣವಾಗಿರುತ್ತದೆ.

ಆದರೆ ಮಗು ಹುಟ್ಟಿದ ಮೇಲೆ ಸ್ವಲ್ಪ ಸಮಯದವರೆಗೂ ಅಳುತ್ತದೆ ಮತ್ತೆ ತಾಯಿ ತನ್ನ ಎದೆ ಹಾಲು ಕುಡಿಸಿದ ಮತ್ತೆ ಸುಮ್ಮನಾಗುತ್ತಾರೆ ಆದರೆ ಸಾಮಾನ್ಯವಾಗಿ ಮಕ್ಕಳು ಯಾಕೆ ಅಳುತ್ತಾರೆ ಎಂಬುದು ಕೂಡ ಕಾರಣ ಇರುತ್ತದೆ ಕೆಲವರು ಮಗು ಹಸಿದಾಗ ನಿದ್ರೆ ಬಂದಾಗ ಅಥವಾ ಅಪರಿಚಿತರು ಮಗುವನ್ನು ಎತ್ತಿಕೊಂಡಾಗ ಮಾತ್ರ ಅಳುತ್ತದೆ ಅಂಥ ಅಂದುಕೊಂಡಿರುತ್ತಾರೆ ಆದರೆ ಇದು ತಪ್ಪು ಮಗು ಕೇವಲ ಹೊಟ್ಟೆ ಹಸಿದಾಗ ಅಥವಾ ನಿದ್ರೆ ಬಂದಾಗ ತಾಯಿ ಇಲ್ಲದಿದ್ದಾಗ ಅಥವಾ ಹೊಟ್ಟೆ ನೋವು ಬಂದಾಗ ಈ ಕಾರಣಕ್ಕಾಗಿ ಮಾತ್ರ ಅಳುವುದಿಲ್ಲ. ಎಷ್ಟು ಪ್ರಯತ್ನಪಟ್ಟರೂ ಮಗು ಅಳು ನಿಲ್ಲಿಸುತ್ತಿಲ್ಲ ಅಂದಾಗ ಅಂದಿನ ಕಾಲದಲ್ಲಿ ಪೂರ್ವಜರು ಅಂದರೆ ಮನೆಯಲ್ಲಿದ್ದ ಅಜ್ಜಿ ಅಂಚಿ ಕಡ್ಡಿ ಎಂದ ಮಗುವಿಗೆ ದೃಷ್ಟಿ ತೆಗೆಯುತ್ತಿದ್ದರು ಈ ವಿಚಾರ ಎಷ್ಟು ಜನರಿಗೆ ಗೊತ್ತಿದೆ ಹೌದು ನಿಮ್ಮ ಮನೆಯಲ್ಲಿಯೂ ಕೂಡ ಅಜ್ಜಿ ಇದ್ದರೆ ನಿಮಗೆ ವಾರಕ್ಕೊಮ್ಮೆಯಾದರೂ ದೃಷ್ಟಿ ತೆಗೆದು ಹಾಕುತ್ತಾರೆ.

ಅಥವಾ ವಿಪರೀತ ಹೊಟ್ಟೆ ನೋವು ಬಂದಾಗ ಮೈ ಹುಷಾರಿಲ್ಲದಾಗ ತಲೆನೋವು ಬರುತ್ತಿದೆ ಅಂದಾಗ ಅಥವಾ ಮಕ್ಕಳು ಸಪ್ಪಗೆ ಕೂತಿರುತ್ತಾರೆ ಮಕ್ಕಳು ಹಠ ಮಾಡುತ್ತಾ ಇದ್ದಾರೆ ಊಟ ಮಾಡುತ್ತಿಲ್ಲ ಅಂದಾಗ ಈ ಕಾರಣಗಳಿಗೂ ಕೂಡ ಅಜ್ಜಿ ಅಥವಾ ಅಮ್ಮ ದೃಷ್ಟಿ ತೆಗೆಯುತ್ತಿದ್ದರು. ಆದರೆ ಇವತ್ತಿನ ದಿವಸಗಳಲ್ಲಿ ದೃಷ್ಟಿ ತೆಗೆಯುವುದು ಏನು ದೃಷ್ಟಿ ತೆಗೆಯುವ ಪದ್ಧತಿ ಹೇಗೆ ಎಂಬುದೇ ಹಲವರಿಗೆ ಗೊತ್ತಿಲ್ಲದ ವಿಚಾರವಾಗಿದೆ. ಈ ಸಂಗತಿಯು ಪ್ರತಿಯೊಬ್ಬರಿಗೂ ತಿಳಿಯಬೇಕು ಅದರಲ್ಲಿಯೂ ಮಕ್ಕಳಿದ್ದ ಮನೆಯಲ್ಲಿ ಮಕ್ಕಳಿಗೆ ಆಗಾಗ ದೃಷ್ಟಿ ತೆಗೆಯುತ್ತಲೇ ಇರಬೇಕು ಇಲ್ಲವಾದಲ್ಲಿ ಮಕ್ಕಳಿಗೆ ನೇರ ದೃಷ್ಟಿ ಅಥವಾ ಕೆಟ್ಟ ಶಕ್ತಿಯ ಪ್ರಭಾವ ಆ ಮಕ್ಕಳ ಮೇಲೆ ಆದಾಗ ಅದರಿಂದ ಮಕ್ಕಳು ವಿಪರೀತ ಹಠ ಮಾಡುತ್ತಾ ಇರುತ್ತಾರೆ ಅಳು ನಿಲ್ಲಿಸುವುದಿಲ್ಲ ಊಟ ಮಾಡುವುದಿಲ್ಲ ಕೆಲವೊಮ್ಮೆ ಹುಷಾರಿಲ್ಲದ ಹಾಗೆ ಕೂಡ ಆಗಿಬಿಡುತ್ತದೆ.

ನೀವು ನೋಡಬಹುದು ಅಜ್ಜಿ ದೃಷ್ಟಿ ತೆಗೆಯುತ್ತಿದ್ದ ಹಾಗೇ ಸ್ವಲ್ಪ ಸಮಯ ಬಿಟ್ಟು ಮಕ್ಕಳು ಅಳು ನಿಲ್ಲಿಸುತ್ತಾರೆ, ಆದ್ದರಿಂದ ಮಕ್ಕಳು ವಿಪರೀತ ಹಠ ಮಾಡುವಾಗ ಅಳು ನಿಲ್ಲಿಸುತ್ತಿಲ್ಲ ಅನ್ನೋವಾಗ ತಾಯಿ ಅಥವಾ ಮನೆಯಲ್ಲಿ ಹಿರಿಯರು ಮಗುವಿಗೆ ದೃಷ್ಟಿ ತೆಗೆಯಬೇಕು ದೃಷ್ಟಿ ತೆಗೆಯುವ ವಿಧಾನ ಗೊತ್ತಿಲ್ಲ ಅಂದರೆ ತುಂಬ ಸುಲಭ ವಿಧಾನದಲ್ಲಿ ವೇಷ ತೆಗೆಯಬಹುದು. ಮನೆಯಲ್ಲಿ ಸಾಸಿವೆ ಕಾಳು ಇದ್ದೇ ಇರುತ್ತದೆ ಅದನ್ನು ನಿಮ್ಮ ಎಡಗೈನಲ್ಲಿ ತೆಗೆದುಕೊಂಡು ಮಗುವಿಗೆ 3 ಬಾರಿ ಬಲದಿಂದ 3 ಬಾರಿ ಎಡದಿಂದ ನಿಮ್ಮ ಕೈಯನ್ನು ಸುದ್ದಿ ಸಿ ಆ ಸಾಸಿವೆ ಕಾಳನ್ನು ಬೆಂಕಿಗೆ ಹಾಕಬೇಕು. ಆ ಬೆಂಕಿಗೆ ಹಾಕಿದ ಸಾಸಿವೆಕಾಳು ಚಟಪಟ ಅನ್ನುತ್ತದೆ, ಇದರಿಂದ ಮಗುವಿಗೆ ಆಗಿರುವ ದೂರದೃಷ್ಟಿ ಬೇಗ ಪರಿಹಾರವಾಗುತ್ತೆ ಮತ್ತು ಮಕ್ಕಳ ಮೇಲಿನ ಆ ದೃಷ್ಟಿಯ ಪ್ರಭಾವವು ಕಡಿಮೆಯಾಗಿ ಮಕ್ಕಳು ಹಠ ಮಾಡುವುದನ್ನು ಅಳುವುದನ್ನು ನಿಲ್ಲಿಸುತ್ತಾರೆ.

ದೃಷ್ಟಿ ತೆಗೆಯುವ ವಿಧಾನ ಇದೊಂದೇ ಅಲ್ಲ ಕೆಲವರು ಅಂಚಿಕಡ್ಡಿ ಎಂದ ತೆಗೆದರೆ ಇನ್ನೂ ಕೆಲವರು ಉಪ್ಪು ಮತ್ತು ಒಣ ಮೆಣಸಿನಕಾಯಿಯಿಂದ ಕಲ್ಲಿದ್ದಲಿಂದ ದೃಷ್ಟಿ ತೆಗೆಯುತ್ತಾರೆ. ಇನ್ನೂ ಕೆಲವರು ಮಕ್ಕಳಿಗೆ ಗಾಯ ಆದಾಗ ಅಥವಾ ಮಕ್ಕಳು ಬಿದ್ದು ಬಂದಾಗ ಮೊಟ್ಟೆಯನ್ನು ನಿವಾಳಿಸಿ 3 ದಾರಿ ಕೂಡುವ ಕಡೆ ಹಾಕಿ ಮತ್ತೆ ಅದನ್ನು ತಿರುಗಿ ನೋಡದ ಹಾಗೆ ಬರುತ್ತಾರೆ. ಈ ವಿಧಾನಗಳಲ್ಲಿ ಮಕ್ಕಳಿಗೆ ದೃಷ್ಟಿ ತೆಗೆಯುತ್ತಾರೆ, ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಕೂಡ ದೃಷ್ಟಿ ತಗುಲಿರುತ್ತದೆ ಆಗ ಈ ಕೆಲವು ಪದ್ಧತಿಯನ್ನು ಅನುಸರಿಸುವ ಮೂಲಕ ದೃಷ್ಟಿಯನ್ನು ತೆಗೆದುಹಾಕಬಹುದು.

Exit mobile version